9. ಜೈವಿಕ ಪ್ರಪಂಚ
ಸಾರಂಶ :- ಈ ಭೂಮಿಯ ಮೇಲಿನ ಎಲ್ಲಾ ವಸ್ತುಗಳನ್ನು
ಸಜೀವ ವಸ್ತುಗಳು & ನಿರ್ಜಿವ ವಸ್ತುಗಳೆಂದು ಎರಡು ಭಾಗಗಳಾಗಿ ವಿಂಗಡಿಸಬಹುದು. ಸಜೀವಿಗಳು ತಮ್ಮದೆ
ಆದ ನಿರ್ದಿಷ್ಟ ಗುಣಲಕ್ಷಣಗಳನ್ನು ಹೊಂದಿವೆ.
ಸಜೀವಿಗಳ ಗುಣಲಕ್ಷಣಗಳು:- ಎಲ್ಲಾ ಸಜೀವಿಗಳು
ಉಸಿರಾಡುತ್ತವೆ.
ವಿವಿಧ ಜೀವಿಗಳ ಉಸಿರಾಟದ ಅಂಗಗಳು
ಕೀಟಗಳು ಟ್ರೇಕಿಯಾ
ಮೀನುಗಳು ಕಿವಿರು
ಕಪ್ಪೆ ಚರ್ಮ & ಶ್ವಾಸಕೋಶ
ಮಾನವ ಶ್ವಾಸಕೋಶ
ಸಸ್ಯಗಳು ಪತ್ರ ರಂಧ್ರಗಳು
ಏರೆಹುಳು ಚರ್ಮ
ಮೃದ್ವಂಗಿ ಟಿನೀಡಿಯಾ
ಕಂಟಕ ಚರ್ಮಿ ನಾಳಿಕಾಪಾದ
* ಎಲ್ಲಾ ಜೀವಿಗಳು ಜೀವಕೋಶಗಳೆಂಬ ಅತಿ ಸೂಕ್ಷ್ಮ
ಮೂಲ ಘಟಕಗಳಿಂದಾಗಿವೆ.
* ಎಲ್ಲಾ ಜೀವಿಗಳಿಗೆ ಶಕ್ತಿ ಬಿಡುಗಡೆಗೆ ಆಹಾರದ
ಅಗತ್ಯವಿದೆ.
* ಜೀವಿಗಳು ತಮಷ್ಟಕ್ಕೆ ತಾವೇ ಬೆಳೆಯುತ್ತವೆ.
* ಜೀವಿಗಳಿಗೆ ನಿರ್ದಿಷ್ಠವಾದ ಗಾತ್ರ
& ಆಕಾರ ವಿದೆ.
* ಸಜೀವಿಗಳಲ್ಲಿ ಪ್ರಾಣಿಗಳು ಒಂದು ಕಡೆಯಿಂದ
ಮತ್ತೊಂದು ಕಡೆಗೆ ಚಲಿಸುತ್ತದೆ.
1 ಅಮೀಬ ಮಿಥ್ಯಪಾದ (ಸಿಡೋಪೋಡಿಯಾ)
2 ಯೂಗ್ಲಿನ ಲೋಮಾಂಗ (ಸೀಲಿಯಾ)
3 ಪ್ಯಾರಮೀಸಿಯಂ ಕಶಾಂಗ (ಫ್ಲಾಜಿಲ್ಲಾ)
4 ಹೈಡ್ರಾ ಕರಬಳ್ಳಿ (ಟೆಂಟಕಲ್ಸ್)
5 ಮೀನು ಈಜುರೆಕ್ಕೆ
6 ಪಕ್ಷಿ ರೆಕ್ಕೆ
7 ಹಸು ಕಾಲು
8 ನೀರೀಸ್ ಪಾಶ್ರ್ವಪಾದಗಳು (ಪ್ಯಾರಾಪೋಡಿಯ)
9 ಎರೆಹುಳು ಬಿರುಗೂದಲು
10 ಕಂಟಕ ಚರ್ಮಿಗಳು ನಳಿಕಾಪಾದ
ಕೆಲವು ಪ್ರಾಣಿಗಳ ಚಲನಾಂಗಗಳು
* ಸಜೀವಿಗಳು ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ
ನಿಡುತ್ತವೆ.
* ಸಜೀವಿಗಳಿಗೆ ನಿರ್ದಿಷ್ಠವಾದ ಜೀವಿತಾವಧಿ
ಇದೆ.
1 ನಾಯಿ 15 ವರ್ಷ
2 ಹುಲಿ 25 ವರ್ಷ
3 ಕುದರೆ 30 ವರ್ಷ
4 ತಿಮಿಂಗಲ 60 ವರ್ಷ
5 ಆನೆ 60-70 ವರ್ಷ
6 ಮಾನವ 100 ವರ್ಷ
7 ಆಮೆ 157 ವರ್ಷ
8 ಆಲದ ಮರ 400 ವರ್ಷ
9 ಬಿಳಿ ಓಕ್ 500 ವರ್ಷ
10 ದೈತ್ಯ ಸಿಕ್ವೋಯಾ 3500 ವರ್ಷ
11 ಬ್ರೆಜಿಲ್ ಕೋನ್ ಪೈನ್ 4000-4500 ವರ್ಷ
ಕೆಲವು ಪ್ರಾಣಿ ಮತ್ತು ಸಸ್ಯಗಳ ಜೀವಿತಾವಧಿ
* ಸಜೀವಿಗಳ ವರ್ಗಿಕರಣ:- ಜೀವಿಗಳನ್ನು
ಕ್ರಮವಾಗಿ ಗುಂಪುರೂಡಿಸಿ ಅಧ್ಯಯನ ಮಾಡುವುದಕ್ಕೆ ವರ್ಗಿಕರಣ ಎನ್ನುವರು
ಕರೋಲಿಸ್ ಲಿನಿಯಸ್ ಆಧುನಿಕ ವರ್ಗಿಕರಣ ಶಾಸ್ತ್ರದ
ಪಿತಾಮಹ ಎನ್ನುವರು. ಇವರು ದ್ವಿನಾಮ ನಾಮಕರಣವೆಂಬ ಹೊಸ ಪದ್ದತಿಯನ್ನು ಜಾರಿಗೆ ತಂದರು ಇವರು ಜೀವಿಗಳ
ವರ್ಗಿಕರಣವನ್ನು 07 ಮಜಲುಗಳಲ್ಲಿ ಮಾಡಿದರು
ಜೀವಿಗಳ ವರ್ಗಿಕರಣ 07 ಮಜಲುಗಳೆಂದರೆ, ಪ್ರಭೇದ
- ಜಾತಿ - ಕುಟುಂಬ- ಗಣ - ವರ್ಗ - ವಂಶ - ಸಾಮ್ರಾಜ್ಯ.
ವರ್ಗಿಕರಣದ ಮೂಲ ಘಟಕವೇ ಪ್ರಭೇದ
ದ್ವಿನಾಮ ನಾಮಕರಣ:-
ಜೀವಿಗಳನ್ನು ವೈಜ್ಞಾನಿಕವಾಗಿ ಹೆಸರಿಸುವ ವಿಧಾನವೇ ದ್ವಿನಾಮ ನಾಮಕರಣ ಪ್ರತಿ ವೈಜ್ಞಾನಿಕ ಹೆಸರು ಎರಡು
ಪದಗಳನ್ನು ಹೊಂದಿದೆ. ಮೊದಲನೆಯ ಪದ ಜಾತಿಯನ್ನು ಸೂಚಿಸಿದರೆ. ಎರಡನೇಯ ಪದವು ಪ್ರಭೇದವನ್ನು ಸೂಚಿಸುತ್ತದೆ.
ವಿವಿಧ ಪ್ರಾಣಿಗಳ ವೈಜ್ಞಾನಿಕ ಹೆಸರು
1 ಮಾನವ ಹೋಮೋ ಸೇಪಿಯನ್ಸ್
2 ಕುದರೆ ಈಕ್ವಸ್ ಕ್ಯಾಬಲಸ್
3 ಕತ್ತೆ ಈಕ್ವಸ್ ಏಸಿನಸ್
4 ಹುಲಿ ಫೆಲಿಸ್ ಟೈಗ್ರೀಸ್
5 ಸಿಂಹ ಫೆಲಿಸ್ ಲಿಯೋ
6 ಬೆಕ್ಕು ಫೆಲಿಸ್ ಡೊಮ್ಯಾಸ್ಟಿಕಾ
7 ನಾಯಿ ಕ್ಯಾನಿಸ್ ಫೆಮಿಲಿಯಾರಿಸ್
8 ಹಸು ಬಾಸ್ ಟಾರಸ್
9 ಮೇಕೆ ಕಪು
10 ಕುರಿ ಓವಿಸ್
11 ಆನೆ (ಏಷಿಯಾ) ಎಲಿಫಸ್ ಮ್ಯಾರ್ಸೆಮಸ್
ಪ್ರೋಕ್ಯಾರಿಯೊಟ್ & ಯೂಕ್ಯಾರಿಯೋಟ್‍ಗಳು:-
ನಿರ್ದಿಷ್ಠವಾದ ನ್ಯೂಕ್ಲಿಯಸ್ ಪೊರೆಯಿಂದ ಅವೃತವಾಗಿಲ್ಲದ
ಜೀವಿಗಳನ್ನು ಪ್ರೊಕ್ಯಾರಿಯೊಟ್‍ಗಳೆನ್ನುವರು. ಇವುಗಳಲ್ಲಿ ಒಂದೇ ಒಂದು ಕ್ರೊಮೋಸೊಮ ಇದ್ದು ಪ್ರೋಟಿನ್
ರಹಿತವಾಗಿದ್ದು ವೃತ್ತಾಕಾರದಲ್ಲಿದೆ. ಇವುಗಳಿಲ್ಲಿ ನ್ಯೂಕ್ಲಿಯೆಸ್ & ಮೈಟೋಕಾಡ್ರಿಯಾ ಇಲ್ಲ.
ಉದಾ- ಬ್ಯಾಕ್ಟೇರಿಯಾ & ನೀಲಿ ಹಸಿರು
ಶೈವಲ
ಯೂಕ್ಯಾರಿಯೋಟ್‍ಗಳಲ್ಲಿ ನೂಕ್ಲಿಯಸ್ ಒಂದು
ನಿರ್ದಿಷ್ಠವಾದ ನ್ಯೂಕ್ಲಿಯಾ ಪೊರೆಯಿಂದ ಆವೃತ್ತವಾಗಿದೆ.
ಉದಾ: ಅಮೀಬಾ, ಸಸ್ಯ ಮತ್ತು ಪ್ರಾಣಿಕೋಶ
ಜೀವಿಗಳ ಪ್ರಮುಖ ಸಾಮ್ರಾಜ್ಯಗಳು:-
1) ಮೊನಿರಾ ಸಾಮ್ರಾಜ್ಯ :- ಇದು ಪ್ರೋಕ್ಯಾರಿಯೊಟ್
ಜೀವಿಗಳನ್ನು ಒಳಗೊಂಡಿವೆ.
ಉದಾ:- ನಿಲಿಹಸಿರು ಶೈವಲ & ಬ್ಯಾಕ್ಟೀರಿಯಾಗಳು
2) ಪ್ರೋಟಿಸ್ಟ ಸಾಮ್ರಾಜ್ಯ :- ಪ್ರೋಟೋಜೊವಾ
(ಏಕಕೋಶ ಜೀವಿಗಳು ಅದಿಜೀವಿಗಳು) ಏಕಕೋಶ ಶೈವಲಗಳು
3) ಮೈಕೋಟಾ ಸಾಮ್ರಾಜ್ಯ :- ಇದು ಶಿಲೀಂದ್ರಗಳ
ಸಾಮ್ರಾಜ್ಯವಾಗಿದೆ.
ಉದಾ:- ಬೂಸ್ಟ್ ನಾಯಿಕೊಡೆ, ಅಣಬೆ ಯಿಸ್ಟ್
4) ಸಸ್ಯಸಾಮ್ರಾಜ್ಯ :- ಎಲ್ಲಾ ಹಸಿರು ಸಸ್ಯಗಳು
ಇದರ ಸದಸ್ಯರುಗಳು ಇವು ವಾಹಕ ಅಂಗಾಂಶ ರಹಿತ & ಅಂಗಾಂಶ ಸಹಿತ ಎಂಬ ಎರಡು ವಿಭಾಗಗಳು ಒಳಗೊಂಡಿದೆ.
5) ಪ್ರಾಣಿ ಸಾಮ್ರಾಜ್ಯ :- ಇವು ಇರಡು ಪ್ರಮುಖ
ಗುಂಪುಗಳನ್ನು ಒಳಗೊಂಡಿದೆ ಕಶೇರುಕಗಳು & ಅಕಶೇರುಕಗಳು
ವೈರಸ್‍ಗಳು :- ಒಂದು
ವಸ್ತುವನ್ನು ಸಜೀವಿ ಎಂದು ಕರೆಯಬೇಕಾದರೆ ಅದರ ಅತ್ಯಂತ ಪ್ರಮಖ ಲಕ್ಷಣವೆಂದರೆ ಜೀವಕೋಶವನ್ನು ಹೊಂದಿರುವದು,
ಜೀವಕೋಶವೆಂದರೆ ಕೋಶಪೊರೆ ಕೋಶದ್ರವ್ಯ & ನ್ಯೂಕ್ಲಿಯಸ್ ಎಂಬ 03 ಪ್ರಮುಖ ರಚನೆಗಳಿಂದ ಆಗಿರುತ್ತದೆ.
ಆದರೆ ವೈರಸ್‍ನಲ್ಲಿ ಜೀವಕೋಶವಿಲ್ಲ ಇದು ಕೇವಲ ಆರ್.ಎನ್.ಎ ಎಂಬ ನ್ಯೂಕ್ಲಿಕ್ ಆಮ್ಲವನ್ನು ಹೊಂದಿದ್ದು
ಪ್ರೋಟಿನ್ ಕವಚದಿಂದ ಆವೃತ್ತವಾಗಿದೆ. ಜೀವಿಗಳ ಹೊರಗಡೆ ವೈರಸ್‍ಗಳು ಸಂತಾನೋತ್ಪತ್ತಿ ಮಾಡಲಾರವು. ಆದರೆ
ಪೋಷಕ ಜೀವಿಗಳು ಜೀವಕೋಶಗಳು ಒಳಗಡೆ ಜೈವಿಕ ಲಕ್ಷಣಗಳನ್ನು ತೊರ್ಪಡಿಸುವವು ಅದಕ್ಕಾಗಿ ಇವುಗಳನ್ನು ಜೀವಿ
& ನಿರ್ಜಿವಿಗಳ ನಡುವಿನ ಕೊಂಡಿ ಎಂದುಕರೆಯಲಾಗುತ್ತದೆ.
* ಭೂಮಿಯ ಮೇಲಿನ ಸಕಲ ಪ್ರಾಣಿಗಳು ಈ ಸಾಮ್ರಾಜ್ಯದಲ್ಲಿ
ಸೇರಿವೆ ಬೆನ್ನುಮೂಳೆ ಇರುವಿಕೆಯ ಆಧಾರದ ಮೇಲೆ ಇವುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
ಬೆನ್ನುಮೂಳೆಯನ್ನು ಹೊಂದಿರುವ ಜೀವಿಗಳನ್ನು
ಕಶೇರಕಗಳು ಎನ್ನುವರು
ಬೆನ್ನುಮೂಳೆಯನ್ನು ಹೊಂದಿಲ್ಲದ ಜೀವಿಗಳನ್ನು
ಅಕಶೇರಕಗಳು ಎನ್ನುವರು.
ನಂತರ ಅಕಶೇರಕಗಳನ್ನು ಪ್ರಮುಖವಾಗಿ 8 ವಂಶಗಳಾಗಿ
ವಿಂಗಡಿಸಲಾಗಿದೆ.
ಅಕಶೇರಕಗಳು :- ಇವು
ಬೆನ್ನು ಮೂಳೆಯನ್ನು ಹೊಂದಿಲ್ಲದ ಪ್ರಾಣಿ ಸಾಮ್ರಾಜ್ಯದ ಕೆಳಮಟ್ಟದ ಜೀವಿಗಳಾಗಿವೆ. ಇವುಗಳು ಬಹುತೇಕ
ಎಲ್ಲವೂ ಬಹುಕೋಶಿಯ ಜೀವಿಗಳಾಗಿವೆ. ಇವುಗಳನ್ನು ಪುನಃ ಎಂಟು ವಂಶಗಳಾಗಿ ವಿಂಗಡಿಸಲಾಗಿದೆ.
ಕಶೇರುಕಗಳು:- ಬೆನ್ನು
ಮುಳೆಗಳನ್ನು ಹೊಂದಿದ ಪ್ರಾಣಿಗಳು
5 ಪ್ರಮುಖ ವರ್ಗಗಳು
1) ಮೀನುಗಳು
ಉದಾ:- ಶಾರ್ಕಗಳು,
2) ಉಭಯವಾಸಿಗಳು
ಉದಾ:- ಕಪ್ಪೆ, ಸಾಲಮ್ಯಾಂಡರ್ ನ್ಯೂಟ್
3) ಸರಿಸೃಪಗಳು
ಉದಾ:- ಹಲ್ಲಿಗಳು, ಹಾವುಗಳು, ಮೊಸಳೆ, ಆಮೆಗಳು
4) ಹಕ್ಕಿಗಳು
ಉದಾ:- ಪಾರಿವಾಳ, ಗಿಡುಗ, ಹದ್ದು, ಕಾಗೆ,
ಕೋಳಿ
5) ಸಸ್ತನಿಗಳು
ಉದಾ:- ಮಾನವ, ಹಸು
ಅಕಶೇರುಕಗಳು:- ಬೆನ್ನು
ಮೂಳೆ ಇಲ್ಲದ ಪ್ರಾಣಿಗಳ 9 ಪ್ರಮುಖ ವರ್ಗಗಳು
1) ಆದಿ ಜೀವಿಗಳು / ಏಕಕೋಶ ಜೀವಿಗಳು
ಉದಾ:- ಅಮೀಬಾ, ಎಂಟಮಿಬಾ, ಪ್ಯಾರಮಿಸಿಯಂ ಯೂಗ್ಲಿನಾ
2) ಸ್ವಂಜುಪ್ರಾಣಿಗಳು
ಉದಾ:- ಕ್ಯಾಲಕೇರಿಯಾ ಎಕ್ಸನ್ಟಿಲಿಡ್ ಸೈಕಾನ
ಹಯಲೋನಿಮಾ ಯೂಸ್ಟಾಂಜಿಯ ಯೂಪ್ಲೆಕ್ಸ್
3) ಸಿಲಂಟರಿಟಾ (ಕುಟುಕು ಕಣವಂತಗಳು)
ಉದಾ:- ಹೈಡ್ರಾ ಹವಳ ಪ್ರಾಣಿ ಕಡಲ ತಾವರೆ ಲೋಳೆ
ಮೀನು.
4) ಚಪ್ಪಟೆ ಹುಳುಗಳು
ಉದಾಃ- ಪ್ಲನೇರಿಯಾ ಲಾಡಿಹುಳು ಕಾರಲುಹಳು
5) ನಿಮಟೋಡ ದುಂಡುಹುಳಗಳು
ಉದಾ:- ಕೊಕ್ಕೆಹುಳ ದುಂಡುಹುಳು ಜಂತುಹುಳು
ಫೈಲೇರಿಯ ಹುಳು
6) ಅನಿಲಡಾ (ವಲಯವಂತ)
ಉದಾ:- ಎರೆ ಹುಳು ಜಿಗಣಿ
7) ಮೊಲಸ್ಕ(ಮೃದ್ವಂಗಿಗಳು)
ಉದಾ:- ಶಂಖುಹುಳು ಚಿಪ್ಪುಹುಳು ಕಪ್ಪೆಚಿಪ್ಪೆನಹುಳು,
ಬಸವನಹುಳು
8) ಅರ್ಥೋಪೋಡಾ (ಸಂಧಿಪದಿಗಳು)
ಉದಾ:- ಸೊಳ್ಳೆ, ನೋಣಾ, ಶತಪದಿ, ಜೇಡು, ಚೇಳು
9) ಕಂಟಕಚರ್ಮಿಗಳು
ಉದಾ:- ನಕ್ಷತ್ರ ಮೀನು ಸಮುದ್ರ ಸೌತೆ. ಪೆಡಸು
ನಕ್ಷತ್ರ
ಕಶೇರುಕಗಳು:-
* ಮೀನುಗಳು
* ಇವು ಜಲವಾಸಿಗಳಾಗಿವೆ
* ಬಾಯಿಯ ಶರೀರದ ತುದಿಯಲ್ಲಿದೆ. ಇವು ದವಡೆ
ಮುಕ್ತ ಶೀತ ರಕ್ತ ಪ್ರಾಣಿಳಗಾಗಿವೆ. ದೇಹವು ಧಾರರೇಖಾಕೃತಿಯಲ್ಲಿದೆ.
* ಚರ್ಮದ ಮೇಲೆ ಹುರುಪಿನಿಂದ ಕೂಡಿದ ಶಲ್ಕಗಳಿವೆ
ಹಾಗೂ ಶ್ಲೇಷ್ಟ ಗ್ರಂಥಿüಗಳು ಕಂಡು ಬರುತ್ತವೆ. ಇವು ಚರ್ಮದ ರಕ್ಷಣೆಗೆ ಸಹಕಾರಿಯಾಗಿವೆ.
* ಮೀನಿನ ಬಾಲದ ಭಾಗ ವಿಶೇಷ ಸ್ನಾಯುಗಳದ ಕೂಡಿದ್ದು
ಅವು ನೀರನ್ನು ಸಿಳಿಕೊಂಡು ಹೊಗಲು ಸಹಕಾರಿಯಾಗಿದೆ. ಮೀನಿನ ದೇಹವು ದೋಣೆಯಾಕಾರದಲ್ಲಿದ್ದು ಎರಡು ಕೋಣೆಯ
ಹೃದಯ ಹೊಂದಿದೆ.
* ಮೀನುಗಳಲ್ಲಿ ಕಾಲುಗಳಿರುವುದಿಲ್ಲ. ಇವುಗಳು
ಒಂದು ಜೊತೆ ಪೆಕ್ಟೋರಲ್ ಒಂದು ಜೊತೆ ಪೆಲ್ವಿಕ್ ರೇಖೆಗಳು ಕಂಡುಬರುತ್ತದೆ. ಈಜು ರೆಕ್ಕೆಗಳು ಈಜಾಡಲು
ಮತ್ತು ದೇಹದ ಸಮತೋಲನ ಕಾಪಾಡಲು ಸಹಕಾರಿಯಾಗಿವೆ.
* ಮೀನಗಳು ಐದು ಜೊತೆ ಕಿವಿರು ಸಿಳಿಕೆ ಇರುತ್ತದೆ.
ಇವು ಉಸಿರಾಟದ ಅಂಗಾಗಳಾಗಿವೆ.
ಮೀನುಗಳ ಬಗ್ಗೆ ವಿಶೇಷ ಮಾಹಿತಿ:-
* ಮೀನುಗಳನ್ನು ಆಹಾರಗಳನ್ನಾಗಿ ಬಳಸುತ್ತಾರೆ
ಮೀನಿನಲ್ಲಿ ಸೇಫಾಲಿನ್ ಎಂಬ ಪ್ರೋಟಿನ್ ಇರುವುದರಿಂದ ಮಾನವನಲ್ಲಿ ಜ್ಞಾನ ಪಕಶಕ್ತಿಯದ ಹೆಚ್ಚಿಸುತ್ತದೆ.
* ಅಮೇಜಾನ ನದಿಬ¼ ಇರುವ ಹಿಲ್ ಮೀನು 200 ವೊಲ್ಟೆ ವಿದ್ಯುತನ್ನು ಉತ್ಪತ್ತಿ ಮಾಡಬಲ್ಲದಾಗಿದೆ.
* ವಿದ್ಯುತ್ ಕಿರಣಗಳಿರುವ ಮೀನುಗಳಲ್ಲಿ ಪ್ರತ್ಯೇಕವಾಗಿ
ವಿದುತ್ ಉತ್ಪಾದಿಸುವಂತಹ ಅಂಗಗಳಿವೆ.
* ಎಲೆಕ್ಟ್ರಿಕ್ ರೇ ಎಂಬ ಮೀನು 8 ವೊಲ್ಟನಿಂದ
220 ವೊಲ್ಟ್ ವಿದ್ಯುತನ್ನು ಉತ್ಪತ್ತಿ ಮಾಡುತ್ತದೆ. ಈ ವಿದ್ಯುತನ್ ಸಹಾಯದಿಂದ ಈ ಮೀನು ರಕ್ಷಣೆ ಹಾಗೂ
ಆಹಾರ ಪಡೆಯುತ್ತದೆ.
* ಹಿಪೊಕ್ಯಾಂಪಸ್ ಎಂಬ ಮೀನಿನ ತಲೆಯ ಕುದರೆ
ಯಾಕಾರ ಹೊಂದಿರುವದರಿಂದ ಇದನ್ನು ಕಡಲ ಕುದರೆ ಎಂದು ಕರೆಯುತ್ತಾರೆ.
* ಆಸ್ಟ್ರೇಶಿಯನ್ ಎಂಬ ಮೀನಿಗೆ ತಲೆಯ ಮುಂಭಾಗದಲ್ಲಿ
ಕಣ್ಣುಗಳು ಮುಂದೆ ಒಂದು ಜೊತೆ ಕೊಂಬುಗಳಿವೆ ಹೀಗಾಗಿ ಈ ಮಿನನ್ನು ಹಸು ಕೊಂಬುಗಳಿವೆ ಈ ಮೀನನ್ನು ಹಸು
ಮೀನು ಎಂದು ಕರೆಯುವರು
* ಶಾರ್ಕ ಮತ್ತು ಕಾಡ್ ಎಂಬ ಜಾತಿಯ ಮೀನುಗಳು
ಯಕೃತನಿಂದ ಎಣಿ ತೆಗೆಯುತ್ತಾರೆ ಇದರಲ್ಲಿ ಎ&ಡಿ ಜೀವಸತ್ವ-ವಿರುತ್ತದೆ.
ಉಭಯವಾಸಿಗಳು:-
* ನೀರು & ಭೂಮಿ ಎರಡೂ ಕಡೆವಾಸ ಮಾಡುವ
ಪ್ರಾಣಿಗಳು ಉಭಯವಾಸಿ ಪ್ರಾಣಿಗಳು
* ಬಾಯಿ ಸಾಮಾನ್ಯವಾಗಿ ದೊಡ್ಡದಾಗಿದ್ದು ಹೊರ
ಚಾಚಬಲ್ಲ ನಾಲಿಗೆ & ಸಣ್ಣ ಹಲ್ಲುಗಳನ್ನು ಹೊಂದಿದೆ.
* ಕಣ್ಣುಗಳು ಚಲನಶೀಲ ಕಣ್ಣು ರೆಪ್ಪೆ ಹೊಂದಿದೆ.
* ಇವುಗಳು 3 ಕೋಣೆಯ ಹೃದಯ ಹೊಂದಿದೆ 2 ಹೃತ್ಕಣ
1 ಹೃತ್ಕಕ್ಷಿ ಹೊಂದಿದೆ ಇವು ದ್ವಿರುಕ್ತ ಪರಿಚಲನೆ ಹೊಂದಿದೆ.
* ಇವು ನಯವಾದ ತೇವಭರೀತ ಗ್ರಂಧವಿರುವ ಚರ್ಮವಿದ್ದು
ಇದು ಉಸಿರಾಟಕ್ಕೆ ಸಹಾಯಕವಾಗಿದೆ.
* ಇವು ಶೀತರಕ್ತ ಪ್ರಾಣಿಗಳಾಗಿವೆ.
* ಇವುಗಳು ಏಕ ಲಿಂಗ ಜೀವಿಗಳು ಇವುಗಳಲ್ಲಿ
ಲೈಂಗಿಕ ರೀತಿಯಲ್ಲಿ ಸಂತಾನೋತ್ಪತ್ತಿ ನಡೆಸುತ್ತವೆ ಬಾಹ್ಯಗರ್ಭ ಧಾರಣೆ ನಡೆಸುತ್ತವೆ ನಿಂತ ನೀರಿನಲ್ಲಿ
ಮೊಟ್ಟೆ ಇಡುತ್ತವೆ.
* ಉಭಯವಾಸಿಗಳು ಜೀವನ ಚರಿತ್ರೆಯಲ್ಲಿ ಸಾಮಾನ್ಯವಾಗಿ
ರೂಪಾಂತರ ಪರಿವರ್ತನೆ ಕಂಡು ಬರುತ್ತದೆ.
* ಉಭಯಾವಾಸಿಗಳು ಲಾವ್ರಾ ಅವಸ್ಥೆಯಿಂದ ಪ್ರಾರಂಭವಾಗಿ
ಪ್ರೌಢಾವಸ್ಥೆವರೆಗಿನ ಬದಲಾವಣೆಗಳನ್ನು ಒಟ್ಟಾರೆಯಾಗಿ ರೂಪ ಪರಿವರ್ತನೆ ಎನ್ನುವರು
* ಮರಿ ಕಪ್ಪೆಯನ್ನು ಟ್ಯಾಡ್ ಪೋಲ್ ಎನ್ನುತ್ತಾರೆ.
* ಇವು ಚತುಷ್ಪದಿಗಳು ಹಿಂಗಾಲಿನಲ್ಲಿ ಐದು
ಬೆರಳುಗಳಿರುತ್ತವೆ.
* ಬಾಯಿಯ ಮೇಲೆ ತೆರೆಯುವ 2 ಬಹಿರ್ ನಾಸಿಕಗಳಿವೆ.
* ಈ ಪ್ರಾಣಿಗಳು ಬೆಳವಣಿಗೆಯ ಮೊದಲ ಹಂತದಲ್ಲಿ
ಕಿವಿರು ಹೊಂದಿರುತ್ತವೆ ಪ್ರೌಢಾವಸ್ಥೆಯಲ್ಲಿ ಶ್ವಾಸಕೋಸ ಬೆಳೆದು ಭೂಮಿಯ ಮೇಲೆ ವಾಸ ಮಾಡಲು ಸಾಧ್ಯವಾಗಿದೆ.
ಉಭಯವಾಸಿಗಳ ವಿಶೇಷತೆ:-
* ಉಭಯ ವಾಸಿಯಗಳಲ್ಲ ಲೋಳೆ ಸ್ರವಿಕೆಯಿಂದ ಚರ್ಮದ
ತೇವವಾಗಿರುತ್ತದೆ.
* ಅಮೇರಿಕಾದ ಪೈಪಾ ಎಂಬ ಕಪ್ಪೆಗೆ ನಾಲಿಗೆ
ಇಲ್ಲ ಅದು ಬೆನ್ನಿನ ಮೇಲೆ ಕುಳಿಗಳನ್ನು ಮಾಡಿಕೊಂಡು ಅದರಲ್ಲಿ ಮರಿಗಳನ್ನು ಹೊತ್ತು ಕೊಂಡು ತಿರುಗುತ್ತದೆ.
* ಅಲೈಟಿಸ್ ಎಂಬ ಯೊರೋಪಿನ ನೆಲಗಪ್ಪೆಗಳು ಗಂಡು
ಕಪ್ಪೆ ಮೊಟ್ಟೆಗಳನ್ನು ತನ್ನ ಕಾಲಿಗೆ ಸುತ್ತಿಕೊಂಡು ಹೊತ್ತು ಓಡಾಡುತ್ತವೆ. ಆದುದ್ದರಿಂದ ಅಲೈಟಿಸ್
ಜಾತಿಯ ಕಪ್ಪೆವನ್ನು ಸೂಲಗಿತ್ತಿ ಕಪ್ಪೆ ಎಂದು ಕರೆಯುತ್ತಾರೆ.
* ಹಿತ್ತಲ ಮಂಡಲ ಜಲವಾಸಿ ಉಭಯವಾಸಿಯಾಗಿದ್ದು
ಇದು ಕಾಲುಗಳನ್ನು ಹೊಂದಿರುವುದಿಲ್ಲ. ಇದರ ಚರ್ಮವು ನುಣಪಾಗಿದ್ದು & ಅಡ್ಡದಾಗಿ ಸುಕ್ಕುಗಟ್ಟಿದ
ಹೋದಿಕೆಯಿಂದಾಗಿದೆ.
* ಹಿತ್ತಲ ಮಂಡಲ ಹೆಣ್ಣು ಪ್ರಾಣಿಯು ಮಣ್ಣಿನಲ್ಲಿ
ಮೊಟ್ಟೆ ಇವು ಅವುಗಳ ಸುತ್ತ ದೇಹವನ್ನು ಸುರಳಿಯಾಗಿ ಸುತ್ತಿಕೊಂಡು ಮೊಟ್ಟೆ ಒಡೆದು ಹೊರ ಬರುವರೆಗೂ
ಕಾಯುತ್ತಿರುತ್ತದೆ.
* ಅತಿಶೀತ ಹವಾಮಾನದಲ್ಲಿ ಉಷ್ಣ ಹವಾಮಾನದಲ್ಲಿ
ಕಪ್ಪೆಗಳು ಮಣ್ಣಿನಲ್ಲಿ ಹೊಂದಿಕೊಳ್ಳುತ್ತವೆ. ಈ ಕಾಲದಲ್ಲಿ ಕಪ್ಪೆಗಳು ಚಟುವಟಿಕೆ ರಹಿತವಾಗಿರುತ್ತವೆ.
ಆಹಾರವನ್ನು ತಿನುವುದಿಲ್ಲ ದೇಹದಲ್ಲಿ ಶೇಖರವಾಗಿರುವ ಕೊಬ್ಬನೇ ಕರಗಿಸಿಕೊಂಡು ಜೀವಿಸುತ್ತವೇ. ಉಸಿರಾಟ
ಕ್ರೀಯೆವನ್ನು ತಮ್ಮ ದೇಹದ ಚರ್ಮದ ಮೂಲಕವೇ ಮಾಡುತ್ತದೆ. ಈ ವಿದ್ಯಮಾನವನು ಶಿಶಿರ ನಿದ್ರೆ & ಬೆಸಿಗೆ
ನಿದ್ರೆ ಎಂದು ಕರೆಯುತ್ತಾರೆ.
* ಪ್ಲೆತೊಡಾಂಟೆ ಬೆಂಕಿ ಮೊಸುಳೆಗಳು ಶ್ವಾಸಕೋಶ
& ಕಿವಿರುಗಳನ್ನು ಹೊಂದಿಲ್ಲ.
ಸರಿಸೃಪಗಳು:-
* ಹರಿದಾಡುವ ಪ್ರಾಣಿಗಳು ಇವುಗಳು ಸರಿದಾಡುವ
ಪ್ರಾಣಿಗಳಾದ್ದುದರಿಂದ ಸರಿಸೃಪ ಎಂಬ ಹೆಸರು ಬಂದಿತು.
* ಇವು ಶೀತರಕ್ತ ಪ್ರಾಣಿಗಳು
* ಮೊದಲು ನೆಲವಾಸಿ ಕಶೇರುಕ ಪ್ರಾಣಿಗಳು ಇವಾಗಿವೆ.
* ಚರ್ಮದಲ್ಲಿ ಗ್ರಂಥಿ ಇಲ್ಲದಿರುವದರಿಂದ ಅದು
ಒಣಗಿದಂತೆ ಕಾಣುತ್ತದೆ.
* ಇವುಗಳಲ್ಲಿ ಉಸಿರಾಟದ ಅಂಗಗಳು ಶ್ವಾಸಕೋಶ
ಸಾಕಷ್ಟು ಪ್ರಮಾಣದಲ್ಲಿ ಬೆಳವಣಿಗೆ ಹೊಂದಿದೆ.
* ಬಾಯಿ ದೊಡ್ಡದಾಗಿದ್ದು ಎರಡು ದವಡೆಗಳಲ್ಲಿ
ಹಲ್ಲುಗಳಿವೆ
ಸರಿಸೃಪಗಳು ವಿಶೇಷತೆ :-
* ಕಮಾಡೊ ಡ್ರಾಗನ್ ಎಂಬ ಹಲ್ಲಿ ಜಾತಿಯ ಪ್ರಾಣಿಯ
ಅತ್ಯಂತ ಹೆಚ್ಚು ಅವಧಿ ಬದುಕುವ ಸರಿಸೃಪವಾಗಿದೆ.
* ಪ್ರಪಂಚದ ಅತಿ ದೊಡ್ಡ ಹಾವು - ಆನಾಕೊಂಡ
* ಪ್ರಪಂಚದ ಅತಿ ಉದ್ದದ ಹಾವು - ಹೆಬ್ಬಾವು
(ಪೈಥಾನ)
* ಗೂಡು ಕಟ್ಟುವ ಹಾವು - ಕಾಳಿಂಗ ಸರ್ಪ
* ಹಾವನ್ನೇ ಆಹಾರವಾಗಿ ತಿನ್ನುವ ಹಾವು- ಕಾಳಿಂಗ
ಸರ್ಪ
* ಹಾವು ನಾಲಿಗೆಯ ಮೂಲಕ ಸುತ್ತಲಿನ ವಾಸನೆ
ಗ್ರಹಿಸುತ್ತದೆ.
* ಸರಿಸ್ನಪಗಳು ನೆಲದಲ್ಲಿ ಮೊಟ್ಟೆಯಿಡುತ್ತವೆ.
ಆದ್ದುದರಿಂದ ಮೊಟ್ಟೆಯೊಳಗಿನ ಭ್ರೂಣವು ಒಣಗದಂತೆ ಬಿಳಿಯ ಕವಚವನ್ನು ಹೊಂದಿರುತ್ತದೆ.
* ಹೃದಯದಲ್ಲಿ ಮೂರು ಕೋಣೆಗಳಿವೆ ಉಭಯ ವಾಸಿಗಳಿಗಿಂತ
ಹೃದಯವು ಹೆಚ್ಚು ವಿಕಾಸಗೊಂಡಿದೆ.
* ನರವ್ಯೂಹವು ಮೆದಳು ಮೆದಳು ಬೆಳ್ಳಿ
& ನರಗಳನ್ನೊಗೊಂಡ ವಿಕಾಸವಾಗಿದೆ. 12 ಜೊತೆ ಮೆದಳು ನಗರಗಳು ಕಂಡು ಬರುತ್ತವೆ. ಇವು ಏಕಲಿಂಗಗಳಾಗಿವೆ.
* ಲೈಂಗಿಕ ರೀತಿಯಲ್ಲಿ ಸಂತಾನೊತ್ಪತ್ತಿ ನಡೆಸುತ್ತವೆ.
ಎಲ್ಲಾ ಸರಿಸೃಪಗಳು ಮೊಟ್ಟೆ ಇಡುವ ಪ್ರಾಣಿಗಳಾಗಿವೆ.
* ಬ್ಲಾಕ್ ಮ್ಯಾಂಮಬಾ ಎಂಬ ಹಾವು ಅತಿ ಹೆಚ್ಚು
ವಿಷಪೂರಿತವಾದ ಹಾವಾಗಿದೆ.
* ಊಸರವಳ್ಳಿ ಎಂದು ಕರೆಯಲ್ಪಡುವ ಹಲ್ಲಿ ಜಾತಿಯ
ಪ್ರಾಣಿಯ ಸರಿಸೃಪವಾಗಿದ್ದು ತನ್ನ ದೇಹದ ಬಣ್ಣವನ್ನು ಬದಲಾಯಿಸುವ ಸಾಮಥ್ರ್ಯ ಹೊಂದಿದೆ ಹಾಗೂ
ಏಕಕಾಲದಲ್ಲಿ ವಿರುದ್ದ ದಿಕ್ಕಿನಕಡೆಗೆ ದೃಷ್ಟಿ
ಹಾಯಿಸಬಹುದು ಕಣ್ಣುಗಳನ್ನು ಚಲಿಸಬಲ್ಲ ಸಾಮಾಥ್ರ್ಯ ಹೊಂದಿದೆ.
* ಡೈನೊಸಾರಾಸ್ & ಟ್ರೈನೋಸಾರಸ್‍ಗಳು
ಭೂಮಿಯ ಮೇಲಿನ ಅತ್ಯಂತ ದೈತ್ಯ ಹಾಗೂ ಬಲಿಷ್ಠ ಪ್ರಾಣಿಯಾಗಿ ಜೀವಿಸಿ ಅಳಿದು ಹೊದ ಬೃಹತ ಸರಿಸೃಪಗಳಾಗಿವೆ.
* ಅಂಟಾರ್ಟಿಕ ಖಂಡವನ್ನು ಹೊರತು ಪಡಿಸಿ ಉಳಿದ
ಖಂಡಗಳಲ್ಲೂ ಸರಿಸೃಪಗಳನ್ನು ಕಾಣಬಹುದು.
* ಮೊಸಳೆಯ ನಾಲಗೆಯನ್ನು ಹೊರ ಚಾಚುವುದೆ ಇಲ್ಲ.
ಹಕ್ಕಿಗಳು (Birds):-
* ಹಕ್ಕಿಗಳು ಬಿಸಿರಕ್ತ ಪ್ರಾಣಿಗಳಾಗಿವೆ.
* ಇವುಗಳ ದೇಹವು ಚರ್ಮದ ಗರಿಗಳಿಂದ ಕೂಡಿದ್ದು
ಇದರಿಂದ ಪಕ್ಷಿಗಳಿಗೆ ರಕ್ಷಣೆ ಶರೀರದ ಉಷ್ಣತೆಯನ್ನು ಸಮತೋಗಿಸವಿಕೆಗೆ ಹಾಗೂ ನೀರು ಶರೀರದಿಂದ
ನಷ್ಠವಾಗುತ್ತದೆ. ದೇಹವನ್ನು ಕಾಪಾಡುತ್ತದೆ.
ಅಲ್ಲದೇ ಗರಿಗಳು ಪಕ್ಷಿಗಳಿಗೆ ಲೈಂಗಿಕ ಆಕರ್ಷಣೆಯನ್ನು ಒದಗಿಸವಲ್ಲಿ ಸಹಕಾರಿಯಾಗಿವೆ.
* ಹಕ್ಕಿಗಳಲ್ಲಿ ಮೌಂಸಹಾರಿ & ಸಸ್ಯಹಾರಿ
ಎರಡು ಇವೆ.
* ಹಕ್ಕಿಗಳ ಅಸ್ಥಿಪಂಜರ ಗಟ್ಟಿ & ಹಗುರ
& ಹಕ್ಕಿಗಳ ಮೂಳೆಗಳು ಟೊಳ್ಳಾಗಿದ್ದು ಗಾಳಿ ತುಂಬಿಕೊಂಡು ಹಗುರವಾಗಿದೆ. ಇವುಗಳನ್ನು ವಾಯುವಿನ
ಮೂಳೆಗಳು
ಎನ್ನುವರು.
* ಇವು ಶಾಸ್ವನಾಳದ ತಳಭಾಗದಲ್ಲಿ ಸಿರಿಕ್ಸ್
ಎಂಬ ಧ್ವನಿ ಪೆಟ್ಟಿಗೆ ಇದೆ. ಇಂತಹ ಪೆಟ್ಟಿಗೆಗಳಿಂದ ಧ್ವನಿ ಉಂಟಾಗುತ್ತದೆ.
* ಹೃದಯ 4 ಕೋಣೆಗಳಿಂದಾಗಿದೆ ಹಕ್ಕಿಗಳು ಕ್ರೀಯಾ
ಶೀಲ ಬಿಸಿರಕ್ತದ ಪ್ರಾಣಿಗಳಾಗಿವೆ. ಹೃದಯ ಬಡಿತವು ಬೇರೆ ಪ್ರಾಣಿಗಳಿಗಿಂತ ಹೆಚ್ಚಾಗಿರುತ್ತದೆ.
* ಹಕ್ಕಿಗಳಲ್ಲಿ ಶ್ವಾಸಕೋಶಗಳು ವಾಯುಚೀಲವನ್ನು
ಹೊಂದಿವೆ.
* ಹೃದಯದ ಗಾತ್ರ & ಹೃದಯದ ಬಡಿತವು ಪಕ್ಷಿಯ
ಗಾತ್ರ ಅದರ ಚಟುವಟಿಕೆಯನ್ನು ಆಧಾರಿಸಿದೆ.
* ಇವುಗಳ ದೇಹದ ಉಷ್ಣತೆ ಮಾನವನಿಗಿಂತಲೂ ಹೆಚ್ಚು
* ಎಲ್ಲಾ ಹಕ್ಕಿಗಳು ಮೊಟ್ಟೆಯಿಡತ್ತವೆ ಹಕ್ಕಿಗಳು
ಜಲಪಾದ ಹೊಂದಿರುತ್ತವೆ ಮುಂಗಾರು ರೆಕ್ಕೆಗಳಾಗಿ ಮಾರ್ಪಟ್ಟಿವೆ.
ಹಕ್ಕಿಗಳ ವಿಶೇಷತೆ:-
ಜಗತ್ತಿನ ಅತಿ ಚಿಕ್ಕ ಪಕ್ಷಿ ಹಮ್ಮಿಂಗ ಬರ್ಡ
:- ಬೆಳವಣಿಗೆ ಹೊಂದಿದ ಈ ಹಕ್ಕಿಯ ಕೇವಲ 3 ಗ್ರಾಂ ತೊಗುತ್ತದೆ. ಈ ಹಕ್ಕಿಯ ಹೃದಯ ಬಡಿತವನ್ನು ಹೊಂದಿರುತ್ತದೆ.
ಇನ್ನು ಹೆಚ್ಚು ಹೃದಯ ಬಡಿತ 1 ನಿಮಿಷಕ್ಕೆ 1260 ಬಾರಿಯಾಗಿದೆ.
* ಅತಿ ಚಿಕ್ಕ ಮೊಟ್ಟೆ ಹಮ್ಮಿಂಗ ಬರ್ಡ ಹಕ್ಕಿಯ
ಮೊಟ್ಟೆಯಾಗಿದ್ದು ಇದು 0.365 ಗ್ರಾಂ ತೂಕ ಹೊಂದಿರುತ್ತದೆ.
* ಉಷ್ಣ ಹಕ್ಕಿ ಅತಿ ವೇಗವಾಗಿ ಹಾರುವ ಪಕ್ಷಿಯಾಗಿದೆ.
* ಅಸ್ಟ್ರೀಚ್ (ಉಷ್ಣ ಪಕ್ಷಿ)ಯು ಸುಮಾರು
24 ಮೀ ಎತ್ತರ ಬೆಳೆಯುತ್ತದೆ. ಹಾಗೂ ಸುಮಾರು 140 ಕೆ.ಜಿ ತೂಗುತ್ತದೆ. ಆದ್ದುದರಿಂದ ಇದನು ಅತಿ ದೊಡ್ಡ
ಪಕ್ಷಿ ಹಾಗೂ ಅತಿದೊಡ್ಡ ಮೊಟ್ಟೆ ಇಡುವ ಪಕ್ಷಿಯಾಗಿದೆ.
* ಅಸ್ಟೀಟ್ ಪಕ್ಷಿಯು ಗಂಟೆಗೆ 60 ಕಿ.ಮೀ.
ವೇಗದಲ್ಲಿ ಓಡುವ ಸಾಮಥ್ರ್ಯಹೊಂದಿದೆ.
* ಅಸ್ಟ್ರೀಚ್ ಪಕ್ಷಿಯು ಭೂಮಿಯ ಮೇಲೆ ವಾಸ
ಮಾಡುವ ಪ್ರಾಣಿಗಳಲ್ಲಿಯೇ ಅತಿ ದೊಡ್ಡ ಕಣ್ಣನು ಹೊಂದಿದೆ.
* ಹಾರಲಾಗದ ಪಕ್ಷಿಗಳು :- ಆಸ್ಟ್ರೀಚ, ಪೆಂಗ್ವಿನ್
* ಅತ್ಯಂತ ವೇಗವಾಗಿ ಈಜುವ ಪಕ್ಷಿಎಂದರೆ ಅಂಟಾರ್ಟಿಕ
ಖಂಡದಲ್ಲಿ ವಾಸಿಸುವ ಪೆಂಗ್ವಿನ್
* ಅತಿ ದೂರ ವಲಸೆ ಹೋಗುವ ಪಕ್ಷಿ ಎಂದರೆ ಆರ್ಕೇಟಿಕ್
ಟರ್ನ ಇದು ನಿರಂತರವಾಗಿ 18000 ಕಿ.ಮೀ ದೂರ ಕ್ರಮಿಸುತ್ತದೆ.
* ದಕ್ಷಿಣ ದ್ರುವ ಪ್ರದೇಶದಲ್ಲಿ ವಾಸಿಸುವ
ಪಕ್ಷಿ -ಪೆಂಗ್ವಿನ
* ಗರಿಗಳಿರುವ ಪ್ರಾಣಿಗಳು -ಗುಬ್ಬಿ, ನವಿಲು,
ಕಾಗಿ, ಗೂಬೆ
* ಹಕ್ಕಿಗಳು ಮೊಟ್ಟೆಯು ಕ್ಯಾಲ್ಸಿಯಂ ಕಾರ್ಬೋನೇಟ್
ಎಂಬ ಚಿಪ್ಪಿನಿಂದ ಅವೃತವಾಗಿರುತ್ತದೆ.
ಸಸ್ತನಿಗಳು :-
* ಇವು ಸ್ತನವನ್ನು ಹೊಂದಿದ ಪ್ರಾಣಿಗಳು ಇವು
ಸ್ತನದ ಮೂಲಕ ಮರಿಗೆ ಹಾಲು ಉಣಿಸುತ್ತದೆ.
* ಇವು ಬಿಸಿರಕ್ತ ಪ್ರಾಣಿಗಳು
* ಚರ್ಮದ ಸ್ವೇದಗ್ರಂಥಿ (ಬೆವರಿನ ಗ್ರಂಥಿ
& ತೈಲ್ ಗ್ರಂಥಿಗಳಿರುತ್ತವೆ. ಚಲಿಸುವ ಕಣ್ಣು ರೆಪ್ಪೆಗಳಿವೆ.
* ಹೃದಯದಲ್ಲಿ 4 ಕೋಣೆಗಳಿವೆ, ವ್ಯವಸ್ಥಿತವಾದ
ನರಮಂಡಲವಿದ್ದು, ವಿಕಾಸ ಹೊಂದಿದ ಪ್ರಾಣಿಯಾಗಲು ಸಹಕಾರಿಯಾಗಿದೆ.
* ವಿಭಿನ್ನ ರೀತಿಯಲ್ಲಿ ಹಲ್ಲುಗಳನ್ನು ಹೊಂದಿದ್ದು
ಇವು ಕುಳಿಗಳಲ್ಲಿ ಹುದಗಿವೆ & 2 ಬಾರಿ ಹಲ್ಲುಗಳು ಬರುತ್ತದೆ.
* ದೇಹದ ಮೇಲೆ ಕೂದಲು ಹೊದಿಕೆ ಇದೆ.
* ಮೇಲ್ನೋಟದ ಸಸ್ತನಿಗಳಲ್ಲಿ ತಾಯಿಯ ದೇಹಕ್ಕೂ
& ಭ್ರೂಣಕ್ಕೂ ಸಂಬಂಧವನ್ನು ಪ್ಲಾಸೆಂಟ್ ಎಂಬ ಅಂಗವು ಏರ್ಪಡಿಸುತ್ತವೆ.
ಶೀತರಕ್ತ ಪ್ರಾಣಿಗಳು:-
* ಎಲ್ಲಾ ಅಕಶೆರುಕಗಳು ಶೀತರಕ್ತ ಪ್ರಾಣಿಗಳು
* ಗೋಲ್ಡ್ ಫಿಶ್, ಕಪ್ಪೆ ಹಾವು ಶೀತರಕ್ತ ಪ್ರಾಣಿಗಳು
* ಶೀತರಕ್ತ ಪ್ರಾಣಿಗಳಲ್ಲಿ ದೇಹದ ಉμÁ್ಣಂಶ ಬದಲಾಗುತ್ತದೆ.
ಬಿಸಿರಕ್ತ ಪ್ರಾಣಿಗಳು :-
ಹಕ್ಕಿಗಳು ಸಸ್ತನಿಗಳು ಬಿಸಿರಕ್ತ ಪ್ರಾಣಿಗಳು,
*ಬಿಸಿರಕ್ತ ಪ್ರಾಣಿಗಳಲ್ಲಿ ದೇಹದ ಉಷ್ಣಾಂಶವು
ವಾತವರಣದಲ್ಲಿ ಆದ ಬದಲಾವಣೆಗೆ ಬದಲಾಗುವುದಿಲ್ಲ.
* ನಿಶಾಚಾರ ಪ್ರಾಣಿಗಳು :- ರಾತ್ರಿ ವೇಳೆ
ಚಟುವಟಿಕೆ ಹೊಂದಿರುವ ಪ್ರಾಣಿಗಳನ್ನು ನಿಶಾಚಾರ ಪ್ರಾಣಿಗಳೆಂದುಕರೆಯುತ್ತಾರೆ.
* ನಿಶಾಚಾರ ಪ್ರಾಣಿಗಳಿಗೆ ಉತ್ತಮ ಉದಾ:- ಗೂಬೆ,
ಮುಳ್ಳು ಹಂದಿ ಬಾವಲಿ ಪಂಗೊಲಿಯನ್
ಪ್ರಾಣಿಗಳು ಜೀವಿತಾವಧಿ
ಆಮೆ 150-200 ವರ್ಷ
ನಾಯಿ 20-25
ಮಾನವ 70-100
ಬೆಕ್ಕು 20-25
ಆನೆ 60-80
ನೊಣ 15-30 ದಿನ
ಉಷ್ಣ ಪಕ್ಷಿ 60-70
ಮೊಸಳೆ 40-45
ತಿಮಿಂಗಿಲ 60-70
ಬಾವಲಿ 25-30
ಕುದರೆ 25-30
ಸಿಂಹ 20-25
ಆಕಳು 25-30
ಇಲಿ 5-7
ಪ್ರಾಣಿಗಳ ವಿಶೇಷತೆ :-
* ಚೀಲ ಹೊಂದಿರುವ ಪ್ರಾಣಿಗಳು ಕಾಂಗಾರು, ಕೊಯಾಬಾ
ಎಂಬ ಸ್ತನಿಗಳು ಹೆಣ್ಣು ಪ್ರಾಣಿ ದೇಹದಲ್ಲಿ ಚೀಲ ಹೊಂದಿದ್ದು ಚೀಲದೊಳಗೆ ಮರಿಯೊಂದು ಇಟ್ಟುಕೊಂಡು ರಕ್ಷಿಸುತ್ತವೆ.
* ಕರಳುಬಳ್ಳಿ ಹೊಂದಿರುವ ಸಸ್ತನಿಗಳು:- ಮಾನವ
ಆನೆ ರೈನೋಸಾರಸ್ ಗೊರಿಲ್ಲಾ ಇವು ಕರಳಬಳ್ಳಿ ಹೊಂದಿರುವ ಸಸ್ತನಿಗಳು ಇವು ದೇಹದೊಳಗೆ ಮರಿಯನ್ನು ಬೆಳೆಸುತ್ತವೆ.
* ಮೊಟ್ಟೆ ಇಡುವ ಸಸ್ತನಿಗಳು:-
1) ಪ್ಲಾಟಿಪಸ್
2) ಯಕಿಡ್ನಾ
3) ಸ್ಪೈನಿ ಅಂಟ್ ಈಟರ್ (ಗೆನಲು ತಿನ್ನುವ
ಮುಳ್ಳಿನಪ್ರಾಣಿ)
* ಮುಳ್ಳುಗಳಿರುವ ಪ್ರಾಣಿಗಳು:- ಮುಳ್ಳು
ಹಂದಿ ರೋಮದಿಂದ ಕೂಡಿದ ಪ್ರಾಣಿಗಳು ನಾಯಿ, ಹಸು, ಕರಡಿ, ಕುರಿ, ಮೇಕೆ ಬೆಕ್ಕು.
* ಪರ್ವತ ಪ್ರದೇಶದಲ್ಲಿ ವಾಸಿಸುವ ಪ್ರಾಣಿಗಳು:-
ಯಾಕ್ ಲಾಮ, ಮರುಭೂಮಿ ಪ್ರದೇಶದಲ್ಲಿ ವಾಸಿಸುವ ಪ್ರಾಣಿ- ಒಂಟೆ, ಇಲಿ
ಧ್ರುವ ಪ್ರದೇಶದಲ್ಲಿ ವಾಸಿಸುವ ಪ್ರಾಣಿ -
ಹಿಮ ಸಾರಂಗ ಹಿಮನಾಯಿ ಹಿಮಕರಡಿ
* ಹಾರಾಡುವ ಸಸ್ತನಿ - ಬಾವಲಿ
* ಜಗತ್ತಿನ ಅತ್ಯಂತ ದೊಡ್ಡ ಸಸ್ತನಿ - ನಿಲಿ
ತಿಮಿಂಗಿಲ ಇದು 30 ಉದ್ದ 200 ಮೆಟ್ರಿಕ್ ಟನ್ ತೂಕ ಹೊಂದಿದೆ.
* ಜಲಚರ ಸಸ್ತನಿ -ಡಾಲ್ಫಿನ್ & ತಿಮಿಂಗಿಲ
* ಪಾಂಡಗಳು ಜೀವಂತ ಅವಶೇಷಗಳಾಗಿವೆ.
* ಸ್ಲಾತ ಎಂಬ ಸಸ್ತನಿಯ ತಲೆಕೆಳಗಾಗಿ ನಡೆಯುತ್ತವೆ
& ತೆಲೆಕೆಳಗಾಗಿ ನಿದ್ರಿಸುತ್ತವೆ.
* ನೀರ್ಗುದುರೆ (ಹಿಪಾಟಮಸ್ ಹಗಲಿನಲ್ಲಿ ನೀರು/ಮಣ್ಣಿನಲ್ಲಿ
ಇರುತ್ತದೆ. ಸಂತಾನೋತ್ಪತ್ತಿ & ಪ್ರಸವನಗಳೆರಡು ನೀರಿನಲ್ಲಿ ಸಂಭವಿಸುತ್ತವೆ ಹಿಪಾಟಮಸ್ ಭೂಮಿ
ಮೇಲೆ ವಾಸಿಸುವ ಪ್ರಾಣಿಗಳಲ್ಲೇ 3ನೇ ದೊಡ್ಡ ಪ್ರಾಣಿ
* ಭೂಮಿ ಮೇಲೆ ವಾಸಿಸುವ ಅತಿ ದೊಡ್ಡ ಪ್ರಾಣಿಗಳೆಂದರೆ
ಆನೆ, ಗೆಂಡಾಮೃಗ
* ಬೀವರ್ ಎಂಬ ಸಸ್ತನಿಯದ ಪ್ರಾಣಿ ಪ್ರಪಂಚದ
ವಾಸ್ತು ಶಿಲ್ಪಿ ಎಂಬ ಕರೆಯುತ್ತಾರೆ. ಇವುಗಳು ಅಣೆಕಟ್ಟು ನಿರ್ಮಿಸುವಾಗ ಕಲ್ಲುಗಳನ್ನು ಮರದ ರೆಂಬೆಗಳನ್ನು
ಬಳಸಿಕೊಂಡು ತಮ್ಮ ವಸತಿ ಬಳಿ ಇರುವ ಹಳ್ಳಗಳಗೆ ಅಡ್ಡಲಾದ ಅಣೆಕಟ್ಟು ರಚಿಸಿ ಬಾಗಿರುವ ಬಾಗಿಲಿರುವ ಜಲಾಶಯ
ನಿರ್ಮಿಸುತ್ತವೆ.
ಅಕಶೇರುಕಗಳು:-
* ಆದಿ ಜೀವಿಗಳು :- ಇವು ಭೂಮಿಯ ಮೇಲೆ ಮೊದಲ
ಬಾರಿಗೆ ಹುಟ್ಟಿದ ಜೀವಿಗಳು
* ಇವು ಏಕಕೋಶ ಜೀವಿಗಳು ಇವುಗಳ ದೇಹವು ಒಂದೆ
ಬಂದು ಕೋಶಗಳು ಮಾಡಲ್ಪಟಿದೆ.
* ಇವು ಗಾಳಿ, ನೀರು, ಮಣ್ಣು, ಪ್ರಾಣಿಗಳು
ದೇಹದಲ್ಲಿಯೂ ಕೂಡ ವಾಸಿಸುತ್ತದೆ. ಕೆಲವು ಪರಾವಲಂಭಿಗಳಾಗಿದ್ದು ಮಲೇರಿಯಾ (ಪ್ಲಾಮೋಡಿಯಂ) ಅಮಶಂಕೆ
ಎಂಟಅಮಿಬಾ ನಿದ್ರಿಸುವ ಬೇನೆ ಟ್ರೇಪನೋಸಮ್
ಅಂತಹ ಅನೇಕ ರೋಗಗಳಿಗೆ ಕಾರಣವಾಗಿದೆ.
* ಇವುಗಳು ದೇಹ ಯಾವುದೇ ಅಂಗ ಅಂಗವ್ಯೂಹ ಹೊಂದಿರುವುದಿಲ್ಲ.
ಇವು ಸರಳ ಜೀವಿಗಳು ಒಂದು ಕೋಶದಲ್ಲಿ ಎಲ್ಲಾ ಜೈವಿಕ ಕ್ರಿಯೆಗಳು ನಡೆಯುತ್ತವೆ.
* ಈ ವರ್ಗದ ಪ್ರಾಣಿಗಳು ಮಿಥ್ಯಪಾದ (ಅಮೀಬಾ)
ಕಶಾಂಗ (ಯುಗ್ಲೀನಾ ಟ್ರೈಪನೋಸೊಮ ಸಿಲಿಯಾ ಪ್ಯಾರಮಿಸಿಯಂಗಳನ್ನು ಚಲನಾಂಗಗಳಾಗಿ ಬಳಸುತ್ತವೆ.
ಸ್ವಂಜು ಪ್ರಾಣಿಗಳು:-
* ಸ್ವಂಜು ಪ್ರಾಣಿಗಳನ್ನು ಪೋರಿಫೆರ್ ಎಂದು
ಕರೆಯುವರು
* ಇವುಗಳು ಬಹುಕೋಶ ಜೀವಿಗಳಾಗಿವೆ ಆದರೆ ಅಂಗಾಂಶ
& ಅಂಗಗಳ ರಚನೆ ಇರುವುದಿಲ್ಲ.
* ಇವುಗಳ ದೇಹವು ರಂಧ್ರದಿಂದ ಮಾಡಲ್ಪಟ್ಟಿದ್ದು
ರಂಧ್ರದ ಮೂಲಕ ಆಮ್ಲಜನಕ & ಪೋಷಕಾಂಶಗಳು ಒಳಗೆ ಪ್ರವೇಶಿಸುತ್ತವೆ & ಅನುಪಯುಕ್ತ ವಸ್ತುಗಳು
ಹೊರಗಡೆ ಬರುತ್ತದೆ. ಈ ರಂಧ್ರಗಳಿಗೆ ಆಸ್ಕುಲಮ್ ಎನ್ನವುರು.
* ಸ್ವಂಜು ಪ್ರಾಣಿಗಳು ನಾರಿ ನಂತಿರುವ ಅಸ್ಥಿ
ಪಂಜರವನ್ನು ಸ್ನಾನಕ್ಕೆ ಹಾಗೂ ಶುಚಿಗೊಳಿಸುವ ಕೆಲಸಕ್ಕೆ ಬಳಸಲಾಗುತ್ತದೆ.ಹಾಗೂ ಒಣ ಅಸ್ಥಿಪಂಜರವನ್ನು
ಅಲಂಕಾರಕಾಗಿ ಬಳಸುತ್ತಾರೆ. ಆರ್ಥಿಕವಾಗಿ ಹೆಚ್ಚು ಬೆಲೆ ಹೊಂದಿದೆ.
* ಇವು ಬಹುತೇಕ ಜಲವಾಸಿಗಳಾಗಿದ್ದು, ಕೆಲವು
ಸಿಹಿನೀರಿನ ವಾಸಿಗಳಾಗಿವೆ.
* ಕ್ಲಿಯೊನಾ ಎಂಬ ಜಾತಿಗೆ ಸೇರಿದ ಸ್ವಂಜು
ಹಡಗುಗಳಿಗೆ ಅಂಟಿಕೊಂಡು ಜೀವಿಸುತ್ತ ರಂಧ್ರ ಮಾಡುತ್ತದೆ. ಆದುದ್ದರಿಂದ ಇದನ್ನು ಕೊರೆಯುವ ಸ್ವಂಜು
ಎನ್ನುವರು.
* ಯುಪೆಕ್ಟೆಲ್ಲಾ ಎಂಬ ಸ್ವಂಜು ಪ್ರಾಣಿಯನ್ನು
ವೀನಸ್ ಹೂವಿನ ಬುಟ್ಟಿ ಎಂದು ಕರೆಯುತ್ತಾರೆ.
ಸಿಲಿಯನ್‍ಟರೇಟ (ಕುಟುಕುಕಣವಂತಗಳು)
* ಈ ಪ್ರಾಣಿಗಳ ದೇಹದ ಒಳಗೆ ಜೀರ್ಣಕ್ರಿಯೆಯಲ್ಲಿ
ಸಹಕರಿಸುವ ಜಠಾರವಕಾಶ (ಸಿಲೆಂಟರಾನ, ವನ್ನು ಹೊಂದಿರುವುದರಿಂದ ಇವುಗಳಿಗೆ ಸಿಲೆಂಟರೇಟಾ
ಎನ್ನುವರು ಅಲ್ಲದೇ ಶತ್ರುಗಳಿಂದ ರಕ್ಷಿಸಿಕೊಳ್ಳಲು
ಮತ್ತು ಆಹಾರ ಜೀವಿಗಳನ್ನು ಕೊಲ್ಲಲು ಕುಟುಕುಕಣಗಳನ್ನು ಹೊಂದಿರುವ ಪ್ರಾಣಿಗಳಾಗಿರುದರಿಂದ್ದ ಈ ಪ್ರಾಣಿಗಳಿಗೆ
ಕುಟುಕುಕಣವಂತಗಳು ಎನ್ನುತ್ತಾರೆ.
* ದೇಹಕ್ಕೆ ಅವಶ್ಯಕ ವಸ್ತುಗಳು ಬಾಯಿಯ ಮೂಲಕ
ಪ್ರವೇಶಿಸಿ ಮತ್ತು ವಿಸರ್ಜಿಸಬೇಕಾದ ವಸ್ತುಗಳು ಬಾಯಿಯ ಮೂಲಕವೇ ಹೊರಬರುತ್ತವೆ.
* ಫೈಸಿಲಿಯವನ್ನು ಪೋರ್ಚಗಿಸ್ ಸಮರ ನೌಕೆ ಎಂದು
ಕರೆಯಲಾಗುತ್ತದೆ ಕಾರಣ ಇವು ದೇಹದಲ್ಲಿರುವಂತಹ ಗಾಳಿ ಚೀಲಗಳಿಂದ ಇದ್ದಕ್ಕಿದ್ದಂತೆ ಕಾಣಿಸಿಕೊಂಡು ತನ್ನ
ಆಹಾರ & ಶತ್ರುಗಳನ್ನು ಕುಟುಕುತ್ತಿದ್ದವು ಈ ಜೀವಿಯ ವಿಧಾನವನ್ನು ಪೋರ್ಚಗೀಸ್ ಸೈನಿಕರು ಬಳಸಿದರು.
* ಕುಟುಕಣವಂತಗಳು ವಂಶಕ್ಕೆ ಸೇರಿದ ಪ್ರಾಣಿಗಳು
ಗುಂಪುಗಳು ವಿಸ್ತಾರವಾಗಿ ಗಟ್ಟಿಯಾದ ಕ್ಯಾಲ್ಸಿಯಂ ಕಾರ್ಬೋನೆಟ್ ನಿಂದ ಕೂಡಿದ ಹವಳದ ದಿಣ್ಣೆಗಳು
ರೂಪಗೊಳ್ಳುತ್ತವೆ. ಇವುಗಳು ವಿವಿಧ ಬಣ್ಣದಲ್ಲಿದ್ದು,
ಇವುಗಳನ್ನು ಕುಶಲ ಕಲೆಗಾರಿಕೆಯಲ್ಲಿ ಬಳಸಲಾಗುತ್ತದೆ.
ಉದಾ:- ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್
ರೀಫ್ ಪ್ರಪಂದಲ್ಲೇ ಅತಿದೊಡ್ಡ ಲೋಳೆ ಮೀನು ಸಯಾನಿಯ
ಚಪ್ಪಟೆಹುಳುಗಳು
* ಈ ವಂಶದ ಪ್ರಾಣಿಗಳು ನೀಳವಾದ ಚಪ್ಪಟೆಯಾದ
ಹಾಗೂ ಖಂಡವಿಲ್ಲದ ದೇಹರಚನೆಯನ್ನು ಹೊಂದಿರುವುದರಿಂದ ಇವುಗಳನ್ನು ಚಪ್ಪಟೆ ಹುಳುಗಳು ಎನ್ನುವರು.
* ಇವುಗಳು ಕೆಲವು ಸ್ವತಂತ್ರ ಜೀವಿಗಳು ಇವು
ನೀರಿನಲ್ಲಿ ಅಥವಾ ತೇವಾಂಶವಿರುವ ಮಣ್ಣಿನಲ್ಲಿ ವಾಸಿಸುತ್ತವೆ. ಇನ್ನುಳಿದ ಚಪ್ಪಟೆಹುಳುಗಳು ಪರವಲಂಬಿಗಳು
* ಚಪ್ಪಟೆಹುಳುಗಳಾದ ಲಾಡಿಗಳು & ಕಾರಲು
ಹುಳುಗಳು ಪರಾವಲಂಬಿಗಳಾಗಿರುವುದರಿಂದ ತಮ್ಮ ಪೋಷಕ ಜೀವಿಗಳಲ್ಲಿ ಹಾನಿಕಾರಕ ರೊಗಗಳನ್ನು ಉಂಟು
ಮಾಡುತ್ತವೆ.
* ನಿಮ್ಯಾಟೋಡ್ (ದುಂಡುಹುಳುಗಳು)
ಖಂಡ ವಿಭಜನೆಯಲ್ಲದ ನೀಳವಾದ ದೇಹವನೊಳಗೊಂಡ
ಪ್ರಾಣಿಗಳಾಗಿರುವ ಕಾರಣದಿಂದ ಈ ವಂಶದ ಪ್ರಾಣಿಗಳಿಗೆ ದುಂಡಾಕಾರವಾಗಿದ್ದು 2 ತುದಿಗಳು
ಚೂಪಾಗಿರುತ್ತದೆ.
* ಇವುಗಳು ದೇಹ ದುಂಡಾಕರವಾಗಿದ್ದು 2 ತುದಿ
ಮಣ್ಣು ನದಿ ನೀರು ಮುಂತಾದಡೆಯಲ್ಲಿ ಇರುತ್ತದೆ ಇವುಗಳ ಕೆಲವು ಸ್ವತಂತ್ರ & ಬಹುತೇಕ ಪರಾವಂಬಿ
ಜೀವಿಗಳಾಗಿಯೇ ಬದಕುತ್ತವೆ.
ಅನಿಲಿಡ (ವಲಯವಂತ)
ಈ ವಂಶದ ಪ್ರಾಣಿಗಳು ದೇಹವು ಹಲವಾರು ವರ್ತುಲಾಕಾರದ
ಖಂಡಗಳ ಜೋಡಣೆಯಿಂದ ರೂಪಗೊಂಡಿರುವದರಿಂದ ಇವುಗಳಿಗೆ ವಲಯ ವಂತಗಳು ಎನ್ನುವರು
* ಈ ಪ್ರಾಣಿಗಳ ಬಹುತೇಕ ಜಲವಾಸಿಗಳಾಗಿವೆ.
ಇನ್ನು ಕೆಲವು ತೇವವಾದ ಮಣ್ಣಿನಲ್ಲಿ ವಾಸಿಸುತ್ತವೆ.
* ಇವುಗಳು ದೇಹದ ಹೊರ ಭಾಗದಲ್ಲಿ ಒಂದು ತೆಳವಾದ
ಕ್ಯೂಟಿಕಲ್ ಎಂಬ ಕವಚವನ್ನು ಹೊಂದಿರುತ್ತದೆ.
* ಎರೆಹುಳು ಸ್ವತಂತ್ರವಲಯವಂತ ಪ್ರಾಣಿಗಳಾಗಿವೆ.
* ಜಿಗಣಿಯ ಪರಾವಲಂಭಿ ವಲಯವಂತ ಪ್ರಾಣಿಯಾಗಿದೆ.
* ವಲಯವಂತ ಜೀವಿಯಾದ ಎರೆಹುಳುವನ್ನು ಜೈವಿಕ
ಕಾರ್ಖಾನೆ ರೈತನ ಮಿತ್ರ ಎಂದು ಕರೆಯುವರು ಇದು ಮಣ್ಣಿನಲ್ಲಿ ಫಲವತ್ತತೆಯನ್ನು ಹೆಚ್ಚಿಸುತ್ತದೆ.
* ಉಸಿರಾಟದಲ್ಲಿ ಚರ್ಮದ ಮೂಲಕ ಮಾಡುತ್ತದೆ
ಕೆಲವು ಜಲಚರಗಳು ಕಿವಿರುಗಳು ಮೂಲಕ ಮಾಡುತ್ತವೆ.
ಅರ್ಥೊಪೋಡಾ (ಸಂಧಿ ಪದಿಗಳು)
ಸಂಧಿಪದಿಗಳು ಪ್ರಾಣಿಗಳ ಗುಂಪುಗಳಲ್ಲಿಯೆ ಅತ್ಯಂತ
ದೊಡ್ಡ ವಂಶವಾಗಿದೆ. ಇವು ಕೀಲು ಕಾಲುಗಳನ್ನು ಒಳಗೊಂಡ ಚಲನಾಂಗವಿರುವದರಿಂದ ಸಂದಿಪದಿಗಳು ಎನ್ನುವರು.
* ಇವುಗಳು ದೇಹದ ದೇಹದ ಹೊರ ಭಾಗವು ಕೈಟಿನ್
ಎಂಬ ಕಠಿಣವಾದ ಒಂದು ಹೊರಕವಚವನ್ನು ಹೊಂದಿರುತ್ತದೆ.
* ಈ ಕವಚವನ್ನು ಆಗಿದಾಗ್ಗೆ ಕಳತಿ ಹೊಸದಾಗಿ
ನಿರ್ಮಾಣವಾಗಿರುತ್ತದೆ. ಈ ಕ್ರಿಯೆಗೆ ಪೊರೆ ಕಳಚುವಿಕೆ ಎನ್ನುವರು
* ಸಂಧಿಪದಿ ವರ್ಗಕ್ಕೆ ಸೇರುವ ರೇμÉ್ಮ ಹುಳುವಿನಿಂದ ಬೆಲೆಬಾಳುವ ರೇμÉ್ಮ ಪಡೆಯಬಹುದು ಇವುಗಳಿಂದ ದೇಶದ ವಾಣಿಜ್ಯ ಪ್ರಾಮುಖ್ಯತೆಗೆ
ಸಹಾಯಕವಾಗಿವೆ.
* ಜೇನು ನೋಣಗಳಿಂದ ಜೇನುತಪ್ಪ ದೊರೆಯುತ್ತದೆ.
ಜೆನು ನೋಣಗಳು ಪರಕೀಯ ಪರಾಗಸ್ಪರ್ಶ ಮಾಡಿ ಬೆಳೆಗಳು ಉತ್ಪತ್ತಿ ಹೆಚ್ಚಿಸುತ್ತವೆ.
* ಸೀಗಡಿ, ಎಡಿ, ನಳಿನಿ ಮುಂತಾದ ಸಂಧಿಪದಿಗಳು
ಆಹಾರವಾಗಿ ಬಳಸುತ್ತಾರೆ.
ಮೊಲಸ್ಕ್ (ಮೃದ್ವಂಗಿಗಳು)
* ಮೃದ್ವಂಗಿಗಳು ಅಕಶೇರುಕ ಪ್ರಾಣಿಗಳು 2ನೇ
ದೊಡ್ಡ ವಂಶವಾಗಿದೆ. ಈ ವರ್ಗದ ಪ್ರಾಣಿಗಳ ದೇಹವು ಬಹಳ ಮೃದುವಾಗಿರುವದರಿಂದಲೇ ಇವುಗಳನ್ನು ಮೃದ್ವಂಗಿಗಳು
ಎನ್ನುತಾರೆ. ಇವು ಜಲ & ಭೂಮಿಯಲ್ಲಿ ಕಂಡು ಬರುತ್ತವೆ.
* ಇವುಗಳ ದೇಹವು ಎಕ್ಸೋಕೈಟಿನ ಎಂಬ ರಕ್ಷಕ
ಹೊದಿಕೆಯನ್ನು ಹೊಂದಿರುತ್ತವೆ. ಅದು ಗಟ್ಟಿಯಾಗಿಯೂ ಭಾರವಾಗಿಯೂ ಇರುವುದರಿಂದ ನಿಧಾನವಾಗಿ ಚಲಿಸುತ್ತದೆ.
* ಕೆಲವು ವೃದ್ವಂಗಿಗಳು ದೇಹವು ಮ್ಯಾಂಟಲ್
ಎಂಬ ಕವಚವನ್ನು ಹೊಂದಿದ್ದು ಇದರಲ್ಲಿರುವ ಗ್ರಂಥಿಗಳು ಸ್ರವಿಸುವ ಸುಣ್ಣದ ರೀತಿಯ ವಸ್ತುವಿನಿಂದ ಚಿಪ್ಪುಗಳ
ಉಂಟಾಗುತ್ತದೆ. ಇದು ಪ್ರಾಣಿಗೆ ರಕ್ಷಾಕವಚದಂತಿ
ರುವುದಲ್ಲೆದೆ. ಸ್ನಾಯುಗಳಿಗೆ ನೆಲೆಯನ್ನು ಒದಗಿಸುತ್ತವೆ.
* ಮೃದ್ವಂಗಿಗಳು ಕೆಲವು ಸುಂದರವಾದ ಚಿಪ್ಪುಗಳಿಗೆ
ಬಹಳ ಬೇಡಿಕೆ ಇದೆ. ಇವುಗಳನ್ನು ಅಲಂಕಾರಿಕ ವಸ್ತುಗಳ ತಯಾರಿಕೆಯಲ್ಲಿ ಬಳಸುತ್ತಾರೆ.
* ಮುತ್ತಿನ ಪ್ರಾಣಿ/ ಪರ್ಲ ಆಯಿಸ್ಟರ್ ಎಂಬ
ಮೃದ್ವಂಗಿಯಿ ಂದಲೇ ಹೆಚ್ಚು ಅಮೂಲ್ಯವಾದ ಮುತ್ತುಗಳನ್ನು ಪಡೆಯುತ್ತಾರೆ.
* ಆಟಕ್ಕೆ ಬಳಸುವ ಕವಡೆಯು ಮೃದ್ವಂಗಿಗಳು ಚಿಪ್ಪಾಗಿದೆ.
* ದೈತ್ಯಾಕಾರದ ಕಟಲ್ ಮೀನು ಅಕಶೇರುಕಗಳಲ್ಲೆ
ಅತಿದೊಡ್ಡ ಮೈದ್ವಂಗಿಯಾಗಿದೆ.
* ಕಟಲ್ ಮೀನಿನಲ್ಲಿ ಚಿಪ್ಪು ದೇಹದೊಳಗೆ ಇದ್ದು,
ಸುಣ್ಣದ ಆಂಶದಿಂದ ಕೂಡಿದ್ದು ಇದನ್ನು ಗಾಜನ್ನು ಹೊರಸಲು ಬಳಸುತ್ತಾರೆ.
ಕಂಟಕ ಚರ್ಮಿಗಳು :-
* ಚರ್ಮದಲ್ಲಿ ಮುಳ್ಳುಗಳಿರುವದರಿಂದ ಈ ಪ್ರಾಣಿಗಳನ್ನು
ಕಂಟಕ ಚರ್ಮಿಗಳು ಎನ್ನುತ್ತಾರೆ. ಇವು ಸಮುದ್ರವಾಸಿಗಳು
* ಇವುಗಳ ದೇಹವು ದುಂಡಾಗಿರಬಹುದು. ಕೊಳವೆಯಾಕಾರವಾಗಿರುಬಹುದು
ಅಥವಾ ನಕ್ಷೆತ್ರ ಆಕಾರವನ್ನು ಹೊಂದಿರಬಹುದು ಇವು ಬಹುತೇಕ ಕಡಲವಾಸಿಗಳು
* ಇವುಗಳ ಹೊರ ಕವಚ ಕ್ಯಾಲ್ಸಿಯಂನಿಂದ ಕೂಡಿದ
ಮುಳ್ಳುಗಳಿಂದ ಮಾಡಲ್ಪಟ್ಟಿರುತ್ತದೆ.
* ಲಿಂಗ ಮತ್ತ ನಿರ್ಲಿಂಗ ರೀತಿಯ ಸಂತಾನೋತ್ಪತಿಯನ್ನು
ಕಾಣಬಹುದು
* ಕಂಟಕ ಚರ್ಮಿಗಳ ಮೊಟ್ಟೆಯನ್ನು ಆಹಾರವಾಗಿ
ಹಾಗೂ ಜೀವಶಾಸ್ತ್ರದ ಅಧ್ಯಯನಕ್ಕಾಗಿ ಉಪಯೋಗಿಸುತ್ತಾರೆ.
ಸಸ್ಯಗಳ ವರ್ಗೀಕರಣ
ಸಸ್ಯಗಳನ್ನು ಈ ಕೆಳಕಂಡಂತ ವರ್ಗಿಕರಿಸಲಾಗಿದೆ.
ಅವುಗಳ ರಚನೆ, ಬೆಳೆಯುವ ಸ್ಥಳವನ್ನು ಆಧರಿಸಿ 4 ವರ್ಗಗಳಾಗಿ ವರ್ಗೀಕರಿಸಲಾಗಿದೆ.
1) ಥ್ಯಾಲೋಫೈಟ್‍ಗಳು (ಚಪ್ಪಟೆ ಸಸ್ಯಗಳು)
2) ಬ್ರಯೋಫೈಟ್‍ಗಳು (ಉಭಯ ಸಸ್ಯಗಳು)
3) ಟೆರಿಡೋಫೈಟ್‍ಗಳು (ಜರಿ ಸಸ್ಯಗಳು)
4) ಸ್ಮರಟೋಫೈಟ್‍ಗಳು ( ಬೀಜಾನೊತ್ಪತ್ತಿ ಸಸ್ಯಗಳು)
1) Thallophytes
(ಚಪ್ಪಟೆ ಸಸ್ಯಗಳು):- ಇವು ಪ್ರಾಚೀನ ಸಸ್ಯಗಳು ಇವು ಸರಳವಾದ ರಚನೆ ಯನ್ನು ಹೊಂದಿರುವ ಸಸ್ಯಗಳು
* ಇವುಗಳು ದೇಹಕ್ಕೆ ಥ್ಯಾಲಸ್ ಎಂದು ಕರೆಯುತ್ತಾರೆ
* ಚಪ್ಪಟೆ ಸಸ್ಯಗಳನ್ನು ಪ್ರಮುಖವಾಗಿ ನಾಲ್ಕು
ರೀತಿಯಲ್ಲಿ ವಿಂಗಡಿಸಲಬಹುದು.
ಎ) ಅಲ್ಗೆಗಳು (ಶೈವಲಗಳು)
ಬಿ) ಫಂಗೈಗಳು (ಶಿಲೀಂಧ್ರಗಳು
ಸಿ) ಲೈಕೆನ್ಸಗಳು (ಶಿಲಾವಲ್ಕಗಳು)
ಡಿ) ಬ್ಯಾಕ್ಟೀರಿಯಾಗಳು
ಎ) ಅಲ್ಗೆಗಳು (ಶೈವಲಗಳು)
* ಹಸಿರು ಬಣ್ಣವುಳ್ಳ ಸಣ್ಣ ಸಸ್ಯಗಳು ಇವು
ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ.
* ನೀಲಿ ಹಸಿರು, ಕೆಂಪು, ಕಂದು, ಸುವರ್ಣಕಂದು
ಬಣ್ಣದ ಶೈವಲಗಳಿವೆ.
ಉದಾ:- ಕ್ಲಾಮಿಡೊಮೊನಸ್, ವಾಲ್ಟಾಕ್ಸ ಕೆಲ್ಫ
ಸ್ವೈರೋಗೈರಾ.
* ಸಸ್ಯಗಳಲ್ಲಿ ಅತ್ಯಂತ ಕೆಳಮಟ್ಟದ ಸಸ್ಯ ಎಂದರೆ
ಆಲ್ಲೆಗಳು
* ಶೈವಲಗಳಲ್ಲಿ ಕೋಶಭೀತ್ತಿಯ ಸೆಲ್ಯಲೊಸ್ ಮತ್ತು
ಪೆಕ್ಟಿನ್ ವಸ್ತುಗಳಿಂದ ಮಾಡಲ್ಪಟ್ಟಿದೆ.
* ನೀಲಿ ಹಸಿರು ಶೈವಲಗಳು ಏಕಕೋಶವಾಗಿದ್ದು,
ಮೊನೆರಾ ಗುಂಪಿಗೆ ಸೇರುತ್ತವೆ.
* ಡೈಯಟಂಗಳು ಏಕೆಕೋಶ ಶೈವಲಗಳು
* ಬಹುತೇಕ ಶೈವಲಗಳು ಬಹುಕೋಶಿಯಗಳಾಗಿರುತ್ತವೆ.
* ಬಹುಕೋಶಿಯ ಶೈವಲಗಳನ್ನು ಪ್ರಮುಖ ಮೂರು ಭಾಗವಾಗಿ
ವಿಂಗಡಿಸಲಾಗಿದೆ.
ಬಹುಕೋಶ ಶೈವಲಗಳು
1. ಕೆಂಪು ಶೈವಲ
2 .ಕಂದು ಶೈವಲ
3. ಹಸಿರು ಶೈವಲ
* ಕೆಂಪು ಶೈವಲಗಳಲ್ಲಿ ಕೋರೋಫಿಲ್ ಎ&ಬಿ
ಗಳೆಂಬ ಎರಡು ವರ್ಣಕಗಳೊಂದಿಗೆ ಫೈಕೋ ಎರಿಥ್ರಿನ್ ಎಂಬ ಕೆಂಪು ವರ್ಣಕವಿದೆ.
* ಕೆಂಪು ಶೈವಲ ಹೊಂದಿರುವ ವರ್ಣಕವನ್ನು ರೋಡೋಫಿಲ್
ಎನ್ನುತ್ತಾರೆ.
* ಕಂದು ಶೈವಲಗಳಲ್ಲಿ ಕ್ಲೋರೋಫಿಲ್ ಎ
& ಬಿ ಎಂಬ ವರ್ಣಕಗಳ ಜೊತೆ ಕ್ಯಾಂಥೋಫಿಲ್ ವರ್ಣಕ ಎಂಬ ವರ್ಣಕವು ಹೆಚ್ಚು ಪ್ರಮಾಣದಲ್ಲಿ ಕಂಡು
ಬರುವುದರಿಂದ ಕಂದು ಬಣ್ಣದಲ್ಲಿದೆ.
* ಫೈಕೋಸಯಾನಿನ್ ಎಂಬ ನೀಲಿವರ್ಣಕವು ಶೈವಲಗಳಲ್ಲಿ
ಕೆಂಪು ಬರುತ್ತದೆ.
* ಕೆಂಪು ಶೈವಲಗಳು ಸಮುದ್ರದ ಮೇಲ್ಭಾಗದಲ್ಲಿ
ಅನೇಕ ಕಿ.ಮೀ ಗಳವರೆಗೆ ಬೆಳದಿರುವುದರಿಂದ ಸಮುದ್ರ ಕೆಂಪಾಗಿ ಕಾಣುವುದು. ಆದ್ದುದರಿಂದ ಅದನ್ನು ಕೆಂಪು
ಸಮುದ್ರ ಎಂದು ಕರೆಯುತ್ತಾರೆ.
* ಸಮುದ್ರ ಶೈವಲಗಳು ಇತರೆ ಸತ್ತ ಪ್ರಾಣಿಗಳ
ದೇಹದ ಜೊತೆ ಸೇರಿ ಕೊಳಿತು ಮಿಥೇನ್ ಅನಿಲವಾಗಿ ಪರಿವರ್ತನೆಗೊಳ್ಳುತ್ತದೆ.
* ಶೈವಲಗಳ ಜೀವಕೋಶದಲ್ಲಿ ಸಾಮಾನ್ಯವಾಗಿ ಒಂದು
ಕೋಶಕೇಂದ್ರವಿರುತ್ತದೆ.
* ಕೆಲ್ಫ್ ಎಂಬ ಶೈವಲವು ಸುಮಾರು 60 ಮೀ. ಉದ್ಧ
ಬೆಳೆಯುತ್ತದೆ. ಲಿಂಗ & ನೀರ್ಲಿಂಗ ರೀತಿಯ ಸಂತಾನೊತ್ಪತ್ತಿ ನಡೆಯುತ್ತದೆ.
* ಸಮುದ್ರದಲ್ಲಿ ಶೈವಲಗಳ ಪ್ರಮಾಣ ಹೆಚ್ಚಾದರೆ
ಅವುಗಳಿಗೆ ಸಮುದ್ರಕಳೆ ಎಂದು ಕರೆಯುತ್ತಾರೆ. ಸಮುದ್ರದ ಮೇಲ್ಭಾಗದಲ್ಲಿ ವಿವಿಧ ಆಕಾರದ ಶೈವಲಗಳು
ತೇಲುತ್ತಿರುತ್ತದೆ. ಇವುಗಳು ವಿವಿಧ ಆಕಾರದ
ಶೈವಲಗಳು ತೇಲುತ್ತಿರುತ್ತವೆ ಇವುಗಳು ಡಯಾಟಂಗಳಾಗಿದ್ದು. ಇವುಗಳಿಗೆ ಪ್ಲಾಂಕ್ಟಾನ್‍ಗಳೆನ್ನುತ್ತಾರೆ.
* ಕೆಂಪು ಹಾಗೂ ಕಂದು ಶೈವಲಗಳು ಸಾಗರಗಳಲ್ಲಿನ
ಬಂಡೆ ಹವಳ ಮತ್ತು ಇತರೆ ಸಸ್ಯಗಳಿಗೆ ಅಂಟಿಕೊಂಡು ಬೆಳೆಯುತ್ತವೆ.
* ಹಸಿರು ಶೈವಲಗಳಲ್ಲಿ ಬಹುತೇಕ ಸಿಹಿನೀರುವಾಸಿಯಾ
ಗಿರುತ್ತವೆ. ಹಾಗೂ ನದಿ & ಕೊಳಗಳಲ್ಲಿ ಕಂಡು ಬರುತ್ತವೆ.
* ಹಸಿರು ಶೈವಲಗಳಲ್ಲಿ ಕ್ಲೋರೊಫಿಲ್ ವರ್ಣಕಗಳು
ಇದ್ದು ಹಸಿರು ದ್ಯುತಿಸಂಶ್ಲೇಷಣೆ ಕ್ರಿಯೆಯನ್ನು ನಡೆಸುತ್ತವೆ.
* ಸಾರ್ಗೋಸೊ ಎಂಬ ಕಂದು ಶೈವಲ ಅಟ್ಲಾಂಟಿಕ್
ಸಾಗರದಲ್ಲಿ 64 ಸಾವಿರ ಚ.ಕಿ.ಮೀ ವ್ಯಾಪಿಸಿದ್ದು, ಈ ಸಾಗರದ ಭಾಗವನ್ನು ಸಾರ್ಗೋಸೊ ಸಮುದ್ರ ಎನ್ನುವರು
ಉದಾ:-
1) ಕೆಂಪು ಶೈವಲಗಳು ಪಾಲಿಸೈಫೋನಿಯಾ ಬೆಟ್ರಿಕೊಸ್ಪರ್ಮ
2) ಹಸಿರು ಶೈವಲಗಳು : ಯುಲೋಥ್ರಿಕ್ಸ್ ಸ್ಪೈರೋಗೈರಾ
3) ಕಂದು ಶೈವಲಗಳು : ಸರ್‍ಗ್ಯಾಸ್‍ಂ, ಎಕ್ಟೋಕಾರ್ಪಸ್
* ಅತಿ ತೂಕದ ಬೀಜ :- ಸೀಶೆಲ್ಸನಲ್ಲಿರುವ ಕೋಕುಡಿಮೆರ್
ಸಸ್ಯದ ಬೀಜ ಸಸ್ಯ ಪ್ರಪಂಚದಲ್ಲಿ ಅತಿ ದೊಡ್ಡದು ಇದು ಸುಮಾರು 18 ಕೆ.ಜಿ ತೂಗುತ್ತದೆ.
ಶೈವಲಗಳು ಉಪಯೋಗಗಳು
* ಲ್ಯಾಮಿನೇರಿಯಾ ಎಂಬ ದೈತ್ಯ ಕಳೆಯನ್ನುಪೋಟ್ಯಾಸಿಯಂ
ಕ್ಲೋರೆಡ್ & ಅಯೋಡಿನ್ ತಯರಿಕೆಯಲ್ಲಿ ಬಳಸುತ್ತಾರೆ.
* ಐಸ್ ಕ್ರೀಂ ಚಾಕೋಲೆಟ್ ತಯಾರಿಕೆಯಲ್ಲಿ
& ಜಪಾನಿಯ ಆಹಾರವಾದ ಕೊಂಬು ತಯಾರಿಕೆಯಲ್ಲಿ ಅಲೆಜಿನ ಬೆಳೆಸಲಾಗುತ್ತದೆ. ಅಲಜಿನ್ ಎಂಬುದನ್ನು
ಕಂದು
ಶೈವಲಗಳಿಂದ ಪಡೆಯಲಾಗುವುದು.
* ಜಿಲಿಡಿಯಂ ಎಂಬ ಕೆಂಪು ಶೈವಲದಿಂದ ಅಗರ್‍ಗಳಲ್ಲಿ
ಹಾಗೂ ಮೊಂಸ ಸಂಸ್ಕರಣಾ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ.
* ಪಾರ್ಫೈರಾ ಎಂಬ ಕೆಂಪು ಶೈವಲವನ್ನು ಮಸಾಲ
ಪದಾರ್ಥವನ್ನಾಗಿ ಹಾಗೂ ಸೂಪ್‍ಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
* ಜೈವಿಕ ನೈಟ್ರೋಜನ್ ಸ್ಥೀರಿಕರಣ ಕ್ರಿಯೆಯಲ್ಲಿ
ಅಜೋಲಾ ನಾಸ್ಟಕಗಳು ಉಪಯುಕ್ತವಾಗಿವೆ.
* ಡಯೂಟಂ ಕೋಶಭಿತ್ತಿ ಇರುವ ಸಿಲಿಕಾನಗಳಿಂದ
ವಿಶೇಷ ಬಗೆಯ ಗಾಜುಗಳನ್ನು & ಗಾಜಿನ ಪಾತ್ರೆಗಳನ್ನು ತಯಾರಿಸುತ್ತಾರೆ.
* ಕಂದು ಶೈವಲಗಳಿಂದ ಔಷಧಿಯನ್ನು & ಸೌಂದರ್ಯ
ವರ್ಧಕ ವಸ್ತುಗಳ ತಯಾರಿಕೆ & ಗೊಬ್ಬರ ತಯಾರಿಕೆಯಲ್ಲೂ ಬಳಸುತ್ತಾರೆ.
* ಕೆಲವು ಪ್ರಭೇದದ ಶೈವಲ ಸಂಸ್ಕರಿಸಿ ಮೇವು
& ಕೋಳಿಗಳು ಆಹಾರ ತಯಾರಿಕೆಯಲ್ಲಿ ಬಳಸಲಾಗುತ್ತದೆ.
* ಮೇಲಿನ ನೀರಿನ ಹೊಂಡಗಳಲ್ಲಿ ಶೈವಲಗಳನ್ನು
ಬೆಳೆಸಿದರೆ ಅವುಗಳಿಂದ ಬಿಡುಗಡೆಯಾಗುವ ಆಮ್ಲಜನಕವನ್ನು ಸೂಕ್ಷ್ಮ ಜೀವಿಗಳು ಬಳಸಿಕೊಂಡು ನೀರಿನ ಕಲ್ಮಶಗಳನ್ನು
ಕೊಳೆಸಿ ಶುದ್ಧಗೊಳಿಸುತ್ತವೆ.
ಫಂಗೈಗಳು (ಶಿಲಿಂಧ್ರಗಳು)
* ಇವು ಹಸಿರು ಬಣ್ಣವಿಲ್ಲದ ಸಸ್ಯಗಳು ಇವುಗಳನ್ನು
ಕೊಳೆತಿನಿಗಳು ಎನ್ನುವರು ಅಣಬೆ ಯೀಸ್ಟ್ ಬೂಸ್ಟೂಗಳು ಶೀಲೀಂಧ್ರಕ್ಕೆ ಸೇರುತ್ತವೆ. ಇವು ಪರಪೋಷಿತ ಜೀವಿಗಳು
* ಪೆನ್ನಿಲಿಯಂ ನೋಟಟಂ ಎಂಬ ಶಿಲೀಂಧ್ರಯಿಂದ
ಪೆನ್ಫಿಲಿನ್ ಔಷಧಿ ತಯಾರಿಸುತ್ತಾರೆ.
* ಶೀಲೀಂಧ್ರಗಳು ಸಂತಾನೋತ್ಪತ್ತಿಗಾಗಿ ಸ್ಟೋರ್
ಎಂಬ ವಿಶೇಷವಾದ ಜೀವಕೋಶಗಳನ್ನು ಅಧಿಕ ಸಂಖ್ಯೆಯಲ್ಲಿ ಉತ್ಪತಿ ಮಾಡುತ್ತದೆ. ಸ್ಟೋಕಗಳು ಮೊಳಕೆ ಹೊಡೆದಾಗ
ಹೊಸ ಶೀಲಿಂಧ್ರಗಳಾಗಿ ಬೆಳೆಯುತ್ತವೆ.
* ಇವುಗಳ ದೇಹದಲ್ಲಿ ಸಣ್ಣದಾರದಂತಿರುವ ಎಪೆ
ಎಂಬ ಎಳೆಗಳಿರುತ್ತವೆ ಇವುಗಳಿಂದ ಕಿಣ್ವಗಳು ಉತ್ಪತಿಯಾಗುತ್ತವೆ. ಈ ಕಿಣ್ವಗಳು ಅಹಾರ ವಸ್ತುಗಳನ್ನು
ಜೀರ್ಣಿಸುತ್ತವೆ.
ಲೈಕೆನ್ಸ್‍ಗಳು (ಶಿಲಾವಲ್ಕಗಳು)
* ಬಂಡೆಗಳ ಮೇಲೆ & ಮರಗಳ ತೊಗಟೆಗಳ ಮೇಲೆ
ಬೆಳೆಯತ್ತದೆ. ಇವುಗಳನ್ನು ಲೈಕೆನ್ಸ್‍ಗಳು ಎನ್ನುವರು ಇವು ಸಂಯುಕ್ತ ಸಸ್ಯಗಳು ಶೈವಲ & ಶಿಲೀಂಧ್ರ
ಸಸ್ಯಗಳು ಸೇರಿವೆ.
ಉದಾ:- ಕಲ್ಲುಹೂಗಳು
ಬ್ಯಾಕ್ಟೀರಿಯಾಗಳು :-
* ಇವು ಏಕ ಕೋಶಿಯ ಜೀವಿಗಳು
* ಇವುಗಳು ವಿವಿಧ ಆಕಾರಗಳಲ್ಲಿ ಕಂಡುಬರುತ್ತವೆ.
* ಗೋಳಾಕಾರದ ಬ್ಯಾಕ್ಟೀರಿಯಾಗಳನ್ನು ಕಾಕೈಗಳೆನ್ನುವರು.
* ಕಂಬದಾಕಾರದ ಬ್ಯಾಕ್ಟೀರಿಯಾಗಳನ್ನು ಬ್ಯಾಸಿಲೈ
ಎನ್ನುವರು.
* ಸುರುಳಿಯಾಕಾರದಲ್ಲಿರುವ ಬ್ಯಾಕ್ಟೀರಿಯಾಗಳನ್ನು
ಸ್ಫೈರಲ್ ಬ್ಯಾಕ್ಟೀರಿಯಾ ಎನ್ನುತ್ತಾರೆ.
* ಕೆಲವು ಬ್ಯಾಕ್ಟೀರಿಯಾಗಳು ಪರೋಪ ಜೀವಿಗಳು
ಬ್ರಯೋಫೈಟ್‍ಗಳು (ಉಭಯವಾಸಿ ಸಸ್ಯಗಳು)
ಹಾವಸೆ ಮತ್ತು ಲಿವರ ವಟ್ರ್ಸ ಸಸ್ಯಗಳು
ಇವು ಮಳೆಗಾಲದಲ್ಲಿ ಗೋಡೆಯ ಮೇಲೆ ಮರದ ಮೇಲೆ
ಬೆಳೆಯುವ ಸಸ್ಯಗಳು
ಉದಾ:- ಹಾವಸೆ, ಸಸ್ಯ ಫ್ಯೂನೋರಿಯಾ ಸಸ್ಯ ರಿಕ್ಸಿಯಾ,
ಮಾಸ್ ಸಸ್ಯಗಳು
ಟೆರಿಡೋಫೈಟ್‍ಗಳು (ಒರೀ/ಫರ್ನ/ ಪುಚ್ಚ ಸಸ್ಯಗಳು)
ಇವು ಕ್ಸೆಲಂ & ಫ್ಲೋಯಂ ಹೊಂದಿರುವಂತಹ
ನಾಳ ಸಹಿತ ಸಸ್ಯಗಳು
ಉದಾ:- ಅಲಂಕಾರಿಕ ಸಸ್ಯಗಳು ಸೆಲಾಜಿನೆಲ್ಲ
ನೆಪ್ರೋಲಿಪಿಸ್ ಅಡಿಯೂಂಟಂ
ಲೈಕೋಪೋಡಿಯಂ
ಸ್ಪರ್ಮೆಟೋಫೈಟ್‍ಗಳು (ಬೀಜೋತ್ಪತ್ತಿ ಸಸ್ಯಗಳು)
ಇವು ಉನ್ನತ ಮಟ್ಟದ ಸಸ್ಯಗಳು ಇವುಗಳಲ್ಲಿ 02 ವಿಧ
1) ಅನಾವೃತ ಬೀಜ ಸಸ್ಯ (Gymnasperms)
2) ಆವೃತ ಬೀಜಗಳು ಸಸ್ಯ (Angiosperms)
1) ಅನಾವೃತ ಬೀಜ ಸಸ್ಯ :- ಬೀಜಗಳಿಗೆ ಕವಚವಿರುದಿಲ್ಲ
ಉದಾ:- ಪೈನಸ್ & ಸೈಕಸ್ ದೇವದಾರು ವೃಕ್ಷ
2) ಆವೃತ ಬೀಜಗಳು :- ಬೀಜಗಳ ಕವಚದಿಂದ ಕೂಡಿದೆ.
ಉದಾ:- ತೆಂಗು, ಮಾವು, ಹಲಸು, ಅಡಿಕೆ
* ಜಗತ್ತಿನಲ್ಲಿ ಅವೃತ ಬೀಜಸಸ್ಯಗಳು ಹೆಚ್ಚಾಗಿವೆ.
ಆವೃತ ಬೀಜಸಸ್ಯಗಳಲ್ಲಿ ಏಕದಳ & ದ್ವಿದಳ ಎಂಬ 2 ವಿಧಗಳಿವೆ
ಸಸ್ಯಗಳ ವರ್ಗೀಕರಣ
( ಕಾಂಡದ ಸ್ವರೂಪದ ಮೇಲೆ ಸಸ್ಯಗಳ ವರ್ಗೀಕರಣ)
ಅರಿಸ್ಟಾಟಲ್ ಎಂಬ ಗ್ರೀಕ್ ತತ್ವಶಾಸ್ತ್ರಜ್ಞ
ಸಸ್ಯಗಳನ್ನು ಅವುಗಳ ಎತ್ತರದ ಆಧಾರದ ಮೇಲೆ ಮೂಲಿಕೆಗಳು ಪೊದರುಗಳು ಮತ್ತು ಮರಗಳೆಂದು ವರ್ಗೀಕರಿಸಿದ್ದರು
1) ಮೂಲಿಕೆಗಳು :- ಮೃದುವಾಧ ಕಾಂಡ ಹೊಂದಿವೆ.
ಇವು ಹುಲ್ಲಿನ ಜಾತಿಗೆ ಸೇರದ ಸಸ್ಯಗಳು ಇವುಗಳೆಂದರೆ, ಭತ್ತ, ರಾಗಿ, ಗೋಧಿ, ಜೋಳ, ಬಿದಿರು ಕೂಡ ಹುಲ್ಲಿನ
ಜಾತಿಗೆಸೇರಿದ ಸಸ್ಯಗಳು
2) ಪೊದರು :- ಮಾಧ್ಯಮ ಎತ್ತರದ ಸಾಧಾರಣ
ದಪ್ಪನೆಯ ಕಾಂಡ ಇವು ಮೂಲಿಕೆಗಳಗಿಂತ ಎತ್ತರ ಮತ್ತು ಮರಗಳಿಗಿಂತ ಗಿಡ್ಡಾಗಿರುತ್ತವೆ.
ಉದಾ:- ದಾಸವಾಳ, ಗುಲಾಬಿ, ಲಾಂಟನ, ಮಲ್ಲಿಗೆ
3) ಮರಗಳು :- ಎತ್ತರವಾಗಿದ್ದು, ದಪ್ಪದಾದ
ಗಡುಸಾದ ಕಾಂಡ ಹೊಂದಿರುವ ಸಸ್ಯಗಳು
ಉದಾ:- ಮಾವು, ನೀಲಗಿರಿ, ತೆಂಗು, ಹಲಸಿನ ಮರ
4) ಬಳ್ಳಿಗಳು:- ಮರ ಬೇಲಿ ಗೋಡೆ ಮೇಲೆ ಬೆಳೆದಿರುವ
ಸಸ್ಯಗಳು ಈ ಸಸ್ಯಗಳು ಕುಡಿಗಳನ್ನು & ಉಂಗುರದಂತಹ ಸುರುಳಿಗಳನ್ನು ಹೊಂದಿವೆ.
ಉದಾ:- ದ್ರಾಕ್ಷಿ, ಹಾಗಲ ಕುಂಬಳ
ಸಸ್ಯಗಳ ವರ್ಗೀಕರಣ
(ಕಾಲಾವಧಿ ಆಧಾರದ ಮೆಲೆ)
1) ಏಕವಾರ್ಷಿಕ ಸಸ್ಯಗಳು ಒಂದು ವರ್ಷದವರೆಗೆ
ಮಾತ್ರ ಬದುಕಿದ್ದು ಫಲಕೊಟ್ಟು ನಂತರ ಒಣಗಿ ಹೋಗುತ್ತವೆ.
ಉದಾ:- ರಾಗಿ, ಭತ್ತ, ಜೋಳ, ಹುರುಳಿ, ಟೊಮಾಟೊ
2) ದ್ವೀವಾರ್ಷಿಕ ಸಸ್ಯಗಳು:- ಎರಡು ವರ್ಷಗಳ
ಕಾಲ ಬದುಕಿದ್ದು ಫಲ ಕೊಟ್ಟು ನಂತರ ಒಣಗಿ ಹೋಗುತ್ತದೆ.
ಉದಾ:- ಶುಂಠಿ, ಅರಶಿಣ, ಬಿಟ್‍ರೂಟ್, ಕ್ಯಾರೆಟ್
3) ಬಹುವಾರ್ಷಿಕ ಸಸ್ಯಗಳು :- ಅನೇಕ ವರ್ಷಗಳ
ಕಾಲ ಬದುಕಿದ್ದು, ಫಲ ಕೊಟ್ಟು ನಂತರ ಒಣಗಿ ಹೋಗುತ್ತದೆ.
ಉದಾ:- ಸೇಬು, ಹುಣಸೆ, ಹಲಸು, ತೆಂಗು
ಏಕದಳ & ದ್ವಿದಳ ಸಸ್ಯಗಳಿರುವ ವ್ಯತ್ಯಾಸಗಳು
ಏಕದಳ ದ್ವಿದಳ
ಬೀಜವು ಒಂದು ದಳಹೊಂದಿರುತ್ತದೆ.
ಬೀಜವು ದ್ವಿದಳ ಹೊಂದಿರುತ್ತದೆ.
ತಂತುಬೇರನ್ನು ಹೊಂದಿದೆ
ತಾಯಿ ಬೇರನ್ನು ಹೊಂದಿದೆ
ಕಾಂಡವು ಗೆಣ್ಣು & ಅಂತರ ಗೆಣ್ಣು ಹೊಂದಿದೆ
ಉದಾ:- ಭತ್ತ, ರಾಗಿ, ಜೋಳ
ಕಾಂಡವು ಕೊಂಬೆಗಳನ್ನು ಹೊಂದಿರುತ್ತದೆ.
ಉದಾ:- ಸಾಸುವೆ, ತೊಗರಿ, ಕಡಲೆ
ಕೀಟಾಹಾರಿ ಸಸ್ಯಗಳು (Insectivorous Plants)
ಕೆಲವು ಸಸ್ಯಗಳು ಪ್ರಾಣಿಗಳಂತೆ ಕೀಟಗಳನ್ನು
ಹಿಡಿದು ತಿನ್ನುತ್ತದೆ. ಇಂತಹ ಸಸ್ಯಗಳನ್ನು ಕೀಟಾಹಾರಿ ಸಸ್ಯಗಳೆನ್ನುತ್ತಾರೆ. ಕಾರಣ ಸಸ್ಯಗಳು ನೈಟ್ರೋಜನ್
ಸಂಯುಕ್ತಗಳ ಕೊರತೆಯಿಂದ ಜೌಗು ಪ್ರದೇಶದಲ್ಲಿ ಬೆಳೆಯುತ್ತವೆ. ಇಂತಹ ಕೊರತೆಯನ್ನು ನೀಗಿಸಲು ತಮಗೆ ಬೇಕಾದ
ಪ್ರೋಟಿನನ್ನು ಹೀರಿಕೊಳ್ಳಲು ಕೇಲವು
ಕೀಟಗಳನ್ನು ಹಿಡಿದು ತಿನ್ನುತ್ತವೆ.
* ವಿಕಾಸದ ಪಿತಾಮಹ ಚಾಲ್ರ್ಸ್ ಡಾರ್ವಿನ್‍ನು
1857ರಲ್ಲಿ ಮೊದಲ ಬಾರಿಗೆ ಕೀಟಹಾರಿ ಸಸ್ಯಗಳ ಬಗ್ಗೆ ಪ್ರಕಟಿಸಿದ್ಧರು
ಉದಾ:-
1) ಹೂಜಿಗಿಡ
2) ನೊಣದ ಜೇನು (ವೀನಸ್ ಪ್ಲೈಟ್ರಾಫ)
3) ಡ್ರಾಸೆರಾ
4) ನೆಪಂಥಿಸ್
5) ಯುಟ್ರಿಕ್ಯೂಲೆರಿಯಾ
6) ಹೆಲಿನೋಫೆರಾ
ಕೀಟನಾಶಕ ಗುಣಹೊಂದಿರುವ ಸ್ವಾಭಾವಿಕ ಸಸ್ಯವರ್ಗ
ಹೊಂಗೆ, ಆಡುಸೋಗಿ, ನೀಲಗಿರಿ, ಕರವೀರ, ಜಾಪಾಳ,
ತುಳಸಿ, ಬೇವು, ಮೆಣಸು, ಅರಸಿನ, ಬೆಳ್ಳುಳಿ, ಮೆಂತ್ಯ
* ಮರುಭೂಮಿಯಲ್ಲಿ ಬೆಳೆಯುವ ಸಸ್ಯಗಳು
ಖರ್ಜೂರ, ಜಡೆಕಳ್ಳಿ, ಪಾಪಸಕಳ್ಳಿ, ಕುರುಚಲು
ಗಿಡಗಳು
ಕೆಲವು ಪ್ರಮುಖ ಉಪಯುಕ್ತ ಸಸ್ಯಗಳು :-
* ತರಕಾರಿ ಸಸ್ಯಗಳು :- ಬದನೆ, ಬೆಂಡೆ,
ಆಲೂಗಡ್ಡೆ, ಈರುಳ್ಳಿ, ನಿಂಬೆ, ನೆಲ್ಲಿ, ಸೊಪ್ಪು ಇತ್ಯಾದಿಗಳು
* ಎಣ್ಣೆಕಾಳಿನ ಸಸ್ಯಗಳು :- ಹುರುಳು,
ಶೇಂಗಾ, ಕುಸುಬೆ, ಹುಚ್ಚೆಳ್ಳು, ಎಳ್ಳು, ಸೂರ್ಯಾಕಾಂತಿ
* ನಾರಿನ ಸಸ್ಯಗಳು :- ಹತ್ತಿ, ಸೆಣಬು,
ಪುಂಡಿ
* ಸಾಂಬಾರ ಸಸ್ಯಗಳು:- ಕೊತ್ತಂಬರಿ, ಮೆಂತ್ಯ,
ಜೀರಿಗೆ,ಸಾಸಿವೆ, ಮೆಣಸು, ಏಲಕ್ಕಿ, ಲವಂಗ, ಅರಶಿಣ
* ಹಣ್ಣಿನ ಗಿಡಗಳು :- ಬಾಳೆ, ದ್ರಾಕ್ಷಿ,
ಕಿತ್ತಾಳೆ, ದಾಳಿಂಬೆ, ಸೇಬು, ಮಾವು, ಪೇರಲ, ಕಲ್ಲಂಗಡಿ
* ಮೇವಿನ ಸಸ್ಯಗಳು :- ಮುಸಕಿನ ಜೋಳ, ಜೋಳ,
ರಾಗಿ, ಭತ್ತ, ಹುಲ್ಲು
* ಔಷಧಿಯ ಸಸ್ಯಗಳು :- ತುಂಬೆ, ಶುಂಠಿ,
ನೀಲಗಿರಿ, ತುಳಸಿ, ಬೇವು
* ಪಾನೀಯ ಸಸ್ಯಗಳು:- ಟೀ, ಕಾಫಿ, ಕೋಕೊ