10. ನೈಸರ್ಗಿಕ ಪ್ರಕ್ರಿಯೆಗಳು
ಜೀವನ ಕ್ರಿಯೆಗಳು ಎಂದರೇನೆಂದರೆ, ಸಜೀವಿಗಳ
ಕಾರ್ಯ- ನಿರ್ವಹಣೆಯು ಕೆಲವು ಪರಿಸ್ಥಿತಿಗಳಲ್ಲಿ ಮಾತ್ರವೇ ನಡೆಯುವುದಿಲ್ಲ. ಆದಾಗ್ಯೂ ನಾವು ದೈಹಿಕವಾಗಿ
ಚಟುವಟಿಕೆಯಿಂದ ಇಲ್ಲದ ಸಂದರ್ಭಗಳಾದ ಸುಮ್ಮನೆ ಕುಳಿತಿರುವಾಗ, ಮಲಗಿ ನಿದ್ರಿಸುವಾಗಲೂ ಈ ನಿರ್ವಹಣೆಯ
ಕೆಲಸವು ಜೀವಕೋಶಗಳ ಕಾರ್ಯಸಂಬಂಧ ಮೂಲಕ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಜೀವನ ಕ್ರಿಯೆಯು ದೇಹದ
ಬೇರೆ ಬೇರೆ ಅಂಗ ಕಾರ್ಯ ಚಟುವಟಿಕೆಯಿಂದ ಜೀವಿಯ ನಿಯಂತ್ರಣವನ್ನು
ಒಳಗೊಂಡಿದೆ.
ಸಜೀವಿಗಳಲ್ಲಿ ನಡೆಯುವ ಕೆಲವು ಜೀವನ ಕ್ರಿಯೆಗಳನ್ನು
ಈ ಕೆಳಗೆ ವಿವರಿಸಲಾಗಿದೆ.
ಪೋಷಣೆ (Nutrition) : ಆಹಾರ ಸೇವನೆಯ ಮೂಲಕ ಶಕ್ತಿಯನ್ನು ಪಡೆಯುವ ಕ್ರಿಯೆಯಾಗಿದೆ.
ಜೀವಿಯು ಆಹಾರವನ್ನು ಸೇವಿಸಿ ಜೀರ್ಣಿಸಿ ಅದನ್ನು ದೇಹಗತ ಮಾಡುವ ಕ್ರಿಯೆಗೆ ಪೋಷಣೆ ಎಂದು ಹೆಸರು
ಉಸಿರಾಟ (Respiration) : ಉಸಿರಾಟ ಮೂಲಕ ಆಮ್ಲಜನಕವನ್ನು ತೆಗೆದುಕೊಂಡು ಅದನ್ನು ಜೀವಕೋಶಗಳಿಗೆ
ಕೊಂಡ್ಯೊಯ್ದು ಆಹಾರ ಪದಾರ್ಥಗಳನ್ನು ಉತ್ಕರ್ಷಿಸಿ ಅವುಗಳನ್ನು ಸರಳ ಸಂಯುಕ್ತಕಗಳಾಗಿ ಮಾಡಿ ಆಹಾರದಿಂದ
ಶಕ್ತಿಯನ್ನು ಬಿಡುಗಡೆಗೊಳಿಸುವ ಪ್ರಕ್ರಿಯೆಯನ್ನು ಉಸಿರಾಟ ಎನ್ನುವರು.
ಸಾಗಾಣಿಕೆ (transportation): ಸಾಗಾಣಿಕಾ ವ್ಯವಸ್ಥೆಯುಲ್ಲಿ ದೇಹದಲ್ಲಿ ಆಹಾರ ಮತ್ತು ಆಮ್ಲಜನಕವನ್ನು
ಒಂದು ಅಂಗದಿಂದ ಮತ್ತೊಂದು ಅಂಗಕ್ಕೆ ಸಾಗಿಸುವ ಕ್ರಿಯೆಯಾಗಿದೆ.
ವಿಸರ್ಜನೆ(Respiration): ಕೋಶಗಳಲ್ಲಿ ನಡೆಯುವ ಚಯಾಪಚಯ ಕ್ರಿಯೆಗಳಿಂದ ಉತ್ಪತ್ತಿಯಾದ
ಉಪ ಉತ್ಪನ್ನಗಳನ್ನು ದೇಹದಿಂದ ಹೊರಹಾಕುವ ಕ್ರಿಯೆಯಾಗಿದೆ.
ನಿಮಗೆ ಗೊತ್ತು ನಿಮ್ಮ ಎಲ್ಲಾ ಚಟುವಟಿಕೆಗಳಿಗೂ
ಶಕ್ತಿಯುಅಗತ್ಯವಾಗಿ ಬೇಕು ?
ನಾವು ಶಕ್ತಿಯನ್ನು ಯಾವಾಗ ಪಡೆಯುತ್ತೇವೆ,
ಶಕ್ತಿಯ ಮೂಲ ಆಹಾರ, ಅದನ್ನು ನಾವು ಸೇವಿಸುವುದರಿಂದ ಪಡೆಯಬಹುದು.
ಪೋಷಣೆಯ ವಿಧಗಳು
ಸ್ವಪೋಷಣೆ (Auto trohic Nutrition)-ಬಹಳಷ್ಟು ಹಸಿರು ಸಸ್ಯಗಳು ಸ್ವಾವಲಂಬಿಗಳಾಗಿವೆ. ಏಕೆಂದರೆ
ದ್ಯುತಿ ಸಂಶ್ಲೇಷಣೆ ಕ್ರಿಯೆಯಿಂದ ತಮಗೆ ಬೇಕಾದ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ. ಈ ರೀತಿಯ
ಪೋಷಣಾ ವಿಧಾನವನ್ನು ಸ್ವಪೋಷಣೆ ಎಂದು ಕರೆಯಲಾಗುವುದು. ಇದು ಒಂದು ಪ್ರಕ್ರಿಯೆ ಇದರಿಂದ ಸಸ್ಯಗಳು ಬಾಹ್ಯ
ಮೂಲದಿಂದ ಪದಾರ್ಥಗಳನ್ನು ಹೀರಿಕೊಂಡು ಅವುಗಳನ್ನು ಶಕ್ತಿಯ ರೂಪದಲ್ಲಿ ಶೇಖರಿಸಿಕೊಳ್ಳುತ್ತದೆ. ಇಂಗಾಲದ
ಡೈಆಕ್ಸೈಡ ಮತ್ತು ನೀರನ್ನು ಸೂರ್ಯನ ಬೆಳಕಿನ ಉಪಸ್ಥಿತಿಯಲ್ಲಿ ಹಾಗೂ ಪತ್ರ ಹರಿತ್ತಿನ ಸಹಾಯದಿಂದ ಕಾರ್ಬೋಹೈಡ್ರೇಟ್
ಆಗಿ ಪರಿವರ್ತಿಸುತ್ತವೆ. ಕಾರ್ಬೋಹೈಡ್ರೆಟ್‍ನ್ನು ಸಸ್ಯಗಳು ತಮ್ಮ ಎಲ್ಲಾ ಚಟುವಟಿಕೆಗಳಿಗೆ ಶಕ್ತಿಯ
ಬೃಹತ್ ಮೂಲವಾಗಿ ಉಪಯೋಗಿಸಿಕೊಳ್ಳುತ್ತವೆ.
ದ್ಯುತಿ ಸಂಶ್ಲೇಷಣೆಗೆ ಬೇಕಾಗಿರುವ ಕಚ್ಚಾ
ಪದಾರ್ಥಗಳು ಬೇರೆ ಅವಶ್ಯಕ ವಸ್ತುಗಳೆಂದರೆ ಸೂರ್ಯನ ಬೆಳಕು, ನೀರು, CO₂ ಮತ್ತು ಪತ್ರಹರಿತ್ತು
ಸೂರ್ಯನ ಶಕ್ತಿ : ಸೂರ್ಯನಿಂದ
ದೊರೆಯುವ ಶಕ್ತಿ
ನೀರು : ಸಸ್ಯಗಳು ಮಣ್ಣಿನಿಂದ
ನೀರನ್ನು ಬೇರುಗಳ ಮೂಲಕ ಹೀರಿಕೊಳ್ಳುತ್ತವೆ.
CO₂ :- ಸಸ್ಯಗಳು ತಮ್ಮ ಎಲೆಗಳ ತಳಭಾಗದಲ್ಲಿರುವ ಒಂದು ಸಣ್ಣ ರಂಧ್ರವಾದ
ಪತ್ರರಂಧ್ರದ ಮೂಲಕ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ ಹೀರಿಕೊಳ್ಳುತ್ತದೆ.
ಪತ್ರ ಹರಿತ್ತು : ಸಸ್ಯ ಜೀವಕೋಶಗಳಲ್ಲಿರುವ
ಕ್ಲೊರೋಪ್ಲಾಸ್ಟ (ಹಂತ) ಎಂಬ ಕಣದುಗದಲ್ಲಿರುವ ಹಸಿರು ಬಣ್ಣದ ವರ್ಣಹವಾಗಿದೆ.
ಪರಪೋಷಣೆ (Heteerotrophic
Nutrition)
ಶೀಲಿಂದ್ರಗಳ ಜೀವಕೋಶವು ಪತ್ರ ಹರಿತ್ತನ್ನು
ಹೊಂದಿಲ್ಲ ಅವುಗಳನ್ನು ಕೊಳೆತಿನಿಗಳು ಮತ್ತು ಪರಾವಲಂಬಿಗಳು ಎಂದು ವಿಭಾಗಿಸಲಾಗಿದೆ. ಅದೇ ರೀತಿ ಎಲ್ಲಾ
ಜೀವಿಗಳು (ಹಸಿರು, ಸಸ್ಯಗಳನ್ನು ಬಿಟ್ಟು) ಪತ್ರ ಹರಿತ್ತನ್ನು ಹೊಂದಿಲ್ಲದೇ ಇರುವುದರಿಂದ ದ್ಯುತಿ
ಸಂಶ್ಲೇಷಣೆಯನ್ನು ಮಾಡುವುದಿಲ್ಲ. ಅವುಗಳು ಸಸ್ಯಗಳ ಮೇಲೆ ಅಥವಾ ಇನ್ನಿತರ ಜೀವಿಗಳ ಮೇಲೆ ತಮ್ಮ ಪೋಷಣೆಗಾಗಿ
(ಆಹಾರ) ಅವಲಂಬನೆಗೊಂಡಿವೆ. ಆಹಾರಕ್ಕಾಗಿ ಸಸ್ಯಗಳ ಮೇಲೆ ಅವಲಂಬನೆಗೊಂಡಿರುವ ಜೀವಿಗಳ ಪೋಷಣಾ ವಿಧಾನವನ್ನು
ಪರಪೋಷಣೆ ಎಂದು ಕರೆಯಲಾಗುವುದು.
ಪರಾವಲಂಬಿಗಳು (Parasites)
ಕೆಲವು ಜೀವಿಗಳು ಇನ್ನೊಂದು ಜೀವಿಯ ಮೇಲೆ ಪೋಷಣೆಗಾಗಿ
ಆಶ್ರಯಿಸಿರುತ್ತವೆ ಇಂತಹವುಗಳನ್ನು ಪರಾವಲಂಬಿ ಎಂದು ಕರೆಯುವರು ಸಸ್ಯ ಅಥವಾ ಪ್ರಾಣಿಗಳು ಪೋಷಣೆಗಾಗಿ
ಆಶ್ರಯು ನೀಡುವ ಜೀವಿಯನ್ನು ಅತಿಥೇಯ ಜೀವಿ ಎಂದು ಕರೆಯಲಾಗುವುದು ಕೆಲವು ಪರಾವಲಂಬಿ ಸಸ್ಯಗಳು ವಿಶೇಷವಾದ
ಬೇರುಗಳನ್ನು ಹೊಂದಿವೆ. ಇದರ ಮೂಲಕ ಅತಿಥಿ ಸಸ್ಯವು ಹಾದು ಹೋಗಿ ಆಶ್ರಯ ಜೀವಿಯ ಜೀವಿಯ ಕ್ಸೈಲಂ ಮತ್ತು
ಪ್ಲೋಯಂನಿಂದ ನೀರು ಮತ್ತು ಆಹಾರವನ್ನು ಹೀರಿಕೊಳ್ಳತ್ತವೆ. ಈ ರೀತಿಯ ಬೇರುಗಳನ್ನು “ಹಾಸ್ಟೋರಿಯಾ” ಎಂದು ಕರೆಯುವರು.
ಉದಾಹರಣೆ : ಕಸ್ಕ್ಯುಟಾ ಮತ್ತು ವಿಸ್ಕಂ
ಕೊಳೆತಿನಿಗಳು (Saprophytes)
ಕೆಲವು ಸಸ್ಯಗಳು ಸತ್ತಿರುವ ಅಥವಾ ಕೊಳೆತಿರುವ
ಸಾವಯವ ಪದಾರ್ಥಗಳ ಮೇಲೆ ಬೆಳೆಯುತ್ತವೆ ಅಥವಾ ಅವುಗಳಿಂದ ಆಹಾರ ಪಡೆಯುತ್ತವೆ ಇಂತಹ ಜೀವಿಗಳನ್ನು ಕೊಳೆತಿನಿಗಳು
ಎಂದು ಕರೆಯಲಾಗುವುದು. ಬಹಳಷ್ಟು ಶಿಲೀಂದ್ರಗಳು ಮತ್ತು ಬ್ಯಾಕ್ಟೇರಿಯಾಗಳು ಕೊಳೆತಿನಿಗಳು.
ಮಾನವರಲ್ಲಿ ಜೀರ್ಣಕ್ರಿಯೆ (Digestion in Human beings)
ಸಂಕೀರ್ಣ ಆಹಾರ ಪದಾರ್ಥವು ಹೊಡೆದು ಸರಳ ರಸಾಯನಿಕ
ವಸ್ತುಗಳಾಗಿ ಪರಿವರ್ತನೆಗೊಂಡು ಅದು ಜೀವಕೋಶಗಳಿಂದ ಹೀರಲ್ಪಟ್ಟು ದೇಹಗತವಾಗುವಿಕೆಯನ್ನು ಜೀರ್ಣಕ್ರಿಯೆ
ಎಂದು ಕರೆಯಲಾಗುವುದು.
ಜಠರ, ಕರುಳಿನ ರಚನೆ, ಕಾರ್ಯ ಹಾಗೂ ಅವುಗಳಿಗೆ
ಉಂಟಾಗುವ ರೋಗಗಳು, ಪತ್ತೆ ಹಚ್ಚುವ ವಿಧಾನ, ಹಾಗೂ ಚಿಕಿತ್ಸೆಯನ್ನು ನೀಡುವ ವೈದ್ಯಕೀಯ ಸೌಲಭ್ಯದ ಅಧ್ಯಯನವನ್ನು
ಗ್ಯಾಸ್ಟ್ರೋ ಎಂಟ್ರಿಯಾಲಜಿ ಎಂದು ಕರೆಯುವರು.
ಜೀರ್ಣ ಕ್ರಿಯೆಯು ಎರಡು ಹಂತಗಳಲ್ಲಿ ನಡೆಯುತ್ತದೆ.
1. ಯಾಂತ್ರಿಕ ಜೀರ್ಣಕ್ರಿಯೆ (Mechanica; digestion) :
ಆಹಾರದ ದೊಡ್ಡ ಕಣಗಳು ನಾಲಿಗೆ, ಹಲ್ಲು ಮತ್ತು
ಜಠರದ ಬಲಿಷ್ಟ ಸ್ನಾಯುಗಳಿಂದ ಮೃದುವಾದ ಮುದ್ದೆಯಂತೆ ಪರಿವರ್ತಿಸುವುದು.
2. ರಸಾಯನಿಕ ಜೀರ್ಣಕ್ರಿಯೆ (Chemical digestion) :
ಆಹಾರದ ಕಿಣ್ವಗಳ ಕ್ರಿಯೆಯಿಂದ ಜಲ ವಿಶ್ಲೇಷಣೆ
ಹೊಂದಿ ಅತ್ಯಂತ ಸೂಕ್ಷ್ಮ ಕಣಗಳಾಗುವುದು. ಮಾನವನ ಜೀರ್ಣಾಂಗವ್ಯೂಹವು ಜೀರ್ಣನಾಳ ಹಾಗೂ
ಜೀರ್ಣ ಗ್ರಂಥಿಗಳನ್ನು ಒಳಗೊಂಡಿದೆ. ಮಾನವನ
ಜೀರ್ಣನಾಳವು ಬಾಯಿಯಿಂದ ಗುದದ್ವಾರದವರೆಗೂ ವಿಸ್ತರಿಸಿದ್ದು ಗಂಟಲು, ಅನ್ನನಾಳ, ಜಠರ, ಸಣ್ಣ ಕರುಳು
ಮತ್ತು ದೊಡ್ಡ ಕರುಳುಗಳನ್ನೊಳಗೊಂಡಿದೆ. ಬಾಯಿಯು ಬಾಯಿಯ ಕುಹರಕ್ಕೆ ತೆರೆಯುತ್ತದೆ. ಇದರಲ್ಲಿ ಹಲ್ಲುಗಳು,
ನಾಲಿಗೆ ಮತ್ತು ಮೂರು ಜೊತೆ ಲಾಲಾರಸ ಗ್ರಂಥಿಗಳಿವೆ. ಮಾನವರಲ್ಲಿ ಹಲ್ಲುಗಳು ದವಡೆಯು ಮೂಳೆಗಳಲ್ಲಿ
ಹುದುಗಿವೆ.
ಈ ಆಹಾರ ಪದ್ಧತಿಯಲ್ಲಿ ಕೆಳಕಂಡ ಐದು ಹಂತಗಳನ್ನು
ಗುರುತಿಸಬಹುದು.
1) ಸೇವನೆ (Ingession) : ಈ ಹಂತದಲ್ಲಿ ಪ್ರಾಣಿಗಳು ಘನ ಆಹಾರ ಮತ್ತು ನೀರನ್ನು ದೇಹದ
ಒಳಗೆ ತೆಗೆದುಕೊಳ್ಳತ್ತವೆ.
2) ಪಚನಕ್ರಿಯೆ (Digesion) : ಸೇವಿಸಿದ ಸಂಕೀರ್ಣ ಆಹಾರವನ್ನು ಸರಳ ಹಾಗೂ ವಿಸರಣ ಸ್ಥಿತಿಗೆ
ಪರಿವರ್ತಿಸುವ ಕ್ರಿಯೆ.
3) ಹೀರಿಕೆ (Absorption) : ಪರಿವರ್ತಿಸಲ್ಪಟ್ಟ ಆಹಾರದಲ್ಲಿರುವ ಪೋಷಕಾಂಶವನ್ನು ದೇಹದ
ಜೀವಕೋಶಗಳು ಹೀರಿಕೊಳ್ಳುವ ಕ್ರಿಯೆ.
4) ಸ್ವಾಂಗೀಕರಣ (Assimilation) : ಜೀವಕೋಶಗಳು ಹೀರಿಕೊಂಡ ಪೋಷಕಾಂಶಗಳನ್ನು ಶಕ್ತಿಯ ಮೂಲವಾಗಿ
ಹಾಗೂ ಬೆಳವಣಿಗೆಗೆ ಉಪಯೋಗಿಸಿಕೊಳ್ಳುವ ಕ್ರಿಯೆ
5) ವಿಸರ್ಜನೆ (Egestion) : ಪಚನಗೊಳ್ಳದ ಹಾಗೂ ಅರಗದ ಆಹಾರ ವಸ್ತುಗಳನ್ನು ಹೊರಹಾಕುವ
ಕ್ರಿಯೆ.
ಬಾಯಿ : ನಾಲಿಗೆ ಮತ್ತು 3 ಜೊತೆ ಲಾಲಾರಸ ಗ್ರಂಥಿಗಳಿವೆ.
ಹಲ್ಲು : ಹಲ್ಲು ಡೆಂಟಿನ್
ಎಂಬ ಅತಿ ಗಟ್ಟಿಯಾದ ವಸ್ತುವಿನಿಂದಾಗಿದೆ. ಹಲ್ಲಿನ ಮೂರು ಮುಖ್ಯಭಾಗಗಳು
1) ಶಿರೋಭಾಗ (ಕ್ರೌನ್)
2) ಕಂಠಭಾಗ (ನೆಕ್)
3) ಬೇರು (ರೂಟ)
ವಸಡಿನ ಮೇಲ್ಭಾಗದ ಹೊರಕಾಣಿಸುವ ಹಲ್ಲಿನ ಭಾಗವನ್ನು
ಡೆಂಟಿನಗಿಂತಲೂ ಗಟ್ಟಿಯಾದ ಎನಾಮಲ್ ಎಂಬ ವಸ್ತು ಆವರಿಸಿದೆ.
ಬಾಚಿ ಹಲ್ಲುಗಳು :
ಆಹಾರವನ್ನು ಕತ್ತರಿಸಲು
ಕೋರೆ ಹಲ್ಲುಗಳು :
ಆಹಾರವನ್ನು ಸಿಗಿಯಲು
ಮುಂದವಡೆ ಮತ್ತು ದವಡೆ ಹಲ್ಲುಗಳು : ಆಹಾರವನ್ನು
ಅರೆಯಲು ಸಹಾಯಕವಾಗಿದೆ.
ಮಾನವನ ದಂತ ಸೂತ್ರ
2 ಬಾ, 1 ಕೋ, 2 ಮುಂ. ದ.ಹ, 3 ದ.ಹ 2 = 32
2 ಬಾ, 1 ಕೋ, 2 ಮುಂ. ದ.ಹ, 3 ದ.ಹ
ನಾಲಿಗೆ : ಇದೊಂದು
ಸ್ನಾಯುಕ ಅಂಗ ಇದು ಆಹಾರವನ್ನು ಅಗಿಯಲು ಮತ್ತು ನುಂಗಲು ಸಹಾಯಕವಾಗಿದೆ. ನಾಲಿಗೆಯಲ್ಲಿ ರುಚಿಯನ್ನು
ಗ್ರಹಿಸುವ ಅನೇಕ ರಸಾಂಕುರಗಳು ಇವೆ.
ಲಾಲಾ ಗ್ರಂಥಿಗಳು
: ಬಾಯಿಯ ಕುಹರದ ಗೋಡೆಯಲ್ಲಿರುವ 3 ಜೊತೆ ಲಾಲಾರಸ ಗ್ರಂಥಗಳು ಸ್ರವಿಸಿದ ಲಾಲಾರಸ ಆಹಾರದ ಜೊತೆ ಸೇರಿ
ಜೀರ್ಣಕ್ರಿಯೆಯನ್ನು ಪ್ರಾರಂಭಿಸುತ್ತದೆ. ಲಾಲಾರಸದ ಅಮೈಲೇಸ್ ಎಂಬ ಕೀಣ್ವ ಆಹಾರದಲ್ಲಿರುವ ಪಿಷ್ಪದ
ಮೇಲೆ ಕ್ರಿಯೆ ನಡೆಸಿ ಅದನ್ನು ಮಾಲ್ಟೋಸ್ ಆಗಿ ಪರಿವರ್ತಿಸುತ್ತದೆ.
ಜಠರ : ಚೀಲದಂತಿರುವ
ಸ್ನಾಯುಕ ಅಂಗ
ಜಠರದಲ್ಲಿ ಪೆಟ್ಸಿನ್ ಮತ್ತು ರೆನಿನ್ ಎಂಬ
ಎರಡು ಕಿಣ್ವಗಳಿವೆ
1) ಪೆಪ್ಸಿನ : ಆಹಾರದಲ್ಲಿರುವ ಪ್ರೋಟಿನನ್ನು
ಪೆಪ್ಟೈಡುಗಳಾಗಿ ಪರಿವರ್ತಿಸುತ್ತದೆ.
2) ರೆನಿನ್ : ಹಾಲಿನ ಕರಗುವ ಪ್ರೋಟೀನಗಳನ್ನು
ಕರಗದ ಮೊಸರನ್ನಾಗಿ ಪರಿವರ್ತಿಸುತ್ತದೆ. ಜಠರದ ರಸದಲ್ಲಿ ಹೈಡ್ರೋಕ್ಲೋರಿಕ್ ಆಮ್ಲವು ಸಹ ಇದ್ದು,
ಆಹಾರದೊಡನೆ ಜಠರವನ್ನು ಪ್ರವೇಶಿಸಬಹುದಾದ ಸೂಕ್ಷ್ಮಾಣು
ಜೀವಿಗಳನ್ನು ನಾಶಪಡಿಸುತ್ತದೆ.
* ಆಹಾರವು ಈಗ ಕಡೆಯಲ್ಪಟ್ಟು ‘ಕೈಮ್’ ಎಂಬ ಗಟ್ಟಿ ಗಂಜಿರೂಪಕ್ಕೆ ಬಂದಿರುತ್ತದೆ. ಇದು ಜಠರದಿಂದ ಸಣ್ಣ
ಕರುಳಿನ ಮೊದಲನೆಯ ಭಾಗವಾದ ಡಿಯೋಡಿನಮನ್ನು ಪ್ರವೇಶಿಸುತ್ತದೆ.
* ಯಕೃತ್ತಿನ ಪಿತ್ತಕೋಶದಲ್ಲಿ ಶೇಖರಿಸಲ್ಪಟ್ಟ
ಪಿತ್ತರಸ, ಮೇದೋಜಿರಕ ಗ್ರಂಥಿ ಸ್ರವಿಸಿದ ಮೇದೋಜಿರಕ ರಸ, ಕರುಳಿನ ಗೋಡೆಯಲ್ಲಿರುವ ಕರುಳಿನ ರಸ ಗ್ರಂಥಿಗಳು
ಸ್ರವಿಸಿದ ಕರುಳಿನ ರಸವೂ ‘ಕೈಮ್ನ್ನು’ಸೇರುತ್ತದೆ.
ಮೇದೋಜೀರಕ ರಸದಲ್ಲಿ ಈ ಕೆಳಗಿನ ಕಿಣ್ವಗಳಿವೆ.
1. ಅಮೈಲೇಸ್ : ಪಿಷ್ಟವನ್ನು ಮಾಲ್ಟೋಸ್
ಆಗಿ ಪರಿವರ್ತಿಸುತ್ತದೆ.
2. ಮೇದೋಜೀರಕ ಲಿಪೇಸ್ : ಸಂಕೀರ್ಣ ಮೇದಸ್ಸನ್ನು
ಸರಳ ಮೇದಸ್ಸನ್ನಾಗಿ ಪರಿವರ್ತಿಸುತ್ತದೆ
ಕರುಳಿನ ರಸದಲ್ಲಿರುವ ಕಿಣ್ವಗಳು
1. ಮಾಲ್ಟೋಸ : ಮಾಲ್ಟೋಸ್ ಅನ್ನು ಗ್ಲೂಕೋಸ್
ಆಗಿ ಪರಿವರ್ತಿಸುತ್ತದೆ.
2. ಸುಕ್ರೇಸ್ : ಕಬ್ಬಿನ ಸಕ್ಕರೆಯನ್ನು ಗ್ಲೂಕೋಸ,
ಆಗಿ ಪರಿವರ್ತಿಸುತ್ತದೆ.
3. ಲ್ಯಾಕ್ಟೋಸ್ : ಹಾಲಿನ ಲಾಕ್ಟೋಸ್ ಸಕ್ಕರೆಯನ್ನು
ಗ್ಲುಕೋಸ್ ಆಗಿ ಪರಿವರ್ತಿಸುತ್ತದೆ.
4. ಪೆಪ್ಟೈಡೇಸ್ : ಪೆಪ್ಟಡ್‍ಗಳನ್ನು ಅಮಿನೋ
ಆಮ್ಲಗಳಾಗಿ ಪರಿವರ್ತಿಸುತ್ತದೆ.
5. ಕರುಳಿನ ಲಿಪೇಸ್ : ಸರಳ ಮೇದಸ್ಸನ್ನು ಮೇದೋ
ಆಮ್ಲ ಮತ್ತು ಗ್ಲಿಸರಾಲ್ ಆಗಿ ಪರಿವರ್ತಿಸುತ್ತದೆ.
* ಜೀರ್ಣವಾದ ಆಹಾರ ವಸ್ತುಗಳ ಹೀರಿಕೆ ಸಣ್ಣ
ಕರುಳಿನ ಗೋಡೆಯಲ್ಲಿರುವ ಬೆರಳಿನಂತಹ ರಚನೆಗಳಾದ ವಿಲ್ಲೈಗಳಿಂದ ಆಗುತ್ತದೆ. ಹೀರಲ್ಪಟ್ಟ ಆಹಾರ ರಕ್ತದ
ಮೂಲಕ ದೇಹದ ವಿವಿಧ ಭಾಗಗಳಿಗೆ ಸಾಗಿಸಲ್ಪಡುತ್ತದೆ.
* ನಂತರ ‘ಕೈಮ್’ ಆಹಾರದ ಹೀರಿಕೆಯ ನಂತರ ಜೀರ್ಣವಾಗದ ಆಹಾರವು ದೊಡ್ಡಕರುಳನ್ನು
ಪ್ರವೇಶಿಸುತ್ತದೆ. ದೊಡ್ಡ ಕರಳಿನಲ್ಲಿ ನೀರು ಮರು ಹೀರಿಕೆಯಾಗಿ ಗುದದ್ವಾರದ ಮೂಲಕ ಮಲವಿಸರ್ಜನೆಯಾಗುತ್ತದೆ.
* ಜಾಂಡಿಸ್, ಅಲ್ಸರ್, ಆಮ್ಲಿಯತೆ, ಸ್ಥೂಲತೆ,
ಅಜೀರ್ಣ, ಮಲಬದ್ಧತೆ, ಇವು ಜೀರ್ಣಾಂಗ ವ್ಯೂಹಕ್ಕೆ ಸಂಬಂಧಿಸಿದ ರೋಗಗಳು
* ಅಪೆಂಡಿಕ್ಸ್ ಇದಕ್ಕೆ ಸೋಂಕು ತಗಲಿದಾಗ ಉರಿಯುತ
ಉಂಟಾಗಿ ಅಪೆಂಡಿಸೈಟಿಸ್ ಎಂಬ ರೋಗ ಉಂಟಾಗುತ್ತದೆ.
ಶ್ವಾಸ ಕ್ರಿಯೆ
ಆಹಾರವನ್ನು ಉತ್ಕರ್ಷಿಸಿ ಶಕ್ತಿಯ ಬಿಡುಗಡೆಯೊಡನೆ
ಕಾರ್ಬನ್ ಡೈ ಆಕ್ಸೈಡನ್ನು ಮತ್ತು ನೀರನ್ನು ಹೊರ ಹಾಕುವ ಕ್ರಿಯೆಯನ್ನು ಶ್ವಾಸಕ್ರಿಯೆ ಎನ್ನುತ್ತಾರೆ.
* ಶ್ವಾಸಕ್ರಿಯೆಯಲ್ಲಿ ಎರಡು ವಿಧಗಳಿವೆ
1. ಆಮ್ಲಜನಕ ಸಹಿತ ಶ್ವಾಸಕ್ರಿಯೆ
2. ಆಮ್ಲಜನಕ ರಹಿತ ಶ್ವಾಸಕ್ರಿಯೆ
ಆಮ್ಲಜನಕ ಸಹಿತ ಶ್ವಾಸಕ್ರಿಯೆ (ವಾಯುವಿಕ)
ಆಮ್ಲಜನಕ ಸಹಿತ ಶ್ವಾಸ ಕ್ರಿಯೆಯಲ್ಲಿ ಆಮ್ಲಜನಕದಿಂದ
ಸಾವಯವ ಸಂಯಕ್ತಗಳು ವಿಭಜನೆಯಾಗಿ ಶಕ್ತಿ CO₂ ಮತ್ತು ನೀರು ಬಿಡುಗಡೆಯಾಗಿರುತ್ತದೆ.
C₂H₁₂O₆ + CO₂ → 6CO₂ + 6H₂O + ಶಕ್ತಿ (673) ಕಿ.ವ್ಯಾ
ಆಮ್ಲಜನಕ ರಹಿತ ಶ್ವಾಸ ಕ್ರಿಯೆ (ಅವಾಯುಕ) : ಆಮ್ಲಜನಕ ರಹಿತ ಶ್ವಾಸ ಕ್ರಿಯೆಯಲ್ಲಿ ಸಾವಯವ ಸಂಯುಕ್ತಗಳು ಆಮ್ಲಜನಕದ
ಸಹಾಯವಿಲ್ಲದೆ ವಿಭಜನೆಯಾಗಿ ಆಲ್ಕೋಹಾಲ್, CO₂
ಸ್ವಲ್ಪ ಪ್ರಮಾಣದ ಶಕ್ತಿ ಬಿಡುಗಡೆಯಾಗುತ್ತದೆ.
ಈ ರೀತಿಯ ಶ್ವಾಸಕ್ರಿಯೆ ಕೆಳಮಟ್ಟದ ಜೀವಿಗಳಾದ ಬ್ಯಾಕ್ಟೇರಿಯಾ ಹಾಗೂ ಯೀಸ್ಟಗಳಲ್ಲಿ ಕಂಡುಬರುತ್ತದೆ.
C₂H₁₂O₆ →
2C₂H₅OH + 2CO₂ + ಶಕ್ತಿ
* ಮಾನವನ ಶ್ವಾಸಾಂಗವ್ಯೂಹವು ಮೂಗು, ಗಂಟಲು,
ಧ್ವನಿ ಪೆಟ್ಟಿಗೆ, ಶ್ವಾಸನಾಳ, ಬ್ರಾಂಕೈ, ಬ್ರಾಂಕಿಯೋಲ್‍ಗಳು ಮತ್ತು ಶ್ವಾಸ ಕೋಶಗಳನ್ನೊಳಗೊಂಡಿದೆ.
* ಜಿರಳೆಯ ಶ್ವಾಸಾಂಗವ್ಯೂಹವು ಈ ಭಾಗಗಳನ್ನು
ಒಳಗೊಂಡಿದೆ.
ಎ) ಶ್ವಾಸ ರಂದ್ರಗಳು (Spiracles)
ಬಿ) ಶ್ವಾಸನಾಳ (Trachea)
ಸಿ) ಶ್ವಾಸನಾಳಸ ಕವಲುಗಳು (Tracheoles)
* ಶ್ವಾಸಕೋಶದ ಕ್ಯಾನ್ಸರ್, ಅಸ್ತಮ, ಕ್ಷಯರೋಗ,
ಶ್ವಾಸಾಂಗ ವ್ಯೂಹಕ್ಕೆ ಸಂಬಂಧಿಸಿದ ರೋಗಗಳು
* ಮಾನವನು ಸೇರಿದಂತೆ ಪ್ರಾಣಿಗಳಲ್ಲಿ ಶ್ವಾಸಕ್ರಿಯೆ
ಬಾಹ್ಯ ಶ್ವಾಸಕ್ರಿಯೆ ಮತ್ತು ಅಂತರಿಕ ಶ್ವಾಸಕ್ರಿಯೆ ಎಂದು 2 ಹಂತಗಳಲ್ಲಿ ನಡೆಯುತ್ತದೆ.
* ರಕ್ತ ಮತ್ತು ಮಾಧ್ಯಮದ (ಭೂ ಜೀವಿಗಳಲ್ಲಿ
ಗಾಳಿ ಮತ್ತು ಜಲ ಜೀವಿಗಳಲ್ಲಿ ನೀರು ನಡುವೆ ನಡೆಯುವ ಅನಿಲಗಳ ವಿನಿಮಯವನ್ನು ‘ಬಾಹ್ಯ ಶ್ವಾಸಕ್ರಿಯೆ’ ಎನ್ನುತ್ತಾರೆ.
* ರಕ್ತ ಮತ್ತು ಜೀವಕೋಶಗಳ ನಡುವೆ ನಡೆಯುವ
ಅನಿಲಗಳ ವಿನಿಮಯವನ್ನು ‘ಅಂತರಿಕ ಶ್ವಾಸಕ್ರಿಯೆ’ ಎನ್ನುತ್ತಾರೆ.
* ಶ್ವಾಸನಾಳವು ಬ್ರಾಂಕೈಗಳೆಂಬ ಎರಡು ಕವಲುಗಳಾಗಿ
ಎಡ ಮತ್ತು ಬಲ ಶ್ವಾಸಕೋಶಗಳನ್ನು ಅನುಕ್ರಮವಾಗಿ ಪ್ರವೇಶಿಸುತ್ತದೆ.
* ಬ್ರಾಂಕೈ ಶ್ವಾಸಕೋಶವನ್ನು ಪ್ರವೇಶಿಸಿದ
ನಂತರ ಬ್ರಾಂಕಿಯೊಲಗಳಾಗಿ ಒಡೆದು ಸೂಕ್ಷ್ಮವಾದ ನಳಿಕೆಗಳು ವಾಯುಕೋಶ (Alveoli) ಗಳೆಂಬ ಚೀಲದಂತಹ ರಚನೆಗಳಲ್ಲಿ ಕೊನೆಗೊಳ್ಳುತ್ತವೆ.
* ಶ್ವಾಸಕೋಶಗಳು ಸ್ಪಂಜಿನಂತಹ ಸ್ಥಿತಿ ಸ್ಥಾಪಕ
ಶಕ್ತಿಯಿರುವ ಅಂಗಾಂಶದಿಂದ ಆಗಿವೆ.
* ಶ್ವಾಸಕ್ರಿಯೆಯು ಉಚ್ಛಾಸ ಮತ್ತು ನಿಶ್ವಾಸ
ಎಂಬ ಎರಡು ಹಂತಗಳನ್ನೊಳಗೊಂಡಿದೆ.
* ವಾತಾವರಣದ ಗಾಳಿಯನ್ನು ಮೂಗಿನ ಮೂಲಕ ಶ್ವಾಸಕೋಶಗಳಿಗೆ
ತೆಗೆದುಕೊಳ್ಳುವುದನ್ನು ‘ಉಚ್ವಾಸ’ ಎನ್ನುತ್ತಾರೆ.
* ಶ್ವಾಸಕೋಶಗಳಲ್ಲಿರುವ ಗಾಳಿಯನ್ನು ಮೂಗಿನ
ಮೂಲಕ ಹೊರಹಾಕುವುದನ್ನು ನಿಶ್ವಾಸ ಎನ್ನುತ್ತಾರೆ.
ಸಸ್ಯಗಳಲ್ಲಿ ಸಾಗಾಣಿಕೆ
ಸಸ್ಯ ದೇಹದ ಬಹುಭಾಗ C, H ಮತ್ತು O₂ ಗಳಿಂದ ಮಾಡಲ್ಪಟ್ಟಿದೆ ಅಲ್ಲದೆ N₂ ಮತ್ತು ಅನೇಕ ಲವಣಗಳು ಸಸ್ಯಗಳಿಗೆ ಅವಶ್ಯಕವಾಗಿದೆ.
* ಬೇರು ಹೀರಿದ ನಿರವಯವ ವಸ್ತುಗಳಾದ ಕೈಲಂ
ಅಂಗಾಂಶದ ಕೊಳವೆಗಳ ಮೂಲಕ ಮೇಲ್ಮುಖವಾಗಿ ಸಾಗಿಸುವುದನ್ನು ಗಿಡರಸದ ಮೇಲೇರಿಕೆ ಎನ್ನುತ್ತಾರೆ. ಈ ಸಾಗಾಣಿಕೆ
ಒಂದೇ ದಿಕ್ಕಿನಲ್ಲಿ ಆಗತ್ತದೆ.
* ಎಲೆ ತಯಾರಿಸಿದ ಆಹಾರ ಮತ್ತು ಶೇಖರಣೆಯಾದ
ಆಹಾರ ಪ್ಲೋಯಂ ಅಂಗಾಂಶದ ಮೂಲಕ ಸಸ್ಯದ ಇತರೆ ಭಾಗಗಳಿಗೆ ಸಾಗಿಸಲ್ಪಡುವುದನ್ನು ಸಾವಯವ ವಸ್ತುಗಳ ಸಾಗಾಣಿಕೆ
ಎನ್ನುವರು.
ಮಾನವನಲ್ಲಿ ಸಾಗಾಣಿಕಾ ವ್ಯೂಹ
ಮಾನವನ ಸಾಗಾಣಿಕ ವ್ಯೂಹವು ರಕ್ತ, ರಕ್ತನಾಳಗಳು
ಮತ್ತು ಹೃದಯವನ್ನು ಒಳಗೊಂಡಿದೆ.
ರಕ್ತ
ಮನುಷ್ಯನ ದೇಹದಲ್ಲಿ ಶೇ 8% ರಷ್ಟು ತೂಕದ ರಕ್ತವಿರುತ್ತದೆ.
* ರಕ್ತವು ಒಂದು ದ್ರವರೂಪದ ಸಂಯೋಜಕ ಅಂಗಾಂಶ
ಇದು ಪ್ಲಾಸ್ಮಾ ಎಂಬ ದ್ರವರೂಪದ ಮಾತೃಕೆಯಿಂದ, RBC,
WBC ಹಾಗೂ ಕಿರು ತಟ್ಟೆಗಳೆಂಬ ಘನ ಘಟಕಗಳಿಂದಾಗಿದೆ.
* ಅಸ್ಥಿಮಜ್ಜೆಯಲ್ಲಿ ಒಂದು ಸೆಕೆಂಡಿಗೆ ಸುಮಾರು.
1.5 ರಿಂದ 2 ಮಿಲಿಯನಗಳಷ್ಟು ಕೆಂಪು ರಕ್ತ ಕಣಗಳು ಉತ್ಪತ್ತಿಯಾಗುತ್ತದೆ.
* ಕೆಂಪು ರಕ್ತ ಕಣಗಳ ಸಂಖ್ಯೆ 3 ಮಿಲಿಯನ್‍ಗಳಿಗಿಂತ
ಕಡಿಮೆಯಾದಾಗ ರಕ್ತ ಹಿನತೆ ಎಂಬ ರೋಗ ಬರುತ್ತದೆ.
* ಕೆಂಪು ರಕ್ತಕಣಗಳ ಆಯುಷ್ಯ ಸುಮಾರು 120
ದಿನಗಳು.
ಪ್ಲಾಸ್ಮಾ
ಪ್ಲಾಸ್ಮಾದಲ್ಲಿ ಶೇ 90 ರಷ್ಟು ನೀರು, ಶೇ
8 ರಷ್ಟು ಪ್ರೋಟಿನಗಳು ಉಳಿದ ಶೇ 2 ರಷ್ಟು ಹಾರ್ಮೋನಗಳು, ಆಹಾರ ಅಂಶಗಳಾದ ಗ್ಲುಕೋಸ, ಅಮೈನೊ ಆಮ್ಲಗಳು
ಕೊಬ್ಬಿನ ಆಮ್ಲ ಗ್ಲಿಸರಾಲ್‍ಗಳು, ಜೀವಸತ್ವಗಳು, ಲವಣಗಳು ಮತ್ತು ಯೂರಿಯಾವನ್ನು ಹೊಂದಿರುತ್ತದೆ.
* ಪ್ಲಾಸ್ಮಾ ತಿಳಿಹಳದಿ ಬಣ್ಣದ ದ್ರವ
* ಪ್ಲಾಸ್ಮಾದಲ್ಲಿರುವ ಪೈಬ್ರಿನೊಜೆನ್ ಮತ್ತು
ಪ್ರೋಥ್ರೊಂಬಿನ್ ಎಂಬ ಪ್ರೋಟಿನಗಳು ರಕ್ತ ಹೆಪ್ಪುಗಟ್ಟಲು ಸಹಾಯಕವಾಗಿದೆ.
ಕೆಂಪು ರಕ್ತಕಣಗಳು
* ಕೆಂಪು ರಕ್ತಕಣಗಳು ದುಂಡಾಗಿರುತ್ತವೆ ಇವುಗಳಲ್ಲಿ
ಕೋಶ ಕೇಂದ್ರ ಇರುವುದಿಲ್ಲ
* ಇವು ಆಸ್ತಿ ಮಜ್ಜೆಯಲ್ಲಿ ಉತ್ಪತ್ತಿಯಾಗುತ್ತದೆ
ಆರೋಗ್ಯವಂತನಾದ ಮನುಷ್ಯನಲ್ಲಿ ಒಂದು ಕ್ಯೂ.ಮೀ.ಮಿ. ರಕ್ತದಲ್ಲಿ ಸುಮಾರು 5.4 ಮಿಲಿಯನ್‍ಗಳಷ್ಟು ಕೆಂಪು
ರಕ್ತ ಕಣಗಳಿರುತ್ತವೆ.
* ಕೆಂಪು ರಕ್ತಕಣಗಳಲ್ಲಿ ಹಿಮೊಗ್ಲೋಬಿನ್ ಎಂಬ
ಕಬ್ಬಿಣದ ಸಂಯುಕ್ತ ವಸ್ತುವಿದೆ ಬಿಳಿಯ ರಕ್ತಕಣಗಳು : ಇವುಗಳಲ್ಲಿ ಎರಡು ವಿಧಗಳಿವೆ.
1. ಹಾಲೆಗಳಿರುವ ಕೋಶ ಕೇಂದ್ರವನ್ನು ಹೊಂದಿರುವ
ಬಿಳಿಯ ರಕ್ತಕಣಗಳು ಆಸ್ಥಿಮಜ್ಜೆಯಲ್ಲಿ ಉತ್ಪತ್ತಿಯಾಗುತ್ತದೆ.
2. ಹಾಲೆಗಳಿರುವ ಕೋಶಕೇಂದ್ರವನ್ನು ಹೊಂದಿರುವ
ದುಂಡಗಿರುವ ಬಿಳಿಯ ರಕ್ತಕಣಗಳನ್ನು ಲಿಂಫ ಕೋಶಗಳು ಎನ್ನುತ್ತಾರೆ ಇವು ಲಿಂಫ ಗ್ರಂಥಿಗಳಲ್ಲಿ ಉತ್ಪತ್ತಿಯಾಗುತ್ತವೆ.
ಒಂದು ಕ್ಯೂ.ಮಿ.ಮಿ. ರಕ್ತದಲ್ಲಿ ಸುಮಾರು
7 ಸಾವಿರದಷ್ಟು ಬಿಳಿಯ ರಕ್ತಕಣಗಳು ಇರುತ್ತವೆ.
* ಬಿಳಿಯ ರಕ್ತಕಣಗಳ ಸಂಖ್ಯೆ ಅತಿ ಹೆಚ್ಚಾದಾಗ
ಅಂದರೆ ಒಂದು ಕ್ಯೂ.ಮೀ.ಮೀ. ರಕ್ತದಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಬಿಳಿಯ ರಕ್ತ ಕಣಗಳಿದ್ದರೆ
ರಕ್ತ ಕ್ಯಾನ್ಸರ್ ಅಥವಾ ಲಿವ್‍ಕೋಮಿಯಾ ಎಂಬ ರೋಗ ಉಂಟಾಗುತ್ತದೆ.
ಬಿಳಿಯ ರಕ್ತಕಣಗಳ ಆಯುಷ್ಯ 12 ಗಂಟೆಗಳಿಂದ
300 ದಿನಗಳು
* ರಕ್ತಕಣಗಳ ಪ್ರಮಾಣ RBC 500 : WBC
1 : Platelets 25
* ಮನುಷ್ಯನ ದೇಹದಲ್ಲಿ ಸುಮಾರು 90,000 ಮೈಲಿಗಳಷ್ಟು
ದೂರ ಹರಡುವ ರಕ್ತನಾಳಗಳಿವೆ.
ಕಿರುತಟ್ಟೆಗಳು (Platlets)
ಇವು ಅಸ್ಲಿಮಜ್ಜೆ ಕೋಶಗಳ ಸವೇತದಿಂದ ಉತ್ಪತ್ತಿಯಾದ
ನಿರ್ದಿಷ್ಟ ಆಕಾರವಿಲ್ಲದ ರಚನೆಗಳು ಒಂದು ಕ್ಯೂ.ಮೀ.ಮೀ. ರಕ್ತದಲ್ಲಿ ಸುಮಾರು 2,50,000 ದಿಂದ
5,00,000 ಕಿರುತಟ್ಟೆಗಳಿರುತ್ತವೆ.
ರಕ್ತನಾಳಗಳು
ಮಾನವನಲ್ಲಿ 3 ವಿಧವಾದ ರಕ್ತನಾಳಗಳಿವೆ
1) ಅಪಧಮನಿಗಳು
2) ಅಭಿಧಮನಿಗಳು
3) ಲೋಮನಾಳಗಳು
1) ಅಪಧಮನಿಗಳು :-ಹೃತ್ಕುಕ್ಷಿಯ ಸಂಕೋಚನದಿಂದ
ಉಂಟಾದ ಒತ್ತಡದಿಂದ ರಕ್ತ ನಾಳಗಳಿಂದ ಹೃದಯದಿಂದ ದೇಹದ ಭಾಗಗಳಿಗೆ ಹರಿಯುತ್ತದೆ.
2) ಅಭಿಧಮನಿಗಳು :- ಇವು ದೇಹದ ಎಲ್ಲಾ ಭಾಗಗಳಿಂದ
ರಕ್ತವನ್ನು ಹೃದಯಕ್ಕೆ ಒಯ್ಯುತ್ತವೆ. ಇವುಗಳಲ್ಲಿರುವ ಕವಾಟಗಳು ರಕ್ತವು ಹಿಂದಕ್ಕೆ ಹರಿಯುವುದನ್ನು
ತಡೆಯುತ್ತದೆ.
3) ಲೋಮನಾಳಗಳು :- ಅಪಧಮನಿಗಳು ಮತ್ತು ಅಭಿಧಮನಿಗಳನ್ನು
ಸೇರಿಸುತ್ತವೆ, ಇವುಗಳಲ್ಲಿ ಕವಾಟಗಳಿರುವುದಿಲ್ಲ ಇವು ರಕ್ತ ಮತ್ತು ದೇಹದ ಕೋಶಗಳ ನಡುವೆ ವಸ್ತುಗಳ
ವಿನಿಮಯದಲ್ಲಿ ಸಹಾಯಕವಾಗಿವೆ. ಮಾನವನ ದೇಹದಲ್ಲಿರುವ ಲೋಮನಾಳಗಳ ಒಂದು ತುದಿಗೆ ಮತ್ತೊಂದು ತುದಿಯನ್ನು
ಸೇರಿಸಿದರೆ ಭೂಮಿಗೆ ಒಂದೂವರೆ ಸುತ್ತುಗಳನ್ನು ಹಾಕಬಹುದು ಎಂದು ಅಂದಾಜು ಮಾಡಲಾಗಿದೆ (ಭೂಮಿಯ ವ್ಯಾಸ
- 12680 ಕಿಮಿ)
ಹೃದಯ :
* ಮನುಷ್ಯನ ಹೃದಯ ಶಂಖಾಕೃತಿಯ ಒಂದು ಸ್ನಾಯಿಕ
ಅಂಗ ಇದು ಅವರವರ ಮುಷ್ಟಿಗಾತ್ರವಿರುತ್ತದೆ. ಶ್ವಾಸಕೋಶಗಳ ನಡುವೆ ಕಂಡು ಬಂದು ಸ್ವಲ್ಪ ಎಡ ಭಾಗಕ್ಕೆ
ಓರೆಯಾಗಿದೆ.
* ಹೃದಯವು ಹೃದಯಾವರಣ ಅಥವಾ ಪೆರಿಕಾರ್ಡಿಯಂ
ಎಂಬ ಇಪ್ಪದರ ಪೂರೆಯಿಂದ ಆವರಿಸಲ್ಪಟ್ಟಿದೆ
* ಹೃದಯದಲ್ಲಿ 4 ಕೋಣೆಗಳಿವೆ ಮೇಲಿನ ಎರಡು
ಕೋಣೆಗಳು ಹೃತ್ಕರ್ಣಗಳು ಕೆಳಗಿನ ಎರಡು ಕೋಣೆಗಳು ಹೃತ್ಯಕ್ಷಿಗಳೆಂದು ಕರೆಯುತ್ತಾರೆ.
* ಬಲ ಹೃತ್ಕರ್ಣ ಮತ್ತು ಬಲಹೃತ್ಕಕ್ಷಿಗಳ ನಡುವೆ
ತ್ರಿದಳ ಕವಾಟವಿದೆ ಈ ಕವಾಟಗಳು ರಕ್ತವು ಹೃತ್ಯಕ್ಷಿಗಳಿಂದ ಹೃತ್ಕರ್ಣಗಳಿಗೆ ಹರಿವುದನ್ನು ತಡೆಯುತ್ತದೆ.
* ಎಡ ಹೃತ್ಕರ್ಣ ಮತ್ತು ಎಡ ಹೃತ್ಕಕ್ಷಿಗಳ
ನಡುವೆ ದ್ವಿದಳ ಕವಾಟವಿದೆ ಈ ಕವಾಟಗಳ ರಕ್ತವು ಹೃತ್ಕುಕ್ಷಿಗಳಿಂದ ಹೃತ್ಕರ್ಣಗಳಿಗೆ ಹರಿವುದನ್ನು ತಡೆಯುತ್ತದೆ.
* ದೇಹದ ಎಲ್ಲಾ ಭಾಗಗಳಿಂದ ಆಮ್ಲಜನಕ ರಹಿತ
ರಕ್ತವನ್ನು ತರುವ ಊಧ್ರ್ವ ಮತ್ತು ಅಧೋ ಅಭಿದಮನಿಗಳು ಹೃದಯದ ಬಲ ಹೃತ್ಕರ್ಣಕ್ಕೆ ತೆರೆಯುತ್ತದೆ.
* ಶ್ವಾಸಕೋಶಗಳಿಂದ ಆಮ್ಲಜನಕ ಸಹಿತ ರಕ್ತವನ್ನು
ತರುವ ಎರಡು ಪುಪ್ಪುಸಕ ಅಭಿದಮನಿಗಳು ಎಡ ಹೃತ್ಕರ್ಣಕ್ಕೆ ತೆರೆಯುತ್ತದೆ.
* ಶ್ವಾಸಕೋಶಗಳಿಗೆ ಆಮ್ಲಜನಕ ರಹಿತ ರಕ್ತವನ್ನು
ಒಯ್ಯುವ ಪುಸ್ತಕ ಅಪಧಮನಿ ಬಲಹೃತ್ಕುಕ್ಷಿಯಿಂದ ಹೊರಡುತ್ತದೆ.
* ದೇಹದ ಎಲ್ಲಾ ಭಾಗಳಿಗೂ ಆಮ್ಲಜನಕ ಸಹಿತ ರಕ್ತವನ್ನು
ಒಯ್ಯುವ ಮಹಾ ಅಪಧಮನಿ ಎಡ ಹೃತ್ಕುಕ್ಷಿಯಿಂದ ಹೊರಡುತ್ತದೆ.
* ಮಹಾ ಅಪಧಮನಿಯಿಂದ ಹೊರಡುವ ಕರೋನರಿ ಅಪಧಮನಿಯ
ಬಲ ಮತ್ತು ಎಡ ಕವಲುಗಳ ಆಮ್ಲಜನಕ ಸಹಿತ ರಕ್ತವನ್ನು ಹೃದಯದ ಸ್ನಾಯುಗಳಿಗೆ ಒದಗಿಸುತ್ತದೆ.
* ಕರೋನರಿ ಸೈನಸ್ ಎಂಬ ಅಭಿದಮನಿ ಆಮ್ಲಜನಕ
ರಹಿತ ರಕ್ತವನ್ನು ಬಲ ಹೃತ್ಕರ್ಣಕ್ಕೆ ಒಯ್ಯುತ್ತದೆ. ಹೃದಯವು ಬಲಿಷ್ಠವಾದ ಹೃದಯ ಸ್ನಾಯುಗಳಿಂದಾಗಿದೆ.
* ಹೃದಯದ ಹೃತ್ಕರ್ಣ ಮತ್ತು ಹೃತ್ಕಕ್ಷಿಗಳು
ಏಕ ಕಾಲದಲ್ಲಿ ಸಂಕೋಚನ ಮತ್ತು ವಿಕಸನಗಳು ಹೊಂದುತ್ತವೆ.
* ಹೃತ್ಕರ್ಣಗಳು ವಿಕಸನವಾದಾಗ ಅಭಿಧಮನಿಗಳಿಂದ
ಅಮ್ಲಜನಕ ರಹಿತ ರಕ್ತವು ಬಲ ಹೃತ್ಕರ್ಣವನ್ನು ಪುಪುಸಕ ಅಭಿದಮನಿಗಳಿಂದ ಆಮ್ಲಜನಕ ಸಹಿತ ರಕ್ತವು ಎಡ
ಹೃತ್ಕರ್ಣವನ್ನು ತುಂಬುತ್ತದೆ.
* ಹೃತ್ಕರ್ಣಗಳು ಸಂಕೋಚಿಸಿದಾಗ ಬಲ ಹೃತ್ಕರ್ಣದಿಂದ
ಆಮ್ಲಜನಕ ರಹಿತ ರಕ್ತವು ತ್ರಿದಳ ಕವಾಟದ ಮೂಲಕ ಬಲ ಹೃತಕುಕ್ಷಿಗೆ ಹರಿಯುತ್ತದೆ ಮತ್ತು ಎಡ ಹೃತ್ಕರ್ಣದಿಂದ
ಆಮ್ಲಜನಕ ಸಹಿತ ರಕ್ತವು ದ್ವಿದಳ ಕವಾಟದ ಮೂಲಕ ಎಡ ಹೃತ್ಕಕ್ಷಿಗೆ ಹರಿಯುತ್ತದೆ.
* ಹೃತ್ಕುಕ್ಷಿಗಳು ಸಂಕುಚಿಸಿದಾಗ ತ್ರಿದಳ
ಮತ್ತು ದ್ವಿದಳ ಕವಾಟಗಳು ಮುಚ್ಚುತ್ತವೆ ಬಲ ಹೃತ್ಯುಕ್ಷಿಯಿಂದ ಆಮ್ಲಜನಕ ರಹಿತ ರಕ್ತ ಪುಪ್ಪುಸಕ ಅಭಿದಮನಿಗೆ
ಹರಿಯುತ್ತದೆ ಎಡ ಹೃತ್ಕುಕ್ಷಿಯಿಂದ ಆಮ್ಲಜನಕ ಸಹಿತ ರಕ್ತವು ಮಹಾ ಅಪಧಮನಿಗೆ ಹರಿಯುತ್ತದೆ.
* ಹೃದಯ ಸ್ನಾಯುಗಳ ಸಂಕೋಚನ ಕ್ರಿಯೆಗೆ “ಸಿಸ್ಟೋಲ್” ಎಂದೂ ವಿಕಸನ ಕ್ರಿಯೆಗೆ ‘ಡಯಾಸ್ಟೋಲ್’ ಎನ್ನುವರು. ಒಂದು ಸಿಸ್ಟೋಲ್ ಮತ್ತು ಒಂದು ಡಯಾಸ್ಟೋಲ್ ಸೇರಿ
ಒಂದು ಹೃದಯದ ಬಡಿತವಾಗುತ್ತದೆ.
* ಆರೋಗ್ಯವಂತ ಮನುಷ್ಯನ ಹೃದಯದ ಬಡಿತ ನಿಮಿಷಕ್ಕೆ
72 ಸಲ
* ರಕ್ತವು ಒತ್ತಡವನ್ನು ಅಳೆಯುವ ಉಪಕರಣವನ್ನು
“ಸ್ಪಿಗ್ಮೊಮೊನೋ ಮೀಟರ ಎನ್ನುವರು ಇದನ್ನು 1819 ರಲ್ಲಿ ಫ್ರಾನ್ಸ್
ದೇಶದ ರೇನೆ ಲೇನಕ್ ಎನ್ನುವರು ಕಂಡು ಹಿಡಿದರು.
* ಆರೋಗ್ಯವಂತ ವಯಸ್ಕನಲ್ಲಿ ರಕ್ತದ ಒತ್ತಡ
120/80 MmHg
* ಹೃದಯದ ಮಿಡಿತದಷ್ಟೇ ನಾಡಿ ಬಡಿತವಿರುತ್ತದೆ.
ರಕ್ತ ಪರಿಚಲನೆ :-
ದೇಹದಲ್ಲಿ ಒಂದು ಸಂಪೂರ್ಣ ಪರಿಚಲನೆಗೆ ರಕ್ತವು ಎರಡು ಸಲ ಹೃದಯವನ್ನು ಹಾದು ಹೋಗಬೇಕು. ಈ ರೀತಿಯ ಪರಿಚಲನೆಗೆ
ಇಮ್ಮಡಿ ಪರಿಚಲನೆ ಎನ್ನುತ್ತಾರೆ.
1) ಪುಪ್ಪುಸಕ ಪರಿಚಲನೆ
2) ದೈಹಿಕ ಪರಿಚಲನೆ
* ಮೊಟ್ಟಮೊದಲ ಬಾರಿಗೆ ರಕ್ತದ ಒತ್ತಡವನ್ನು
ಅಳೆಯಲು ಪ್ರಯತ್ನಿಸಿದವರು ಸ್ಟೀಫನ ಹಾಲ್ಸ್ (1732)
ಮಾನವನ ದೇಹದಲ್ಲಿ ರಕ್ತ ಪರಿಚಲನೆಯನ್ನು ಕಡು
ಹಿಡಿದವನು ವಿಲಿಯಂ ಹಾರ್ವೇ.
ವಿಸರ್ಜನೆ :
ಮಾನವನ ದೆೀಹದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವಸ್ತುಗಳಾವುವೆಂದರೆ,
CO₂ , ನೀರು, ಲವಣಗಳು ಮತ್ತು ಸಸಾರಜನಕ ಯುಕ್ತವಾದ ಅಮೋನಿಯಾ ಕ್ರೆಟನೈನ್,
ಯೂರಿಯಾ ಮತ್ತು ಯೂರಿಕಾಮ್ಲಗಳು.
* ಕೋಶಗಳು ಅಮಿನೋ ಆಮ್ಲಗಳನ್ನು ಬಳಸಿಕೊಳ್ಳುತ್ತವೆ,
ಹೆಚ್ಚಾದ ಅಮಿನೋ ಆಮ್ಲಗಳು ಕೋಶಗಳಲ್ಲಿ ಶೇಖರವಾದರೆ ವಿಷಯವಸ್ತುಗಳಾಗಿ ಪರಿವರ್ತಿಸುತ್ತವೆ. ಆದ್ದರಿಂದ
ಅವು ರಕ್ತದ ಮೂಲಕ ಯಕೃತಿಗೆ ಸಾಗಿಸಲ್ಪಡುತ್ತದೆ. ಅಲ್ಲಿಯ ಕೋಶಗಳು ಕೆಲವು ಕಿಣ್ವಗಳ ಸಹಾಯದಿಂದ ಅಮೈನೋ
ಆಮ್ಲಗಳನ್ನು ಅಮೋನಿಯಾವಾಗಿ ಪರಿವರ್ತಿಸುತ್ತದೆ. ಇವು ತಕ್ಷಣ ಕಾರ್ಬನ ಡೈ ಆಕ್ಸೈಡನೊಂದಿಗೆ ಸೇರಿ ಯೂರಿಯಾ
ಮತ್ತು ಸ್ವಲ್ಪ ಪ್ರಮಾಣದ ಯೂರಿಕಾಮ್ಲವಾಗಿರುತ್ತದೆ. ಹೀಗೆ ಉತ್ಪತ್ತಿಯಾದ ಯೂರಿಯಾ ಮತ್ತು ಯೂರಿಕಾಮ್ಲಗಳು
ರಕ್ತದಿಂದ ಮೂತ್ರ ಜನಕಾಂಗ ಮತ್ತು ಚರ್ಮಕ್ಕೆ ಸಾಗಿಸಲ್ಪಟ್ಟು ವಿಸರ್ಜಿಸಲ್ಪಡುತ್ತದೆ.
* ಮೂತ್ರ ಜನಕಾಂಗವು ಕಡು ಕಂದು ಬಣ್ಣದ ಹುರುಳಿ
ಬೀಜದ ಆಕಾರದ ಅಂಗಗಳು ಇವು ಉದರಾವಕಾಶದ ಹಿಂಬದಿಯಲ್ಲಿ ಬೆನ್ನು ಮೂಳೆಯ ಅಕ್ಕಪಕ್ಕದಲ್ಲಿವೆ.
* ಪ್ರತಿಯೊಂದು ಮೂತ್ರ ಜನಕಾಂಗದಲ್ಲಿ
10,00,000 ಗಳಷ್ಟು ‘ನೆಪ್ರಾನ್’ ಗಳೆಂಬ ಸೂಕ್ಷ್ಮ ನಳಿಕೆಗಳಿವೆ.
* ನೆಫ್ರಾನ್ ಮೂತ್ರ ಜನಕಾಂಗದ ರಚನಾತ್ಮಕ ಮತ್ತು
ಕಾರ್ಯ ನಿರ್ವಾಹಕ ಘಟಕವಾಗಿದೆ.
* ನೆಫ್ರಾನಿನ ಮುಂಭಾಗವು ಬಟ್ಟಲಿನ ಆಕಾರವಾಗಿದೆ
ಇದನ್ನು ಬೌಮಿನ್ನಿನ ಹೊದಿಕೆ ಎಂದು ಕರೆಯುತ್ತಾರೆ. ಬೌಮಿನ್ನಿನ ಹೊದಿಕೆಯಿಂದ ಮುಂದೆ ನೇಫ್ರಾನಿನ ನಾಳವು
ನುಲಿಚಿಕೊಂಡಿರುತ್ತದೆ. ನಂತರ U ಆಕಾರವಾಗಿದೆ
ಇದನ್ನು ಹೆನ್ಲೆಯ ಕುಣಿಕೆ ಎನ್ನುತ್ತಾರೆ. ನಂತರ ನಾಳ ಮತ್ತೆ ನುಣಚಿಕೊಂಡು ನೆರೆಯ ನೆಫ್ರಾನಗಳಿಂದ
ಬರುವ ಗ್ರಾಹಕ ನಾಳಕ್ಕೆ ಸೇರಿ ಪಿರಮಿಡಗಳ ತುದಿಯಲ್ಲಿರುವ ರೀನಲ್ ಪಲ್ಯಾಡಿಗಳ ಮೂಲಕ ಪೆಲ್ಟಿಸ್‍ಗೆ
ತೆರೆಯುತ್ತದೆ.
* ಬೌಮಿನ್ನಿನ ಹೊದಿಕೆ ಕಾರ್ಟೆಕ್ಸನಲ್ಲಿದೆ.
* ಮೂತ್ರದ ಉತ್ಪಾದನೆ :- ಮೂತ್ರದ ಉತ್ಪಾದನೆಯ
ಈ ಕೆಳಗಿನ ಮೂರು ಹಂತಗಳಲ್ಲಿ ನಡೆಯುತ್ತದೆ.
1. ಗ್ಲಾಮುರುಲಸ್‍ನ ಸೋಸುವಿಕೆ
2. ವ್ಯತ್ತಸ್ಥ ಮರುಹಿರುವಿಕೆ
3. ನಳಿಕಾ ಸ್ರವಿಕೆ
* ರಕ್ತವು ನೆಫ್ರಾನ್‍ಗಳಿಗೆ ಹೆಚ್ಚು ಒತ್ತಡದಿಂದ
ಪ್ರವೇಶಿಸುವುದರಿಂದ ಗ್ಲಾಮರುಲಸನಲ್ಲಿ ರಕ್ತವು ಸೋಸಲ್ಪಡುತ್ತದೆ. ಇದನ್ನು ಗ್ಲಾಮುರುಲಸ್‍ನ ಸೋಸುವಿಕೆ
ಅಥವಾ ಸೂಕ್ಷ್ಮ ಸೋಸುವಿಕೆ ಎನ್ನುತ್ತಾರೆ.
* ಶೋಧಿತ ದ್ರವದಲ್ಲಿರುವ ಉಪಯುಕ್ತ ವಸ್ತುಗಳಾದ
ನೀರು, ಗ್ಲುಕೋಸ, ಅಮೈನೋ ಆಮ್ಲ, ಗ್ಲಿಸರಾಲ್‍ಗಳು, ಸೋಡಿಯಂ, ಪೋಟಾಸಿಯಂ, ಲವಣಗಳು, ವಿಟಮಿನಗಳು ಮತ್ತು
ಹಾರ್ಮೋನಗಳು ಸುತ್ತಲಿನ ಲೋಮನಾಳಗಳಿಂದ ಹೀರಲ್ಪಡುತ್ತದೆ. ಈ ಕ್ರಿಯೆಗೆ ವ್ಯತ್ಯಸ್ಥ ಮರು ಹೀರಿಕೆ ಎಂದು
ಹೆಸರು.
* ರಕ್ತದಿಂದ ಹೀರಿದ ಅನುಪಯುಕ್ತ ವಸ್ತುಗಳಾದ
ಅಮೋನಿಯಂ, ಹೈಡ್ರೋಜನ ಆಯಾನುಗಳು ಮತ್ತು ಯೂರಿಕಾಮ್ಲಗಳನ್ನು ಸ್ರವಿಸುತ್ತದೆ. ಇದನ್ನು ನಳಿಕಾ ಸ್ರವಿಕೆ
ಎನ್ನುತ್ತಾರೆ. ಈ ಹಂತದ ನಂತರ ನಾಳದಲ್ಲಿರುವ ದ್ರವವನ್ನು ಮೂತ್ರ ಎಂದು ಕರೆಯಬಹುದು ಮೂತ್ರದಲ್ಲಿ ನೀರು,
ಯೂರಿಯಾ, ಯೂರಿಕಾಮ್ಲ ಅತಿ ಕಡಿಮೆ ಪ್ರಮಾಣದ ಅಮೋನಿಯಾ ಮತ್ತು ನೀರಿನಲ್ಲಿ ಕರಗುವ ವಿಟಮಿನಗಳೂ ಇರುತ್ತದೆ.
* ಒಂದು ದಿನದಲ್ಲಿ ಮನುಷ್ಯನ ದೇಹದಲ್ಲಿ ಸುಮಾರು
1.5 ಲೀ.ಗಳಷ್ಟು ಮೂತ್ರದ ಉತ್ಪಾದನೆಯಾಗುತ್ತದೆ.
* ಕ್ಯಾಲ್ಸಿಯಂ ಆಕ್ಸಲೈಟ ಲವಣಗಳ ಶೇಖರಣೆಯಿಂದ
ಮೂತ್ರ ಜನಕಾಂಗದಲ್ಲಿ ಕಲ್ಲು ಉಂಟಾಗುತ್ತದೆ.
* ಇತ್ತೀಚಿನ ದಿನಗಳಲ್ಲಿ ಮೂತ್ರ ಕೋಶದಲ್ಲಿನ
ಕಲ್ಲನ್ನು ತೆಗೆಯಲು ಲಿಥೋಟ್ರಿಪ್ಸಿ ಎಂಬ ಶಸ್ತ್ರ ಕ್ರಿಯೆಯಲ್ಲಿ ಲಿಥೋಟ್ರಿಪರ್ ಎಂಬ ಉಪಕರಣದಿಂದ ಕಲ್ಲುಗಳನ್ನು
ಸಣ್ಣ ಚೂರುಗಳಾಗಿ ಒಡೆಯುತ್ತಾರೆ.
* ಮೂತ್ರಜನಕಾಂಗದ ತೊಂದರೆಗಳನ್ನು ‘ಡಯಾಲಿಸಿಸ್’ ಎಂಬ ಚಿಕಿತ್ಸಾ ವಿಧಾನದಿಂದ ಸರಿಪಡಿಸಲಾಗುತ್ತಿದೆ.
ನರವ್ಯೂಹ (Nervous System)
ನರವ್ಯೂಹ ಜೀವಿಗಳ ಎಲ್ಲಾ ಚಟುವಟೆಕೆಗಳನ್ನು
ಸಹ ಭಾಗಿತ್ವ & ನಿಯಂತ್ರಣದಿಂದ ಪರಿಸರದ ಬದಲಾವಣೆಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ. ಅಂದರೆ
ಜೀವಿಗಳು ಪ್ರಚೋದನೆಗೆ ಪ್ರತಿಕ್ರಿಯಿಸಲು ಸಹಕರಿಸುತ್ತದೆ.
ನರವ್ಯೂಹದ ಪ್ರಾಮುಖ್ಯತೆ
* ದೇಹದ ವಿವಿಧ ಅಂಗ & ಅಂಗವ್ಯೂಹಗಳ ಚಟುವಟಿಕೆಗಳನ್ನು
ಸಂಯೋಜಿಸಿ ನಿಯಂತ್ರಿಸುತ್ತದೆ.
* ದೇಹದ ಐಚ್ಚಿಕ ಹಾಗೂ ಅನೈಚ್ಚಿಕ ಚಟುವಟಿಕೆಗಳನ್ನು
ನಿಯಂತ್ರಿಸುತ್ತದೆ.
* ಪರಿಸರ & ಸಂದರ್ಭಕ್ಕನುಗುಣವಾಗಿ ನಾವು
ಹೊಂದಿಕೊಳ್ಳಲು ಸಹಾಯ ಮಾಡುತ್ತದೆ.
* ನಾವು ಆಯೋಚಿಸಿ ವಿವೇಚಿಸಿ ನೆನಪಿಟ್ಟುಕೊಳ್ಳುವಂತೆ
ಮಾಡುತ್ತದೆ.
* ದೇಹದ ಎಲ್ಲಾ ಪರಾವರ್ತಿತ ಕ್ರಿಯೆಗಳನ್ನು
ನಿಯಂತ್ರಿಸುತ್ತದೆ.
ನರವ್ಯೂಹದ ಮೂಲ ಘಟಕ ನರಕೋಶ ಅಥವಾ ನ್ಯೂರಾನ್
* ನ್ಯೂರಾನಗಳಲ್ಲಿ 3 ವಿಧಗಳಿವೆ ಜ್ಞಾನವಾಹಿ
ನ್ಯೂರಾನ್,
ಕ್ರಿಯಾವಾಹಿ ನ್ಯೂರಾನ್ & ಮಿಶ್ರವಾಹಿ
ನ್ಯೂರಾನ್
* ನರವ್ಯೂಹ 3 ಘಟಕಗಳಿಂದ ಕಾರ್ಯನಿರ್ವಹಿಸುತ್ತದೆ.
1) ಗ್ರಾಹಕಗಳು
2) ಕಾರ್ಯನಿರ್ವಾಹಕಗಳು
3) ವಾಹಕಗಳು
1) ಗ್ರಾಹಕಗಳು :- ಪ್ರಚೋದನೆಯನ್ನು ಸ್ವಿಕರಿಸುವ
ಅಂಗವೇ ಗ್ರಾಹಕ
2) ಕಾರ್ಯನಿರ್ವಾಹಕಗಳು :- ಪ್ರತಿಕ್ರಿಯೆಯನ್ನು
ವ್ಯಕ್ತ ಪಡಿಸುವ ಅಂಗಗಳೇ ಕಾರ್ಯನಿರ್ವಾಹಕಗಳು ಉದಾ- ಸ್ನಾಯು ಮತ್ತು ಗ್ರಂಥಿಗಳು
3) ವಾಹಕಗಳು :- ಗ್ರಾಹಕ ಹಾಗೂ ಕಾರ್ಯನಿರ್ವಾಹಕಗಳಿಗೆ
ಸಂಪರ್ಕವೇರ್ಪಡಿಸಿ ಆವೇಗಳನ್ನು ಸಾಗಿಸುವ ಅಂಗಾಂಶವೇ ವಾಹಕಗಳು
* ಕೇಂದ್ರದ ಅಕ್ಷದಲಿರುವ ಮಿದುಳು & ಮಿದುಳಬಳ್ಳಿ
- ಇದು ನರವ್ಯೂಹವಾಗುತ್ತದೆ.
* ಪರಿಧಿಯಲ್ಲಿ ಕಂಡು ಬರುವ ಭಾಗಗಳು- ಅಂದರೆ
ನರಗಳು ಮಿದುಳಿನ ನರಗಳು & ಮಿದುಳು ಬಳ್ಳಿಯಿಂದ ಹೊರಡುವ ಮಿದುಳಿನ ಬಳ್ಳಿನರಗಳು ಇವು ಪರಧಿ
ನರವ್ಯೂಹವಾಗುತ್ತದೆ.
* ಇವುಗಳ ಜೊತೆಗೆ ಅನೈಚ್ಛಿಕ ಅಂಗಗಳ ಜೊತೆ
ಸಂಪರ್ಕಹೊಂದಿ ಸಹಭಾಗಿತ್ವವನ್ನು ನೀಡುವ ನರಗಳ ಜಾಲವನ್ನು ಕಾಣಬಹುದು ಇದು ಸ್ವನಿಯಂತ್ರಕ ನರವ್ಯೂಹ
ಕೇಂದ್ರ ನರವ್ಯೂಹ :-
* ಮಿದುಳು & ಮಿದುಳು ಬಳ್ಳಿಯಿಂದ ಕೂಡಿದೆ.
* ಮಿದುಳು & ಮಿದುಳು ಬಳ್ಳಿಯು 3 ಹೊದಿಕೆಗಳಿಂದ
ಆವರಿಸಲ್ಪಟ್ಟಿದೆ. ಈ ಹೊದಿಕೆಗಳಿಗೆ ಮೆನೆಂಜಿಸ್ ಎನ್ನುವರು
* ಡ್ಯೂರಮೆಟರ್, ಅರಕನೋಯ್ಡ್, ಪಯಾಮೇಟರ್ ಈ
ಹೊದಿಕೆಗಳ ನಡುವೆ ಸೇರಿಬ್ರೋಸ್ಪೈನಲ್ ದ್ರವವಿದೆ ಈ ದ್ರವವು ಮಿದುಳಿನಿಂದ ಮಿದುಳುಬಳ್ಳಿಗೂ ಚಲಿಸುತ್ತಿರುತ್ತದೆ.
* ಮೆನಿಂಜಿಸಗೆ ಸೊಂಕು ತಗುಲಿದಾಗ ಮೆನಿಜೈಟೀಸ್
(ಮೆದಳು ಜ್ವರ) ಉಂಟಾಗುವುದು.
* ಮುಮ್ಮೆದುಳು :- ಇದರಲ್ಲಿ ಮಹಾಮಸ್ತಿಕ
& ಡೈಎನ್‍ಸೆಫಲಾನ್ ಎಂಬ ಭಾಗಗಳಿವೆ ಮಹಾಮಸ್ತಿಷ್ಕ ಮಿದುಳಿನ ಅತ್ಯಂತ ದೊಡ್ಡದಾದ ಭಾಗ
* ಮಹಾಮಸ್ತಿಕವು ಪ್ರಜ್ಞೆಯ ಕೇಂದ್ರವಾಗಿದೆ.
ಇದು ಜ್ಞಾನೇಂದ್ರಿಯದಿಂದ ಸಂದೇಶವನ್ನು ಪಡೆದು ಅವುಗಳ ಮೂಲಕ ಪರಿಸರವನ್ನು ವೀಕ್ಷಿಸಲು ಸಹಕಾರಿಯಾಗಿದೆ.
* ಮಹಾಮಸ್ತಿಷ್ಕ ಜ್ಞಾನೇಂದ್ರಿಯಗಳಿಂದ ಪಡೆದ
ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. & ಬೇಕಾದಾಗ ಅದನ್ನು ಉಪಯೋಸಿಕೊಳ್ಳಬಹುದಾಗಿದೆ.
ಜ್ಞಾಪಕ ಶಕ್ತಿ
ಇದು ಬುದ್ಧಿಶಕ್ತಿಯ ಕೇಂದ್ರವಾಗಿದೆ.
ಡೈಎನ್‍ಸೆಫೆಲಾನ್:-
ಇದನ್ನು ಮೆಲ್ಬಾಗದ ಎಪಿಥಲಾಮಸ್ ಮದ್ಯಭಾಗದ ಥಲಾಮಸ & ಕೆಳಭಾಗದ ಹೈಪೊಥೆಲಾಮಸ್ ಎಂದು ವಿಭಾಗಿಸಬಹುದು.
ಹೈಪೊಥಲಾಮಸ್ ದೇಹದ ಉಷ್ಣತೆ, ನೀರಿನ, ಸಮತೊಲನ ಆಹಾರ, ಅಪೇಕ್ಷೆ ನಿದ್ರೆ ಮುಂತಾದ ಕ್ರಿಯೆಯನ್ನು ನಿಯಂತ್ರಿಸುತ್ತದೆ.
ಅಲ್ಲದೇ ಸ್ವನಿಯಂತ್ರಕ ನರವ್ಯೂಹ
& ಪಿಟ್ಯೂಟರಿ ಗ್ರಂಥಿಯನ್ನು ನಿಯಂತ್ರಿಸುತ್ತದೆ.
ಮಧ್ಯ ಮಿದುಳು:- ಇದು
ನರತಂತುಗಳಿಂದ ಕೂಡಿದ ಮಿದುಳಿನ ಒಂದು ಚಿಕ್ಕಭಾಗ ಇದು ಮುಮ್ಮೆದಳು & ಹಿಮ್ಮೆದುಳಿಗೆ ಸಂಬಂಧ ಕಲ್ಪಿಸುತ್ತದೆ.
ಜೊತೆಗೆ ಸಂದೇಶಗಳನ್ನು ಹಿಮ್ಮೆದುಳಿನಿಂದ ಮುಮ್ಮೆದುಳಿಗೆ ಸಾಗಿಸುತ್ತದೆ ದ್ರಶ್ಯ ಮತ್ತು ಶ್ರವಣಕ್ಕೆ
ಸಂಬಂಧಿಸಿದ ಜೊಡನೆಗಳಿಗುಣುವಾಗಿ ತಲೆ & ಕತ್ತಿನ ಪರಿವರ್ತಿತ ಚಲನೆಗೆ
ಇದು ಕಾರಣ
ಹಿಮ್ಮೆದುಳು :- ಇದರಲ್ಲಿ
ಅನುಮಸ್ತಿಕ ಪ್ಯಾನ್ಸ್ & ಮೆಡುಲ್ಲಾ ಅಬ್ಲಾಂಗೇಟ ಎಂಬ 03 ಭಾಗಳಿವೆ
ಅನಮಸ್ತಿಷ್ಕ:- ಇದು
ಮಿದುಳಿನ ಎರಡನೆ ದೊಡ್ಡಭಾಗ ಇದು ದೇಹದ ಸಮತೊಲನವನ್ನು ಕಾಪಾಡುತ್ತದೆ.
ಪಾನ್ಸ್ :- ಇದು ಅನುಮಸ್ತಿಷ್ಕದ
ಮುಂದೆ ಮಧ್ಯಮಿದುಳಿನ ಕೆಳಗೆ ಮತ್ತು ಮೆಡುಲ್ಲಾ ಅಬ್ಲಾಂಗೇಟ ಮೇಲೆ ಇದೆ ಇದು ಆಹಾರ ಅಗಿಯವುದು, ಮುಖದ
ನರವ್ಯೂಹ ಕೇಂದ್ರ ನರವ್ಯೂಹ ಪರಧಿನರವ್ಯೂಹ ಸ್ವನಿಯಂತ್ರಿಕ ನರವ್ಯೂಹ ಮಿದುಳು ಮಿದುಳು ಬಳ್ಳಿ ಮಿದುಳುನರ
ಮಿದುಳು ಬಳ್ಳಿ ಅನುವೇದನಾವ್ಯೂಹ ಪ್ಯಾರಾ ಅನುವೇದನಾವ್ಯೂಹ ಮುಮೈದಳು ಮಧ್ಯಮೆದಳು ಹಿಮ್ಮೆದುಳು ಮಹಾ
ಮಸ್ತಿಷ್ಕ ಡೈಎನ್‍ಸೆಫಲಾನ್ ಅನುಮಸ್ತಿಷ್ಕ ಫಾನ್ಸ್ ಮೆಡುಲ್ಲಾ ಆಬ್ಲಾಂಗೆಟ್ ಹಾವಭಾವ & ಉಸಿರಾಟ
ಕ್ರಿಯೆಗಳನ್ನು ನಿಯಂತ್ರಿಸುತ್ತದೆ.
ಮೆಡುಲ್ಲಾ ಅಬ್ಲಾಂಗೇಟ:-
ಇದು ಮಿದುಳಿನ ಅತಿ ಹಿಂದಿನ ಭಾಗಗವಾಗಿದೆ. ಮುಂಡದ ಭಾಗದಲ್ಲಿ ಮೆದುಳು ಬಳ್ಳಿಯಾಗಿ ಮುಂದುವರೆಯುತ್ತದೆ.
ಇದು ಅನೈಚ್ಚಿಕ ಕ್ರಿಯೆಗಳಾದ ಉಸಿರಾಟ, ಹೃದಯದ ಬಡಿತ, ಜೀರ್ಣನಾಳದ ಚಲನೆ (ನುಂಗುವುದು, ಕೆಮ್ಮುವದು,
ವಾಂತಿ ಮಾಡುವುದು)ಗಳನ್ನು ನಿಯಂತಿಸುತ್ತದೆ ಅಲ್ಲದೆ,
ಕಿಣ್ವಗಳ ಸ್ರವಿಕೆ & ರಕ್ತದ ಒತ್ತಡದ
ನಿಯಂತ್ರಣಾ ಮುಂತಾದ ಕ್ರಿಯೆಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ.
ಮಿದುಳಿನ ಬಳ್ಳಿ;-
ಮಿದುಳು ಬಳ್ಳಿಯ ಸಿಲಿಂಡರನ ಆಕಾರದಲ್ಲಿದು ಕಶೇರು ಸ್ತಂಭದಲ್ಲಿ ಹಾದು ಹೋಗುತ್ತದೆ. ಇದರಿಂದ 31 ಜೊತೆ
ನರಗಳು ಹೊರಟು ದೇಹದ ನಾನಾ ಭಾಗಗಳಾದ ಹೃದಯ, ಶ್ವಾಸ ಕೋಶಗಳು, ಜಠರ, ಮೆದೋಜೀಠರ ಗ್ರಂಥಿ, ಕರಳು, ಮೂತ್ರಜನಾಗಂಗಳು
& ಜ್ಞಾನೇಂದ್ರಿಯಗಳಲ್ಲಿ ಕವಲೊಡೆದು
ಹರಡಿಕೊಂಡಿದೆ. ಮಿದುಳು ಬಳ್ಳಿಯ ಜ್ಞಾನವಾಹಿ
& ಕ್ರಿಯಾವಾಹಿ ಎಂಬ 2 ಬಗೆಯ ನಿಯಂತ್ರಣಗಳನ್ನು ಹೊಂದಿವೆ
ಸ್ವಯಂ ನಿಯಂತ್ರಕ ನರವ್ಯೂಹ:-
ನಮ್ಮ ಹೃದಯವು ಶ್ವಾಸಕೋಶಗಳು, ಜೀರ್ಣನಾಳ ಮತ್ತು ಇತರ ಒಳ ಅಂಗಗಳು ವಿಶೇಷವಾದ ಪರಧಿ ನರಗಳ ಒಂದು ಗುಂಪಿನ
ಸಂಪರ್ಕಹೊಂದಿವೆ ಈ ನರಗಳಿಗೆ ಒಟ್ಟಾಗಿ ಸ್ವಯಂ ನಿಯಂತ್ರಿಕ ನರವ್ಯೂಹ ಎನ್ನುವರು. ಇದರಲ್ಲಿ ಅನುವೇದನ
ವ್ಯೂಹ ಈ ಪ್ಯಾರಾ ಅನುವೇದನ ವ್ಯೂಹ ಎಂಬ 2 ಭಾಗಗಳಿವೆ.
ಜ್ಞಾನೇಂದ್ರಿಯಗಳು
;- ಕಣ್ಣು, ಕಿವಿ, ಮೂಗು, ನಾಲಿಗೆ & ಚರ್ಮ ಇವು ಐದು ಜ್ಞಾನೇಂದ್ರಿಗಳು
ಮಾನವನ ಮಿದುಳು ಅವಸ್ಥೆ ಸರಾಸರಿ ತೂಕ
1) ಆಗತಾನೆ ಜನಿಸಿದ ಮಗು 350 ಗ್ರಾಂಗಳು
2) 1 ವರ್ಷದ ಮಗು 1000 ಗ್ರಾಂಗಳು
3) ಪ್ರಾಯದ ಗಂಡಸು 1400 ಗ್ರಾಂಗಳು
4) ಪ್ರಾಯದ ಮಹಿಳೆ 1260 ಗ್ರಾಂಗಳು