5. ಪರಿಸರ
* ನಮ್ಮ ಭೂಮಿಯ ಪ್ರಮುಖವಾಗಿ 4 ಗೋಳಗಳಿಂದ ಕೂಡಿದೆ.
1) ವಾಯುಗೋಳ
2) ಜಲಗೋಳ
3) ಶಿಲಾಗೋಳ
4) ಜೀವಗೋಳ
* ಜೀವಗೋಳವು ಜೈವಿಕ ಮತ್ತು ಅಜೈವಿಕ ಅಂಶಗಳ ಪರಸ್ಪರ ಹೊಂದಾಣಿಕೆಯಿಂದ ಜೀವಗಳ ವಾಸಕ್ಕೆ ಯೋಗ್ಯವಾಗಿದೆ. ಇದನೇ ನಾವು ಜೀವಗಳ ಎಂದು
ಕರೆಯುತ್ತೆವೆ
* ಜೀವಗೋಳ ಎಂಬ ಪದವನ್ನು ಮೊಟ್ಟ ಮೊದಲ ಬಾರಿಗೆ 1875 ರಲ್ಲಿ ಎಡುಯಾರ್ಡ್ ಸೂಯಿಸ್ ಎಂಬ ಬ್ರಿಟನ್ನನ ಭೂಗೋಳ ಶಾಸ್ತ್ರಜ್ಞ ಬಳನೆದರು
* ಜೀವಗೋಳವನ್ನು ಈ ಕೆಳಕಂಡಂತೆ ವಿಭಾಗಿಸಬಹುದು.
ಬಯೋಮ-ಪರಿಸರ ವ್ಯವಸ್ಥೆ-ಜೀವ ಸಮುದಾಯ  ಜೀವಿ ಸಂದಣಿ-ಜೀವಿ
ಬಯೋಮ್:-
* ಒಂದೇ ರೀತಿಯ ಹವಾಮಾನ ಪರಿಸ್ಥಿತಿ ಹೊಂದಿರುವ ವಿಶಾಲವಾದ ಭೌಗೋಳಿಕ ಪ್ರದೇಶದಲ್ಲಿರುವ ಪರಿಸರ ವ್ಯವಸ್ಥೆಗೆ ಬಯೋಮ ಎನ್ನುವರು

* ಬಯೋಮಗಳನ್ನು ಎರಡು ವಿಭಾಗಳಾಗಿ ವಿಂಗಡಿಸಲಾಗುತ್ತದೆ.
1) ಭೂ ಬಯೋಮ
2) ಜಲ ಬಯೋಮ

1) ಭೂ ಬಯೋಮ:- ಭೂ ಪ್ರದೇಶದಲ್ಲಿನ ಹವಾಮಾನದ ಪರಿಸ್ಥಿತಿಯನ್ನು ಮತ್ತು ಜೀವವೈವಿಧ್ಯತೆ ಹೊಂದಿರುವಂತಹದ್ಧನೆ ಭೂ ಬಯೋಮ ಎಂದು
ಕರೆಯುತ್ತಾರೆ.
* ಭೂ ಬಯೋಮ್‍ನಲ್ಲಿ ಜೀವಿಗಳ ವೈವಿಧ್ಯತೆ ಮತ್ತು ಹವಾಮಾನಕ್ಕೆ ವ್ಯತ್ಯಾಸಕ್ಕನುಗುಣವಾಗಿ ಈ ಕೆಳಕಂಡಂತೆ ವಿಂಗಡಿಸಬಹುದು.
1) ಉಷ್ಣವಲಯದ ನಿತ್ಯ ಹರಿದ್ವರ್ಣದ ಕಾಡುಗಳು
2) ಸಮಶೀತೋಷ್ಣವಲಯದ ಕಾಡುಗಳು
3) ಹುಲ್ಲುಗಾವಲು ಬಯೋಮಗಳು
4) ಮರುಭೂಮಿ ಬಯೋಮಗಳು
5) ಟಂಡ್ರಾ ಬಯೋಮಗಳು
ಈ ಪ್ರಿಯೊಂದು ಬಯೋಮಗಳು ಭೂ ಬಯೋಮ ಗಳಾಗಿದ್ದರೂ ಕೂಡ ಪ್ರಾಣಿ ಮತ್ತು ಸಸ್ಯಗಳಲ್ಲಿ ವೈವಿದ್ಯತೆ ಇದೆ
ಜಲ ವಯೋಮ:-
* ಜಲರಾಶಿಯಲ್ಲಿರುವ ಜೀವವೈವಿಧ್ಯತೆ ಮತ್ತು ಪರಿಸರವನ್ನು ಒಟ್ಟಾರೆಯಾಗಿ ಪೇರಿಸಿ ಜಲಬಯೋಮ ಎನ್ನುತ್ತಾರೆ.
* ಜಲಬಯೋಮ ಕೂಡ ತಾನು ಕೆಲವು ಪ್ರದೇಶದಲ್ಲಿ ವಿಭಿನ್ನತೆಯಾಗಿದ್ದು. ಜಲಬಯೋಮ್‍ನಲ್ಲಿ ಪ್ರಾಣಿ ವಾಸ ಮಾಡುವ ಆಧಾರದ ಮೇಲೆ ಅಂತಹ
ಪ್ರದೇಶಗಗಳನ್ನು ಈ ಕೆಳಕಂಡಂತೆ ವಿಭಾಗಿಸಲಾಗಿದೆ.
1) ಪ್ಲವಕನಗಳು:- ನೀರಿನ ಮೇಲೆ ತೇಲಾಡುತ್ತಿರುವ ಸೂಕ್ಷಾಣುಗಳು
2) ನೆಕ್ಟಾನಗಳು:- ನೀರಿನಲ್ಲಿ ಈಜಾಡುತ್ತಾ ಚಟುವಟಿಕೆಯಿಂದ ಇರುವ ಪ್ರಾಣಿಗಳು
3) ಬೆಂಧಾಸಗಳು:- ನೀರಿನ ತಳಭಾಗದಲ್ಲಿ ತೇಲಾಡುತ್ತಿರುವ ಪ್ರಾಣಿಗಳು ಜಲ ಬಯೋಮನ್ನ ಸೂರ್ಯನ ಬೆಳಕಿನ ಪ್ರವೇಶದ ಆಧಾರದ ಮೇಲೆ
ಎರಡು ಬಯೋಮ್‍ಗಳಾಗಿ ವಿಂಗಡಿಸಲಾಗಿದೆ.
ಎ) ಧ್ಯುತೀಯ ವಲಯ:- ಈ ವಲಯದಲ್ಲಿ ಸೂರ್ಯನ ಬೆಳಕು ಜಲರಾಶಿಗೆ ತಲುಪುತ್ತದೆ.
ಬಿ) ಅಬೀಸ್:- ಈ ವಲಯದಲ್ಲಿ ಸೂರ್ಯನ ಬೆಳಕು ತಲುಪುವುದಿಲ್ಲ.

ಪರಿಸರ ವ್ಯವಸ್ಥೆ
* ಪರಿಸರವು ವಿಭಿನ್ನವಾದ ಪ್ರಾಣಿಗಳನ್ನು ಒಳಗೋಂಡಿದೆ. ಈ ಪರಿಸರ ವ್ಯವಸ್ಥೆಯನ್ನು ಪ್ರಮುಖ್ಯವಾಗಿ ಎರಡು ವಿಭಾಗಗಳಾಗಿ ವಿಂಗಡಿಸಬಹುದು.
1) ಜೈವಿಕ ಘಟಕ
2) ಅಜೈವಿಕ ಘಟಕ

* ಅಜೈವಿಕ ಘಟಕಗಳು:- ಇವು ಜೈವಿಕ ಘಟಕಗಳಿಗೆ ಸಹಕಾರಿಯಾಗಿವೆ ಹಾಗೂ ಸಂಬಂಧ ಹೊಂದಿವೆ ಅಜೈವಿಕ ಘಟಕಗಳನ್ನವಲಂಬಿಸಿ ಅನೇಕ ಜೀವಿಗಳು
ಜೀವಿಸುತ್ತವೆ.

* ಜೈವಿಕ ಘಟಕಗಳು:- ಇವು ಪರಿಸರದಲ್ಲಿರುವ ಜೀವಿಗಳನ್ನು ಪ್ರತಿನಿಧಿಸುತ್ತದೆ. ಇವುಗಳಲ್ಲಿ ವಿಭಿನ್ನತೆಇದ್ದು ಒಂದು ಜೀವಿಯ, ಮತ್ತೊಂದು
ಜೀವಿಯನ್ನು ಅವಲಂಬಿಸಿವೆ. ಜೈವಿಕ ಘಟಕಗಳನ್ನು 3 ವಿಭಾಗಗಳಾಗಿ ಮಾಡಲಾಗಿದೆ.

1) ಉತ್ಪಾದಕರು:- ಇವು ಪರಿಸರದಲ್ಲಿರುವ ಅಜೈವಿಕ ಘಟಕಗಳನ್ನು ಬಳಸಿಕೊಂಡು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ಜೀವಿಯಾಗಿದೆ. ಇವು
ಎಲ್ಲಾ ಜೀವಿಗೂ ಆಹಾರ ಒದಗಿಸುತ್ತವೆ.
ಉದಾ:- ಸಸ್ಯ

2) ಭಕ್ಷಕರು (ಉಪಯೋಗಿಗಳು) :- ಇವುಗಳು ಉತ್ಪಾದಕರನ್ನು ಆಹಾರಕ್ಕಾಗಿ ಅವಲಂಭಿಸಿರುವವು. ಇವುಗಳಿಗೆ ಆಹಾರ ತಯಾರಿಸಲು ಸಾಧ್ಯವಿಲ್ಲ. ಇವು
ಪರಾವಲಂಬಿಗಳು ಇವುಗಳು ಆಹಾರ ಪಡೆಯುವ ವಿಧಾನವನ್ನು ಆಧರಿಸಿ ಈ ಕೆಳಕಂಡಂತೆ ವಿಭಾಗಿಸಲಾಗುತ್ತದೆ.
1) ಪ್ರಥಮ ಭಕ್ಷಕರು :- (Primary Consumers) ಉತ್ಪಾದಕರನ್ನು ನೇರವಾಗಿ ಭಕ್ಷಿಸುವ ಪ್ರಾಣಿಗಳು, ಇವು ಸಸ್ಯಹಾರಿ ಪ್ರಾಣಿಗಳು
ಉದಾ:- ಹಸು, ಮೊಲ, ಜಿಂಕೆ, ಆನೆ
2) ದ್ವೀತಿಯ (Secondary Consumers) ಇವರು ಪ್ರಾಥಮಿಕ ಭಕ್ಷಕರನ್ನು ತಿಂದು ಬದುಕುವ ಪ್ರಾಣಿಗಳು ಸಾಮಾನ್ಯವಾಗಿ ಮೌಂಸಹಾರಿಗಳು
ಉದಾ:- ಹುಲಿ, ಸಿಂಹ, ಚಿರತೆ, ಕೋಳ, ಕಪ್ಪೆ
3) ತೃತೀಯ ಭಕ್ಷಕರು (Tertiary Consumers) ದ್ವೀತಿಯ ಭಕ್ಷಕರನ್ನು ತಿನ್ನುವ ಪ್ರಾಣಿಗಳು
ಉದಾ:- ಹಾವು, ಕಪ್ಪೆಯನ್ನು ತಿನ್ನುತ್ತದೆ.
4) ಚತುರ್ಥಿ ಭಕ್ಷಕರು (Quartunary Consumers) ತೃತೀಯ ಭಕ್ಷಕರನ್ನು ತಿನ್ನುವ ಪ್ರಾಣಿಗಳು
3) ವಿಘಟಕರು (Decomposers) ಪ್ರಾಣಿಗಳು ಸತ್ತ ನಂತರ ಅವುಗಳ ದೇಹದಲ್ಲಿರುವ ಕಾರ್ಬಾನಿಕ ವಸ್ತುಗಳನ್ನು ವಿಭಜಿಸುವ ಮೂಲಕ ಆಹಾರ ಪಡೆಯುತ್ತವೆ. ಇಂತಹ ಜೀವಿಗಳಿಗೆ ವಿಘಟಕರು ಎನ್ನುವರು.
ಉದಾ:- ಬ್ಯಾಕ್ಟೀರಿಯಾಗಳು ಶಿಲಿಂಧ್ರಗಳು,
ಇವುಗಳ ವಿಘಟನೆಯಿಂದ ಭೂ ರಾಸಾಯನಿಕ ಚಕ್ರಗಳು ಸೃಷ್ಟಿಯಾಗುತ್ತವೆ.

ಆಹಾರ ಸರಪಳಿ (Food Chain)
* ಪರಿಸರದಲ್ಲಿರುವಂತಹ ಜೀವಿಗಳು ಕೆಲವು ಆಹಾರವನ್ನು ತಯಾರಿಸಿದರೆ, ಕೆಲವು ಈ ಜೀವಿಯನ್ನು ಅವಲಂಬಿಸಿವೆ. ಪ್ರಕೃತಿಯಲ್ಲಿ ಒಂದು ಜೀವಿ ಮತ್ತೊಂದು ಜೀವಿಯನ್ನು ಅವಲಂಬಿಸಿ ಜೀವಿಸುತ್ತಿದೆ. ಇದೇ ಆಹಾರ ಸರಪಳಿ

* ಆಹಾರ ಸರಪಳಿಯನ್ನು 3 ವಿಧಗಳಾಗಿ ವಿಂಗಡಿಸಲಾಗುತ್ತದೆ.
1) ಸಸ್ಯಹಾರಿ ಆಹಾರ ಸರಪಳಿ :- ಹಸಿರು ಸಸ್ಯಗಳಿಂದ ಕೂಡಿದ ಸರಪಳಿ ಇದು ಭಕ್ಷಕ ಪ್ರಾಣಿಗಳಿಗೆ ತಲುಪುತ್ತದೆ.
2) ಪರಾವಲಂಬಿ ಆಹಾರ ಸರಪಳಿ :- ಪರಾವಲಂಬಿ ಪ್ರಾಣಿಗಳನ್ನು ಅವಲಂಬಿಸಿರುವ ಪ್ರಾಣಿಗಳು
3) ಕೊಳೆತಿನಿ ಆಹಾರ ಸರಪಳಿ:- ಕೊಳೆತ ದೇಹದಲ್ಲಿರುವ ಕಾರ್ಬಾನಿಕ್ ವಸ್ತುಗಳನ್ನು ಆಹಾರವಾಗಿ ಸೇವಿಸುವ ಪ್ರಾಣಿಗಳು ಪ್ರಾಥಮಿಕ ಸ್ತರದಲ್ಲಿದ್ಧರೆ. ಇಂತಹ ಆಹಾರ ಸರಪಳಿಗೆ ಕೊಳೆತಿನಿ ಆಹಾರ ಸರಪಳಿ ಎನ್ನುತ್ತಾರೆ.
ಕಸ-ಎರೆಹುಳು-ಹಕ್ಕಿಗಳು

ಆಹಾರ ಜಾಲ:- ಪರಿಸರದಲ್ಲಿರುವ ಒಂದು ಜೀವಿಗೆ ಹತ್ತಾರು ಜೀವಿಗಳು ಸಂಬಂಧ ಹೊಂದಿದ್ದು ಅನೇಕ ಆಹಾರ ಸರಪಳಿಗಳು ಉಂಟಾಗುತ್ತವೆ. ಇಂತಹ ಆಹಾರ ಸರಪಳಿಗಳನ್ನು ಒಟ್ಟಾಗಿ ಆಹಾರಜಾಲ ಎಂದು ಕರೆಯುತ್ತಾರೆ.

ಪರಿಸರದ ಪಿರಮಿಡ್‍ಗಳು
* ಪರಿಸರದ ಜೀವಿಗಳು ಒಂದು ಇನ್ನೊಂದನ್ನು ಅವಲಂಬಿಸಿವೆ.
* ಕೆಳಹಂತದಿಂದ ಮೇಲಿನ ಹಂತಕ್ಕೆ ಪ್ರಾಣಿಗಳ ಸಂಖ್ಯೆಯ ಕಡಿಮೆಯಾಗುತ್ತಾ ಹೋಗುತ್ತದೆ. ಇದನ್ನು ಪ್ರತಿನಿಧಿಸುವಂತಹ ಚಿತ್ರವನ್ನೇ ಪರಿಸರದ ಪಿರಮಿಡ್‍ಗಳೆನ್ನುವರು ಈ ಪರಿಸರದ ಪಿರಮಿಡ್‍ಗಳಲ್ಲಿ ಆರಂಭದಲ್ಲಿ ಉತ್ಪಾದಕರಿದ್ಧರೆ ತುದಿಯಲ್ಲಿ ಮೌಂಸಹಾರಿಗಳಿರುತ್ತವೆ.
ತೃತೀಯ ಭಕ್ಷಕರು
ದ್ವೀತಿಯ ಭಕ್ಷಕರು
ಪ್ರಾಥಮಿಕ ಭಕ್ಷಕರು
ಉತ್ಪಾದಕರು

ಪರಿಸರದ ಪಿರಮಿಡ್‍ಗಳನ್ನು 3 ವಿಭಾಗಗಳಾಗಿ ವಿಂಗಡಿಸಲಾಗಿದೆ.
1) ಸಂಖ್ಯಾಪಿರಮಿಡ್
2) ಜೀವರಾಶಿ ಪಿರಮಿಡ್
3) ಶಕ್ತಿ ಪರಿಮಿಡ್
1) ಸಂಖ್ಯಾ ಪಿರಮಿಡ್ :- ಪರಿಸರ ಪಿರಮಿಡ್‍ನಲ್ಲಿ ಬರುವಂತಹ ಪ್ರಾಣಿಗಳನ್ನು ಸಂಖ್ಯೆಗಳ ರೀತಿಯಲ್ಲಿ ಪ್ರತಿನಿಧಿಸುವ ಪರಿಮಿಡನ್ನು ಸಂಖ್ಯಾಪಿರಮಿಡ್
ಎನ್ನುತ್ತಾರೆ. ಇದರಲ್ಲಿ ಎರಡು ವಿಧ
ಎ) ನೇರ ಪಿರಮಿಡ್:- ಇದು ಉತ್ಪಾದಕರಿಂದ ಭಕ್ಷಕರ ಕಡೆಗೆ ಅಂದರೆ ಹೆಚ್ಚು ಸಂಖ್ಯೆಯಿಂದ ಕಡಿಮೆ ಸಂಖ್ಯೆಗೆ ಸಾಗುತ್ತದೆ.
ಬಿ) ತಲೆಕೆಳಗಾದ ಪಿರಮಿಡ್:- ಇದು ಭಕ್ಷಕರ ಕಡೆಯಿಂದ ಉತ್ಪಾದಕರ ಕಡೆಗೆ ಅಂದರೆ ಕಡಿಮೆಯಿಂದ ಹೆಚ್ಚು ಸಂಖ್ಯೆಯೆ ಕಡೆಗೆ ಸಾಗುತ್ತದೆ.

2) ಜೀವರಾಶಿ ಪಿರಮಿಡ್:- ಇದು ಒಂದು ಸ್ತರದಲ್ಲಿ ಕಂಡು ಬರುವ ಜೀವಿಗಳ ಒಟ್ಟು ತೂಕವನ್ನು ತೆಗೆದುಕೊಂಡು ರಚಿಸಿರುವ ಪಿರಮಿಡ್
3) ಶಕ್ತಿ ಪಿರಮಿಡ್:- ಪ್ರತಿಯೊಂದು ಸ್ತರದಲ್ಲಿ ಜೀವಿಗಳಿಗೆ ಒದಗಿಸುವ ಆಹಾರ ಶಕ್ತಿ ಪ್ರಮಾಣ ಆಧರಿಸಿ ರಚಿಸಲಾಗಿರುವ ಪಿರಮಿಡ್ ಜೀವಿಗಳ ಪರಿಸರ ಹೊಂದಾಣಿಕೆ
* ಒಂಟೆಯನ್ನು ಮರುಭೂಮಿಯ ಹಡಗು ಎನ್ನುವರು
* ಒಂಟೆಯ ದಪ್ಪವಾದ ಕೊಬ್ಬಿನಿಂದ ಕೂಡಿದ ದಿಬ್ಬ ಹೊಂದಿದ್ದು, ಅದರಲ್ಲಿರುವ ಕೊಬ್ಬು ಕರಗುವುದರಿಂದ ದಾಹ ಕಡಿಮೆಯಾಗುತ್ತದೆ. ಇದು ಬೆವರಲಾರದು.
* ಮರಳಲ್ಲಿ ನಡೆಯಲು ಉದ್ಧವಾದ ಕಾಲುಗಳನ್ನು ಮೃದುವಾದ ಅಗಲವಾದ ಪಾದಗಳಿವೆ.
* ಪಾಪಸಕಳ್ಳಿ, ಖರ್ಜೂರ, ಕುರುಚಲು ಗಿಡಗಳು, ಜಡೆಕಳ್ಳಿಗಳ ಕಾಂಡಗಳು ದಪ್ಪಾಗಿದ್ಧು, ಮುಳ್ಳಿನಿಂದ ಕೂಡಿರುತ್ತದೆ. ಇವುಗಳಿಗೆ ನೀರು ಸಂಗ್ರಹಿಸುವ ಸಾಮಥ್ರ್ಯ ಇರುತ್ತದೆ. ವಾಯು ಜೀವನಕ್ಕೆ ಹೊಂದಾಣಿಕೆ
* ಪಕ್ಷಿಗಳು ಹಾಗೂ ಬಾವಲಿಗಳಿಗೆ ಗಾಳಿಯಲ್ಲಿ ಹಾರಲು ರೆಕ್ಕೆಗಳಿವೆ.
* ಪಕ್ಷಿಗಳು ಟೊಳ್ಳಾದ ಮೂಳೆಗಳನ್ನು ಹೊಂದಿವೆ ಇಂತಹ ಮೂಳೆಗಳಿಗೆ ವಾಯುವಿಕ ಮೂಳೆಗಳೆನ್ನುವರು.
* ಗಾಳಿಯನ್ನು ಸೀಳಿ ಚಲಿಸುವ ಅನುಕೂಲವಿದೆ.
* ಬಲವಾದ ಸ್ನಾಯುಗಳುಳ್ಳೆ ರೆಕ್ಕೆಗಳನ್ನು ಹೊಂದಿರುವುದರಿಂದ ಸಾವಿರಾರು ಮೈಲಿ ವಲಸೆ ಹೋಗಲು ಸಾಧ್ಯವಾಗುತ್ತದೆ.

ಕಣ್ಣು:- ದೂರದ ವಸ್ತಗಳ ವೀಕ್ಷಣೆಗಾಗಿ ತೀಕ್ಷಣವಾದ ಕಣ್ಣು ದೃಷ್ಟಿ ಇರುತ್ತದೆ.
ಗರಿ:- ಚಳಿ, ಮಳೆ, ಬಿಸಿಲಿನಿಂದ ರಕ್ಷಣೆ ಹೊಂದಲು ತೈಲಯಕ್ತವಾದ ಗರಿಗಳನ್ನು ಹೊಂದಿವೆ.
ಕಾಲು:- ವಸ್ತುಗಳನ್ನು ಬಲವಾಗಿ ಹಿಡಿಯಲು ಅನುಕುಲವಾಗುವ ಪಂಚೆಯುಳ್ಳ ಕಾಲುಗಳಿವೆ.

ಭೂ ಜೀವನಕ್ಕೆ ಹೊಂದಾಣಿಕೆ:-
* ಬಿಲಗಳಲ್ಲಿ ವಾಸಿಸಲು ಹಾವು ಹಲ್ಲಿಗಳಿಗೆ ಉದ್ಧವಾದ ಕಿರಿದಾದ ದೇಹವಿರುತ್ತದೆ. ಹಾಗೂ ಕೆಲವು ಜೀವಿಗಳಿಗೆ ಕಾಲು ಇರುವುದಿಲ್ಲ.
* ಮೊಲವು ಅಗಲವಾದ ಕಿವಿಯನ್ನು ಹೊಂದಿದ್ಧು, ಈ ಮೂಲಕ ದೇಹದ ಹೆಚ್ಚಿನ ಉಷ್ಣಾಂಶವನ್ನು ಹೊರಹಾಕುತ್ತದೆ.

ಹಿಮ ಪ್ರದೇಶಕ್ಕೆ ಹೊಂದಾಣಿಕೆ:-
* ಹಿಮಕರಡಿ, ಹಿಮಸಾರಂಗ, ಹಿಮನಾಯಿಗಳು ಹಿಮಪ್ರದೇಶದ ಶೀತವನ್ನು ತಡೆಯಲು ದಪ್ಪ ಚರ್ಮ & ದಟ್ಟ ಕೂದಲನ್ನು ಹೊಂದಿರುತ್ತದೆ.

ಜಲ ಜೀವನಕ್ಕೆ ಹೊಂದಾಣಿಕೆ :-
* ನೀರಿನಲ್ಲಿ ವಾಸಿಸಲು ಮೀನು & ತಿಮಿಂಗಲಗಳಿಗೆ ದೋಣಿಯಾಕಾರದ ದೇಹವಿದೆ.
* ಮೀನುಗಳು ನೀರಿನಲ್ಲಿ ಚಲಿಸಲು ಈಜು ರೆಕ್ಕೆಗಳನ್ನು ಹೊಂದಿದೆ. ದೇಹದ ಮೇಲೆ ಹುರುಪುಗಳಿವೆ. ನೀರನ್ನು ಬಾಯಿಯಿಂದ ಹೀರಿಕೊಂಡು ಕಿವಿರಿನ
ಮೂಲಕ ನೀರನ್ನು ಹೊರಹಾಕುವಾಗ ನೀರಿನಲ್ಲಿರುವ ಆಮ್ಲಜನಕವನ್ನು ಹೀರಿಕೊಳ್ಳುತ್ತದೆ. ಆದುದ್ಧರಿಮದ ಕಿವಿರುಗಳು ಮೀನಿನ ಉಸಿರಾಟದ ಅಂಗಗಳಾಗಿವೆ.
* ಕಪ್ಪೆಗಳು, ಬಾತುಕೋಳಿಗಳು ಈಜಲು ಜಾಲಪಾದ ಹೊಂದಿವೆ.
* ಬಾತುಕೋಳಿಗಳು ನೀರಿನಲ್ಲಿ ಆಹಾರ ಹಿಡಿಯಲು ಉದ್ಧನೆಯ ಕೊಕ್ಕನ್ನು ಹೊಂದಿವೆ.
* ಕಪ್ಪೆಗಳು ಆಹಾರವನ್ನು ಹಿಡಿಯಲು ನಾಲಿಗೆಯಲ್ಲಿ ಅಂಟನ್ನು ಹೊಂದಿವೆ. ಶತ್ರಗಳಿಂದ ರಕ್ಷಣೆಗಾಗಿ

ಪರಿಸರದಲ್ಲಿ ಹೊಂದಾಣಿಕೆ:-
* ಜಿಂಕೆ ಹಾಗೂ ಮೊಲಗಳು ಶತ್ರುಗಳಿಂದ ತಪ್ಪಿಸಿಕೊಳ್ಳಲು ವೇಗವಾಗಿ ಓಡುತ್ತವೆ.
* ಆಮೆಗಳು ಗಟ್ಟಿಯಾದ ಮತ್ತು ದಪ್ಪ ಕವಚವನ್ನು ಹೊಂದಿದ್ದು ಶತ್ರುಗಳಿಂದ ರಕ್ಷಿಸಿಕೊಳ್ಳುತ್ತವೆ.
* ಕೆಮಿಲಿಯನ್, ಕಟಲ್ ಮೀನು & ಅಕ್ಟೋಪಸನಲ್ಲಿ ಆಗುವ ಬಣ್ಣ ಬದಲಾವಣೆಗಳು ಶತ್ರುಗಳಿಂದ ರಕ್ಷಣೆ ನೀಡುತ್ತವೆ.
* ಸ್ಟಿಕ್ ಇನ್‍ಸೆಕ್ಟ್ ಮತ್ತು ಲೀಪ್ ಇನ್‍ಸೆಕ್ಟಗಳು ಕ್ಯಾಮೊಪ್ಲೆಜ್ ಎಂಬ ಹೊಂದಾಣಿಕೆ ಹೊಂದಿದ್ಧು, ಇವು ತಾವು ವಾಸಿಸುವ ಸನ್ನಿವೇಶವನ್ನು ಹೋಲುವ ಬಣ್ಣ ಹೊಂದುತ್ತವೆ.
* ಕೆಲವು ಕೀಟಗಳು ದುಗಂಧ ವಾಸನೆಯಿಂದ ರಕ್ಷಿಸಿಕೊಳ್ಳುತ್ತವೆ.
* ಬೊಂಬಾಡಿರಯರ್ ಜೇನು ನೋಣಗಳು ತಮ್ಮ ಆತ್ಮರಕ್ಷಣೆಗಾಗಿ ಶತ್ರುವಿನ ಮೇಲೆ & ಬೇಟೆಯಾಡಲು 30 ಸೆಂ.ಮೀ ದೂರದವರೆಗೂ ಎರುಚುವ ರಾಸಾಯನಿಕ ವಸ್ತುವನ್ನು ಹೊರಹಾಕುತ್ತವೆ.

ದ್ರವ ಪ್ರದೇಶಕ್ಕೆ ಹೊಂದಾಣಿಕೆ:-
* ಪೆಂಗ್ವಿನ್ ಪಕ್ಷಿಯ ಚರ್ಮದಡಿ ಕೊಬ್ಬಿನ ಪದರವಿದ್ದು ಇದು ಚಳಿಯನ್ನು ತಡೆದುಕೊಳ್ಳುವ ಸಾಮಾಥ್ರ್ಯ ಹೊಂದಿದೆ.

ಪರ್ವತ ಪ್ರದೇಶಕ್ಕೆ ಹೊಂದಾಣಿಕೆ:-
* ಯಾಕ್ & ಲಾಮಾ ಪ್ರಾಣಿಗಳು ಪರ್ವತ ಪ್ರದೇಶದಲ್ಲಿ ವಾಸಿಸಲು ಅನುಕೂಲವಾಗುವಂತೆ ದಟ್ಟವಾದ ಕೂದಲಿನ ದೇಹವನ್ನು ಹೊಂದಿವೆ.