7. ಕುಟುಂಬ ಮತ್ತು ಸಾರಿಗೆ
ಕುಟುಂಬ
1. ಅರ್ಥ
2. ಕುಟುಂಬದ ಲಕ್ಷಣಗಳು
3. ಕುಟುಂಬದ ಹುಟ್ಟು
4. ಬೆಳವಣಿಗೆ
5. ವಿಧಗಳು
6. ಸಂಬಂಧಗಳು

ಕುಟುಂಬ
* ಸಮಾಜದ ಅತಿ ಚಿಕ್ಕ ಹಾಗೂ ಅನಿವಾರ್ಯವಾದ ಘಟಕ ಎಂದರೆ, ಕುಟುಂಬ
* ಸಾಮಾನ್ಯವಾಗಿ ಕುಟುಂಬವನ್ನು ಸಂಸಾರವೆಂದೇ ಕರೆಯಲಾಗುವುದು
* ಮಾನವನು ತನ್ನ ಜೀವನವನ್ನು ಸುಗಮವಾಗಿಸಲೆಂದು ಕುಟುಂಬ ನಿರ್ಮಿಸಿಕೊಂಡಿದ್ದಾನೆ.
* ಕುಟುಂಬವು ಸಮಾಜದ ಅತಿ ಚಿಕ್ಕ ಘಟಕ
* ಕುಟುಂಬಗಳ ಸಮೂಹವೇ ಸಮಾಜಕ್ಕೆ ಆಧಾರ
* ಕುಟುಂಬ ಸಮೂಹದ ಪ್ರಮುಖ ಅಂಗ ಸಂಸ್ಥೆಯಾಗಿದೆ.
* ಕುಟುಂಬ ಬಹುಪುರಾತನ ಪಾರಂಪರಿಕ ಸಂಸ್ಥೆ.

ಕುಟುಂಬದ ಅರ್ಥ
ಕುಟುಂಬ (ಪ್ಯಾಮಿಲಿ) ಎಂಬ ಪದವು ಲ್ಯಾಟಿನ ಭಾಷೆಯ ಫ್ಯಾಮುಲಸ್ನಿಂದ ಉಗಮವಾಗಿದೆ. ತಾಯಿ-ತಂದೆಯರ ನಡುವೆ ಉಂಟಾಗುವ ಸಂಬಂಧಗಳ
ವ್ಯವಸ್ಥೆಯನ್ನು ಕುಟುಂಬ ಎನ್ನುತ್ತಾರೆ.
ಕುಟುಂಬವೆಂದರೆ, ಮಾನವರಲ್ಲಿ ರಕ್ತ ಸಂಬಂಧ ಹೊಂದಾಣಿಕೆ ಅಥವಾ ಸಹವಾಸದಿಂದ ಒಟ್ಟಾಗಿರುವ ಒಂದು ಗುಂಪು ಎಂದು ಹೇಳಬಹುದು. ಬಹಳಷ್ಟು ಸಂದರ್ಭಗಳಲ್ಲಿ ಮಕ್ಕಳು ಜನರೊಂದಿಗೆ ಬೆರೆತು ಸಾಮಾಜಿಕವಾಗಿ ಸಮರ್ಥರಾಗಲು ಕುಟುಂಬ ಒಂದು ಅಗತ್ಯ ಸಂಸ್ಥೆಯಾಗಿ ನಿಲ್ಲುತ್ತದೆ.

ಕುಟುಂಬದ ಆಧಾರಗಳು
ಮಾತೃಪ್ರೇಮ
ಪಿತೃವಾತ್ಸಲ್ಯ
ಪತಿ ಪತ್ನಿಯರ ಅನುರಾಗ
ಮಕ್ಕಳನ್ನು ಪಡೆದು ಪಾಲನೆ, ಪೋಷಣೆ ಮಾಡಬೇಕೆಂಬ ಅಭಿಲಾಷೆ ಈ ಎಲ್ಲಾ ಭಾವನೆಗಳೇ ಕುಟುಂಬಕ್ಕೆ ಆಧಾರಗಳು

ಕುಟುಂಬದ ಲಕ್ಷಣಗಳು
ಸಾರ್ವತ್ರಿಕವಾದ ವ್ಯವಸ್ಥೆಯಾಗಿದೆ ಸಾಮಾಜಿಕ ಎಲ್ಲಾ ವ್ಯವಸ್ಥೆಗೂ ಕೇಂದ್ರವಾಗಿದೆ ಕುಟುಂಬಗಳಿಂದಲೇ ನೆರೆ ಹೊರೆ, ಗ್ರಾಮ, ನಗರ, ರಾಷ್ಟ್ರ ನಿರ್ಮಾಣಗೊಂಡಿದೆ. ಸಾಮಾಜಿಕ ಹೊಣೆಗಾರಿಕೆಯನ್ನು ತಿಳಿಸುತ್ತದೆ. ಸಹಕಾರದ ಅವಶ್ಯಕತೆಯನ್ನು ತಿಳಿಸುತ್ತದೆ. ಸಮಾಜದ ನೈತಿಕ ನಿಯಮಗಳು, ವರ್ತನೆಗಳನ್ನು ಕುಟುಂಬವು ಯಂತ್ರಿಸುತ್ತದೆ.
ಕುಟುಂಬವು ಸರ್ವವ್ಯಾಪಿ, ಶಾಶ್ವತ ಹಾಗೂ ಪರಂಪರಾಗತ ಘಟಕವಾಗಿದೆ.

ಕುಟುಂಬದ ಹುಟ್ಟು
ಮನುಷ್ಯ ಆಹಾರ ಸಂಗ್ರಹಣೆ, ಸಂರಕ್ಷಣೆ ಮತ್ತು ಸಂಸ್ಕರಣೆ ಕಲಿತ ನಂತರ ಕುಟುಂಬ ಪದ್ಧತಿ ಹುಟ್ಟಿಕೊಂಡಿರಬಹುದು ಎಂಬುದು ಒಂದುವಾದ ಪೂರ್ವದಲ್ಲಿ ಮನುಷ್ಯ ಆಹಾರ ಬೇಕಾದಾಗ ಮಾತ್ರ ಹುಡುಕಿ ಅಥವಾ ಭೇಟೆಯಾಡಿ ತಿನ್ನುತ್ತಿದ್ದ. ಎಲ್ಲೆಂದರಲ್ಲಿ ಮಲಗುತ್ತಿದ್ದ, ಅತ್ಯಂತ ಸಹಜವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದ, ಆಹಾರವನ್ನು ಸಂಗ್ರಹಿಸಿ, ಸಂರಕ್ಷಿಸಲು ಕಲಿತ ಮೇಲೆ ಬಹುಶ: ಒಂದು ನೆಲೆಯನ್ನು ಕಂಡುಕೊಳ್ಳುವುದು ಅವಶ್ಯಕವಾಯಿತು. ಹೀಗೆ ಒಂದು ಜಾಗವನ್ನು ‘ಮನೆಎಂದು ಗುರುತಿಸಿಕೊಂಡ ಮೇಲೆ, ಲೈಂಗಿಕ ತೃಪ್ತಿಗಾಗಿ ಸಂಗಾತಿಯನ್ನು ಅರಸುವುದರ ಬದಲು ಸಂಗಾತಿಯೊಡನೆ ಒಪ್ಪಂದ ಮಾಡಿಕೊಂಡ.
ಹೀಗೆ ಕುಟುಂಬದ ಮೊದಲ ಕಲ್ಪನೆ ಹುಟ್ಟಿತ್ತೆನ್ನಬಹುದು.

ಕುಟುಂಬಗಳ ಬೆಳವಣಿಗೆ
ಹೀಗಿರುವ ಒಂದು ಕುಟುಂಬದಲ್ಲಿ ಹಲವಾರು ಗಂಡು-ಹೆಣ್ಣು ಒಟ್ಟಿಗೆ ಇರುತ್ತಿದ್ದರು. ಹುಟ್ಟು ಮಕ್ಕಳಿಗೆ ತಾಯಿಯಾರೆಂದು ತಿಳಿದಿದ್ದರೂ ತಂದೆಯ ಬಗ್ಗೆ ನಿಖರ ಮಾಹಿತಿಯಿರಲಿಲ್ಲ. ಕ್ರಮೇಣ ಈ ಗುಂಪಿನ ಸಂಖ್ಯೆ ಬೆಳೆದ ಹಾಗೆ ಹಲವು ಗಂಡು ಹಲವು ಹೆಣ್ಣು, ಹಲವು ಗಂಡು - ಒಂದು ಹೆಣ್ಣು, ಒಂದು ಗಂಡು-ಹಲವು ಹೆಣ್ಣು, ಹೀಗೆ ಕುಟುಂಬಗಳು ಸೃಷ್ಟಿಯಾದವು. ಇವುಗಳಲ್ಲಿ ಕೊನೆಯ ಎರಡು ಬಗೆಯವು ಸ್ಥಿರಗೊಂಡವು. ಬಹುಶ: ಹೆಣ್ಣಿನ ಬಸಿರು-ಬಾಣಂತನದ ಅಸಹಾಯಕತೆ ಈ ರೀತಿಯ ಬೆಳವಣಿಗೆ ಪೂರಕವಾಗಿರಬಹುದು. ಇತ್ತೀಚಿಗೆ ಬಹುಪತ್ನಿತ್ವವು ನಶಿಸಿ ಈಗಿರುವ ಕುಟುಂಬ ಸೃಷ್ಠಿಯಾಗಿದೆ.

ಕುಟುಂಬದ ಪ್ರಕಾರಗಳು
ಮಾತೃ ಪ್ರಧಾನ ಕುಟುಂಬ, ತಾಯಿಯೇ ಕುಟುಂಬದ ಯಜಮಾನಿ, ಅವಳ ನಂತರ ಹಿರಿಯಮಗಳೇ ಯಜಮಾನಿ, ಆಸ್ತಿಯ ಹಕ್ಕು, ಹೆಣ್ಣು ಮಕ್ಕಳಿಗೆ ಹಂಚಲಾಗುವುದು, ಪುರಾತನ ಕಾಲದಲ್ಲಿ ಜಾರಿಯಲ್ಲಿತ್ತು, ಭಾರತದ ಕೇರಳ ರಾಜ್ಯ ದಮಲಬಾರನ ನಾಯರ್ಹಾಗೊ ಈಶಾನ್ಯ ರಾಜ್ಯಗಳ ಆದಿವಾಸಿ ಸಮುದಾಯಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಆಸ್ತಿತ್ವದಲ್ಲಿದೆ.

ಪಿತೃಪ್ರಧಾನ ಕುಟುಂಬ
ತಂದೆಯೇ ಕುಟುಂಬದ ಯಜಮಾನ, ತಂದೆಯ ನಂತರ ಹಿರಿಯ ಮಗನೇ ಯಜಮಾನ ಆಸ್ತಿಯು ಗಂಡು ಮಕ್ಕಳಿಗೆ ಹಂಚಲಾಗುವುದು. ಗಂಡಸರು ದುಡಿದು ಮನೆಯವರನ್ನು ಸಾಕಿ ಸಂರಕ್ಷಿಸುತ್ತಾರೆ. ಪ್ರಾಚೀನ ಭಾರತ, ಚೀನಾ, ರೋಮ್, ಈಜಿಪ್ಟದಲ್ಲಾದ ದೇಶಗಳಲ್ಲಿ ಹಿಂದಿನಿಂದಲೂ ಅಸ್ತಿತ್ವದಲ್ಲದ್ದು ಈಗಲೂ ಮುಂದುವರೆದುಕೊಂಡು ಬರುತ್ತಿದೆ.

ವಿಭಕ್ತ ಕುಟುಂಬ
ಕುಟುಂಬದ ರಚನೆ ಮತ್ತು ಅದರಲ್ಲಿ ವಾಸಿಸುವ ಪೀಳಿಗೆಗಳ ಸಂಖ್ಯೆಯನ್ನಾಧರಿಸಿ ಕೇಂದ್ರ ಮತ್ತು ವಿಸ್ತøತ ಕುಟುಂಬ ಎಂದು ವರ್ಗೀಕರಿಸಲಾಗುತ್ತದೆ. ಔದ್ಯೋಗಿಕ ಕ್ರಾಂತಿಯಿಂದಾಗಿ ಜನರ ವಲಸೆ ಹೆಚ್ಚಾದಂತೆಲ್ಲ ದೊಡ್ಡ ಕುಟುಂಬಗಳು ಒಡೆಯಲಾರಂಭಿಸಿದವು. ಆಗ ದಂಪತಿ ಮಕ್ಕಳ ವಿಭಕ್ತ ಕುಟುಂಬ ಹುಟ್ಟಿಕೊಂಡಿತು. ತಂದೆ, ತಾಯಿ ಅವರ ಅವಿವಾಹಿತ ಮಕ್ಕಳು ಮಾತ್ರ ಸದಸ್ಯರಾಗಿರುವ ಕುಟುಂಬವನ್ನು ಕೇಂದ್ರ ಕುಟುಂಬ ಎನ್ನುತ್ತೇವೆ. ಕೇಂದ್ರ ಕುಟುಂಬವನ್ನು ಮೂಲ ಕುಟುಂಬ, ವೈಯಕ್ತಿಕ ಕುಟುಂಬ, ಆಧುನಿಕ ಕುಟುಂಬ ವಿಭಕ್ತ ಕುಟುಂಬ ಎಂದು ಕರೆಯುತ್ತಾರೆ.

ವಿಭಕ್ತ / ಕೇಂದ್ರ ಕುಟುಂಬದ ಲಕ್ಷಣಗಳು
ಆಧುನಿಕತೆ, ಸಂಕೀರ್ಣತೆ, ಚಿಕ್ಕಗಾತ್ರ, ಸಡಿಲ ಸಮಾಜಿಕ, ನಿಯಂತ್ರಣ ಸದಸ್ಯರ ಹೆಚ್ಚಿನ ಸ್ವಾತಂತ್ರ್ಯ, ವಿಭಕ್ತ ಕುಟುಂಬಗಳು ಹೆಚ್ಚಾಗಲುಕಾರಣಗಳು ವೈಯಕ್ತಿಕತೆ ಮತ್ತು ವೈಯಕ್ತಿಕ ಸುಖ ಸ್ವಯಂತೃಪ್ತಿ ಆಸ್ತಿಯ ಹಕ್ಕು ಬದಲಾದ ಸಾಮಾಜಿಕ ಮೌಲ್ಯಗಳು ಭೌಗೋಳಿಕ ಹಾಗೂ ಸಾಮಾಜಿಕ ಸಂರಚನೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅಭಿವೃದ್ಧಿ ಕೈಗಾರಿಕೀಕರಣ ನಗರೀಕರಣ ಪ್ರಜಾಸತ್ತಾತ್ಮಕ ಹಾಗೂ ಸಮಾನತೆಯ ತತ್ವಗಳು ಧಾರ್ಮಿಕ ಪ್ರಭಾವದ ಕುಗ್ಗುವಿಕೆ ಮತ್ತು ಲೌಕಿಕ ಮನೋಭಾವದವ್ಯಾಪಕ ಪ್ರಸಾರ ಸ್ತ್ರೀಸ್ವಾತಂತ್ರ್ಯ

ಅವಿಭಕ್ತ ಕುಟುಂಬ
ಕುಟುಂಬದಲ್ಲಿ ಕನಿಷ್ಠ ಮೂರು ತಲೆಮಾರಿನ ಜನರಿರುವುದಕ್ಕೆ ಅವಿಭಕ್ತ ಕುಟುಂಬ ಎನ್ನುವರು
ಹಿರಿಯ ಪೋಷಕರು (Grand Parents) ಒಂದು ತಲೆಮಾರು
ಪೋಷಕರು (Parents) ಎರಡನೇ ತಲೆಮಾರು
ಮಕ್ಕಳು-ಮೂರನೇ ತಲೆಮಾರು
ಒಂದೇ ಕಡೆಯಲ್ಲಿ ಅನೇಕ ದಂಪತಿಗಳು ಇರುವಂತಹ ಕುಟುಂಬ
ಸಾಮಾನ್ಯವಾಗಿ ಹಿರಿಯರೊಬ್ಬರು ಇದಕ್ಕೆ ಯಜಮಾನರಾಗಿರುತ್ತಾರೆ.
ಒಂದೇ ಮನೆಯಲ್ಲಿ ವಾಸಿಸುವ, ಒಂದೇ ಕಡೆ ಮಾಡಿದ ಅಡುಗೆಯ್ನು ಊಟ ಮಾಡುವ ಸಮಾನವಾದ ಆಸ್ತಿಯ ಹಕ್ಕನ್ನು ಹೊಂದಿರುವ ನಿರ್ಧಿಷ್ಟ ರಕ್ತ ಸಂಬಂಧಿಗಳಿಂದ ಪರಸ್ಪರ ಸಂಬಂಧಗಳಾಗಿರುವ ಜನರ ಗುಂಪೇ ಅವಿಭಕ್ತ ಕುಟುಂಬ

ಅವಿಭಕ್ತ ಕುಟುಂಬದ ಲಕ್ಷಣಗಳು
ದೊಡ್ಡಗಾತ್ರ
ಆಸ್ತಿಯ ಹಕ್ಕು
ವಾಸಸ್ಥಳ
ಅಡುಗೆಮನೆ
ಧರ್ಮ
ಸ್ವಯಂಪೂರ್ಣತೆ
ಅಧಿಕಾರದ ಹಂಚಿಕೆ
ಏಕಪೋಷಕ ಕುಟುಂಬ
ವಿದೇಶಿ ಸಂಸ್ಕೃತಿಯ ಪ್ರಭಾವ, ಹೆಚ್ಚುತ್ತಿರುವ ವಿಚ್ಛೇದನಗಳಿಂದಾಗಿ ಏಕ ಪೋಷಕ ಕುಟುಂಬಗಳು ಹುಟ್ಟಿಕೊಳ್ಳುತ್ತಿವೆ.
ಹೆಚ್ಚಿನ ಸಂದರ್ಭಗಳಲ್ಲಿ ತಾಯಿ ಮಗುವಿನ ಕುಟುಂಬವೇ ನಿರ್ಮಾಣವಾಗುತ್ತದೆ.

ಕುಟುಂಬದ ಸಂಬಂಧಗಳು
ಮೊದಲಿಗೆ ತಾಯಿ-ಮಗುವಿನ ಸಂಬಂಧವೊಂದೇ ಮೂಡಿತ್ತು. ಕುಟುಂಬದ ಪರಿಕಲ್ಪನೆ ಬರುವ ವರೆಗೂ ಬೇರೆ ಯಾವ ಸಂಬಂಧಗಳೂ ಇರಲಿಲ್ಲ. ಲೈಂಗಿಕ ಕ್ರಿಯೆ ಸಹಜವಾಗಿದ್ದರಿಂದ ತಂದೆ ಅಪ್ರಸ್ತುತನಾಗಿದ್ದ.ಕುಟುಂಬದ ನಿರ್ಮಾಣದೊಂದಿಗೆ ಗಂಡ-ಹೆಂಡತಿ ಸಂಬಂಧ ತಂದೆ, ತಾಯಿ, ಮಕ್ಕಳ ಸಂಬಂಧವಾಯಿತು
ಮುಂದೆ ಸಹೋದರನ ಸಂಬಂಧವಾಯಿತು.
ಈ ತಂದೆ-ತಾಯಿ-ಸಹೋದರ(ರಿ) ಸಂಬಂಧವೇ ಮೂಲ ಸಂಬಂಧ. ಉಳಿದ ಎಲ್ಲಾ ಸಂಬಂಧಗಳು ಈ ಮೂಲ ಸಂಬಂಧಗಳ ಮೇಲೆಯೇ ಟಿಸಿಲೊಡೆದವು.
ವಿವಾಹ ಸಂಸ್ಥೆಯ ಉಗಮದೊಂದಿಗೆ ಸಂಬಂಧಗಳು ಸಂಕೀರ್ಣ ವಾಗತೊಡಗಿದವು.

ಸಾರಿಗೆ
ಭಾರತದ ಭೂ ಸಾರಿಗೆ
ಮಾನವನ ನಾಗರಿಕತೆ ಬೆಳೆದಂತೆ ಸಾರಿಗೆ ವ್ಯವಸ್ಥೆ ಬೆಳೆಯುತ್ತಾ ಬಂದಿದೆ. 20ನೇ ಶತಮಾನದಲ್ಲಂತೂ ವಿಜ್ಞಾನ ತಾಂತ್ರಿಕತೆಯ ಬೆಳವಣಿಗೆಯಿಂದಾಗಿ ಸಾರಿಗೆ ವ್ಯವಸ್ಥೆ ಅತ್ಯಂತ ತ್ವರಿತಗತಿಯ ಕ್ರಾಂತಿಯುಂಟಾಗಿದೆ. ಸಾರಿಗೆ ವ್ಯವಸ್ಥೆ ದೇಹದಲ್ಲಿನ ನರಮಂಡಲದಂತಿದ್ದು ಅರ್ಥವ್ಯವಸ್ಥೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಸಾರಿಗೆ
ಸಾರಿಗೆಯ ಪ್ರಯೋಜನಗಳು
1. ಸರಕು ಮತ್ತು ಸೇವೆಗಳನ್ನು ಉತ್ಪಾದಿತ ಪ್ರದೇಶದಿಂದ ಬೇಡಿಕೆಯಿರುವ ಪ್ರದೇಶಗಳಿಗೆ ಪೂರೈಸಲು
2. ಕೊರತೆಯಿರುವ ಪ್ರದೇಶಗಳಿಗೆ ಸರಕು ಮತ್ತು ಸೇವೆಸಾಗಿಸಲು
3. ಕೈಗಾರಿಕೆಗಳಿಗೆ ಕಚ್ಛಾ ವಸ್ತುಗಳನ್ನು ಸಾಗಿಸಲು
4. ಉತ್ಪಾದನೆಯಾದ ವಸ್ತುಗಳನ್ನು ಮಾರುಕಟ್ಟೆಗೆ ಸಾಗಿಸಲು
5. ಕೃಷಿ ಮತ್ತು ಕೈಗಾರಿಕಾ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ಸಾರಿಗೆಯ ವಿಧಗಳು
ರಸ್ತೆ ಸಾರಿಗೆ
ರಸ್ತೆಗಳ ಪ್ರಾಮುಖ್ಯತೆಗಳು:-
1. ರೈತರು ತಾವು ಬೆಳೆದ ಉತ್ಪಜನ್ನಗಳನ್ನು ಮಾರುಕಟ್ಟೆಗೆ ಒಯ್ಯಲು
2. ಹಳ್ಳಿಗಳಿಗೆ ಬೇಕಾದ ಅವಶ್ಯಕ ವಸ್ತುಗಳನ್ನು ಪೂರೈಸಿಕೊಳ್ಳಲು
3. ಸರಕುಗಳನ್ನು ಮತ್ತು ಸೇವೆಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಲು
4. ರೈಲು ಸಾರಿಗೆಗೆ ಮತ್ತು ಜಲಸಾರಿಗೆಗೆ ಪೂರಕವಾಗಿದೆ.


ರಸ್ತೆ ಸಾರಿಗೆಯ ವಿಧಗಳು
ರಾಷ್ಟ್ರೀಯ ಹೆದ್ದಾರಿಗಳ ಕಾರ್ಯಗಳು
1. ರಾಜ್ಯದ ರಾಜಧಾನಿಗಳು, ಪ್ರಧಾನ ಬಂದರುಗಳು ಮತ್ತು ಕೈಗಾರಿಕಾ ನಗರಗಳನ್ನು ಸಂಪರ್ಕಿಸುತ್ತದೆ.
2. ಭಾರತವನ್ನು ನೆರೆಯ ರಾಷ್ಟ್ರಗಳ ರಾಜಧಾನಿಯೊಡನೆ ಸಂಪರ್ಕಿಸುತ್ತದೆ.
3. ದೇಶದ ಪ್ರಮುಖ ಕೈಗಾರಿಕಾ ನಗರಗಳನ್ನು ಸಂಪರ್ಕಿಸುತ್ತದೆ. ಸುವರ್ಣ ಚತುಷ್ಕೋನ ಈ ಯೋಜನೆಯನ್ನು 1999ರಲ್ಲಿ ಆರಂಭಿಸಿದ್ದು, ಇದರ ವೆಚ್ಚ 54,000 ಕೋಟಿ ರೂ.ಗಳಾಗಿವುದು. ಸುವರ್ಣ ಚತುಷ್ಕೋನ ಹೆದ್ದಾರಿಗಳು ಚತುಸ್ಪದ ಅಥವಾ ಷಟ್ಟಥ ರಸ್ತೆಗಳಾಗಿದ್ದು ದೇಶದ ಮಹಾನ್ನಗರಗಳಾದ ದೆಹಲಿ, ಮುಂಬಯಿ, ಬೆಂಗಳೂರು, ಚೆನ್ಯೈ, ಕೋಲ್ಕತ್ತಾ ನಗರಗಳನ್ನು ಸಂಪರ್ಕಿಸುವ ರಸ್ತೆ ಯೋಜನೆಗಳು

ಕಾರಿಡಾರ ಹೆದ್ದಾರಿಗಳು
ರಸ್ತೆ ಸಾರಿಗೆಯ ತೊಡಕುಗಳು
* ಗ್ರಾಮೀಣ ಹಾಗೂ ಜಿಲ್ಲಾ ರಸ್ತೆಗಳು ಮಳೆಗಾಲದಲ್ಲಿ ಹಾಳಾಗಬಹುದು.
* ಪರಿಸರ ಮಾಲಿನ್ಯ, ಅಪಘಾತ ಹಾಗೂ ವಾಹನದಟ್ಟಣೆಗೆಗೆ ಕಾರಣವಾಗಬಹುದು.
* ಮಳೆ, ಚಂಡಮಾರುತ, ಪ್ರವಾಹಗಳಿಂದ ಪ್ರತಿ ವರ್ಷ ಹಾಳಾಗುತ್ತದೆ.
* ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆಯ ಕಳಪೆ ಮಟ್ಟದ್ದಾಗಿದೆ.
* ರಸ್ತೆ ಬದಿಯಲ್ಲಿ, ಪಾದಚಾರಿಗಳಿಗಾಗಲೀ ನಿಲ್ದಾಣಗಳಾಗಲೀ ಸಮರ್ಪಕವಾಗಿಲ್ಲ.
ಕರ್ನಾಟಕದ ಹಾಳಾಗಿರುವ ರಸ್ತೆಗಳು ಜಲಮಾರ್ಗಗಳು
* ಜಲ ಸಂಚಾರವು ಸಾಗರ-ಸಮುದ್ರ ಸರೋವರ, ನದಿಗಳು ಮತ್ತು ಕಾಲುವೆಗಳ ಮೂಲಕ ಸಾಗುತ್ತದೆ.
* ಭಾರತವು ಜಲಮಾರ್ಗಗಳ ಸಂಚಾರಕ್ಕೆ ಪುರಾತನ ಕಾಲದಿಂದಲು ಪ್ರಸಿದ್ಧಿ ಪಡೆದಿದೆ.
* ಭಾರತವು 7515.5 ಕಿ.ಮೀ. ದೂರದತೀರ ಪ್ರದೇಶ ಹೊಂದಿದೆ.
* ಭಾರತವು 14000 ಕಿ.ಮೀ. ಒಳನಾಡಿನ ನೌಕಾ ಸಂಚಾರಕ್ಕೆ ಯೋಗ್ಯವಾದ ಜಲಮಾರ್ಗಗಳನ್ನು ಹೊಂದಿದೆ. 12 ಪ್ರಮುಖ, 226 ಕಿರಿಯ ಮತ್ತು ಮಾಧ್ಯಮ ಬಂದರುಗಳಿವೆ.85 ರಷ್ಟು ವಿದೇಶಿಯ ವ್ಯಾಪಾರ ಹಡುಗುಗಳ ಮೂಲಕನಡೆಯುತ್ತದೆ.

ಜಲಮಾರ್ಗದ ವಿಧಗಳು
1. ಒಳನಾಡಿನ ಜಲಮಾರ್ಗಗಳು
2. ತೀರ ಪ್ರದೇಶದ ಜಲಸಾರಿಗೆ
3. ಸಾಗರ/ಸಮುದ್ರ ಸಾರಿಗೆ.

ಭಾರತದ ಪ್ರಮುಖ ಬಂದರುಗಳು
1. ಕಾಂಡ್ಲಾ
2. ಮುಂಬಾಯಿ
3. ನವಸೇನಾ
4. ಗೋವಾ
5. ನವಮಂಗಳೂರು
6. ಕೊಚ್ಚಿ
7. ತುತಕುಡಿ
8. ಚನ್ಯೈ
9. ವಿಶಾಖಪಟ್ಟಣ
10. ಪಾರದೀಪ
11. ಹಾಲ್ದಿಯಾ
12. ಕೊಲ್ಕತ್ತಾ
ಈ ಬಂದರು ದಕ್ಷಿಣ ಏಷ್ಯಾದಲ್ಲಿಯೇ ದೊಡ್ಡ ಬಂದರಾಗಿದೆ.

ವಾಯು ಸಾರಿಗೆ
ಇದು ಅತ್ಯಂತ ತ್ವರಿತಗತಿಯ ಸಾರಿಗೆ ಸಾಧನವಾಗಿದೆ. ಭಾರತದಂತಹ ವಿಶಾಲ ದೇಶಕ್ಕೆ ತುರ್ತು ಪರಿಸ್ಥಿತಿಗಳಿಗಾಗಿ ವಾಯು ಸಾರಿಗೆ ತುಂಬಾ ಅವಶ್ಯಕ ಸಾರ್ವಜನಿಕ ಕ್ಷೇತ್ರದ ವಾಯು ಸಾರಿಗೆಯು ಎರಡು ಸಂಸ್ಥೆಗಳೆಂದರೆ,
1. ಇಂಡಿಯನ್ ಏರ್‍ಲೈನ್ಸ್
2. ಏರ ಇಂಡಿಯಾ
ಭಾರತ ಸರಕಾರ 1955 ರಲ್ಲಿ ವಾಯು ಸಾರಿಗೆ ಸಂಸ್ಥೆಯನ್ನು ಸ್ಥಾಪಿಸಿದೆ. ಇದು ವಿಮಾನ ನಿಲ್ದಾಣಗಳ ನಿರ್ವಹಣೆ ಮಾಡುತ್ತದೆ. ಭಾರತದಲ್ಲಿ 11 ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ
1. ದೆಹಲಿ - ಇಂದಿರಾಗಾಂಧಿ ವಿಮಾನ ನಿಲ್ದಾಣ
2. ಮುಂಬಯಿ - ಸಹರಾ ಮತ್ತು ಸಾಂತ್ರಾಕ್ರೂಜ ವಿಮಾನ ನಿಲ್ದಾಣ
3. ಕೊಲ್ಕತ್ತಾ - ಸುಭಾಷಚಂದ್ರ ಭೋಸ ವಿಮಾನ ನಿಲ್ದಾಣ
4. ಚೆನ್ನೈ - ಅಣ್ಣಾ ವಿಮಾನ ನಿಲ್ದಾಣ
5. ತಿರುವನಂತಪುರ - ತ್ರಿವೆಂದ್ರಮ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
6. ಬೆಂಗಳೂರು - ನಾಡ ಪ್ರಭು ಕೆಂಪೆಗೌಡ ವಿಮಾನ ನಿಲ್ದಾಣ
7. ಹೈದ್ರಾಬಾದ - ರಾಜೀವಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
8. ಅಹಮದಾಬಾದ - ಸರ್ದಾರ ವಲ್ಲಬಾಯಿ ಪಟೇಲ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
9. ಪಣಜಿ- ಗೋವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
10. ಅಮೃತಸರ- ಶ್ರೀ ಗುರು ರಾಮದಾಸಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
11. ಗುವಾಹಟಿ- ಲೋಕಪ್ರೀಯ ಗೋಪಿನಾಥ ಬರಡೋಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಅಮೃತಸರ ರಾಜಾ ಸಾನ್ಸಿ ವಿಮಾನ ನಿಲ್ದಾಣ ಈಗ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಅಭಿವೃದ್ಧಿ ಹೊಂದಿದೆ. ಭಾರತದಲ್ಲಿ 115 ರಾಷ್ಟ್ರೀಯ ಮಟ್ಟದಲ್ಲಿ ವಿಮಾನ ನಿಲ್ದಾಣಗಳಿವೆ ರಕ್ಷಣಾ ವ್ಯವಸ್ಥೆಗೆ ಯುದ್ದ, ಪ್ರವಾಹ, ಬರಗಾಲ, ಚಂಡಮಾರುತಗಳಲ್ಲಿ ಕ್ಷಿಪ್ರವಾಗಿ ಅಗತ್ಯ ಸೇವೆಗಳನ್ನು ಒದಗಿಸಲು ಅತಿ ಮುಖ್ಯವಾಗಿವೆ.