8. ಪೆಡಗಾಗಿಕಲ್ ಇಸ್ಯೂಸ್
(ಬೋಧನಾ ಶಾಸ್ತ್ರ)
1. ವಿಜ್ಞಾನದ ಅರ್ಥ ಮತ್ತು ವ್ಯಾಪ್ತಿ :
ವಿಜ್ಞಾನ ಎಂಬುದು ಒಂದು ಜ್ಞಾನವಾಗಿದ್ದು ಈ ಪದವು ಆಂಗ್ಲಭಾಷೆಯ “Science” ಎಂಬ ಪದಕ್ಕೆ ಪೂರಕವಾಗಿದೆ. Science” ಎಂಬ ಪದವು “Scientia ಎಂಬ ಲ್ಯಾಟಿನ್ ಭಾಷೆಯಿಂದ ಬಂದಿದ್ದು ಇದರ ಅರ್ಥ “ತಿಳಿ ಎನ್ನುವುದಾಗಿದೆ

(ಸಾಮಾನ್ಯ ಅರ್ಥದಲ್ಲಿ ಪರಿಸರದ ವಸ್ತುಗಳು ಅಥವಾ ಜೀವಿಗಳ ಕ್ರಮಬದ್ಧವಾದ ಹಾಗೂ ವ್ಯವಸ್ಥಿತವಾದ ಅಧ್ಯಯನ ಎಂದು ಹೇಳಬಹುದು.)
ಐನಸ್ಟೀನರ ಪ್ರಕಾಶ ಜ್ಞಾನೇಂದ್ರಿಯಗಳ ಮುಖಾಂತರ ಪಡೆದ ಅನುಭವಗಳನ್ನು ನಿರ್ದಿಷ್ಟವಾದ ತರ್ಕದ ಆಧಾರದ ಮೇಲೆ ಕ್ರಮಬದ್ಧತೆಗೆ ಒಳಪಡಿಸುಂತಹ ಪ್ರಯತ್ನದ ಫಲವೇ ವಿಜ್ಞಾನ.”

ಕೊಲಂಬಿಯಾ ವಿಶ್ವಕೋಶದ ಪ್ರಕಾರ ವಿಜ್ಞಾನ ಎಂಬ ಪದವು ಪರಿಸರದ ಆಗು ಹೋಗುಗಳಿಗೆ ಸಿಮೀತವಾದ ಕ್ರೋಢಿಕೃತ ಹಾಗೂ ವ್ಯವಸ್ಥಿತ ಕಲಿಕೆಯಾಗಿದೆ.

ಈ ಮೇಲಿನ ವ್ಯಾಖೆಗಳನ್ನು ಅವಲೋಕಿಸಿದಾಗ ವಿಜ್ಞಾನವು ವ್ಯವಸ್ಥಿತವಾದ ಜ್ಞಾನವಾಗಿದ್ದು ಸತ್ಯ ಸಂಗತಿಗಳನ್ನು ಕ್ರೋಢಿಕರಿಸಿ ಪರಿಕಲ್ಪನೆ ಹಾಗೂ ವಾದುಗಳನ್ನು ನಿರಂತರ ಪ್ರಯೋಗಕ್ಕೆ ಅಳವಟಿಸಿ ವೈಜ್ಞಾನಿಕ ಭಾವನೆಯೊಂದಿಗೆ ಸತ್ಯನ್ವೇಷಣೆ ಮಾಡುವುದೇ ವಿಜ್ಞಾನವಾಗಿದೆ.

ವಿಜ್ಞಾನದ ವ್ಯಾಪ್ತಿ :
ಇದು ವೈಜ್ಞಾನಿಕ ಯುಗ ವಾಗಿರುವುದರಿಂದ ವಿಜ್ಞಾನವು ಮನುಷ್ಯನ ಪ್ರತಿಯೊಂದು ಕಾರ್ಯ ಕ್ಷೇತ್ರಗಳಲ್ಲಿ ಹರಡಿಕೊಂಡಿದೆ. ಅಲ್ಲದೆ ಪ್ರತಿಯೊಂದು ರಾಷ್ಟ್ರದ ಪ್ರಗತಿಗೆ ವಿಜ್ಞಾನ ರಂಗದಲ್ಲಿಯಾದ ಬದಲಾವಣೆಗಳೇ ಕಾರಣವಾಗಿದೆ. ವಿಜ್ಞಾನವನ್ನು ಅರ್ಥಪೂರ್ಣವಾಗಿ ಅಧ್ಯಯನ್ನು ಮಾಡಲು ಈ ಕೆಳಕಂಡ ವಿಭಾಗಗಳನ್ನಾಗಿ ವರ್ಗಿಕರಿಸಿಕೊಳ್ಳಲಾಗಿದೆ.
ಉದಾ:
1. ತಳಿಶಾಸ್ತ್ರ : ಅನವಂಶಿಯತೆ ಹಾಗೂ ಗುಣವೈವಿಧ್ಯತೆಯನ್ನು ಅಭ್ಯಾಸ ಮಾಡುವ ಶಾಸ್ತ್ರವಾಗಿದೆ.
2. ಜೀವಶಾಸ್ತ್ರ : ಜೀವಿಗಳ ಬಗ್ಗೆ ಅಧ್ಯಯನ ಮಾಡುವುದು ವಿಜ್ಞಾನ ಜ್ಞಾನದ ಒಂದು ಅಂಗವಾಗಿದೆ :
ಮನುಷ್ಯನು ತನ್ನ ದೈನಂದಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಅಗತ್ಯವಾದ ಜ್ಞಾನವನ್ನು ಸಂಪಾದಿಸಿಕೊಳ್ಳಲು ತತ್ವಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರಗಳಂಥಹ ಅನೇಕ ಜ್ಞಾನ ಕ್ಷೇತ್ರಗಳನ್ನು ಅಧ್ಯಯನವನ್ನು ವ್ಯವಸ್ಥಿತವಾಗಿ ಮಾಡಲು ವಿಜ್ಞಾನ ಸಹಾಯಕಾರಿಯಾಗಿದೆ. ಆದ್ದರಿಂದ ವಿಜ್ಞಾನವು ಜ್ಞಾನದ ಒಂದು ಅಂಗ ಎಂದ ಹೇಳಬಹುದು.

ವಿಜ್ಞಾನದ ಸ್ವರೂಪ :
ವಿಜ್ಞಾನವು ಕೆಳಕಂಡ ತನ್ನದೇ ಆದ ಸ್ವರೂಪವನ್ನು ಹೊಂದಿದೆ.
1. ಇದು ಒಂದು ಸಂಘಟಿತ ಜ್ಞಾನ ಬಂಡಾರವಾಗಿದೆ
2. ತೀರ್ಮಾನ ತೆಗೆದುಕೊಳ್ಳುವಾಗ ಪೂವಗ್ರಹ ಪೀಡನೆಯನ್ನು ಹೊಂದಿರುವುದಿಲ್ಲ.
3. ಇದು ತನ್ನ ವಾದಗಳನ್ನು ನಿಯಮಗಳು ಹಾಗೂ ತತ್ವಗಳ ಪ್ರಯೋಗದ ಮೂಲಕ ಬದಲಾವಣೆಗೆ ಒಳಪಡಿಸಲು ಸಿದ್ಧವಿರುತ್ತದೆ.
4. ಹೊಸ ಸಿದ್ಧಾಂತಗಳನ್ನು ಹಾಗೂ ನಿಯಮಗಳನ್ನು ಸೂಕ್ತ ಮಾಹಿತಿ ಇಲ್ಲದೆ ಸ್ವೀಕರಿಸುವುದಿಲ್ಲ.
5. ಎಚ್ಚರಿಕೆಯ ಹಾಗೂ ನಿಖರವಾದ ಅವಲೋಕನ ಇದರ ತಳಹದಿಯಾಗಿರುತ್ತದೆ.
6. ಯಾವುದೇ ವಿಚಾರ ಅಥವಾ ಸಮಸ್ಯೆಯನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡುತ್ತದೆ.
7. ವೈಜ್ಞಾನಿಕ ಮನೋಭಾವನೆಯನ್ನು ಹುಟ್ಟುಹಾಕುತ್ತದೆ.
8. ಅಗತ್ಯ ಮಾಹಿತಿಯನ್ನು ಆಧರಿಸಿ ತಪ್ಪುಗಳನ್ನು ತಿದ್ದುವುದು

ಮಾನವ ಹಾಗೂ ಪರಿಸರದ ಮೇಲೆ ವಿಜ್ಞಾನದ ಪ್ರಭಾವ
ಪ್ರಸ್ತುತ ದಿನಗಳಲ್ಲಿ ವಿಜ್ಞಾನವು ಪರಿಸರ ಮತ್ತು ಮಾನವನ ಮೇಲೆ ಮಹತ್ತರವಾದ ಪರಿಣಾಮವನ್ನು ಬಿರಿದೆ. ಮಾನವನ ದೈನಂದಿನ ಅವಶ್ಯಕತೆಗಳನ್ನು ನಿಗಿಸಿಕೊಳ್ಳಲು ತುಂಬಾ ಅನುಕೂಲವಾಗಿದೆ. ತನ್ನ ಅಗತ್ಯ ವಸ್ತುಗಳನ್ನು ಕ್ಷಣ ಮಾತ್ರದಲ್ಲಿ ಪ್ರಪಂಚದ ಯಾವುದೇ ಭಾಗದಲ್ಲಿದ್ದರು ದೊರಕಿಸಿಕೊಳ್ಳುವ ಸ್ಥಿತಿಗೆ ತಲುಪಿದ್ದಾನೆ, ಬೃಹತ ಕಟ್ಟಡಗಳ ನಿರ್ಮಾಣ ಸ್ವಾಭಾವಿಕ ಮತ್ತು ಕೃತಕ ವಿಧಾನದಿಂದ ನೀರು ಸಂಗ್ರಹಣೆ, ಕೃತಕಮಳೆ ಕಾಯಿಲೆಗಳಿಗೆ ಅಗತ್ಯ ಔಷಧಗಳನ್ನು ಮತ್ತು ಸಂಪರ್ಕಸಾಧನಗಳು, ಸಾರಿಗೆ ವ್ಯವಸ್ಥೆ ಇನ್ನೂ ಹಲವಾರು ಕ್ಷೇತ್ರಗಳ ಮೇಲೆ ವಿಜ್ಞಾನ ತನ್ನ ಪ್ರಭಾವ ಬೀರಿದೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಆಗುವ ಬದಲಾವಣೆಗಳಿಗೆ ಮನುಷ್ಯನ ಚಟುವಟಿಕೆಗಳು ಅತಿ ಮುಖ್ಯವಾದ ಕಾರಣವಾಗಿದೆ.
ಭೂ ಜಲ ವಾಯು ಸಾರಿಗೆ ಕೈಗಾರಿಕೀರಣ ಜನಸಂಖ್ಯೆ ಸ್ಟೇಟ ಅರಣ್ಯನಾಶ ಮುಂತಾದವುಗಳಿಂದ ಸೇವಿಸುವ ಗಾಳಿ ಅವ್ಯವಸ್ಥೆಯ ಬಳಕೆಯಿಂದ ಮಲಿನಗೊಂಡ ಆಹಾರ ಮತ್ತು ನೀರು ಇವುಗಳನ್ನು ಸರಿಪಡಿಸಲು ಅಗತ್ಯವಾದ ಪರಿಹಾರೋಪಯಗಳನ್ನು ಕಂಡುಕೊಳ್ಳುವಲ್ಲಿ ವಿಜ್ಞಾನವು ಸಹಕಾರ ನೀಡುತ್ತಿದೆ.

ಸಮಾಜಿಕ ಬದಲಾವಣೆಯಲ್ಲಿ ವಿಜ್ಞಾನದ ಪಾತ್ರ
ವಿಜ್ಞಾನವು ಸಮಾಜದ ಹಲವಾರು ಕ್ಷೇತ್ರಗಳಲ್ಲಿ ತನ್ನದೇ ಆದಪ್ರಭಾವವನ್ನು ಬೀರಿ ಸಾಮಾಜಿಕ ಬದಲಾವಣೆಯನ್ನುಂಟು ಮಾಡಿದೆ. ಅಂತಹ ಹಲವು ಕ್ಷೇತ್ರಗಳೆಂದರೆ
1. ಯಂತ್ರಗಳ ಸಹಾಯದಿಂದ ಕೈಗಾರಿಕ ಕ್ಷೇತ್ರ ಪ್ರಗತಿ ಪಥದಲ್ಲಿದೆ
2. ಸಾರಿಗೆ ಸಂಪರ್ಕ ಉಹೆಗೂ ಮೀರಿ ಬೆಳೆಯುತ್ತಿದೆ
3. ವ್ಯಾಪಾರ ವಾಣಿಜ್ಯೋದ್ಯಮಗಳ ಮೂಲಕ ಆರ್ಥಿಕ ಪರಿಸ್ಥಿತಿ ಉತ್ತಮವಾಗಲು ಸಾಹಯಕವಾಗಿದೆ.
4. ಕೃತಕ ಉಪಗ್ರಹಗಳು ಬಾಹ್ಯಕಾಶಿಕ್ಕೆ ಕಳುಹಿಸಿ ಸಂವಹನ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟುಮಾಡಿದೆ.
5. ಗಣಕ ಯಂತ್ರದ ವೈವಿದ್ಯಮಯ ಉಪಯೋಗದಿಂದ ನಾನಾ ತಂತ್ರಾಂಶಗಳೂ ಅಭಿವೃದ್ಧಿಗೊಳಿಸಲು ಸಹಾಯಕಾರಿಯಾಗಿದೆ.

ವೈಜ್ಞಾನಿಕ ಮನೋಭಾವನೆ ಹೊಂದಿರುವ ವ್ಯಕ್ತಿಯ ಲಕ್ಷಣಗಳು
ವೈಜ್ಞಾನಿಕ ಮನೋಭಾವನೆ ಎಂದರೆ ಯಾವುದೇ ಒಂದು ಸನ್ನೀವೇಶ, ವ್ಯಕ್ತಿ ವಸ್ತುವಿನ ಕಡೆಗೆ ಒಬ್ಬ ವ್ಯಕ್ತಿ ವಿಜ್ಞಾನದ ತಳಹದಿಯಿಂದ ಪ್ರತಿಕ್ರಿಯೆ ನೀಡುವ ಒಂದು ಮನಸ್ಸಿನ ಪೂರ್ವ ಸಿದ್ಧತಾ ಸ್ಥಿತಿಯನ್ನು ವೈಜ್ಞಾನಿಕ ಮನೋಭಾವನೆ ಎನ್ನುತ್ತಾರೆ.

ವೈಜ್ಞಾನಿಕ ಮನೋಭಾವನೆಯ ಲಕ್ಷಣಗಳು :
1. ಖಚಿತತೆ
2. ಸತ್ಯಶೋದನೆಯಲ್ಲಿ ಅತಿಯಾದ ಶ್ರಷ್ಠಿ ಹಾಗೂ ತಾಳ್ಮೆ
3. ವಿನಯಶೀಲತೆ
4. ಪ್ರಾಯೋಗಿಕ ಪ್ರಾಮಣಿಕರಣದ ಇಚ್ಛೆ
5. ಸಮಸ್ಯೆ ಬಿಡಿಸುವ ವಿವಿಧ ಸಾಹಿತ್ಯಗಳ ಬಗ್ಗೆ ನಂಬಿಕೆ
6. ಹೊಸ ಜ್ಞಾನದ ಮಿತಿಯಲ್ಲಿ ಅಭಿಪ್ರಾಯ ಬದಲಾವಣೆ ಒಪ್ಪಿಗೆ ಸೂಚಿಸಬಹುದು
7. ಊಹೆ ಮತ್ತು ಪರಿಹಾರದ ನಡುವಿನ ಅಂತರ
8. ಸಾದ್ಯತೆಗಳಿಗೆ ಗೌರವ
9. ನಿಷ್ಪಕ್ಷವಾಗಿದ್ದು ಅರ್ಹತೆಯನ್ನು ಗೌರವಿಸುವುದು

ವಿಜ್ಞಾನ ವಿಷಯ ಬೋಧನೆಯ ಮೂಲಕ ಬಳಸಬಹುದಾದ ಮೌಲ್ಯಗಳು:
1. ಉಪಯುಕ್ತ ಮೌಲ್ಯ : ವಿಜ್ಞಾನದ ಉಪಯೋಗದಿಂದಾಗಿ ಇದು ಪ್ರಕೃತಿಯ ಪ್ರಕೋಪಗಳಾದ ಅತಿವೃಷ್ಟಿ, ಅನಾವೃಷ್ಟಿ, ಭೂಕಂಪಗಳು ಪ್ರವಾಹಗಳು ಜ್ವಾಲಮುಖಗಳು ಕ್ಷಾಮ ವಾತಾವರಣದಲ್ಲಿ ಉಷ್ಣಾಂಶದ ಹೆಚ್ಚಳ ಮುಂತಾದವುಗಳಿಗೆ ಪರಿಹಾರವನ್ನು ಕಂಡು ಹಿಡಿಯುವಲ್ಲಿ ಸಹಾಯಕವಾಗಿದೆ.
2. ಶಿಸ್ತಿನ ಮೌಲ್ಯ : ಕ್ರಮಬದ್ಧವಾದ ಅಧ್ಯಯನವೇ ವಿಜ್ಞಾನ ಅದುದರಿಂದ ವಿಜ್ಞಾನವನ್ನು ಅಧ್ಯಯನ ಮಾಡುವುದರಿಂದ ಜೀವನದಲ್ಲಿ ಶಿಸ್ತು ಪಾಲಿಸಲು ಸಾಧ್ಯವಾಗುತ್ತದೆ.
3. ಸಾಂಸ್ಕೃತಿಕ ಮೌಲ್ಯ : ವಿಜ್ಞಾನವು ಮಾನವನ ಜೀವನದ ದಿಶೆಯನ್ನು ಮತ್ತು ಸಂಸ್ಕೃತಿಯನ್ನು ಬದಲಾಯಿಸಿದೆ. ಆಚಾರ, ನಡೆ, ನುಡಿ, ಸಂಪ್ರದಾಯ ಮುಂತಾದವುಗಳ ಮೇಲೆ ನೇರ ಪರಿಣಾಮ ಬೀರಿದೆ.
4. ಬೌದ್ದಿಕ ಮೌಲ್ಯ : ವಿಜ್ಞಾನ ಬೋದನೆಯ ಮೂಲಕ ವಿದ್ಯಾರ್ಥಿಗಳಲ್ಲಿ ಬುದ್ಧಿಶಕ್ತಿ ಹಾಗೂ ಮಾನಸಿಕ ಸ್ಥೈರ್ಯವನ್ನು ಬೆಳೆಸಿ ವಿದ್ಯಾರ್ಥಿಯ ಬೌದ್ದಿಕ ವಿಕಾಸಕ್ಕೆ ವಿಜ್ಞಾನವು ಪೂರಕವಾಗಿದೆ.
5. ವೃತ್ತಿ ಮೌಲ್ಯ : ಇಂದಿನ ಯುಗದಲ್ಲಿ ಶಿಕ್ಷಣದ ಮೂಲ ಉದ್ದೇಶ ಎಲ್ಲಾ ಮಗುವನ್ನು ಉದ್ಯೋಗವನ್ನು ಆರಿಸಿಕೊಳ್ಳಲು ಬೇಕಾದ ಬೌದ್ಧಿಕ ತಾಂತ್ರಿಕ ಹಾಗೂ ಉತ್ಪಾದನಾ ಸಾಮಥ್ರ್ಯವನ್ನು ಸೂಕ್ತ ತರಬೇತಿ ಮೂಲಕ ನೀಡಲು ಸಹಾಯಕವಾಗಿದೆ.

ವೈಜ್ಞಾನಿಕ ಪದ್ಧತಿಯ ಹಂತಗಳು
1. ಸಮಸ್ಯೆಯನ್ನು ಗುರುತಿಸುವಿಕೆ
2. ಸಮಸ್ಯೆಯ ವ್ಯಾಖ್ಯಾನ
3. ಸಮಸ್ಯೆಯ ವಿಶ್ಲೇಷಣೆ
4. ದತ್ತಾಂಶಗಳ ಸಂಗ್ರಹಣೆ
5. ದತ್ತಾಂಶಗಳ ಅರ್ಥೈಸುವಿಕೆ
6. ಪ್ರಕಲ್ಪನೆ ಅಥವಾ ಊಹೆಗಳನ್ನು ರಚಿಸಿಕೊಳ್ಳುವುದು
7. ಸೂಕ್ತವಲ್ಲದ ಪ್ರಾಕಲ್ಪನೆಯನ್ನು ಆಯ್ದುಕೊಳ್ಳುವಿಕೆ
8. ತತ್ವ ನಿರೂಪಣೆ
9. ನಿರೂಪಿಸಿದ ತತ್ವವನ್ನು ಬೇರೆ ಕ್ಷೇತ್ರಕ್ಕೆ ಅನ್ವಯಿಸುವುದು

ವೈಜ್ಞಾನಿಕ ಮನೋಭಾವನೆಗಳನ್ನು ವಿದ್ಯಾರ್ಥಿಗಳಲ್ಲಿ ಬಳಸಬಹುದಾದ ಮಾರ್ಗಗಳು :
* ಬೋದನೆಯಲ್ಲಿ ಕಾರಣ ಪರಿಣಾಮಗಳಿಗೆ ವೈಜ್ಞಾನಿಕ ಕಾರಣಗಳನ್ನು ನೀಡಿ ಬೋದನೆ ಕೈಗೊಳ್ಳಬೇಕು
* ವೈಜ್ಞಾನಿಕ ಪುಸ್ತಕಗಳು, ವಿಜ್ಞಾನ ದಿನಪತ್ರಿಕೆಗಳು ಮತ್ತು ವಿಜ್ಞಾನಿ ಜೀವನ ಚರಿತ್ರೆಯ ಪುಸ್ತಕ ಓದಲು ಪ್ರೋತ್ಸಾಹ ನೀಡಬೇಕು.
* ವಿದ್ಯಾರ್ಥಿಗಳಿಗೆ ಮೂಡನಂಬಿಕೆಗಳ ಬಗ್ಗೆ ಚರ್ಚಿಸಿ ವೈಜ್ಞಾನಿ ಕಾರಣಗಳನ್ನು ತಿಳಿದುಕೊಳ್ಳಲು ಸಹಾಯ ಮಾಡಬೇಕು.
* ವಿಜ್ಞಾನಕ್ಕೆ ಸಂಬಂಧಿಸಿದಂತ ಮನೋರಂಜನಾ ಚಟುವಟಿಕೆಗಳು ಮತ್ತು ಆಟಗಳನ್ನು ಆಡಿಸುವುದರ ಮೂಲಕ
* ಮಕ್ಕಳ ಅಭಿರುಚಿಗೆ ತಕ್ಕಂತೆ ವೈಜ್ಞಾನಿಕ ಹವ್ಯಾಸಗಳನ್ನು ಬೆಳೆಸುವುದು
* ವಿಜ್ಞಾನ ಸಂಘದ ಮೂಲಕ ಸಹ ಪಠ್ಯ ಚಟುವಟಿಕೆಗಳಾದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ ಕ್ಷೇತ್ರ ಭೇಟಿನೀಡುವುದು
* ಶಾಲೆಯಲ್ಲಿ ವಿಜ್ಞಾನ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿ ವೈಜ್ಞಾನಿಕ ವಸ್ತುಗಳ ಸಂಗ್ರಹಣೆ ಮಾಡುವದು
* ಇಂಟರನೇಟ್ ಮೂಲಕ ಹೊಸ ವಿಚಾರಗಳನ್ನು ಸಂಗ್ರಹಿಸುವುದು
* ಮಕ್ಕಳಲ್ಲಿ ತಾಳ್ಮೆ, ಪ್ರಶ್ನೀಸುವಿಕೆ, ವಿಮರ್ಶತ್ಮಕ, ದೃಷ್ಟಿಕೋನ,ಕ್ರೀಯಾಶೀಲತೆ, ಸೃಜನಾತ್ಮಕತೆ ಮುಂತಾದವುಗಳನ್ನು‌ ಅಭಿವ್ಯಕ್ತಿಗೊಳಿಸಲು ಅಗತ್ಯವಾದ ಚಟುವಟಿಕೆಗಳನ್ನು ಕೈಗೊಳ್ಳುವುದು


ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಬೋಧನೆಯ ಪ್ರಾಮುಖ್ಯತೆ
1. ವಿದ್ಯಾರ್ಥಿಗಳು ತಾವು ವಾಸಿಸುವ ಪ್ರಪಂಚದ ಸ್ಪಷ್ಟ ತಿಳುವಳಿಕೆ ಹೊಂದಲು ಸೂಚಿಸುವುದು
2. ಮಕ್ಕಳಲ್ಲಿ ಉತ್ತಮ ವೈಕ್ತಿಕ ಮೌಲ್ಯಗಳನ್ನು ಬೆಳೆಸುವುದು
3. ಬದಲಾದ ಸಮಾಜಕ್ಕೆ ಹೊಂದಿಕೊಳ್ಳಲು ವಿಜ್ಞಾನ ಬೋಧನೆ ಅವಶ್ಯಕ
4. ಸೃಜನ ಶೀಲತೆ ಸಾಮಥ್ಯ ಬೆಳೆಸಲು
5. ವಿಕ್ಷಣಾ ಕೌಶಲ, ಚಿತ್ರಬಿಡಿಸುವ ಕೌಶಲ್ಯ, ಸಮಸ್ಯೆ ಬಿಡಿಸುವ ಕೌಶಲ್ಯ, ಪ್ರಯೋಗ ಮಾಡುವ ಕೌಶಲ್ಯ ಮುಂತಾದ ಕೌಶಲ್ಯಗಳನ್ನು ಬೆಳೆಸಲು ವೈಜ್ಞಾನಿಕ

ಮನೋಭಾವನೆ ಹೊಂದಿರುವ ವ್ಯಕ್ತಿಯ ಪ್ರಮುಖ ಲಕ್ಷಣಗಳು
1. ತೆರೆದ ಮನಸು
2. ಕುತೂಹಲ
3. ವೈಜ್ಞಾನಿಕ ಘಟನೆಯನ್ನು ಆಧರಿಸಿ ನಿರ್ಣಯ
4. ನಿರ್ಣಯಗಳನ್ನು ಸತ್ಯಶೋಧನೆ ಗೊಳಿಸುವುದು
5. ಕಾರ್ಯಕಾರಣ ಸಂಬಂಧಗಳಲ್ಲಿ ವಿಶ್ವಾಸವಿಡುವುದು.


ವಿಜ್ಞಾನ ಬೋಧನೆಯ ಗುರಿಗಳು ಮತ್ತು ಉದ್ದೇಶಗಳು
ವಿಜ್ಞಾನ ಬೋಧನೆಯ ಉದ್ದೇಶಗಳ ಪ್ರಕಾರ
1. ಜ್ಞಾನ
2. ತಿಳುವಳಿಕೆ
3. ಅನ್ವಯ
4. ಕಾಶಲ್ಯ
5. ಆಸಕ್ತಿ
6. ಪ್ರಶಂಸೆ
7. ಮನೋಭಾವ

* ಬ್ಲೂಮರ ಬೋಧನಾ ಉದ್ದೇಶಗಳನ್ನು 3 ವಲಯಗಳಾಗಿ ವಿಂಗಡಿಸಿದ್ದಾರೆ
1. ಜ್ಞಾನ ವಲಯ
2. ಮನೋಭಾವ ವಲಯ
3. ಮನೋಜನ್ಯ ವಲಯ

* ರಾಬರ್ಟ ಮೇಜರ್‍ರವರ ಪ್ರಕಾರ ಬೋಧನಾ ಉದ್ದೇಶಗಳು
1962 ರಲ್ಲಿ ರಾಬರ್ಟ ಮೇಜರ್‍ವರು ಬೋಧನಾ ಉದ್ದೇಶಗಳಿಗೆ ಸಂಬಂಧಿಸಿದಂತೆ 3 ಅಂಶಗಳನ್ನು ನಿಡಿದ್ದಾರೆ
1. ವಿಷಯ
2 ಉರ್ತನೆ
3 ಸ್ವರೂಪ

ಪ್ರಾಥಮಿಕ ಪಠ್ಯಕ್ರಮಕ್ಕೆ ಕಲಿಕಾನುಭವಗಳ ಆಯ್ಕೆ ಮಾಡಿಕೊಳ್ಳುವಾಗ ಅನುಸರಿಸಬೇಕಾದ ಅಂಶಗಳು
* ವಿದ್ಯಾರ್ಥಿಗಳ ವರ್ತನೆಯಲ್ಲಿ ಅಪೇಕ್ಷಿತ ಬದಲಾವಣೆ ತರಲು ಸಹಾಯವಾಗುವಂತೆ ಜ್ಞಾನ ಪಡೆಯುವ ವಿಶಾಲ ತಿಳುವಳಿಕೆಯನ್ನು ಪಡೆಯುವ ಭೌತಿಕ ಕೌಶಲ್ಯವನ್ನು ಪಡೆಯುವ ಪರಿಸರದ ಬಗ್ಗೆ ಪಾಶಂಶಿ ಹೊಂದಲು ಸಾಧ್ಯವಾಗುವಂತೆ ವ್ಯವಸ್ಥಿತವಾದ ತಿಳುವಳಿಕೆಯನ್ನು ಪಡೆಯುವ ಸಹಾಯಕವಾಗಿರುವ ಅಂಶಗಳ
ಈ ಕೆಳಗಿನಂತಿವೆ.
* ಚಟುವಟಿಕೆಗಳಲ್ಲಿ ಎಲ್ಲಾ ಮಕ್ಕಳ ಭಾಗವಹಿಸುವಂತೆ ಇರಬೇಕು
* ವಿದ್ಯಾರ್ಥಿಗಳ ಮಕ್ಕಳ ಕಲಿಕೆಯ ಅರಿವನ್ನು ಹೆಚ್ಚಿಸುವಂತಿರಬೇಕು
* ಕಲಿಕಾ ಅನುಭವಗಳ ವಿದ್ಯಾರ್ಥಿಗಳ ನೈಜ ಜೀವನಕ್ಕೆ ಹತ್ತಿರದ ಸಂಬಂಧವನ್ನು ಹೊಂದಿರಬೇಕು
* ಪಂಚೇಂದ್ರಿಯಗಳ ಮೂಲಕ ಅನುಭವಗಳನ್ನು ಪಡೆಯುವಂತಿರಬೇಕು
* ಮಕ್ಕಳ ಆಸ್ತಿ ಮತ್ತು ಕೂತಹಲಗಳನ್ನು ಕೆರಳಿಸುವಂತಿರಬೇಕು
* ಕಲಿಕಾ ಅನುಭವಗಳು ಸ್ಥಳಿಯ ಸಂಪನ್ಮೂಲಗಳ ಬಳಕೆಯಿಂದ ನಡೆಯುವಂತಿರಬೇಕು.


ವಿಜ್ಞಾನ ಬೋಧನೆಯ ಗುರಿಗಳು ಹಾಗೂ ಉದ್ದೇಶಗಳು :
* ವಿದ್ಯಾರ್ಥಿಗಳು ತಾವು ಜೀವಿಸುವ ಪ್ರಪಂಚದ ಜೊತೆಗೆ ಉತ್ತಮವಾದ ಸಂಬಂಧವನ್ನು ಹೊಂದಿರಬೇಕಾದರೆ ವಿಜ್ಞಾನದ ಬಗ್ಗೆ ಸ್ಪಷ್ಟ ತಿಳುವಳಿಕೆ ಇರಬೇಕು
* ಮಕ್ಕಳ ಉತ್ತಮ ವ್ಯಕ್ತಿಕ ಮೌಲ್ಯಗಳನ್ನು ಬೆಳಸಿಕೊಳ್ಳಲು
* ಉತ್ತಮ ಬೌದ್ಧಿಕ ಕೌಶಲ್ಯಗಳಿಂದ ಆಲೋಚನೆ ಮತ್ತು ಕಾರಣಪಡಿಸುವ ಕೌಶಲ್ಯಗಳ ಬೆಳವಣಿಗಾಗಿ
* ವಿದ್ಯಾರ್ಥಿಗಳಲ್ಲಿ ಸಮಸ್ಯೆ ಪರಿಹಾರ ಕೌಶಲ್ಯವನ್ನು ಬೆಳಸುವುದು
* ಮಕ್ಕಳ ವೈಜ್ಞಾನಿಕ ಪದ್ಧತಿಯ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನುಂಟು ಮಾಡಲು
* ತಂತ್ರಜ್ಞಾನದ ಉಪಯುಕ್ತತೆಯ ಬಗ್ಗೆ ಅರಿವು ಮೂಡಿಸಲು
* ಸಮಾಜದಲ್ಲಿನ ಬದಲಾವಣೆಗೆ ಹೊಂದಿಕೊಳ್ಳಲು
* ಮಕ್ಕಳಲ್ಲಿ ಸೃಜನಶಿಲತೆ ಸಾಮಥ್ರ್ಯವನ್ನು ಬೇಸಲು
* ಕಾರಣ ಮತ್ತು ಪರಿಣಾಮಗಳ ಪರಸ್ಪರ ಸಂಬಂಧವನ್ನು ತಿಳಿಯಲು ಮಕ್ಕಳಲ್ಲಿ ವೀಕ್ಷಣಾ ಕೌಶಲ್ಯ ಚಿತ್ರ ಬಿಡಿಸುವ ಕೌಶಲ ಸಮಸ್ಯೆ ಬಿಡಿಸಲು ಕೌಶಲ ಪ್ರಯೋಗ ಮಾಡುವ ಕೌಶಲ್ಯಗಳನ್ನು ಬೆಳೆಸಲು ಸಹಾಯಕವಾಗುವುದು
ವಿಜ್ಞಾನ ಬೋಧನಾ ವಿಧಗಳು
1. ಶಿಕ್ಷಕರ ಕೇಂದ್ರಿತ ವಿಧಾನ
1. ಶಿಕ್ಷಕರ ಭಾಗವಹಿಸುವ ಪ್ರಮಾಣ ಹೆಚ್ಚಾಗಿರುತ್ತದೆ.
2 ಈ ಬೋಧನಾ ವಿಧಾನಗಳೆಂದರೆ, ಉಪನ್ಯೆಸ ವಿಧಾನ, ಪ್ರದರ್ಶನ ವಿಧಾನ ಅಥವಾ ಪ್ರಾತ್ಯಕ್ಷಿಕ ವಿಧಾನ, ಮೇಲ್ವಿಚಾರಣಾ ವಿಧಾನಗಳಾಗಿವೆ
3. ವಿದ್ಯಾರ್ಥಿಯ ನಿಷ್ಕ್ರೀಯವಾಗಿ ಆಲಿಸುವವನಾಗಿರುತ್ತಾನೆ.
4. ವಿಷಯಕ್ಕೆ ಪ್ರಮುಖ್ಯತೆ ಹೆಚ್ಚು
5. ಪರೋಕ್ಷ ಅನುಭವಗಳಿಂದ ಕಲಿಕೆ ಉಂಟಾಗುತ್ತದೆ
6. ವಿದ್ಯಾರ್ಥಿ ಪ್ರಯೋಗ ಮಾಡಲು ಸ್ವಂತ ತೀರ್ಮಾನ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ.

2. ವಿದ್ಯಾರ್ಥಿ ಕೇಂದ್ರೀತ ವಿಧಾನ
1. ವಿದ್ಯಾರ್ಥಿ ಕಲಿಕೆಯಲ್ಲಿ ಭಾಗವಹಿಸುವ ಪ್ರಮಾಣ ಹೆಚ್ಚು
2. ವಿದ್ಯಾರ್ಥಿ ಕೇಂದ್ರಿತ ವಿಧಾನಗಳೆಂದರೆ : ಸಂಶೋಧನೆ ವಿಧನ ಉಪನ್ಯಾಸ ಪ್ರದರ್ಶನ ವಿಧಾನ, ಚರ್ಚಾವಿಧಾನ ಅನ್ವೇಷಣಾ ವಿದಾನ, ಸಮಸ್ಯೆ ಪರಿಹಾರ ವಿಧಾನ, ಸ್ವಯಂ ಅಧ್ಯಯನ 3. ವಿದ್ಯಾರ್ಥಿಗಳ ಚಟುವಟಿಕೆಯಿಂದ ಕೂಡಿರುತ್ತಾರೆ
4. ವಿಷಯ ಕಲಿಕೆಗೆ ಪ್ರಮುಖ್ಯತೆ ಹೆಚ್ಚು
5. ನೇರ ಅನುಭವಗಳ ಮೂಲಕ ಕಲಿಕೆ ಉಂಟಾಗುತ್ತದೆ
6. ವಿದ್ಯಾರ್ಥಿಗಳು ಶಿಕ್ಷಕ ಮಾರ್ಗದರ್ಶನದಲ್ಲಿ ಪ್ರಯೋಗ ಮಾಡಲು ಹಾಗೂ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಅವಕಾಶವಿದೆ.

3. ಸಮಸ್ಯೆ ಪರಿಹಾರ ಪದ್ಧತಿ :
ಒಂದು ಸಮಸ್ಯೆಯನ್ನು ಗುರುತಿಸಿ ಅದಕ್ಕನುಗುಣವಾದ ದತ್ತಾಂಶಗಳನ್ನು ಸಂಗ್ರಹಿಸಿ ಹಾಗೆ ಸಂಗ್ರಹಿಸಿದ ದತ್ತಾಂಶಗಳಿಂದ ಸಮಸ್ಯೆಯನ್ನು ಬಿಡಿಸಬಲ್ಲ ತತ್ವಗಳನ್ನು ರೂಪಿಸಿ ಅವುಗಳ ಸಹಾಯದಿಂದ ಸಮಸ್ಯೆಗೆ ಪರಿಹಾರವನ್ನು ಕಂಡು ಹಿಡಿಯುವುದೇ ಸಮಸ್ಯೆ ಪರಿಹಾರ ಪದ್ಧತಿ ಎನ್ನುವರು

4. ಪ್ರದರ್ಶನ ವಿಧಾನ ಬೋಧನಾ ಪದ್ಧತಿ :
ಪ್ರದರ್ಶನ ಎಂದರೆ ಯಾವುದಾದರೊಂದು ಕೆಲಸ ಮಾಡಿ ತೋರಿಸುವುದು.
ಉದಾ : ಶಿಕ್ಷಕನು ಆಮ್ಲಜನಕದ ಪ್ರಯೋಗವನ್ನು ಪ್ರದರ್ಶಿಸುವ ಮೊದಲು ಆ ಪ್ರಯೋಗದ ಬಗ್ಗೆ ಎಲ್ಲಾ ಮಾಹಿತಿ ನೀಡುತ್ತಾನೆ ನಂತರ ಮಕ್ಕಳ ಎದುರಿನಲ್ಲಿ ಮಾಡಿ ತೋರಿಸುತ್ತಾನೆ ಮಕ್ಕಳ ಕಲಿಯುವಿಕೆಯನ್ನು ಪ್ರತ್ಯೇಕ್ಷವಾಗಿ ವೀಕ್ಷಿಸುವುದರಿಂದ ಕಲಿಕೆಯುಸುಲಭವಾಗುತ್ತದೆ.

* ಈ ಪದ್ಧತಿಯ ಅನುಕೂಲಗಳು
1. ಪ್ರದರ್ಶನ ಬೋಧನೆಯನ್ನು ಆಸಕ್ತಿಪೂರ್ಣ ಮಕ್ಕಳಲ್ಲಿ ಆಸಕ್ತಿಯನ್ನು ಕೆರಳಿಸುತ್ತದೆ.
2. ಮಕ್ಕಳ ತಮ್ಮ ಅನುಮಾನಗಳನ್ನು ತಪ್ಪು ಅಭಿಪ್ರಾಯಗಳನ್ನು ತಿದ್ದಿಕೊಳ್ಳಲು ಅವಕಾಶ ದೊರೆಯುತ್ತದೆ.
3. ಬೋಧನೆಯಲ್ಲಿ ಮಕ್ಕಳ ಭಾಗವಹಿಸುವಂತೆ ಮಾಡುತ್ತದೆ.
4. ಶಿಕ್ಷಕರು ಮತ್ತು ಬೋಧಕರ ಸಂಬಂಧವನ್ನು ಆತ್ಮಿಯವನ್ನಾಗಿಸುತ್ತದೆ.
5. ಯೋಜನಾ ಪದ್ಧತಿ ಬೋಧನಾ ವಿಧಾನ : ಇದು ಒಂದು ಸಮಸ್ಯೆ ಆಧಾರಿತ ಚಟುವಟಿಕೆಯಾಗಿದ್ದು ಇದನ್ನು ಒಂದು ಸ್ವಾಭಾವಿಕ ಸಾಮಾಜಿಕ ಸನ್ನಿವೇಶದಲ್ಲಿ ಕೈಗೊಳ್ಳುವ ಒಂದು ಕಲಿಕಾ ಚಟುವಟಿಕೆಯಾಗಿದೆ.
ಈ ವಿಧಾನವು 3 ಪ್ರಮುಖ ಹಂತಗಳನ್ನು ಹೊಂದಿದೆ
1. ಯೋಜನೆ
2. ನಿರ್ವಹಣೆ
3. ಮೌಲ್ಯಮಾಪನ


6. ಪ್ರಾಯೋಗಿಕ ವಿಧಾನ
ವಿದ್ಯಾರ್ಥಿಗಳೇ ಸ್ವತಂತ್ರವಾಗಿ ಪ್ರಯೋಗ ನಡೆಸಿ ಹಲವು ಕಲ್ಪನೆಗಳನ್ನು ಕಲಿತುಕೊಳ್ಳುವುದಾಗಿದೆ. ವಿಜ್ಞಾನ ತತ್ವ ಸಿದ್ದಾಂತಗಳನ್ನು ಯಶಸ್ವಿಯಾಗಿ ಬೋಧಿಸಲು ಮತ್ತು ಅವುಗಳನ್ನು ಪರಿಶೋಧಿಸಿ ತಾಳೆ ನೊಡುವುದರ ಮೂಲಕ ವಿಜ್ಞಾನದ ಪರಿಕಲ್ಪನೆಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ಇದು ಸಹಾಯಕವಾಗಿದೆ ಇದು ಮಾಡಿ ಕಲಿ ತತ್ವದ ಮೇಲೆ ನಿಂತಿದೆ.

7. ಕ್ರಮಾನುಗತ ಬೋಧನಾ ವಿಧಾನ :
ವಿಷಯಗಳನ್ನು ಗುರುತಿಸಲ್ಪಟ್ಟ ಉದ್ದೇಶದೊಂದಿಗೆ ಚಿಕ್ಕ ಚಿಕ್ಕ ತುಣುಕಾಗಿ ಮಾಡಿಕೊಂಡು ಆ ತುಣಕಗಳ ನಿರ್ದಿಷ್ಟ ಬೋಧನಾ ಸನ್ನಿವೇಶಗಳನ್ನು ಹುಟ್ಟಿಹಾಕುವಂತೆ ವಿದ್ಯಾರ್ಥಿ ಸ್ವತ: ಕಲಿಯುವ ಸ್ವ ಮೌಲ್ಯಕರಿಸುವ ಹಾಗೂ ಸ್ವತ: ತಾನೇ ಉತ್ತರವನ್ನು ದೃಢಪಡಿಸಿಕೊಳ್ಳಬಹುದಾದ ಬೋಧನಾ ಪ್ರಕ್ರಿಯೇ ಕ್ರಮಾನುಗತ ಬೋಧನೆಯಾಗಿದೆ.

8. ಪರಿಹಾರ ಬೋದನೆ :
ಘಟಕ ಪರೀಕ್ಷೆಗಳನ್ನು ನಡೆಸುವುದರ ಮೂಲಕ ಕಲಿಕೆಯಲ್ಲಿ ನ್ಯೂನತೆ ಇರುವ ಅಥವಾ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಕರು ಗುರುತಿಸಿ ಇಂತಹ ವಿದ್ಯಾರ್ಥಿಗಳ ಕಲಿಕೆಯಲ್ಲಿನ ಸಮಸ್ಯೆಗಳಿಗೆ ವಿಶೇಷವಾದ ಬೋದನಾ ಕಾರ್ಯಕ್ರಮದ ಮೂಲಕ ಬೋದಿಸುವ ವಿದಾನವೇ ಪರಿಹಾರ ಬೋಧನಾ ವಿಧಾನವಾಗಿದೆ.

ವಿಜ್ಞಾನದಲ್ಲಿ ಪಾಠಯೋಜನೆ
* ಪಾಠಯೋಜನೆ :- ಶಿಕ್ಷಕ ನಿರ್ದಿಷ್ಟ ವಿಜ್ಞಾನ ವಿಷಯದ ಘಟಕದಲ್ಲಿ ಒಂದು ಅವಧಿಯಲ್ಲಿ ಅಪೇಕ್ಷಿತ ಉದ್ದೇಶಗಳನ್ನು ಸಾಧಿಸಿ ತೋರಿಸಲು ಪೂರ್ವಯೋಜಿತವಾಗಿ ಉದ್ದೇಶಿಸಲ್ಪಟ್ಟ ಕಲಿಕಾ ಚಟುವಟಿಕೆಗಳ ಸಂಘಟನಾ ರೂಪವೇ ವಿಜ್ಞಾನ ಪಾಠ ಯೋಜನೆಯಾಗಿದೆ.
* ಘಟಕ ಯೋಜನೆ :- ಒಂದು ಅಧ್ಯಯನವನ್ನು ಅಥವಾ ಘಟಕವನ್ನು ಬೋಧಿಸಲು ತಯಾರಿಸುವ ಯೋಜನೆಗೆ ಘಟಕಯೋಜನೆ ಎನ್ನುತ್ತಾರೆ. ಸುವ್ಯವಸ್ಥಿತಗೊಳಿಸಲ್ಪಟ್ಟಂತಹ ಕಲಿಕಾ ಪರಿಸರದ ಅರ್ಥ ಗರ್ಬಿತ ಪ್ರಮುಖ ನೋಟವೇ ಘಟಕ ಯೋಜನೆ

ಘಟಕ ಯೋಜನೆಯ ಹಂತಗಳು :
1. ಒಂದು ಘಟಕವನ್ನು ಉಪಘಟಕಗಳನ್ನಾಗಿ ವಿಂಗಡಿಸುವುದು
2. ಬೋಧನಾಂಶಗಳನ್ನು ಪಟ್ಟಿಮಾಡುವುದು
3. ಕಲಿಕೆ ಸಂದರ್ಭವನ್ನು ರೂಪಿಸುವುದು
4. ಕಲಿಕೆಯ ಫಲವನ್ನು ಮೌಲ್ಯಮಾಪನ ಮಾಡುವುದು

* ಪಾಠಯೋಜನೆ ಮತ್ತು ಘಟಕ ಯೋಜನೆಗಳ ವ್ಯತ್ಯಾಸಗಳು
ಪಾಠಯೋಜನೆ …… ಘಟಕ ಯೋಜನೆ
1. ಇದರ ಗಾತ್ರ ಚಿಕ್ಕದು 1) ಇದರ ಗಾತ್ರ ದೊಡ್ಡದು
2. ಬೋದನಂಶಗಳ ಮತ್ತು 2) ಬೋದನಂಶಗಳ ಮತ್ತು ಬೋದನಾ ಉಪರಣಗಳ ಬೋದನಾ ಉಪರಣಗಳ ಕಡಿಮೆ ಸಂಖ್ಯೆಯಲ್ಲಿರುತ್ತವೆ ಹೆಚ್ಚು ಸಂಖ್ಯೆಯಲ್ಲಿರುತ್ತವೆ
3. ನಿರಂತರ ಮೌಲ್ಯಮಾಪನಕ್ಕೆ 3. ಇದು ವ್ಯಾಪಕ ಅವಶ್ಯಕತೆ ಇದೆ ಮೌಲ್ಯಮಾಪನಕ್ಕೆ ಅವಕಾಶವಿದೆ
4. ಬೋಧನಾಂಶಗಳ ವಿಂಗಡಣೆ ಇರುತ್ತದೆ.4. ಉಪ ಘಟಕಗಳ ವಿಂಗಡಣೆ ಇರುತ್ತದೆ

*. “ಪೂರಕ ಬೋಧನೆಯಲ್ಲಿ ಸಮೂಹ ಮಾಧ್ಯಮಗಳು ಪಾತ್ರ
ಉ:- ಶಿಕ್ಷಕನು ಯೋಜಿಸಿದ ಬೋಧನೆಯಿಂದ ಹೆಚ್ಚು ಕಲಿಕೆ ಅಗತ್ಯವಿದ್ದ ಹೆಚ್ಚಿನ ಕಲಿಕೆಗೆ ಪೂರಕ ಕಲಿಕೆಯ ಅಗತ್ಯವಿರುತ್ತದೆ. ಈ ಪೂರಕ ಕಲಿಕೆಯ ಉದ್ದೇಶವನ್ನು ಕಾರ್ಯರೂಪಕ್ಕೆ ತರಲು ಸಮೂಹ ಮಾಧ್ಯಮವು ಸಹಾಯಕವಾಗುತ್ತದೆ. ಇಲ್ಲಿ ಸಮೂಹ ಮಾಧ್ಯಮಗಳೆಂದರೆ ದಿನ ಪತ್ರಿಕೆಗಳು, ರೇಡಿಯೋ, ದೂರದರ್ಶಕಗಳು ತರಗತಿಯಲ್ಲಿ ಶಿಕ್ಷಕ ಬೋದಿಸಿದ ವಿಷಯಕ್ಕೆ ಪೂರಕವಾಗಿ ಹೆಚ್ಚು ಹೆಚ್ಚು ವಿಷಯವನ್ನು ಪ್ರಕಟಿಸುವದರಿಂದ ಮಕ್ಕಳಲ್ಲಿ ಕಲಿಕೆ ಇನ್ನು ಹೆಚ್ಚಾಗುವುದಕ್ಕೆ ಸಾಧ್ಯವಾಗುತ್ತದೆ. ಮತ್ತು ಪಡೆದು ಕೊಳ್ಳುವ ಜ್ಞಾನದ ಮಟ್ಟವು ಕೂಡ ವ್ಯಾಪಕವಾಗಲು ಸಾಧ್ಯವಾಗುತ್ತದೆ. ಆದ್ದರಿಂದ ಪೂರಕ ಬೋಧನೆಗೆ ಸಮೂಹ ಮಾಧ್ಯಮಗಳು ಹೆಚ್ಚು ನೆರವಾಗುತ್ತದೆ.

*. ಪೂರಕ ಬೋಧನೆಯಿಂದ ವಿಜ್ಞಾನದಲ್ಲಿ ಮಕ್ಕಳಿಗೆ ಸಿಗುವ ಅನುಕೂಲತೆಗಳು

ಪೂರಕ ಬೋಧನೆಯ ಅನುಕೂಲತೆಗಳು :-
1) ವಿದ್ಯಾರ್ಥಿಗಳ ಅವಧಾನವನ್ನು ಹೆಚ್ಚು ಆಕರ್ಷಕವಾಗಿರುತ್ತದೆ.
2) ದಿನ ನಿತ್ಯ ತರಗತಿ ಬೋಧನೆಗಿಂದ ಹೆಚ್ಚು ಆಕರ್ಷಕವಾಗಿರುತ್ತದೆ.
3) ಪ್ರತಿ ಸಆಮಥ್ರ್ಯದ ಬೆಳವಣಿಗೆ ಮತ್ತು ಅದನ್ನು ಪ್ರಭುತ್ವದ ಕಡಿಗೆ ಕೊಂಡೊಯ್ಯವಂತಹ ಬೋಧನಾ ಸದರ್ಭಗಳನ್ನು ಸ್ಪಷ್ಟವಾಗಿ ರೂಪಿಸಲು ಸಾಧ್ಯವಾಗುತ್ತದೆ.
4) ಬಹುವಿಧ ಮಾಧ್ಯಮಗಳನ್ನು ಉಪಯೋಗಿಸಿ ಬೋಧಿಸಲು ಸಾಧ್ಯವಾಗುತ್ತದೆ.
5) ಬಹುವಿಧ ಮಾಧ್ಯಮಗಳು ಮಕ್ಕಳ ಆಸಕ್ತಿಯನ್ನು ಹೆಚ್ಚಿಸಿ ಅಭಿಪ್ರೇರಣೆ ಮೂಡಿಸುತ್ತದೆ.
6) ಪ್ರಯೋಗಗಳನ್ನು ಪ್ರಾತ್ಯಕ್ಷಿಕೆಗಳನ್ನು ಪೂರಕ ಬೋಧನೆಯಲ್ಲಿ ಉಪಯೋಗಿಸಲು ಅವಕಾಶವಿದೆ.
7) ಧ್ವನಿಸುರುಳಿಗಳು, ದೃಕ್-ಶ್ರವಣ ಉಪಕರಣಗಳು & ಗಣಕಯಂತ್ರದಂತಹ ಸಾಮಗ್ರಿಗಳನ್ನು ಬಳಸುವುದರಿಂದ ಪೂರಕ ಬೋಧನೆ ಪರಿಣಾಮಕಾರಿ ಯಾಗಿರುತ್ತದೆ.
8) ವಿಡಿಯೋ ಕ್ಯಾಸೆಟ್‍ಗಳ ಮೂಲಕ ಅನೇಕ ವಿಷಯಗಳನ್ನು ಬೋಧಿಸಬಹುದು.
9) ವಿಡಿಯೋ ಕ್ಯಾಸೆಟ್‍ಗಳ ಮೂಲಕ ಅನೇಕ ವಿಷಯಗಳನ್ನು ಬೋಧಿಸಬಹುದು.
10) ವಿಜ್ಞಾನದ ಆಧುನಿಕ ವಿಷಯಗಳನ್ನು ಕಲಿಯಲು ಪೂರಕ ಬೋಧನೆ ಮಕ್ಕಳನ್ನು ಪ್ರೇರೇಪಿಸುತ್ತದೆ.

* ಪೂರಕ ಬೋಧನೆಯ ಯಶಸ್ವಿಯಾಗಲು ಅಗತ್ಯವಾದ ಅಂಶಗಳು
ಪೂರಕ ಬೋಧನೆಯ ಯಶಸ್ವಿಯಾಗಲು ನಾಲ್ಕು ಅಂಶಗಳನ್ನು ಈ ಕೆಳಗೆ ಕಾಣವಹುದಾಗಿದೆ. ಅವುಗಳೆಂದರೆ.
1) ವಿದ್ಯಾರ್ಥಿಗಳ ಅವಧಾನವನ್ನು ಹೆಚ್ಚು ಹೊತ್ತು ಹಿಡಿದಿಡುವ ಕಾರ್ಯಕ್ರಮವಾಗಬೇಕು.
2) ದಿನನಿತ್ಯದ ತರಗತಿ ಅವಧಾನವನ್ನು ಹೆಚ್ಚು ಹೊತ್ತು ಹಿಡಿದಿರುವ ಕಾರ್ಯಕ್ರಮವಾಗಬೇಕು.
3) ಪ್ರತಿ ಸಾಮಥ್ರ್ಯದ ಬೆಳವಣಿಗೆ ಮತ್ತು ಅದನ್ನು ಪ್ರಭುತ್ವದ ಕಡಿಗೆ ಕೊಂಡೊಯ್ಯವಂತಹ ಬೋಧನಾ ಸಂದರ್ಭಗಳನ್ನು ಸ್ಷಷ್ಟವಾಗಿ ರೂಪಿಸಲ್ಪಟಿರಬೇಕು.
4) ವೀಡಿಯೋ ಕ್ಯಾಸೆಟ್‍ಗಳು ಮತ್ತು ಧ್ವನಿಸುರಳಿಗಳಿಂದ ಅನೇಕ ವಿಷಯಗಳನ್ನು ಸುಲಭವಾಗಿ ಬೋಧಿಸಬಹುದು.
5) ಮುದ್ರತಿವಾಗಿರುವ ವಿಡಿಯೋ ಪಾಠಗಳನ್ನು ಉಪಯೋಗಿಸಿ ವಿಜ್ಞಾನದ ವಿಷಯಗಳನ್ನು ಸುಲಭವಾಗಿ ಬೋಧಿಸಬಹುದು.
6) ಧ್ವನಿ ಸುರುಳಿಗಳು, ದೃಕಶ್ರವಣ ಉಪಕರಣಗಳಿಂದ ಅನೇಕ ವಿಷಯಗಳನ್ನು ಮತ್ತು ಗಣಕ ಯಂತ್ರಗಳನ್ನು ಉಪಯೋಗಿಸಿ ಬೋಧಿಸಿದಾಗ ಪೂರಕ ಬೋಧನೆ
ಪರಿಣಾಮಕಾರಿಗಯಾಗುತ್ತದೆ. ಇನ್ನು ಹಲವಾರು ಅಂಶಗಳು ಪೂಕ ಬೋಧನೆ ಯಶಸ್ವಿಯಾಗಲು ಸಹಕಾರಿಯಾಗಿವೆ.

* ವಿಜ್ಞಾನದಲ್ಲಿ ಕೈಗೊಳ್ಳಬಹುದಾದ ವಿವಿಧ ರೀತಿಯ ಪ್ರಾಯೋಗಿಕ ಚಟುವಟಿಕೆಗಳು
1) ಎರಡು ದಂಡ ಕಾಂತಗಳನ್ನು ಬಳಸಿ ಕಾಂತಗಳ ಗುಣದರ್ಮಗಳನ್ನು ವಿಶ್ಲೇಷಿಸುವುದು.
2) ಲಿಟ್ಮಸ್ ಕಾಗದ ಮತ್ತು ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣದಿಂದ ನೀಲಿ ಲಿಟ್ಮಸ್ ಕೆಂಪು ಬಣ್ಣಕೆ ಹಾಗೂ ಲಿಟ್ಮಸ್ ನೀಲಿ ಬಣ್ಣಕ್ಕೆ ಪರಿವರ್ತಿಸಿರುವುದನ್ನು ಪರಿಶೀಲಿಸುವುದು.
3) ಹಸಿರು ಸಸ್ಯಗಳಿಗೆ ಬೆಳಕು ಮತ್ತು ನೀರು ಅವಶ್ಯಕ ಎಂಬುದನ್ನು ಪ್ರಯೋಗದ ಮೂಲಕ ತಿಳಿಯುವುದು.
4) ಬೆಳಕಿನ ವಕ್ರೀಭವನದ ತಿಳಿಯಲು ನೀರು, ಗಾಜು ವಿವಿಧ ದ್ರವಗಳನ್ನು ಬಳಸುವುದು.
5) ಲೋಹಗಳನ್ನು ಕಾಯಿಸಿದಾಗ ಹಿಗ್ಗುತ್ತವೆ. ಮತ್ತು ತಂಪು ಮಾಡಿದಾಗ ಕುಗ್ಗುತ್ತವೆ ಎಂಬುದನ್ನು ತಿಳಿಯವುದು.
6) ಇಂಗಾಲದ ಡೈ ಆಕ್ಸೈಡ್ ಅನ್ನು ಪ್ರಯೋಗ ಶಾಲೆಯಲ್ಲಿ ತಯಾರಿಸುವುದು.
7) ಏಕ ಜೀವಕೋಶ ಹಾಗೂ ಬಹು ಜೀವಕೋಶಗಳ ಭಾಗಗಳನ್ನು ಅಧ್ಯಯನ ಮಾಡುವುದು.
8) ಮಂಜುಗಡ್ಡೆ ತಂಪು ಹಾಗೂ ಕೊಬ್ಬರಿ ಎಣ್ಣೆ ಕಾಯಿಸಿದರೆ ದ್ರವವಾಗುತ್ತದೆ ಹಾಗೂ ತಂಪು ಮಾಡಿದರೆ ಘನರೂಪಕ್ಕೆ ಪರಿವರ್ತನೆ ಹೊಂದುತ್ತವೆ ಎಂಬುದನ್ನು ತಿಳಿಯುವುದು.
9) ಶಬ್ದ ಪ್ರಸಾರವಾಗಲು ಮಾಧ್ಯಮ ಅವಶ್ಯಕ ಎಂಬುದನ್ನು ಪ್ರಯೋಗದ ಮೂಲಕ ತಿಳಿಯುವುದು.
10) ಪ್ರಯೋಗ ಶಾಲೆಯಲ್ಲಿ ಅಕಾಂತೀಯ ವಸ್ತುಗಳನ್ನು ಕಾಂತೀಯ ಗೊಳಿಸುವುದು.

* ವಿಜ್ಞಾನ ಬೋಧನೆಯಲ್ಲಿ ಪ್ರಯೋಗಗಳ ಮಹತ್ವ
1) ಪ್ರಯೋಗಗಳು ವೈಜ್ಞಾನಿಕ ಮನೋಭಾವನೆಯ ಬೆಳವಣಿಗೆ ತಳಹದಿಯಾಗುತ್ತದೆ.
2) ವಿಜ್ಞಾನದ ಯಾವುದೇ ಪರಿಕಲ್ಪನೆ, ತತ್ವ ಮತ್ತು ನಿಯಮ ಅಥವಾ ಸಿದ್ದಾಂತಗಳಿಗೆ ಪ್ರಾಯೋಗಿಕ ಆಧಾರವಿದೆ. ಎಂಬ ಅರಿವನ್ನು ಉಂಟುಮಾಡುತ್ತದೆ.
3) ಅನ್ವೇಷಣೆ, ರಚನಾತ್ಮಕ ಪರಿಶೋಧನೆಯಂತಹ ಉತ್ತಮ ಗುಣಗಳನ್ನು ಪೋಷಿಸಿ ಬೆಳೆಸುತ್ತದೆ.
4) ವೈಜ್ಞಾನಿಕ ವಿಚಾರಗಳಲ್ಲಿ ಆಸಕ್ತಿ ಬೂಡಿಸುವವು.
5) ವಿಜ್ಞಾನ ಪ್ರದರ್ಶನ ಹಾಗೂ ಮೇಳಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುತ್ತದೆ.

* ಘಟಕ ಯೋಜನೆಯನ್ನು (ನಮೂನೆಯನ್ನು) ತಯಾರಿಸಲು ಸಹಾಯಕವಾಗುವ ಅಂಶಗಳು
1) ಒಂದು ಘಟಕವನ್ನು ಉಪಘಟಕಗಳನ್ನಾಗಿ ವಿಶ್ಲೇಷಿಸುವುದು ಒಂದು ಘಟಕವನ್ನು ಉಪಘಟಕಗಳನ್ನಾಗಿ ವಿಶ್ಲೇಷಿಸುವುದರಿಂದ ಪಾಠದ ಸಮಗ್ರತೆಯನ್ನು ಕಾಯ್ದ ಕೊಳ್ಳಬಹುದು. ವಿಶ್ಲೇಷಿತ ಅಂಶಗಳು ಪಾಠದ ವಿಷಯದ ಸೂಕ್ಷ್ಮತೆಯನ್ನು ಕೊಡಬಲ್ಲದು. ಇವು ಕಲಿಕೆ ಫಲಗಳನ್ನು ಊಹಿಸುವಲ್ಲಿ ನಿರ್ದಿಷ್ಟತೆಗಳನ್ನು ಗುರ್ತಿಸುವಲ್ಲಿ ವಿಶ್ಲೇಷಣೆಯು ಸಹಾಯಕವಾಗುತ್ತದೆ.
2) ಬೋಧನಾಂಶಗಳ ಪಟ್ಟಿ ಮಾಡುವುದು. ಘಟಕವನ್ನು ವಿಶ್ಲೇಷಣೆ ಮಾಡಿದ ನಂತರ ಪ್ರತಿ ಉಪ ಘಟಕದಲ್ಲಿರುವ ಎಲ್ಲಾ ಬೋಧನಾಂಶಗಳನ್ನು ಒಂದು ಸರಣಿಯ ರೂಪದಲ್ಲಿ ಬರೆದುಕೊಳ್ಳಬೇಕು.
3) ಬೋಧನಾ ಉದ್ದೇಶಗಳನ್ನು ರೂಪಿಸುವುದು. ಬೋಧನಾ ತತ್ವವನ್ನು ಆದಾರವಾಗಿಟ್ಟುಕೊಂಡು ಉದ್ದೇಶಗಳನ್ನು ಈ ಹಂತಗಳಲಿ ಬರೆದಿಡುಬೇಕು, ಜ್ಞಾನ,
ಅರಿವು ಮತ್ತು ಕೌಶಲಗಳ ವಲಯದಲ್ಲಿನ ನಿರ್ದಿಷ್ಟಗಳನ್ನು ಗಮನದಲ್ಲಿಟ್ಟುಕೋಡು ಬೊಧನೋದ್ದೇಶಗಳನ್ನು ರೂಡಿಸಿಕೊಳ್ಳಬೇಕು.
4) ಕಲಿಕೆಯ ಫಲಗಳ ಮೌಲ್ಯಮಾಪನ ಪ್ರತಿಯೊಂದು ನಿರ್ದಿಷ್ಟವನ್ನು ಒಂದು ಕಲಿಕೆಯ ಫಲವನ್ನಾಗಿ ನೋಡಬೇಕು. ಪ್ರತಿ ನಿರ್ದಿಷ್ಟವು ಸೂಚಿಸುವ ಫಲವನ್ನು ಪಡೆಯಬೇಕಾದರೆ ನಿದ್ಯಾರ್ಥಿಯು ಯಾವ ಚಟುವಟಿಕೆಗಳನ್ನು ಮಾಡುವುದರಿಂದ ಸಾದ್ಯ? ಈ ಚಟುವಟಿಕೆಗಳನ್ನು ಮಾಡಿಸಲು ಶಿಕ್ಷಕರು ಯಾವ ಪ್ರಕಾರದ ಸಂದರ್ಭವನ್ನು ರೂಪಿಸಬೇಕು? ಎಂಬುದನ್ನು ಯೋಜಿಸಿ ಯೋಜನೆಯನ್ನು ಸಿದ್ಧಪಡಿಸಬೇಕು.
5) ಕಲಿಕೆಯ ಫಲಗಳ ಮೌಲ್ಯಮಾಪನ ಬೋಧನೆ ಹಾಗೂ ಕಲಿಕೆಯ ಫಲಗಳನ್ನು ಪರೀಕ್ಷಿಸಲು ಹಾಗೂ ನಿರ್ದಿಷ್ಟವನ್ನು ಪರೀಕ್ಷಿಸುವ ಪ್ರಶ್ನೆಗಳನ್ನು ರೂಪಿಸಿಕೊಂಡಿರಬೇಕು. ಮೌಲ್ಯಮಾಪನವು ಒಂದು ಸಂದರ್ಭದ ರೂಪದಲ್ಲಾಗಲಿ ಅಥವಾ ಒಂದು ಚಟುವಟಿಕೆಯ ರೂಪದಾಲ್ಲಾಗಲ್ಲಿ ಯೋಜಿಸಿಕೊಳ್ಳಬಹುದು.

* ವಾರ್ಷಿಕ ಕಾರ್ಯಯೋಜನೆ ಪ್ರಾಮುಖ್ಯತೆ
ವಾರ್ಷಿಕ ಕಾರ್ಯಯೋಜನೆ ಪ್ರಾಮುಖ್ಯತೆ ಎಂದಾಗ ಪಠ್ಯಕ್ರಮದ ಎಲ್ಲಾ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಒಂದು ಶಾಲೆಯ ಬೇರೆ ಬೇರೆ ವಿಷಯಗಳನ್ನು ಬೋಧಿಸಿ ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ತೊಡಗಬೇಕಾದರೆ ಶಾಲೆಯ ಪ್ರತಿಯೊಂದು ವಿಭಾಗವು ತಮ್ಮ ಜವಾಬ್ದಾರಿಯನ್ನು ಒಂದು
ಯೋಜನೆಯ ಆಧಾರದ ಮೇಲೆ ರೂಪಿಸಿ ಕಾರ್ಯಗತವನ್ನಾಗಿ ಮಾಡಬೇಕು.
ಇದರ ಪ್ರಾಮುಖ್ಯತೆ ಎಂದಾಗ :- ಶಾಲೆಯ ವರ್ಷದ ಕಾರ್ಯಕ್ರವವು ತಯಾರಾಗಬೇಕಾದರೆ ಪ್ರತಿಯೊಂದು ವಿಷಯದಲ್ಲೂ ಪಠ್ಯವಸ್ತುವನ್ನು ಗಮನದಲ್ಲಿಟ್ಟುಕೊಂಡು ಒಂದು ವಾರ್ಷಿಕ ಯೋಜನೆ ತಯಾರಿಸಬೇಕು.
* ಎಲ್ಲಾ ವಿಷಯಗಳನ್ನು ನಿಯಮಿತವಾಗಿ ಬೋಧಿಸಲ್ಪಡಲು ಸಹಾಯಕವಾಗಿದೆ.
* ಕಾರ್ಯಕ್ರಮಗಳ ಪರಸ್ಪರ ಹೊಂದಾಣಿಕೆ ಇರುತ್ತದೆ.
* ಮಗುವಿನ ಶೈಕ್ಷಣಿಕ ಬೆಳವಣಿಗೆಯನ್ನು ಸಮಂಜಸವಾಗಿ ಮೌಲ್ಯಮಾಪನ ಮಾಡಲು .
* ಬೋಧನಾ ಕಾರ್ಯಕ್ರಮ ನಿರ್ವಹಣೆಗೊಳ್ಳಲು ಈ ವಾರ್ಷಿಕ ಕಾರ್ಯ ಯೋಜನೆ ಪ್ರಮುಖ್ಯವಗಿದೆ.
* ವರ್ಷದ ಕಾರ್ಯಕಲಾಪಗಳು ಯಾವುದೇ ಗೊಂದಲಳಿಗೆ ಈಡು ಮಾಡದಂತೆ ಈ ವಾರ್ಷಿಕ ಕಾರ್ಯಯೋಜನೆ ತನ್ನ ಪಾತ್ರ ಮತ್ತು ಪ್ರಭಾವ ಬೀರಿದೆ.
* ಒಟ್ಟಾರೆ ಒಂದು ವರ್ಷದ ನಿಜ್ಞಾನದ ಕಾರ್ಯಕ್ರಮವನ್ನು ಪ್ರತಿಯೊಂದು ತರಗತಿಗೂ ಅನ್ವಯವಾಗುವಂತೆ ತಯಾರಿಸುವ ಯೋಜನೆಯನ್ನು ಈ ವಾರ್ಷಿಕ ಕಾರ್ಯ ಯೋಜನೆ ಮುಗಿದ ಈ ಮೇಲ್ಕಂಡ ಪ್ರಾಮುಖ್ಯತೆಯನ್ನು ಪಡೆದಿದೆ ಈವಾರ್ಷಿಕ ಕಾರ್ಯ ಯೋಜನೆ

* ಸಂಪನ್ಮೂಲ ಘಟಕ ಯೋಜನೆಯಿಂದ ವಿಜ್ಞಾನ ಶಿಕ್ಷಕರಿಗೆ ಆಗುವ ಅನುಕೂಲಗಳು ಸಂಪನ್ಮೂಲ ಘಟಕ ಯೋಜನೆಯು ವಿಜ್ಞಾನ ಶಿಕ್ಷಕರಿಗೆ ಸಹಾಯಕವಾಗಿದೆ ಎಂದಾಗ.
* ವಿಜ್ಞಾನ ಶಿಕ್ಷಕನ ಅವಶ್ಯಕತೆಗಳನ್ನು ಪೂರೈಸುವ ಒಂದು ನಿಧಿ ಈ ಸಂಪನ್ಮೂಲ ಘಟಕ ಯೋಜನೆ.
* ಶಿಕ್ಷಕನಿಗೆ ಯಾವುದೇ ವಸ್ತುವಿನ ವಿಚಾರದ ಅಥವಾ ಮಾಹಿತಿಯ ಕೊರತೆಯೇ ಇರಲಿ ಸಂಪನಮೂಲ ಸಹಾಯಕ್ಕೆ ಬುರುವುದು.
* ಘಟಕದ ಬೋಧನೆಯ ನಂತರ ಮಕ್ಕಳನ್ನು ಪರೀಕ್ಷಿಸಿ ನಂತರ ಪಾಠ ಮುಂದುವರೆಸುವುದರಿಂದ ಶಿಕ್ಷಕರಿಗೆ ಆತ್ಮತೃಪ್ತಿ ಉಂಟಾಗುತ್ತದೆ.
* ಮಕ್ಕಳಿಗೆ ಬೋಧಿಸಲು ತಾನು ಹೆಚ್ಚು ಸಂಪನ್ಮೂಲಯತ ವಿಷಯ ಮಾಹಿತಿ ಸಂಗ್ರಹಿಸಲು ಸಹಾಯಕಾರಿ.
* ಸಂಪನ್ಮೂಲ ಘಟಕ ಶಿಕ್ಷಕನ ಬೋಧನಾ ಕಾರ್ಯಕ್ರಮದ ಎಲ್ಲಾ ಆಯಾಮಗಳಿಗೆ ಸಹಾಯ ಮಾಡುವ ಒಂದು ಆಕಾರವಾಗಿದೆ.
* ಶಿಕ್ಷಕ ಹೆಚ್ಚು ಅನುಭವ ಪಡೆಯಲು ಈ ಸಂಪನ್ಮೂಲ ಘಟಕ ಸಹಾಯಕರಿ.
* ಹೆಚ್ಚು ಮಾಹಿತಿಯನ್ನು ಕಲಿಕೆಯ ಸಂದರ್ಭಗಳಲ್ಲಿ ರೂಪಿಸುವ ತಂತ್ರಗಳನ್ನು ಮೌಲ್ಯಮಾಪನಾ ತಂತ್ರ ಶೇಖರಿಸಿಕೊಂಡು ಉಪಯೋಗಿಸಲು ಸಹಾಯ ಮಾಡುವ ಒಂದು ದಾಖಲೆ.
* ಶಿಕ್ಷಕರು ಸೃಜನ ಶೀಲರಾಗಲು, ಪ್ರತಿಭಾವಂತರಾಗಲು ಹಿಂದುಳಿದವರಿಗೂ ವಿಶೇಷ ಕಾರ್ಯಸೂಚಿಸುವ ಹೊತ್ತಿಗೆ ಈ ರೀತಿಯಾಗಿ ಸಂಪನ್ಮೂಲ ಘಟಕ ಯೋಜನೆ ವಿಜ್ಞಾನ ಶಿಕ್ಷಕನಿಗೆ ಸಹಾಯಕಾರಿಯಾಗಿದೆ.

* ವಾರ್ಷಿಕ ಕಾರ್ಯಯೋಜನೆ ಮತ್ತು ವಾರ್ಷಿಕ ಕಾರ್ಯ ಯೋಜನೆಯ ತತ್ವಗಳು
ಒಬ್ಬ ಶಿಕ್ಷಕ ಶೈಕ್ಷಣಿಕ ವರ್ಷದ ಪ್ರಾರಂಭದ ಪೂರ್ವದಲ್ಲಿ ಶಾಲೆಯ ವಿವಿಧ ತರಗತಿಗಳಿಗೆ ತನಗೆ ಒಪ್ಪಿಸಿದ ವಿಷಯದಲ್ಲಿ ಕೈಗೊಳ್ಳಬೇಕಾದ ಪ್ರಾಯೋಗಿಕ ಹಾಗೂ ಬೋಧನಾ ಚಟುವಟಿಕೆಗಳನ್ನು ಹಂಚಿಕೆ ಮಾಡಿಕೊಳ್ಳುವ ಒಂದು ಯೋಜನೆಯನ್ನು ವಾರ್ಷಿಕ ಕಾರ್ಯ ಯೋಜನೆ ಎಂದು ಕರೆಯುತ್ತಾರೆ.

1) ಸಮಾನತೆಯ ತತ್ವ:-
ವಾರ್ಷಿಕ ಕಾರ್ಯ ಯೋಜನೆಯನ್ನು ತಯಾರಿಸುವಾಗ ಒಂದು ಶೈಕ್ಷಣಿಕ ವರ್ಷದ ಪ್ರಾರಂಭದ ತಿಂಗಳಿನಿಂದ ಹಿಡಿದು ವರ್ಷದ ಅಂತಿಮ ತಿಂಗಳಿನವರೆಗೆ ಸಮಾನ್ಯವಾಗಿ ವಿಷಯ ಘಟಕಗಳನ್ನು ಹಂಚಿಕೆಯನ್ನು ಮಾಡುವದೇ ಸಮಾನತೆಯ ತತ್ವ

2) ಸಡಿಲತೆಯ ತತ್ವ:-
ಯೋಜನೆಯನ್ನು ತಯಾರಿಸುವಾಗ ಶಾಲೆಯ ಅಥವಾ ಬೋಧನೆಯ ದೈನಂದಿನಲ್ಲಿ ನಡೆಯುವ ಅನೀರಿಕ್ಷಿತ ಘಟಕಗಳಿಗೆ ತಕ್ಕಂತೆ ವಾರ್ಷಿಕ ಯೋಜನೆಯಲ್ಲಿ
ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗುವಂತೆ ರಚಿಸಬೇಕು

3) ಜವಾಬ್ದಾರಿಯ ತತ್ವ:-
ಈ ಯೋಜನೆಯನ್ನು ತಯಾರಿಸುವಾಗ ಶಿಕ್ಷಕನು ಹಾಕಿಕೊಂಡ ಚಟುವಟಿಕೆಗಳ ಯೋಜನೆಗೆ ತಕ್ಕಂತೆ ಕಾರ್ಯ ನಿರ್ವಹಿಸಲು ಸಾಧ್ಯವಾಗುವಂತೆ ಹಾಗೂ ಶಿಕ್ಷಕ
ತನ್ನ ಕರ್ತವ್ಯವನ್ನು ಚಾಚು ತಪ್ಪದೆ ಪಾಲಿಸಲು ಸಾದ್ಯವಾಗುವಂತೆ ವಾರ್ಷಿಕ ಕಾರ್ಯ ಯೋಜನೆಯನ್ನು ರಚಿಸಬೇಕು.

4) ವಾಸ್ತವಿಕತೆಯ ತತ್ವ:-
ಯೋಜನೆಯನ್ನು ತಯಾರಿಸುವಾಗ ಶಿಕ್ಷಕನು ಶಾಲೆಯ ಸಂಸ್ಥೆಯ ಯೋಜನೆಯನ್ನು ಗಮನದಲ್ಲಿಟ್ಟುಕೊಂಡು ಚಟುವಟಿಕೆಗಳು ವಾಸ್ತವಿಕತೆಯನ್ನು ಪ್ರತಿಬಿಂಬಿಸುವಂತೆ ಹಾಗೂ ಅನುಸರಿಸಲು ಸುಲಭವಾಗುವಂತೆ ರಚಿಸಬೇಕು.

5) ಕ್ರಮಬದ್ಧತೆಯ ತತ್ವ:-
ವಾರ್ಷಿಕ ಕಾರ್ಯ ಯೋಜನೆಯಲ್ಲಿ ಹಾಕಿಕೊಂಡಂತೆ ತರಗತಿಯ ಚಟುವಟಿಕೆಗಳನ್ನು ಕ್ರಮವಾಗಿ ನಿರ್ವಹಿಸಲು ಸಾಧ್ಯವಾಗುವಂತೆ ರಚಿಸಿಕೊಳ್ಳಬೇಕು.

* ವಿಜ್ಞಾನ ಪಾಠ ಯೋಜನೆ
ಶಿಕ್ಷಕನು ನಿರ್ದಿಷ್ಟ ವಿಜ್ಞಾನ ವಿಷಯದ ಘಟಕದಲ್ಲಿ ಒಂದು ಅವದಿಯಲ್ಲಿ ಆಪೇಕ್ಷಿತ ಉದ್ದೇಶಿಸಲ್ಪಟ್ಟ ಕಲಿಕಾ ಚಟುವಟಿಕೆಗಳ ಸಂಘಟನಾ ರೂಪವೇ ವಿಜ್ಞಾನ ಪಾಠ
ಯೋಜನೆ ಎನ್ನಬಹುದು.
1. ವಿಜ್ಞಾನ ಪಠ್ಯಕ್ರಮ ರಚನೆಯಲ್ಲಿ ಅನುಸರಿಸಬೇಕಾದ ತತ್ವಗಳು
ವಿಜ್ಞಾನ ಪಠ್ಯಕ್ರಮ ರಚನೆಯಲ್ಲಿ ಅನುಸರಿಸಬೇಕಾದ ತತ್ವಗಳು ಎಂದಾಗ
ಶಿಶುಕೇಂದ್ರಿತ ತತ್ವ :
1980 ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರತಿಪಾದಿತವಾಗಿರುವಂತೆ ಪಠ್ಯವಸ್ತುವು ಶಿಶುಕೇಂದ್ರಿತವಾಗಿರಬೇಕು ಮಕ್ಕಳ ಜ್ಞಾನ ಮಟ್ಟಕ್ಕೆ ತಕ್ಕುದಾದ ವಿಜ್ಞಾನ ವಿಜ್ಞಾನ ಪಠ್ಯವಸ್ತುವನ್ನು ರಚಿಸಬೇಕು.

ಸಮುದಾಯ ಕೇಂದ್ರಿತ ತತ್ವ :
ಶಾಲೆಯಲ್ಲಿ ಕಲಿಯುವ ಮಗುವು ಸಮುದಾಯದ ಒಂದು ಅವಿಭಾಜ ಅಂಗ ಅದು ಏಕಾಂಗಿಯಲ್ಲಿ ಆ ಮಗುವಿನ ಬೇಡಿಕೆಗಳ ಸಮುದಾಯದ ಬೇಡಿಕೆಗಳಲ್ಲಿ ಪ್ರತಿಬಿಂಬಿತವಾಗಿರುತ್ತದೆ. ಪಠ್ಯವಸ್ತುವು ಸಮುದಾಯದ ದ್ಯೇಯೋದ್ದೇಶಗಳಿಗೆ ಅನುಗುಣವಾಗಿರಬೇಕು

ಸಮಗ್ರತೆಯ ತತ್ವ :
ವಿದ್ಯಾರ್ಥಿಯು ಚಟುವಟಿಕೆಗಳನ್ನು ಸಮಗ್ರಗೊಳಿಸಬೇಕು ವಿಜ್ಞಾನದ ಕಲಿಕೆ ಬೇರೆ ವಿಷಯಗಳ ಕಲಿಕೆಗಳೊಂದಿಗೆ ಬೆಸೆಯುವಂತೆ ಚಟುವಟಿಕೆಗಳನ್ನು ಸಮಗ್ರಗೊಳಿಸಬೇಕು.

ಸಂರಕ್ಷಣೆಯ ತತ್ವ :
ಯಾವುದೇ ರಾಷ್ಟ್ರದ ನಾಗರೀಕತೆಯ ಮಜಲಿನ್ನ ಗುರುತಿಸಿಕೊಳ್ಳುವದಕ್ಕೆ ಆ ರಾಷ್ಟ್ರದಲ್ಲಿ ಇರುವ ಸ್ಮಾರಕಗಳು, ಕೆತ್ತನೆಗಳು, ಕುರುಹುಗಳು ಅತಿ ಮುಖ್ಯ ಇಂತಹವುಗಳನ್ನು ಗುರುತಿಸಿ ಸಂರಕ್ಷಿಸಬೇಕಾದದು ಮುಂಬರುವ ಪೀಳಿಗೆಗಳ ಪ್ರಾಮುಖ್ಯತೆಯಾಗಿರುತ್ತದೆ.

ಸೃಜನಾತ್ಮಕತೆಯ ತತ್ವ :
ಸೃಜನಾತ್ಮಕ ವ್ಯಕ್ತಿಗತವಾದದ್ದು ಪ್ರಾಥಮಿಕ ಶಾಲಾ ಮಕ್ಕಳಲ್ಲಿ ಸೃಜನ ಶೀಲತೆ ಹೆಚ್ಚಾಗಿದ್ದು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಪಠ್ಯವಸ್ತುವಿನಲ್ಲಿ ಈ ತತ್ವ ಅವಳವಡಿಸಿಕೊಳ್ಳುವುದರಿಂದ ಸೃಜನ ಶೀಲ ಚಟುವಟಿಕೆಗಳನ್ನು ವಿಜ್ಞಾನ ಬೋಧನೆಯಲ್ಲಿ ಅಳವಡಿಸಿಕೊಳ್ಳಲು ಸಹಾಯಕಾರಿಯಾಗಿರುತ್ತದೆ.

ಚಟುವಟಿಕಾ ಕೇಂದ್ರಿತ ತತ್ವ :
ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ಮಕ್ಕಳು ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುತ್ತಾರೆ, ಅವರ ಆಸಕ್ತಿಗಳನ್ನು ಉತ್ತೇಜಿಸಲು ಚಟುವಟಿಕೆಗಳು ಅಗತ್ಯ ಈ ನಿಟ್ಟಿನಲ್ಲಿ ಪ್ರಯೋಗಾಲಯ ಕ್ಷೇತ್ರ, ಭೇಟಿ, ಚರ್ಚಾಸ್ಫರ್ಧೆ, ರಸಪ್ರಶ್ನೆ ಮುಂತಾದವು.

ವೈವಿದ್ಯತೆ ಹಾಗೂ ಸ್ಥಿತಿ ಸ್ಥಾಪಕ ತತ್ವ :
ವಿಜ್ಞನ ವಿಶಿಷ್ಠ ಜ್ಞಾನದ ಆಕರವೆಂಬುದು ತಿಳಿದಿದೆ ಜೀವ ಸಂಕುಲದಲ್ಲಿನ ವೈವಿದ್ಯ ನೈಸರ್ಗಿಕ ಸಂಪನ್ಮೂಲಗಳ ವೈವಿದ್ಯ ಪ್ರಕೃತಿಯ ವಿದ್ಯಮಾನಗಳಲ್ಲಿನ ವೈವಿದ್ಯ ವಿಜ್ಞಾನ ಪಠ್ಯವಸ್ತುವಿನಲ್ಲಿ ಹಾಸಹೊಕ್ಕಾಗಿರಬೇಕು.

ಶಾಲಾ ಅನುಭವಗಳ ಒಟ್ಟು ಮೊತ್ತ :
ವಿಜ್ಞಾನ ಪಠ್ಯಕ್ರಮದಲ್ಲಿ ಶಾಲೆಯ ಒಟ್ಟು ಅನುಭವ ಹೊರಹೊಮ್ಮುವಂತಿರಬೇಕು. ಈ ರೀತಿಯಾಗಿ ವಿಜ್ಞಾನ ಪಠ್ಯಕ್ರಮದಲ್ಲಿ ಈ ತತ್ವಗಳನ್ನು ಬಳಸಿಕೊಂಡು ರಚಿಸಲಾಗಿದೆ.

* ವಿಜ್ಞಾನದಲ್ಲಿ ಸಹ ಚಟುವಟಿಕೆಗಳ ಮಹತ್ವ
ವಿಜ್ಞಾನದಲ್ಲಿ ಸಹ ಪಠ್ಯ ಚಟುವಟಿಕೆಗಳ ಮಹತ್ವ ನೀಡಲಾಗಿದೆ. ಸಹಪಠ್ಯ ಚಟುವಟಿಕೆಗಳು ಘನತರವಾದ ಶೈಕ್ಷಣಿಕ ಮೌಲ್ಯಗಳನ್ನು ಪಡೆದಿದೆ. ವಿಜ್ಞಾನ ಕಲಿಕೆ ಹಾಗೂ ಬೋಧನೆಯ ಆಸಕ್ತಿಯುತವಾಗುವಂತೆ ಮಾಡುತ್ತದೆ.
* ಮಕ್ಕಳನ್ನು ಸಹೃದಯರನ್ನಾಗಿ ಸಹ ಕಾರ ಮನೋಭಾವ ವುಳ್ಳವರನ್ನಾಗಿಯೂ ಪರಿವರ್ತಿಸುತ್ತವೆ.
* ಈ ಸಹಪಠ್ಯ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕತೆ
* ವೈಜ್ಞಾನಿಕ ಮನೋಭಾವನೆಯನ್ನು ಬಳಸುತ್ತದೆ.
* ಬಿಡುವಿನ ವೇಳೆಯಲ್ಲಿ ಕೆಲವು ಉತ್ತಮ ಹವ್ಯಾಸಗಳು ಬೆಳಸಿಕೊಳ್ಳಲು ಸಹಾಯಕವಾಗಿದೆ.
* ಇವೆಲ್ಲವು ವಿಜ್ಞಾನದ ಬೋಧನೆಗೆ ಅಭಿಪ್ರೇರಣೆಗಳಾಗಿವೆ
* ವಿದ್ಯಾರ್ಥಿಯನ್ನು ಸರಿಯಾಗಿ ಅರಿತುಕೊಳ್ಳಲು ಶಿಕ್ಷಕರಿಗೆ ನೆರವಾಗುವವು.
* ಸಂದರ್ಭೋಚಿತ ಸಹಪಠ್ಯ ಚಟುವಟಿಕೆಗಳನ್ನು ರೂಪಿಸುವುದರಿಂದ ಉತ್ತಮ ಶೈಕ್ಷಣಿಕ ಗುರಿಗಳನ್ನು ಸಾಧಿಸಬಹುದು.

*. ಉತ್ತಮ ವಿಜ್ಞಾನ ಪಠ್ಯಪುಸ್ತಕದ ಲಕ್ಷಣಗಳು
1. ಪಠ್ಯಪುಸ್ತಕದ ಹೊರಕವಚ ಆಕರ್ಷಣೀಯವಾಗಿರಬೇಕು
2. ಮುದ್ರಣಕ್ಕೆ ಬಳಸಲಾದ ಕಾಗದ ಉತ್ತಮ ಮಟ್ಟದ್ದಾಗಿರಬೇಕು
3. ಉತ್ತಮ ಅನುಭವೀ ಲೇಖಕರಿಂದ ರಚಿಸಿರಬೇಕು
4. ಪಠ್ಯಪುಸ್ತಕಲ್ಲಿ ಬಳಸುವ ಭಾಷೆ ಸರಳವಾಗಿರಬೇಕು
5. ಪಠ್ಯ ವಿಷಯಗಳು ವಿದ್ಯಾರ್ಥಿಗಳ ಮಾನಸಿಕ ವಿಕಾಸಕ್ಕೆ ಬುನಾದಿಯಂತಿರಬೇಕು.
6. ಮುದ್ರಿತ ಅಕ್ಷರಗಳು, ಬಳಸಿದ ಚಿತ್ರಗಳ ಗಾತ್ರ, ವಿದ್ಯಾರ್ಥಿಗಳ ವಯಸ್ಸಿಗೆ ಅನುಗುಣವಾಗಿರಬೇಕು
7. ಬಳಸಿದ ಭಾಷೆಯು ಮಕ್ಕಳ ಮಾನಸಿಕ ಮಟ್ಟಕ್ಕೆ ಹೊಂದಿಕೊಂಡಂತಿರಬೇಕು.

*. ಕ್ಷೇತ್ರ ಪ್ರವಾಸವನ್ನು ಯೋಜಿಸುವಾಗ ಶಿಕ್ಷಕರು ಗಮನದಲ್ಲಿರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು
ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಪ್ರವಾಸವನ್ನು ಯೋಜಿಸುವಾಗ ಗಮನಿಸಬೇಕಾದ ಮುನ್ನೆಚ್ಚರಿಕೆಯ ಕ್ರಮಗಳೆಂದರೆ
1. ಕ್ಷೇತ್ರ ಪ್ರವಾಸವನ್ನು ಕೈಗೊಳ್ಳುವ ಸ್ಥಳವನ್ನು ಸಾಕಷ್ಟು ಮೊದಲೇ ಯೋಚಿಸಿರಬೇಕು
2. ಭೇಟಿ ನೀಡುವಂತಹ ಸ್ಥಳದ ಅಧಿಕಾರಿಗಳಿಂದ ಅನುಮತಿ ಪತ್ರ ಪಡೆದುಕೊಳ್ಳಬೇಕು
3. ವಾಹನ ಸೌಕರ್ಯ, ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಮುಂಚಿತವಾಗಿ ಯೋಜಿಸಬೇಕು
4. ಪ್ರತಿಯೊಬ್ಬ ವಿದ್ಯಾರ್ಥಿಯು ಭರಿಸಬೇಕಾದ ವೆಚ್ಚವನ್ನು ಮುಂಚಿತವಾಗಿ ಯೋಜಿಸಬೇಕು
5. ಪ್ರವಾಸಕ್ಕೆ ತೆಗೆದುಕೊಂಡು ಹೋಗಬೇಕಾದ ವಸ್ತುಗಳ ಬಗ್ಗೆ ಮುಂಚಿತವಾಗಿಯೇ ಸೂಚನೆ ನೀಡಬೇಕು
6. ಪ್ರವಾಸದ ವೇಳಾಪಟ್ಟಿಯನ್ನು ವಿಜ್ಞಾನ ಶಿಕ್ಷಕರು ಮುಖ್ಯ ಶಿಕ್ಷಕರೊಂದಿಗೆ ಚರ್ಚಿಸಿ ತಯಾರಿಸಬೇಕು
7. ಪ್ರವಾಸದಲ್ಲಿ ವಿದ್ಯಾರ್ಥಿಗಳು ಅವಲೋಕಿಸಬೇಕಾದ ಅಂಶಗಳನ್ನು ಮುಂಚಿತವಾಗಿ ತಿಳಿಯಪಡಿಸಬೇಕು
8. ಪ್ರವಾಸದ ಉದ್ದೇಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸಬೇಕು.

* ಪಠ್ಯಕ್ರಮ
ಪಠ್ಯಕ್ರಮ ಒಂದು ಸಮಗ್ರ ಜೀವನವಾಗಿದ್ದು ವಿದ್ಯಾರ್ಥಿಯು ಏನನ್ನು ಅಭ್ಯಸಿಸಬೇಕು ಹಾಗೂ ಏನನ್ನು ಕಲಿಯಬೇಕು ಎಂಬುದರ ಒಂದು ಸುವ್ಯವಸ್ಥಿತ, ಶೈಕ್ಷಣಿಕ ಕಾರ್ಯಕ್ರಮಗಳ ಒಂದು ವ್ಯವಸ್ಥೆಯನ್ನು ಪಠ್ಯಕ್ರಮ ಎಂದು ಕರೆಯುತ್ತೇವೆ.

* ವಿಜ್ಞಾನ ವಸ್ತು ಪ್ರದರ್ಶನದ ಆರು ಉಪಯೋಗಳು
1. ಸಾರ್ವಜನಿಕರಲ್ಲಿ ವೈಜ್ಞಾನಿಕ ಬೆಳವಣಿಗೆ ಮಾಡಬಹುದು.
2. ಶಾಲೆ ಸಮಾಜದ ನಡುವೆ ಆತ್ಮೀಯ ನಂಟುಬೆಳೆಸುವುದು.
3. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಾವು ತಯಾರಿಸಿದ ವಸ್ತುಗಳನ್ನು ಪ್ರದರ್ಶಿಸಲು ಸಾಧ್ಯ
4. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಾವು ತಯಾರಿಸಿದ ವಸ್ತುಗಳನ್ನು ಪ್ರದರ್ಶಿಸಲು ಸಾಧ್ಯ
5. ಮಕ್ಕಳಲ್ಲಿ ರಚನಾತಕ್ಕಂತೆ ಹಾಗೂ ಆರೋಗ್ಯಕರ ವಾತಾವರಣ ಏರ್ಪಡುವುದು
6. ವಿದ್ಯಾರ್ಥಿಗಳ ಬುದ್ಧಿ ವಿಕಾಸದ ಜೊತೆ ಸಾಮಾಜಿಕ ಬೆಳವಣಿಗೆಯಾಗುವುದು

*. ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಸಂಘದ ಅವಶ್ಯಕತೆ
1. ವಿಜ್ಞಾನ ಸಂಘವು ವಿದ್ಯಾರ್ಥಿಗಳಲ್ಲಿ ತಮ್ಮ ಅಭಿರುಚಿಯನ್ನು ಬೆಳಸಿಕೊಳ್ಳಲು ಸಹಾಯಕವಾಗುವ ಸ್ಥಳವಾಗಿದೆ.
2. ವರ್ಗಕೋಣೆಯ ಸೈದ್ಧಾಂತಿಕ ವಿಚಾರಗಳನ್ನು ಪ್ರಾಯೋಗಿಕವಾಗಿ ಸೃಷ್ಟೀಕರಿಸಿ ಅರ್ಥೈಸಿಕೊಳ್ಳುವ ತಾಣವೇ ವಿಜ್ಞಾನ ಸಂಘ
3. ವೈಜ್ಞಾನಿಕ ಆಸಕ್ತಿ, ಅಭಿರುಚಿಗಳನ್ನು ಅಭಿವ್ಯಕ್ತಿಗೊಳಿಸಲು, ಪೋಷಿಸಲು, ಬೆಳೆಸಲು ಮತ್ತು ಉತ್ತಮ ಪಡೆಸಲು ನೆರವಾಗಬಲ್ಲ ಒಂದು ಸುವ್ಯವಸ್ಥಿತ ಸಂಘಟನೆಯೇ ವಿಜ್ಞಾನ ಸಂಘ
4. ತರಗತಿಯಲ್ಲಿ ಕೇಳಲಾಗದ ಪ್ರಶ್ನೆಗಳಿಗೆ ಉತ್ತರವನ್ನು ವಿದ್ಯಾರ್ಥಿಗಳು ಸ್ವ-ಪ್ರಯತ್ನದಿಂದ ಪಡೆದುಕೊಳ್ಳಲು ಸಹಕಾರಿಯಾಗಬಲ್ಲ ಸ್ಥಳವೇ ವಿಜ್ಞಾನ ಸಂಘ

* ವಿಜ್ಞಾನ ಬೋಧನೆಯಲ್ಲಿ ಪ್ರಯೋಗಗಳ ಮಹತ್ವ
1. ವಿಜ್ಞಾನ ಪ್ರಯೋಗವು ಮಕ್ಕಳು ತರಗತಿಯಲ್ಲಿ ಕಲಿತ ಅಮೂರ್ತ ವಿಷಯವನ್ನು ಮೂರ್ತ ರೀತಿಯಲ್ಲಿ ಪ್ರಯೋಗದ ಮೂಲಕ ತೋರಿಸಲಾಗುತ್ತದೆ.
2. ಪ್ರಯೋಗವನ್ನು ಮಾಡುವುದರಿಂದ ಕಲಿಯುವುದರ ಮೂಲಕ ಕಲಿತ ವಿಷಯವು ಹೆಚ್ಚು ಸಮಯ ಮನಸ್ಸಿನಲ್ಲಿ ಉಳಿದುಕೊಳ್ಳಲು ಸಹಾಯಕವಾಗುತ್ತದೆ.
3. ಪ್ರಯೋಗವನ್ನು ನಿರ್ವಹಿಸುವುದರ ಮೂಲಕ ಉಪಕರಣಗಳನ್ನು ಬಳಸುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಬಹುದು
4. ಪ್ರಯೋಗಗಳನ್ನು ನಿರ್ವಹಿಸುವುದರ ಮೂಲಕ ಉಪಕರಣಗಳನ್ನು ಬಳಸುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಬಹುದು
5. ವಿದ್ಯಾರ್ಥಿಯು ಪ್ರಯೋಗ ನಿರ್ವಹಿಸುವುದರ ಮೂಲಕ ಖಚಿತತೆ ಸ್ವಂತಿಕೆಗಳೆಂಬ ಅಂಶಗಳು ವಿಕಾಸವಾಗುತ್ತವೆ.

* ಪ್ರಾಥಮಿಕ ಹಂತದಲ್ಲಿ ವಿಜ್ಞಾನದಲ್ಲಿ ಪಠ್ಯವಸ್ತುವಿನ ವಿಶ್ಲೇಷಣೆಯಿಂದ ತಿಳಿದು ಬರುವ ಸಂಗತಿಗಳು
ಪ್ರಾಥಮಿಕ ಹಂತದಲ್ಲಿ ವಿಜ್ಞಾನದಲ್ಲಿ ಪಠ್ಯವಸ್ತುವಿನ ವಿಶ್ಲೇಷಣೆಯಿಂದ ತಿಳಿದುವರುವ ಸಂಗತಿಗಳು (ಉದ್ದೇಶಗಳಿಗನುಗುಣವಾಗಿ) ಯಾವುವೆಂದರೆ.
1. ಮಕ್ಕಳು ತಮ್ಮ ಜ್ಞಾನೇಂದ್ರಯಗಳ ಮೂಲಕ ತಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಪರಿಚಯ ಮಾಡಿಕೊಳ್ಳುತ್ತಾರೆ.
2. ಸುತ್ತಮುತ್ತಲಿನ ಪರಿಸರಕ್ಕೆ ಸಂಬಂಧಿಸಿದಂತೆ, ಪ್ರಶ್ನಿಸುತ್ತಾರೆ.
3. ಮಕ್ಕಳು ಪರಿಸರವನ್ನು ವೀಕ್ಷಿಸಿ ಅದರ ಬಗ್ಗೆ ವಿಷಯ ಸಂಗ್ರಹಣೆ ಮಾಡಿ ಹೇಳಿಕೆ ಬರವಣೆಗೆ ಅಥವಾ ಚಿತ್ರದ ಮೂಲಕ ವಿವರಿಸುತ್ತಾರೆ.
4. ಪರಿಸರದಲ್ಲಿ ಕಂಡು ವಿಷಯ ಘಟನೆಗಳನ್ನು ವರ್ಗೀಕರಿಸುತ್ತಾರೆ.
5. ಪರಿಸರದಲ್ಲಿ ಉಂಟಾಗುವ ಘಟನೆಗಳಿಗೆ ಕಾರ್ಯ ಕಾರಣ ಸಂಬಂಧಗಳನ್ನು ಪತ್ತೆ ಹಚ್ಚುತ್ತಾರೆ.
6. ಕೆಲವು ಗೊತತಾದ ಸನ್ನಿವೇಶಗಳನ್ನು ವಿಶ್ಲೇಷಣೆ ಮಾಡಿ. ಫಲಿತಾಂಶವನ್ನು ಪೂರ್ವ ಭಾವಿಯಾಗಿ ನಿರ್ಧರಿಸಿ, ಸಮಸ್ಯೆಗಳ ಪರಿಹಾರಕ್ಕಾಗಿ ಸುಲಭ ಪ್ರಯೋಗಗಳನ್ನು ರೂಪಿಸುತ್ತಾರೆ.
7. ಯಾವುದೇ ವೈಜ್ಞನಿಕ ಘಟನೆಯ ಸತ್ಯತೆಯನ್ನು ಅರಿಯಲು ಪ್ರಯೋಗ ಮಾಡಿ ತಿಳಿಯುವುದೇ ಅಂತಿಮ ಎಂದು ತೀರ್ಮಾನಿಸುತ್ತಾರೆ.
8. ವಿಜ್ಞಾನ ಕ್ಷೇತ್ರಕ್ಕೆ ಭಾರತೀಯ ವಿಜ್ಞಾನಿಗಳ ಕೊಡುಗೆಯನ್ನು ಶ್ಲಾಘಿಸುತ್ತಾರೆ.
9. ಸುತ್ತಮುತ್ತಲಿನ ಪ್ರಕೃತಿ ಸಂಪನ್ಮೂಲಗಳನ್ನು ಗುರುತಿಸಿ ಅವುಗಳ ಸರಿಯಾದ ಉಪಯೋಗಗಳನ್ನು ಪತ್ತೆ ಹಚ್ಚುತ್ತಾರೆ.
10. ಪ್ರಕೃತಿ ಸಂಪನ್ಮೂಲವನ್ನು ನಾಸ ಮಾಡಬಾರದೆಂದೂ ಪರಿಸರ ಮಾಲಿನ್ಯವನ್ನು ತಡೆಗಟ್ಟಬೇಕೆಂದು ತೀರ್ಮಾನಿಸುತ್ತಾರೆ.
11. ರಾಷ್ಟ್ರದ ಸಾಮಾಜಿಕ, ಆರ್ಥಿಕ ಪ್ರಗತಿಯಲ್ಲಿ ವಿಜ್ಞಾನ & ತಂತ್ರಜ್ಞಾನದ ಕೊಡುಗೆಯ ಸಂಬಂಧಗಳನ್ನು ಗುರುತಿಸುತ್ತಾರೆ.

* ವಿಜ್ಞಾನ ಸಂಘದ ಉದ್ದೇಶಗಳು
1. ವಿಜ್ಞಾನ ವಿಷಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವುದು.
2. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವುದು
3. ವಿಜ್ಞಾನದ ಬಗ್ಗೆ ಸ್ಫರ್ಧಾತ್ಮಕ ಮನೋಭಾವನೆಯನ್ನು ಬೆಳೆಸುವುದು.
4. ವಿಜ್ಞಾನ ವಿಷಯದ ಬಗ್ಗೆ ಉತ್ತಮ ಅಭಿರುಚಿಗಳನ್ನು ಬೆಳೆಸುವುದು.
5. ವಿಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಮಾಹಿತಿ ನೀಡುವುದು.
6. ವಿಜ್ಞಾನದ ಕಲ್ಪನೆಗಳನ್ನು ಅರ್ಥಮಾಡಿಸುವುದು.
7. ವಿಜ್ಞಾನ ಕುರಿತು ಆಲೋಚಿಸುವಂತೆ ಮಾಡುವುದು.
8. ಪ್ರಯೋಗ ಮಾಡುವ ವಿವಿಧ ಮಾದರಿಗಳನ್ನು ತಯಾರಿಸುವ ಕೌಶಲ್ಯ ಮಕ್ಕಳಲ್ಲಿ ಬೆಳೆಸುವುದು.
9. ವೀಕ್ಷಣಾ ಸಾಮಥ್ರ್ಯವನ್ನು ಮಕ್ಕಳಲ್ಲಿ ಬೆಳೆಸುವುದು.
10. ವಿಜ್ಞಾನದ ವಿವಿಧ ಚಟುವಟಿಕೆಗಳಾದ ರಸಪ್ರಶ್ನೆ ವಸ್ತು ಸಂಗ್ರಹಾಲಯ ವಿಜ್ಞಾನ ಮೇಳದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವುದು.

* ವಿಜ್ಞಾನದ ಬೋಧನೆಯಲ್ಲಿ ಕೈಗೊಳ್ಳಬಹುದಾದ ಸಹಪಠ್ಯ ಚಟುವಟಿಕೆಗಳ ಮತ್ತು ಅದರ ಮಹತ್ವ
ವಿಜ್ಞಾನ ಬೋಧನೆಯಲ್ಲಿ ಕೈಗೊಳ್ಳಬಹುದಾದ ಸಹಪಠ್ಯಚಟುವಟಿಕೆಗಳು
1. ವಿಜ್ಞಾನ ಪ್ರಶ್ನೆ ಪಟ್ಟಿಗೆ
2. ರಸ ಪ್ರಶ್ನೆ
3. ಪ್ರಯೋಗಗಳು
4. ಯೋಜನೆಗಳು
5. ಹವ್ಯಾಸಗಳು
6. ವಿಜ್ಞಾನ ಸ್ಪರ್ಧೆ
7. ಉಪನ್ಯಾಸಗಳು
8. ಪ್ರಾತ್ಯಕ್ಷೀಕೆಗಳು

ಸಹ ಪಠ್ಯ ಚುಟುವಟಿಕೆಗಳ ಮಹತ್ವ
ಎ) ವಿಜ್ಞಾನ ಪ್ರಶ್ನೆ ಪೆಟ್ಟಿಗೆ :
1. ತರಗತಿಯ ಮಧ್ಯದಲ್ಲಿ ಅಸಾಂದರ್ಭಿಕವಾಗಿ ಕೇಳುವ ಪ್ರಶ್ನೆಗಳನ್ನು ತಡೆಗಟ್ಟಬಹುದು.
2. ಹೆಚ್ಚಿನ ವೈಜ್ಞಾನಿಕ ವಿಚಾರಣಾ ಕ್ರಮವನ್ನು ಒರೆಗೆ ಹಚ್ಚುವ ಪ್ರಶ್ನೆಗಳನ್ನು ಕೇಳಲು ಉತ್ತೇಜಿಸಬಹುದು.
3. ವಿದ್ಯಾರ್ಥಿಗಳನ್ನು ವಿಚಾರ ಶೀಲರನ್ನಾಗಿಸಬಹುದು.
4. ಶಿಕ್ಷಕರು ತಮ್ಮ ಯಾಂತ್ರಿಕೃತ ಕೆಲಸದಿಂದ ಹೊರಬರಬಹುದು.
5. ಕ್ರಮಬದ್ಧವಾಗಿ ವಿಶ್ಲೇಷಣೆಯನ್ನು ಮಾಡಿದರೆ ಎಂತಹ ಪ್ರಶ್ನೆಗೂ ಸ್ಪಷ್ಟ ಉತ್ತರ ಪಡೆಯಲು ಸಾದ್ಯ ಎಂಬುದನ್ನು ಮನಗಾಣಬಹದುದು

ಬಿ) ರಸ ಪ್ರಶ್ನೆ :
1. ಕುತೂಹಲವನ್ನು ಕೆರಳಿಸುತ್ತದೆ.
2. ಚಿಂತನ ಶೀಲರನ್ನಾಗಿಸುತ್ತದೆ.
3. ಪ್ರಶ್ನೆಗಳನ್ನು ಮಣಿಸುತ್ತದೆ.
4. ತಾಳ್ಮೆಯನ್ನು ಹೆಚ್ಚಿಸುತ್ತದೆ.
5. ಸಕಾರ ಮನೋಭಾವನೆಯನ್ನು ಬೆಳೆಸುತ್ತದೆ.
6. ವಿಷಯ ಸಂಗ್ರಹಣೆ ಮಾಡಲು ಪ್ರೇರೇಪಿಸುತ್ತದೆ.
7. ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.
8. ಸೋಲಿನಲ್ಲಿ ಗೆಲವಿದೆ ಎಂಬ ಮೌಲ್ಯ ವೃದ್ದಿಸುತ್ತದೆ.
9. ಮಕ್ಕಳ ಸಾಮಾನ್ಯ ಜ್ಞಾನವನ್ನು ಹೆಚ್ಚಿಸುತ್ತದೆ.
10. ಪ್ರಚಲಿತ ವಿದ್ಯಮಾನಗಳ ಕುರಿತು ಜಾಗೃತಿ ಮೂಡಿಸಬಹುದು.

* ಪ್ರಾತ್ಯಕ್ಷಿಕ ಪದ್ದತಿಯ ಅನುಕೂಲಗಳು ಮತ್ತು ಅನಾನೂಕೂಲಗಳು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕ ಸ್ಪರ್ಧೆ ಈ ಕೆಳಕಂಡತೆ ಉಪಯುಕ್ತವಾಗಿದೆ.
1. ವಿದ್ಯಾರ್ಥಿಯು ವಿಜ್ಞಾನಿಯಂತೆ ಕೆಲವು ಸಮಯ ವರ್ತಿಸಲು ಸಹಾಯಕವಾಗಿದೆ.
2. ವಿದ್ಯಾರ್ಥಿಗೆ ಮನೋಧೈರ್ಯವನ್ನು ತುಂಬುತ್ತದೆ.
3. ವಿದ್ಯಾರ್ಥಿಗೆ ಪ್ರಯೋಗಗಳನ್ನು ಮಾಡುವ ಕೌಶಲ್ಯದ ಜೊತೆಗೆ ಪ್ರದರ್ಶಿಸುವ ಕುಶಲತೆಯನ್ನು ಬೆಳೆಸುತ್ತದೆ.
4. ವಿದ್ಯಾರ್ಥಿಗಳು ದತ್ತ ಸಮಯದಲ್ಲಿ ಪ್ರಯೋಗಗಳನ್ನು ಪ್ರದರ್ಶಿಸಬೇಕಾಗಿರುವದರಿಂದ ಸಮಯ ಪ್ರಜ್ಞೆಯನ್ನು ಮೂಡಿಸುತ್ತದೆ.

ಅನಾನುಕೂಲಗಳು:
1. ಶಿಕ್ಷಕರಲ್ಲಿ ಪ್ರಾತ್ಯಕ್ಷಿಕೆಯನ್ನು ಕೈಗೊಳ್ಳಲು ಅಗತ್ಯವಾದ ಜ್ಞಾನ ಇಲ್ಲದಿರುವುದು.
2. ಪ್ರಾತ್ಯಕ್ಷಿಕೆಯನ್ನು ಕೈಗೊಳ್ಳಲು ತರಗತಿಯ ವಿನ್ಯಾಸ ಹೊಂದದಿರುವುದು.
3. ಪ್ರಾತ್ಯಕ್ಷಿಕತೆಯನ್ನು ಕೈಗೊಳ್ಳುವಾಗ ಎಲ್ಲಾ ವಿದ್ಯಾರ್ಥಿಗಳಿಗೂ ಅರ್ಥವಿರುವ ರೀತಿಯಲ್ಲಿ ಕೈಗೊಳ್ಳದಿರುವುದು.

* ಪಠ್ಯವಸ್ತು ಮತ್ತು ಅಭ್ಯಾಸ ಪತ್ರಿಕೆಗಳಿರುವ ವ್ಯತ್ಯಾಸಗಳು
ಅಭ್ಯಾಸ ಪತ್ರಿಕೆ
1ವಿಶಾಲಾರ್ಥವನ್ನು ಹೊಂದಿದೆ.
ಸಂಕುಚಿತ ಅರ್ಥವನ್ನು ಹೊಂದಿದೆ.
2ಪಠ್ಯ ಸಹಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.
ಪಠ್ಯಚಟುವಟಿಕೆಗಳನ್ನು ಸೂಚಿಸುತ್ತದೆ.
3ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗುತ್ತದೆ.
ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗುವುದಿಲ್ಲ.
4ವಿದ್ಯಾರ್ಥಿಯು ಒಂದು ಶೈಕ್ಷಣಿಕ ವರ್ಷದಲ್ಲಿ ಕಲಿಯಬೇಕಾದ ಎಲ್ಲಾ ವಿಷಯಗಳನ್ನು ಒಳಗೊಂಡಿರುತ್ತದೆ.
ನಿರ್ದಿಷ್ಟ ವಿಷಯವನ್ನು ಮಾತ್ರ ಒಳಗೊಂಡಿರುತ್ತದೆ.
ಪಠ್ಯವಸ್ತು
* ದಿ ಬುಕ್ ಆಫ್ ಇಂಡಿಯನ್ ಬಡ್ರ್ಸ್‍ಎಂಬ ಪುಸ್ತಕವನ್ನು ಬರೆದವರು?
ಸಲೀಂ ಅಲಿ
* ವಿಜ್ಞಾನ ವಸ್ತು ಸಂಗ್ರಹಾಲಯವನ್ನು ಪ್ರಾಥಮಿಕ ಶಾಲೆಗಳಲ್ಲಿ ಸಂಘಟಿಸುವಿಕೆ


ವಿಜ್ಞಾನ ವಸ್ತು ಸಂಗ್ರಹಾಲಯದ ಸಂಘಟನೆ.
1. ಪೂರ್ವಭಾವಿಯಾಗಿ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಸಭೆ ಕರೆಯಬೇಕು
2. ಸಭೆಯಲ್ಲಿ ಒಂದು ಒಮ್ಮತದ ಅನುಸಾರವಾಗಿ ವಸ್ತು ಸಂಗ್ರಹಾಲಯದ ಉದ್ದೇಶಗಳನ್ನು ಪಟ್ಟಿಮಾಡಬೇಕು
3. ವಸ್ತುಗಳ ಸಂಗ್ರಹಣೆ : ಶಾಲೆಯಲ್ಲಿ ಪ್ರಾರಂಭಿಸುವ ವಸ್ತು ಸಂಗ್ರಹಾಲಯಕ್ಕೆ ಬೇಕಾಗಬಹುದಾದ ವಸ್ತುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ
ಸಂಪನ್ಮೂಲ ವ್ಯಕ್ತಿಗಳಿಗೆ ಮನವಿಯನ್ನು ಸಲ್ಲಿಸಬೇಕು ಇದಕ್ಕಾಗಿ ಒಂದು ವಿಶಾಲವಾದ ಕೊಠಡಿಯನ್ನು ಮೀಸಲಿಟ್ಟಿರಬೇಕು. ಬಂದ ವಸ್ತುಗಳ ಅಂದಾಜು ಮೌಲ್ಯದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬೇಕು.
4. ವಸ್ತುಗಳ ಪ್ರದರ್ಶನ : ವಸ್ತುಗಳನ್ನು ಪ್ರದರ್ಶಿಸಲು ಸೂಕ್ತವಾದ ಸ್ಥಳಗಳನ್ನು ಅವುಗಳ ಗಾತ್ರ ಹಾಗೂ ಕಾರ್ಯನಿರ್ವಹಿಸುವಿಕೆಯ ಆಧಾರದ ಮೇಲೆ
ಆಯ್ದಕೊಳ್ಳಬೇಕು ವಸ್ತುಗಳಿಗೆ ತಕ ಶಿರೋನಾಮೆಯನ್ನು ಕೊಡಬೇಕು. ವಸ್ತುಗಳು ನಿರ್ವಹಿಸುವ ಕಾರ್ಯದ ಬಗ್ಗೆ ಮಾಹಿತಿ ಇರಬೇಕು ಪ್ರದರ್ಶನಕ್ಕೆ ಇಟ್ಟಿರುವ ಎಲ್ಲಾ ವಸ್ತುಗಳೂ ವಿಕ್ಷಕರಿಗೆ ಕಾಣುವಂತೆ ಇರಬೇಕು.
5. ಒಪ್ಪಂದ ಮಾಡುವಿಕೆ ; ಪ್ರದರ್ಶಿಸಿದ ವಸ್ತುಗಳು ಹಾಳಾಗದಂತೆ ಜಾಗರೂಕತೆ ಪಡಿಸಬೇಕು. ಇದಕ್ಕಾಗಿ ಆಗಿಂದಾಗ್ಗೆ ವಸ್ತುಗಳನ್ನು ಸ್ವಚ್ಚಗೊಳಿಸಿ, ದುರಸ್ತಿಗೊಳಿಸಿ
ಇಡುತ್ತಿರಬೇಕು ವಸ್ತುಗಳನ್ನು ಪ್ರದರ್ಶಕ್ಕಿಟ್ಟು ಮೇಲೆ ಸಂಗ್ರಹಾಲಯದಲ್ಲಿರುವ ಒಟ್ಟು ವಸ್ತುಗಳ ದಾಖಲೆಯನ್ನು ಇಟ್ಟಿರಬೇಕು.


* ಪ್ರಾಥಮಿಕ ಶಾಲೆಗಳಲ್ಲಿ ಉತ್ತಮ ವಿಜ್ಞಾನ ಕಾರ್ಯಕ್ರಮವನ್ನು ರೂಪಿಸುವಾಗ ಅನುಸರಿಸಬೇಕಾದ ತತ್ವಗಳು
ಉತ್ತಮ ವಿಜ್ಞಾನ ಕಾರ್ಯಕ್ರಮಗಳನ್ನು ರೂಪಿಸುವಾಗ ಅನುಸರಿಸಬೇಕಾದ ತತ್ವಗಳು.
1. ವಿಜ್ಞಾನ ಕಾರ್ಯಕ್ರಮಗಳು ಪರಿಕಲ್ಪನೆಗಳು ಬೋಧನೆಗೆ ಉತ್ತಮವಾದ ಚೌಕಟ್ಟನ್ನು ನೀಡಲು ಸಹಾಯಕವಾಗಿದೆ.
2. ಪರಿಕಲ್ಪನೆಗಳನ್ನು ಹಂತ ಹಂತವಾಗಿ ವಿವಿಧ ತರಗತಿಗಳಿಗೆ ತಕ್ಕಂತೆ ಬೋಧಿಸಲು ನೆರವಾಗಬೇಕು.
3. ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಮತ್ತು ಸಂವೇದನಾತ್ಮಕ ಅಗತ್ಯಗಳಿಗೆ ಸ್ಪಂದಿಸುವಂತಿರಬೇಕು.
4. ಆಯೋಜಿಸುವ ವಿಜ್ಞಾನ ಕಾರ್ಯಕ್ರಮ ಪಠ್ಯ ವಸ್ತುವಿಗೆ ಪೂರಕವಾಗಿರಬೇಕು.
5. ಆಯೋಜಿಸುವ ಕಾರ್ಯಕ್ರಮ ವಿದ್ಯಾರ್ಥಿಗಳ ಮಾನಸಿಕ ಮಟ್ಟಕ್ಕೆ ಅನುಗುಣವಾಗಿರಬೇಕು
6. ಎಲ್ಲಾ ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಿರಬೇಕು.


* ವಿಜ್ಞಾನ ಪ್ರದರ್ಶನಗಳನ್ನು ಸಂಘಟಿಸುವಾಗ ಬಳಸುವ ವಿಧಾನಗಳು
1. ವಿಜ್ಞಾನ ಪ್ರದರ್ಶನದ ದಿನ, ಸ್ಥಳ, ಉದ್ದೇಶಗಳು, ಬೇಕಾದ ಪೀಠೋಪಕರಣಗಳ ವಿವರ ಮುಂತಾದವುಗಳನ್ನು ಮೊದಲೇ ವಿದ್ಯಾರ್ಥಿಗಳಿಗೆ ತಿಳಿಸಬೇಕು.
2. ಪ್ರದರ್ಶಿಸುವ ಪ್ರತಿಯೊಂದು ವಸ್ತುವಿಗೂ ತಲೆಬರಹವನ್ನು ಕೊಟ್ಟಿರಬೇಕು.
3. ಪ್ರತಿಯೊಂದು ವಸ್ತುವಿನ ನಡುವೆ ನಿರ್ದಿಷ್ಟ ಅಂತರವಿರಬೇಕು
4. ಪ್ರತಿಯೊಂದು ವಸ್ತುವನ್ನು ಧೂಳಿನಿಂದ ರಕ್ಷಿಸಬೇಕು.
5. ವಸ್ತುವಿನ ರಚನೆ ಕಾರ್ಯಗಳನ್ನು ವಿವರಿಸಲು ವಿದ್ಯಾರ್ಥಿಗಳನ್ನು ಗುರುತಿಸಬೇಕು.
6. ಪ್ರದರ್ಶನದಲ್ಲಿ ಅತ್ಯತ್ತಮ ವಸ್ತುಗಳಿಗೆ, ಪ್ರಯೋಗಗಳಿಗೆ ಬಹುಮಾನಗಳನ್ನು ಕೊಡಬೇಕು
7. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಬೇಕು.

* ವಿಜ್ಞಾನ ಪ್ರದರ್ಶನಗಳ ಅವಶ್ಯಕತೆ
1. ಸಮುದಾಯಕ್ಕೆ ಶಾಲೆಯು ಕೈಗೊಂಡಿರುವ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪರಿಚಯಿಸಲು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಶಾಲೆ ಮಾಡಿರುವ ಅಭಿವೃದ್ದಿ ಬಗ್ಗೆ ಗಮನ ಸೆಳೆಯಲು ಪೂರಕವಾಗುತ್ತದೆ.
2. ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆಯನ್ನು ಬೆಳೆಸಲು ಸಹಾಯಕವಾಗುತ್ತದೆ.
3. ಮಕ್ಕಳಲ್ಲಿ ಅಡಕವಾಗಿರುವ ಪ್ರತಿಬೇಯನ್ನು ಬೆಳೆಸಲು ಹಾಗೂ ಪೋಷಿಸಲು ಸಹಾಯಕವಾಗಿದೆ.
4. ವೈಜ್ಞಾನಿಕ ಉತ್ಸಾಹ, ಧೈರ್ಯ ಹಾಗೂ ಸಮಯ ಪ್ರಜ್ಞೆಯನ್ನು ಉತ್ತೇಜಸಬಹುದು.
5. ವಿದ್ಯಾರ್ಥಿಗಳಲ್ಲಿ ಸಹಾಕರ ಮನೋಭಾವ ವೈಜ್ಞಾನಿಕ ಮನೋಭಾವವನ್ನು ಹುಟ್ಟು ಹಾಕಬಹುದದು.
6. ಶಾಲೆ ಮತ್ತು ಸಮುದಾಯದ ಸಂಬಂಧವನ್ನು ಉತ್ತಮ ಗೊಳಿಸಬಹುದು.
7. ವಿದ್ಯಾರ್ಥಿಗಳಲ್ಲಿ ಸಂಗ್ರಹಣಾ ಸಾಮಥ್ರ್ಯವನ್ನು ಹೆಚ್ಚಿಸಬಹುದು.
8. ಪ್ರದರ್ಶಿಸುವ ವಸ್ತುಗಳನ್ನು ಬಳಸಿ ಉತ್ತ ಬೋಧನೆಯನ್ನು ಶಿಕ್ಷಕ ಕೈಗೊಳ್ಳಬಹುದು.

* ಪ್ರಕೃತಿ ವೀಕ್ಷಣಾಭ್ಯಾಸದ ಎರಡು ಉಪಯೋಗಗಳು
1. ಸಸ್ಯಗಳು, ಪ್ರಾಣಿಗಳು, ನದಿ ಸರೋವರಗಳು, ಗುಡ್ಡ ಕಾಡುಗಳು, ಮರುಭೂಮಿ, ಅರಣ್ಯ ಪ್ರದೇಶ, ಸಾಗರಕಟುಕ ಮುಂತಾದ ವಿಷಯಗಳ ಬಗ್ಗೆ ವೈಜ್ಞಾನಿಕವಾಗಿ
ವಿಶ್ಲೇಷಿಸಬಹುದು.
2. ಶಾಲೆಯ ಸುತ್ತಮುತ್ತಲೂ ಅಥವಾ ಶಾಲೆಯಿರುವ ಊರಿನ ಸುತ್ತಮುತ್ತಲೂ ಇರುವ ಸ್ಥಳಗಳು ವಿದ್ಯಾರ್ಥಿಗಳಿಗೆ ದಿನನಿತ್ಯ ತರದ ಪ್ರಯೋಗಾಲಯಗಳಾಗಿರುತ್ತದೆ.
3. ಪ್ರಕೃತಿಯ ವಿದ್ಯಾಮಾನ ಅಭ್ಯಸಿಸುವುದರಿಂದ ವಿದ್ಯಾರ್ಥಿಗಳಲ್ಲಿ ಕೆಲವು ಸಾಮರ್ಥ್ಯ ಪರೋಕ್ಷವಾಗಿ ಬೆಳೆಸುತ್ತದೆ.
4. ವಿದ್ಯಾರ್ಥಿಗಳ ಪ್ರಕೃತಿ ಸೌಂದರ್ಯ ಮೂಡಿಸಿ ಸೌಂದರ್ಯೋಪಾಸನೆಯ ಮೌಲ್ಯ ಬೆಳೆಸುವುದು.
5. ವಿದ್ಯಾರ್ಥಿಗಳಲ್ಲಿ ವೀಕ್ಷಣಾ ಕೌಶಲ್ಯವನ್ನು ಬೆಳೆಸಬಹದು.

* ವಿಜ್ಞಾನ ಸಂಘ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಅದರ ಅವಶ್ಯಕತೆ
ಡೇವಿಸ್ ರವರ ಪ್ರಕಾರ “ಭಾರತದ ಭವಿಷ್ಯವು ನಿಜವಾಗಿಯೂ ಯುವ ಜನತೆಗೆ ಹಾಗೂ ವಿಜ್ಞಾನಕ್ಕೆ ಸೇರುವದೇ ಆಗಿದ್ದರೆ, ವಿಜ್ಞಾನ ಸಂಘಗಳಿಗೆ ಶಾಲೆಯಲ್ಲಿ
ಮುಕ್ತ ಅವಕಾಶವಿರಬೇಕು ಎಂಬ ಈ ವ್ಯಾಖ್ಯಾನವು ವಿಜ್ಞಾನ ಸಂಘದ ಅವಶ್ಯಕತೆಯನ್ನು ತಿಳಿಸುತ್ತದೆ.

ವಿಜ್ಞಾನ ಸಂಘದ ಅರ್ಥ
ವಿಜ್ಞಾನ ಸಂಘವು ವಿದ್ಯಾರ್ಥಿಗಳಲ್ಲಿ ತಮ್ಮ ಅಭಿರುಚಿಯನ್ನು ಬೆಳೆಸಿಕೊಳ್ಳಲು ಸಹಾಯಕವಾಗುವ ಸ್ಥಳವಾಗಿದೆ.”
ಪ್ರಾಥಮಿಕ ಶಾಲೆಗಳಲ್ಲಿ ವಿಜ್ಞಾನ ಸಂಘದ ಅವಶ್ಯಕತೆಯನ್ನು ಈ ಕೆಳಕಂಡ ಅಂಶಗಳಿಂದ ತಿಳಿಯಬಹುದು.
1. ಸೃಜನ ಶೀಲತೆಯನ್ನು ಬೆಳೆಸಲು ಸಹಕಾರಿಯಾಗಿದೆ.
2. ವೈಜ್ಞಾನಿಕ ಹವ್ಯಾಸಗಳ ಅಭಿರುಚಿಯನ್ನು ಬೆಳೆಸಲು ಅವಶ್ಯಕ.
3. ನಿತ್ಯ ಜೀವನದಲ್ಲಿ ವಿಜ್ಞಾನ ವಿಷಯದಲ್ಲಿ ಕಲಿತ ಅಂಶಗಳನ್ನು ಅಳವಡಿಸಕೊಳ್ಳಲು ಅನುಕೂಲವಾಗಿದೆ.
4. ವಿಜ್ಞಾನದ ವಿವಿಧ ಶಾಲೆಗಳಾದ ಭೌತ ರಾಸಾಯನಿಕ, ಜೀವಶಾಸ್ತ್ರ ಹಾಗೂ ಖಗೋಳ, ಪರಿಸರ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಬೆಳೆಸಲು ಸಹಾಯಕ.
5. ವಿದ್ಯಾರ್ಥಿಗಳಲ್ಲಿ ಆರೋಗ್ಯ ಕರ ಸ್ಪರ್ಧಾ ಮನೋಭಾವನೆಯನ್ನು ಬೆಳೆಸಲು ಸಹಕಾರಿಯಾಗಿದೆ.
6. ವಿಜ್ಞಾನ ಬೆಳವಣಿಗೆಯಿಂದಾಗುವ ಅನುಕೂಲತೆ ಹಾಗೂ ಅನಾನುಕೂಲತೆಗಳನ್ನು ಅರಿತುಕೊಳ್ಳಲು
7. ವೈಜ್ಞಾನಿಕ ಕ್ರಮದಲ್ಲಿ ತರಬೇತಿ ನೀಡಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಲು ಸಹಾಯವಾಗಿದೆ.


ವಿಜ್ಞಾನದಲ್ಲಿ ಬೋಧನಾ ಸಾಮಗ್ರಿ ಮತ್ತು ಶಿಕ್ಷಕ
* ವಿಜ್ಞಾನ ಭೋಧನೆಯಲ್ಲಿ ಬೋಧನಾ ಮಾದರಿಗಳಿಂದಾಗುವ ಅನುಕೂಲತೆಗಳು ಬೋಧನಾ ಮಾದರಿಗಳು, ಕಲಿಕಾ ಮಾದರಿಗಳೇ ಆಗಿವೆ. ಶಿಕ್ಷಕರು ಬೋಧನಾ ಪದ್ಧತಿಯು ಮಕ್ಕಳ ಕಲಿಕೆಯ ಮೇಲೆ ಪೂರ್ಣ ಪ್ರಭಾವವನ್ನು ಬೀರುತ್ತದೆ. ಮಾದರೀಕರಿಸಿದ ಬೋಧನೆ ಕಲಿಕೆಯ ಸಂದರ್ಭದ ಭಾರವನ್ನು ಕಡಿಮೆ ಮಾಡುತ್ತದೆ. ವಿಜ್ಞಾನ ಬೋಧನೆಯಲ್ಲಿ ಬೋಧನಾ ಮಾದರಿಗಳಿಂದ ಆಗುವ ಅನುಕೂಲಗಳನ್ನು ಈ ಕೆಳಗಿನಂತೆ ವಿವರಿಸಬಹುದು.
1. ಪ್ರತಿ ಮಗುವು ಸ್ವಂತವಾಗಿ ತಾನೇ ಕಲಿಯುವ ಸಾಮಥ್ರ್ಯವನ್ನು ಪಡೆಯುತ್ತದೆ.
2. ಒಗಟು (ಸಮಸ್ಯೆಯ) ಸಂದರ್ಭಕ್ಕೆ ಒಡ್ಡಿದಾಗ ಕಲಿಯುವವರು ತಾವೇ ಅನ್ವೇಷಣೆಯ ಆಸಕ್ತಿ ತೋರುವರು.
3. ಅನ್ವೇಷಣೆಯ ಪ್ರಕ್ರಿಯೆಯಿಂದ ವಿಷಯದೊಂದಿಗೆ ವಿಜ್ಞಾನ ಸಾಮಥ್ರ್ಯವೂ ಬೆಳೆಯುತ್ತದೆ.
4. ತಮ್ಮ ಕಲಿಕೆಯ ತಂತ್ರವನ್ನು ವಿದ್ಯಾರ್ಥಿಗಳು ತಾವೇ ರೂಡಿಸಬಲ್ಲರು
5. ಹೊಸ ಕಲಿಯುವಿಕೆ ತಂತ್ರಗಳನ್ನು ಮಾದರಿಗಳಿಂದ ಕಲಿಸಲು ಸಾಧ್ಯ
6. ವಿದ್ಯಾರ್ಥಿಗಳಲ್ಲಿ ಯೋಚಿಸುವ ಸಾಮಥ್ರ್ಯ ವೃದ್ಧಿಯಾಗುತ್ತದೆ.
7. ಪರ್ಯಾಯವಾಗಿ ಯೋಚಿಸುವುದನ್ನು ಮಕ್ಕಳಿಗೆ ಕಲಿಸುತ್ತದೆ.
8. ಶಿಕ್ಷಕರಿಗೆ ಬೋಧನಾ ತಂತ್ರವನ್ನು ಮಾರ್ಗಗಳನ್ನು ಮತ್ತು ವಿಧಾನವನ್ನು ಆಯ್ಕೆ ಮಾಡಲು ಬೋಧನಾ ಮಾದರಿಗಳು ಮಾರ್ಗದರ್ಶನ ನೀಡುತ್ತದೆ.
* ದೃಕ್ - ಶ್ರವಣ ಕಲಿಕಾ ಸಾಮಗ್ರಿಗಳನ್ನು ವಿಜ್ಞಾನ ಬೋಧನೆಯನ್ನು ಪರಿಣಾಮಕಾರಿಯಾಗಿ ಮಾಡಲು ಸಹಾಯಕವಾಗಿವೆ
ಬೋಧನೆಯಲ್ಲಿ ವಿಷಯಕ್ಕೆ ಪೂರಕವಾಗಿ ಕಿವಿಯಿಂದ ಕೇಳಿ, ಕಣ್ಣಿನಿಂದ ನೋಡಿ ವಿಷಯವನ್ನು ಕಲಿಯಲು ಸಹಾಯಕವಾಗುವ ಬೋಧನಾ ಕಲಿಕಾ ಸಾಮಗ್ರಿಗಳನ್ನು ದೃಕ್ - ಶ್ರವಣೋಪ ಕಲಿಕಾ ಸಾಮಗ್ರಿಗಳೆಂದು ಕರೆಯುತ್ತಾರೆ.
ಉದಾಹರಣೆಗೆ ದೂರದರ್ಶನ. ಇವು ವಿಜ್ಞಾನ ಬೋಧನೆಯಲ್ಲಿ ಮಹತ್ತರವಾದ ಪಾತ್ರ ವಹಿಸುತ್ತವೆ. ಹೇಗೆಂದರೆ ವಿಜ್ಞಾನ ಬೋಧನೆಯಲ್ಲಿ ದೂರದರ್ಶಕವನ್ನು ಬಳಸಿ ವಿಷಯವನ್ನು ಬೋದಿಸುವುದರಿಂದ ವಿದ್ಯಾರ್ಥಿಯು ಕಣ್ಣಿನಿಂದ ಚಿತ್ರವನ್ನು ನೋಡುವುದರಿಂದ, ಕಿವಿಯಿಂದ ವಿಷಯವನ್ನು ಕೇಳುವುದರಿಂದ ಕಲಿಕೆ ಪರಿಣಾಮಕಾರಿಯಾಗುತ್ತದೆ. ಮತ್ತು ದೃಕ್-ಶ್ರವಣೋಪಕರಣಗಳ ಮೂಲಕ ಬೋಧನೆಯನ್ನು ಕೈಗೊಳ್ಳುವುದರಿಂದ ಕಲಿತ ವಿಷಯವು ಮಗುವಿನ ಮನಸ್ಸಿನಲ್ಲಿ ಹೆಚ್ಚು ಸಮಯ ಉಳಿಯಲು ಸಾಧ್ಯವಾಗುತ್ತದೆ. ಮತ್ತು ನೇರ ಅನುಭವವನ್ನು ಕಲಿಕಾರ್ಥಿಯು ಪಡೆದುಕೊಂಡತಾಗುತ್ತದೆ. ದೃಕ್ ಶ್ರವಣೋಪಕರಣದ ಮೂಲಕ ಬೋಧನೆ ಕೈಗೊಳ್ಳುವುದರ ಮೂಲಕ ವಿಜ್ಞಾನ ಬೋಧನೆಯನ್ನು ಪರಿಣಾಮಕಾರಿಯಾಗಿ ಮಾಡಬಹುದು.

* ಬೋಧನೋಪಕರಣಗಳನ್ನು ಆಯ್ಕೆ ಮಾಡುವಾಗ ಗಮನದಲ್ಲಿಡಬೇಕಾದ ಅಂಶಗಳು
ಬೋಧನೋಪಕರಣಗಳನ್ನು ಆಯ್ಕೆ ಮಾಡುವಾಗ ಈ ಕೆಳಕಂಡ ಅಂಶಗಳನ್ನು ಆಧಾರಿಸಬೇಕಾಗುತ್ತದೆ.
1. ಬೋನೋಪಕರಣವು ಸ್ಥಳೀಯವಾಗಿ ದೊರಕುವ ವಸ್ತುಗಳಿಂದ ಸೂಕ್ತವಾಗಿ ರಚಿಸಿದಂತಾಗಿರಬೇಕು
2. ಇದು ಮನೋವೈಜ್ಞಾನಿಕ ತಳಹದಿಯಿಂದ ವಿದ್ಯಾರ್ಥಿಯ ಮಟ್ಟಕ್ಕೆ ತಕ್ಕಂತೆ ರಚಿಸಿದಂತಾಗಿರಬೇಕು.
3. ತರಗತಿಯ ಎಲ್ಲಾ ವಿದ್ಯಾರ್ಥಿಗಳು ನೋಡಲು ಅಗತ್ಯವಾದ ಗಾತ್ರವನ್ನು ಹೊಂದಿರಬೇಕು.
4. ಇದು ನಿರ್ದಿಷ್ಟ ಬೋಧನಾ ವಿಷಯವನ್ನು ಸ್ಪಷ್ಟವಾಗಿ ನಿರೂಪಿಸುವಂತಿರಬೇಕು
5. ವಿವಿಧ ಭಾಗಗಳನ್ನು ನಿರ್ದಿಷ್ಟವಾಗಿ ವ್ಯತ್ಯಾಸೀಕರಿಸುವಂತಿರಬೇಕು
6. ಇವು ವಿದ್ಯಾರ್ಥಿಗಳಲ್ಲಿ ಕಲಿಕೆಯಾಗುವಂತೆ ಆಸಕ್ತಿ ಮೂಡಿಸುವಂತಿರಬೇಕು
7. ವಸ್ತುವಿನ ನಿಜ ಸ್ವರೂಪ ಬೋಧನೋಪಕರಣವಾಗಿ ಪಡೆಯಲು ಪ್ರಯತ್ನಿಸಬೇಕು.

* ವಿಜ್ಞಾನ ಶಿಕ್ಷಕರಿಗೆ ಸೇವಾಂತರ್ಗತ ತರಬೇತಿಯ ಅಗತ್ಯತೆ.
ಪೂರ್ವಬಾವಿ ಶಿಕ್ಷಕರ ತರಬೇತಿ ಎಷ್ಟೇ ಪರಿಣಾಮಕಾರಿಯಾಗಿದ್ದರೂ ಸಹ ವಿಜ್ಞಾನ ಶಿಕ್ಷಕರು ಹೊಂದಿರಬೇಕಾದ ಜ್ಞಾನ ಸಾಮಾಥ್ರ್ಯ ಅಭಿರುಚಿ ಅಭಿಕ್ಷಮತೆ ಹಾಗೂ ಕೌಶಲಗಳನ್ನು ಸಂಪೂರ್ಣವಾಗಿ ಬೆಳಸಲು ಸಾಧ್ಯವಿಲ್ಲ ಆದ್ದರಿಂದ 1986ರ ರಾಷ್ಟ್ರೀಯ ಶಿಕ್ಷಣ ನೀತಿಯ ವಿಜ್ಞಾನ ಶಿಕ್ಷಕರಿಗೆ ಈ ಸೇವಾ ನಿರತ ತರಬೇತಿಯನ್ನು ನೀಡುತ್ತದೆ.
* ವಿಜ್ಞಾನ ಶಿಕ್ಷಕರು ಈ ಸೇವಾಂತರ್ಗತ ತರಬೇತಿಯಿಂದ ಹಲವಾರು ರೀತಿಯ ಪ್ರಯೋಜನಗಳನ್ನು ಪಡೆಯಬಹದು.
* ತರಗತಿಯ ಶಿಕ್ಷಕನು ಶೈಕ್ಷಣಿಕ ಸವಾಲುಗಳನ್ನು ಎದುರಿಸುವ ದೃಷ್ಟಿಯಿದ ವಿವಿಧ ಅಲ್ಫಾವಧಿ ಕಾರ್ಯಾಗಾರಗಳಲ್ಲಿ ಭಾಗವಹಿಸಿ ತನ್ನ ವೃತ್ತಿ ಬೆಳವಣಿಗೆಯನ್ನು ಹೆಚ್ಚಿಸಿಕೊಳ್ಳಬಹುದು.
* ವಿಜ್ಞಾನಕ್ಕೆ ಸಂಬಂಧಿಸಿದಂತೆ ಕ್ರಿಯಾಸಂಶೋಧನೆಯನ್ನು ಕೈಗೊಂಡು ತಮ್ಮ ಸಂಶೋಧನಾ ಮನೋಭಾವನೆಯನ್ನು ಹೆಚ್ಚಿಸಿಕೊಳ್ಳಬಹುದು.
* ಆಧ್ಯಾಪಕ ಸಂಘಗಳು ಸಹ ಮಾಸಿಕ ಸಭೆಯನ್ನು ನಡೆಸಿ ತಜ್ಞನಿಂದ ವಿಶಿಷ್ಟ ಉಪನ್ಯಾಸವನ್ನು ಏರ್ಪಡಿಸಿ ಅಧ್ಯಾಪಕರ ವೃತ್ತ ಬೆಳವಣಿಗೆಗೆ ಸಹಾಯಕಾರಿಯಾಗಿದೆ.
* ವಿಜ್ಞಾನ ಶಿಕ್ಷಕರಲ್ಲಿ ಆತ್ಮ ವಿಶ್ವಾಸವನ್ನು ಮೂಡಿಸಿ ಅವರ ವೃತ್ತಿ ಬೆಳವಣಿಗೆಗೆ ಸಹಾಯಕಾರಿಯಾಗದೆ.
* ಆಧುನಿಕ ಬೋಧನೋಪಕರಣಗಳಾದ ಕಂಪ್ಯೂಟರ್, ರೇಡಿಯೋ, ಓ.ಹೆಚ್.ಪಿ ಮೊದಲಾದವುಗಳು ನಿರ್ವಹಿಸಲು ಸಹಾಯಕವಾಗಿದೆ.
* ವಿಜ್ಞಾನ ಬೋಧನೆಯಲ್ಲಿ ಸುಧಾರಿತ ಉಪಕರಣಗಳು ಪ್ರಾಮುಖ್ಯತೆ
ವಿಜ್ಞಾನ ಬೋಧನೆಯಲ್ಲಿ ಸುಧಾರಿತ ಉಪಕರಣಗಳ ಪ್ರಾಮುಖ್ಯತೆ ಎಂದಾಗ.
1. ಸುಧಾರಿತ ಉಪಕರಣಗಳು ಸುಲಭವಾಗಿ ಸಿಕ್ಕಿ ಸುಲಭ ಬೆಲೆಗೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ವಿದ್ಯಾರ್ಥಿಗಳು ನೇರ ಅನುಭವ ಪಡೆಯಲು ಸಹಾಯಕವಾಗಿದೆ.
2. ವಿಜ್ಞಾನ ಬೋಧನೆಯನ್ನು ಉತ್ತಮ ಮಾಡಿ ಕಲಿಕೆಯನ್ನು ಶಾಶ್ವತವನ್ನಾಗಿ ಮಾಡಲು ಸುಧಾರಿತ ಉಪಕರಣಗಳ್ನನು ಹೆಚ್ಚು ಸಹಾಯಕವಾಗಿದೆ.
3. ಸಂದರ್ಭಕ್ಕನುಸಾರವಾಗಿ ತಯಾರಿಸಲು ಅನುಕೂಲಕರವಾಗುತ್ತದೆ.
4. ಮಕ್ಕಳ ಆಸಕ್ತಿ ಮತ್ತು ಅವಧಾನವನ್ನು ಹೆಚ್ಚಿಸಲು.
5. ಇಂತಹ ಉಪಕರಣಗಳಿಂದ ಕಲಿತಿದ್ದು ಹೆಚ್ಚಿನ ಸಮಯ ಮಕ್ಕಳ ವನಸ್ಸಿನಲ್ಲಿ ಉಳಿಯುತ್ತದೆ.
6. ಉಪಕರಣ ತಯಾರಿಕಾ ಕೌಶಲ್ಯವನ್ನು ಬೆಳೆಸಬಹುದ.
7. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ವೃತ್ತಿ ಕೌಶಲ್ಯಗಳನ್ನು ಹೆಚ್ಚಿಸಬಹುದು.
8. ಮಕ್ಕಳಲ್ಲಿ ಸ್ವಯಂ ಆಸಕ್ತಿ ಹಾಗೂ ಸೃಜನಶೀಲತೆಗಳನ್ನು ವಿಕಾಸಿಸಲು ಸಹಕಾರಿಯಾಗುತ್ತದೆ.


* ವಿಜ್ಞಾನ ಬೋಧನೆಗೆ ಬೋಧನಾ ಮಾದರಿಗಳ ಮಹತ್ವ
ವಿಜ್ಞಾನ ಬೋಧನೆಗೆ ಬೋಧನಾ ಮಾದರಿಗಳು ಸಹಕಾರಿಯಾಗಿವೆ ಎಂದಾಗ
1. ವಿಜ್ಞಾನ ಪಾಠದಲ್ಲಿ ವಿಜ್ಞಾನ ಪಾಠವನ್ನು ಪರಿಣಾಮಕಾರಿಯಾಗಿ ಬೋಧಿಸಲು ಸಹಾಯಕವಾಗುತ್ತದೆ.
2. ವಿಜ್ಞಾನ ಪಾಠದಲ್ಲಿ ಹಲವಾರು ಪರಿಕಲ್ಪನೆಗಳು ನಿಯಮಗಳು, ತತ್ವಗಳು, ಸಿದ್ದಾಂತಗಳು ಮತ್ತು ಪ್ರಾಯೋಗಿಕ ಸನ್ನಿವೇಶಗಳು ವಿದ್ಯಾರ್ಥಿಗೆ ಮನದಟ್ಟಾಗುವಂತೆ ವಿವರಿಸಲು ಸಹಾಯಕವಾಗಿದೆ.
3. ಅಮೂರ್ತ ಬೋಧನಾಂಶವನ್ನೇ ಮಾದರಿಯ ಸಹಾಯವಿಲ್ಲದೆ ಬೋಧಿಸಿದಾಗ ಬೋಧನೆಯು ನಿರುಪಯುಕ್ತವಾಗಿ ರುವುದಲ್ಲದೆ ವಿದ್ಯಾರ್ಥಿಗೆ ಮನದಟ್ಟಾಗುವಂತೆ ವಿವರಿಸಲು ಸಹಾಯಕವಾಗಿದೆ.
4. ಕಲಿಕೆಯನ್ನು ಅರ್ಥಪೂರ್ಣ ಮತ್ತು ಶಾಶ್ವತ ಮಾಡಲು ನೆರವಾಗುತ್ತದೆ.
5. ಆಮೂರ್ತ ವಿಷಯಗಳನ್ನು ಸರಳೀಕೃತಗೊಳಿಸಲು ಸಹಾಯಕ.
6. ವಾಸ್ಥವಿಕ ಸ್ಥಿತಿಗಳನ್ನು ಸುಲಭವಾಗಿ ಅರ್ಥವಾಗುವಂತೆ ಮಾಡಲು ಸಹಾಯಕವಾಗಿವೆ.
7. ವಿದ್ಯಾರ್ಥಿಗಳು ನೇರ ಅನುಭವ ಪಡೆಯಲು ಸಹಾಯಕ.
8. ಇವು ವಸ್ತುವಿನ ನೈಜ ಆಕೃತಿ. ಗಾತ್ರ ಮತ್ತು ರಚನೆಯನ್ನು ತಿಳಿಸುವವು.
9. ಶಿಕ್ಷಕನು ಆತ್ಮ ವಿಶ್ವಾಸದಿಂದ ಪಾಠವನ್ನು ಪರಿಣಾಮಕಾರಿಯಾಗಿ ಬೋಧಿಸಲು ಸಹಾಯಕವಾಗಿದೆ ಎಂದು ಹೇಳಬಹುದು.
10. ವಸ್ತುಗಳ ಆಂತರಿಕ ರಚನೆಯನ್ನು ವಿವರಿಸಲು ಸಹಾಯಕ

* ಮಲ್ಟೀಮೀಡಿಯಾ ವಿಜ್ಞಾನದಲ್ಲಿ ಇದರ ಉಪಯೋಗಗಳು
ಕಂಪ್ಯೂಟರ್‍ನಲ್ಲಿ ಒಂದು ನಿರ್ದಿಷ್ಟ ವಿಷಯದ ಚಿತ್ರಣಗೂ ಅದಕ್ಕೆ ಪೂರಕ ಸ್ವಭಾವಿಕ ರೀತಿಯ ಶಬ್ದವನ್ನು ಸೃಷ್ಟಿಸಿ ಬೋಧನೆಯಲ್ಲಿ ಬಳಸಿಕೊಳ್ಳಬಹುದು ಇಲ್ಲಿ ನೋಡಲು ಮತ್ತು ಕೇಳಲು ಒಂದಕ್ಕಿಂತ ಹೆಚ್ಚು ಮಾಧ್ಯಮಗಳಿರುತ್ತವೆ. ಇದಕ್ಕೆ ಬಹುಮಾಧ್ಯಮ ಎನ್ನುತ್ತಾರೆ.
ಉದಾ:- ಸೂರ್ಯಗ್ರಹಣ ಚಂದ್ರಗ್ರಹಣ ಮತ್ತು ಕಣ್ಣಿನ ರಚನೆ ಹಾಗೂ ಕಾರ್ಯ

ವಿಜ್ಞಾನದಲ್ಲಿ ಮಲ್ಟೀಮೀಡಿಯಾದ ಉಪಯೋಗಗಳು.
1. ವಿದ್ಯಾರ್ಥಿಗಳಿಲ್ಲಿ ಬಳಕೆ ಇರುವದರಿಂದ ಕಲಿಕೆ ಪರಿಣಾಮಕಾರಿಯಾಗಿರುತ್ತದೆ.
2. ಬಹುಮಾಧ್ಯಮಗಳ ಬಳಕೆ ಇರುವುದರಿಂದ ಕಲಿಕೆ ಪರಿಣಾಮಕಾರಿಯಾಗಿರುತ್ತದೆ.
3. ಕ್ಲಿಷ್ಟಕರವಾಧ ಪರಿಕಲ್ಪನೆಗಳನ್ನು ಸರಳಿಕೃತಗೊಳಿಸಲು ಸಹಾಯ ಮಾಡುವುದರಿಂದ ಗ್ರಹಿಕೆ ಉತ್ತಮವಾಗಿರುತ್ತದೆ.
4. ಕಲಿಕಾಂಶಗಳನ್ನು ಪುನರ್‍ಬಲಗೊಳಿಸುವುದರಿಂದ ಕಲಿಕೆ ಶಾಸ್ವತವಾಗಿರುತ್ತದೆ.
5. ಒಮ್ಮೆ ಸಿದ್ದಪಡಿಸಿದ ಸಿ.ಡಿ. ಗಳನ್ನು ಹಲವಾರು ಬಾರಿ ಉಪಯೋಗಿಸವಬಹುದು.


ವಿಜ್ಞಾನದಲ್ಲಿ ಮೌಲ್ಯಮಾಪನ
1. ಮೌಲ್ಯಮಾಪನ & ಮೌಲ್ಯಮಾಪನ ಪ್ರಯೋಜನಗಳು
ಮೌಲ್ಯಮಾಪನ ಎಂದರೆ ಬೆಲೆ ನಿರ್ಧರಿಸುವುದು.
ಶಿಕ್ಷಣದಲ್ಲಿ ಮೌಲ್ಯಮಾಪನ ಶಿಕ್ಷಕನು ತರಗತಿಯಲ್ಲಿ ಹಾಕಿಕೊಂಡ ಬೋಧನಾ ಉದ್ದೇಶಗಳು ಕಲಿಕೆಯ ಅನುಭವಗಳು ಹಾಗೂ ಬೋಧನಾ ವಿಧಾನಗಳು ಮಗುವಿನ
ಜ್ಞಾನದ ಮಟ್ಟವನ್ನು ಹೆಚ್ಚಿಸಲು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಯಾಗಿವೆ ಎಂಬುದನ್ನು ಮೌಲ್ಯಮಾಪನ ಮಾಡುವ ಕ್ರಿಯೆಯನ್ನು ಶೈಕ್ಷಣಿಕ ಮೌಲ್ಯಮಾಪನ ಎಂದು ಕರೆಯುತ್ತಾರೆ.

ಮಾಲ್ಯಮಾಪನದ ಪ್ರಯೋಜನಗಳು:-
1. ಶಿಕ್ಷಕ ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಬೋಧನೆ ಹಾಗೂ ಕಲಿಕೆಯ ಇತಿಮಿತಿಯನ್ನು ತಿಳಿದುಕೊಳ್ಳಲು ಸಹಾಯಕವಾಗುತ್ತದೆ.
2. ಶಿಕ್ಷಕ ಹಾಗೂ ವಿದ್ಯಾರ್ಥಿಗಳು ತಮ್ಮ ಬೋಧನೆ ಮತ್ತು ಕಲಿಕೆಯನ್ನು ಉತ್ತಮ ಪಡಿಸಿಕೊಳ್ಳಲು ನೆರವಾಗುತ್ತದೆ.
3. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ನೀಡಲು ಸಹಾಯಕವಾಗುತ್ತವೆ.
4. ವಿದ್ಯಾರ್ಥಿಗಳನ್ನು ಅವರ ಸಾಧನೆಯ ಪರೀಕ್ಷೆಯ ಆಧಾರದ ಮೇಲೆ ವರ್ಗೀಕರಿಸಲು ಸಹಾಯಕವಾಗುತ್ತವೆ.
5. ವಿದ್ಯಾರ್ಥಿಗಳ ಕಲಿಕಾ ಚೋರಿಗಳನ್ನು ಪತ್ತೆ ಹಚ್ಚುತ್ತದೆ.
6. ವಿದ್ಯಾರ್ಥಿಗಳು ಅಗತ್ಯಗಳನ್ನು ಪೂರೈಸಲು ಸೂಕ್ತ ಕಲಿಕಾ ಅನುಭವಗಳನ್ನು ಪಠ್ಯವಸ್ತುವಿನಲ್ಲಿ ಸೇರಿಸಲು ಆಧಾರ ಒದಗಿಸುತ್ತದೆ.
7. ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಬಡ್ತಿ ನೀಡಲು ಅಥವಾ ಅದೇ ತರಗತಿಯಲ್ಲಿ ಕಲಿಯಲು ಮಾಹಿತಿ ಒದಗಿಸುತ್ತವೆ.
8. ಶಿಕ್ಷಕ ತನ್ನ ಬೋಧನಾ ಸಾಮಾಥ್ರ್ಯವನ್ನು ತಿಳಿದುಕೊಳ್ಳಬಹುದು.
9. ವಿದ್ಯಾರ್ಥಿಗಳ ಆಸಕ್ತಿಯನ್ನು ಶಿಕ್ಷಕ ಅರಿತುಕೊಳ್ಲಬಹುದು.
10.ವಿದ್ಯಾರ್ಥಿಗಳಿಗೆ ಶಿಕ್ಷಕನು ನಿರಂತರವಾಗಿ ಹಿಮ್ಮಾಹಿತಿ ಒದಗಿಸಬಹುದು. ಹೀಗೆ ಮೌಲ್ಯಮಾಪನವು ಶಿಕ್ಷಕ ಮತ್ತು ವಿದ್ಯಾರ್ಥಿ ಗಳಿಗೆ ಬೋಧನೆ ಮತ್ತು ಕಲಿಕೆ ಉತ್ತಮಪಡಿಸಿಕೊಳ್ಳಲು ನೆರವಾಗುತ್ತದೆ.

2. ವಿಜ್ಞಾನ ಕಲಿಕೆಯಲ್ಲಿ ವೈದಾನಿಕ ಪರೀಕ್ಷೆಗಳ ಮಹತ್ವ
ವಿಜ್ಞಾನ ಕಲಿಕೆಯಲ್ಲಿ ನೈದಾನಿಕ ಪರೀಕ್ಷೆಗಳು ಹೇಗೆ ನೆರವಾಗುತ್ತವೆ. ಎಂಬುದನ್ನು ಕೆಳಕಂಡ ಅಂಶಗಳ ಮೂಲಕ ತಿಳಿಸಬಹುದು.
1. ವಿದ್ಯಾರ್ಥಿಗಳ ಕಲಿಕೆಯಲ್ಲಿನ ದೋಷಗಳ ಕುರಿತು ಮಾಹಿತಿ ನೀಡುತ್ತದೆ.
2. ಕಲಿಕಾ ದೌರ್ಬಲ್ಯತೆಗಳ ಸ್ವರೂಪವನ್ನು ಶಿಕ್ಷಕರು ತಿಳಿಯಬಹುದು.
3. ಯಾವ ಕ್ಷೇತ್ರದಲ್ಲಿ ವಿದ್ಯಾರ್ಥಿ ಹಿಂದುಳಿದಿದ್ದಾನೆ ಎಂಬಹುದನ್ನು ಶಿಕ್ಷಕರು ಅರಿತು ಕೊಳ್ಳಬಹುದು.
4. ಕಲಿಕೆಯ ನ್ಯೂನ್ಯತೆಗಳಿಗೆ ಕಾರಣ ಕಂಡುಕೊಳ್ಳಲು ಶಿಕ್ಷಕರಿಗೆ ಮಾರ್ಗದರ್ಶನ ನೀಡುತ್ತದೆ.
5. ಕಲಿಕೆಯ ನ್ಯೂನ್ಯತೆಗಳಿಗೆ ಕಾರಣ ಹುಡುಕುವಂತೆ ಶಿಕ್ಷಕರಿಗೆ ಪ್ರೇರಣೆ ನೀಡುತ್ತದೆ.
6. ವಿದ್ಯಾರ್ಥಿಗಳ ಕಲಿಕೆಯಲ್ಲಿನ ಕುಂದು ಕೊರತೆಗಳ ಸಂಪೂರ್ಣ ಚಿತ್ರಣ ಪಡೆಯಲು ನೈದಾನಿಕ ಪರೀಕ್ಷೆಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ.
7. ಮುಂದಿನ ಕಲಿಕೆ ವಿದ್ಯಾರ್ಥಿಗಳಿಗೆ ಸುಗಮವಾಗಬೇಕಾ ದರೆ ನೈದಾನಿಕ ಪರೀಕ್ಷೆಗಳು ಅವಶ್ಯಕ
8. ವಿದ್ಯಾರ್ಥಿಗಳ ಕಲಿಕಾ ಸಾಮಥ್ರ್ಯಗಳ ನ್ಯೂನ್ಯತೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
9. ಕಲಿಕೆಯ ನಿರ್ದಿಷ್ಟಗಳ ಆಧಾರದ ಮೇಲೆ ಪರೀಕ್ಷಣಗಳನ್ನು ತಯಾರಿಸಬಹುದು.


3. ಪರಿಹಾರ ಬೋಧನೆ
ಪರಿಹಾರ ಬೋಧನೆ ಘಟಕ ಪರೀಕ್ಷೆಗಳನ್ನು ನಡೆಸುವುದರ ಮೂಲಕ. ಕಲಿಕೆಯಲ್ಲಿ ನ್ಯೂನ್ಯತೆಇರುವ ಅಥವಾ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಕಲಿಕೆಯಲ್ಲಿನ ಸಮಸ್ಯಗಳಿಗೆ ವಿಶೇಷವಾದ ಬೋಧನಾ ಕಾರ್ಯಕ್ರಮವನ್ನು ಶಿಕ್ಷಕರು ಹಮ್ಮಿಕೊಳ್ಳುವರು. ಇದನ್ನು ಪರಿಹಾರ ಬೋಧನೆ ಎಂದು ಕರೆಯುವರು.

4. ನೈದಾನಿಕ ಪರೀಕ್ಷೆ & ನೈದಾನಿಕ ಪರೀಕ್ಷೆಯಿಂದ ಮಕ್ಕಳಲ್ಲಿ ಸಾಮಾನ್ಯವಾಗಿ ಪತ್ತೆಮಾಡಬಲ್ಲ ವಿವಿಧ ಸಮಸ್ಯೆಗಳ ಪಟ್ಟಿ ವಿಷಯ ಬೋಧನೆ ಕಲಿಕೆಯ ಸದರ್ಭದಲ್ಲಿ ವಿದ್ಯಾರ್ಥಿಯ ಕಲಿಕೆಯಲ್ಲಿ ಎದುರಸಬಹುದಾದ ಸಮಸ್ಯ ಧೋಷಗಳನ್ನು ಪತ್ತೆಹಚ್ಚಲು ಬಳಸಲ್ಪಡುವ ಒಂದು ಪರೀಕ್ಷೆಯೇ ನೈದಾನಿಕ ಪರೀಕ್ಷೆಯಾಗಿದೆ. ಈ ಪರೀಕ್ಷೆಯ ಮೂಲಕ ಈ ಕೆಳಕಂಡ ಮೂಲಕ ಈ ಕೆಳಕಂಡ ಮಕ್ಕಳ ಸಾಮಾನ್ಯ ಸಮಸ್ಯೆಗಳನ್ನು ಪತ್ತೆ ಹಚ್ಚಲು ಸಹಾಯಕವಾಗುತ್ತದೆ. ಅವುಗಳೆಂದರೆ
1. ನೋಟದ ಪ್ರತ್ಯಕ್ಷಾನುಭವದ ಕೊರತೆ.
2. ಕೊಳುವಿಕೆಯಲ್ಲಿ ಸಾಮಥ್ರ್ಯದ ಕೊರತೆ.
3. ಕಣ್ಣುಗಳ ಚಲನೆಯ ಪರಿಪಕ್ಷತೆಯ ಕೊರತೆ.
4. ಸಾಧನೆಯ ಅಭಿಕ್ಷಮತೆಯ ಕೊರತೆ.
5. ಆಸಕ್ತಿಯ ಕೊರತೆ.
6. ಚಿತ್ರಗಳ ಭಾಗಗಳ ಗುರುತಿಸುವಲ್ಲಿ ಸಮಸ್ಯೆ
7. ವೈಜ್ಞಾನಿಕ ಹೆಸರುಗಳನ್ನು ಬರೆಯುವಲ್ಲಿ ಅಸಮರ್ಥತೆ
8. ವೈಜ್ಞಾನಿಕ ಹೆಸರುಗಳನ್ನು ಪದಗಳನ್ನು ಓದುವಲ್ಲಿನ ಕಠಿಣತೆಗಳು.


5. ಪ್ರಮಾಣಿಕೃತ ಸಾಧನಾ ಪರೀಕ್ಷೆಯ ಪ್ರಮುಖ ಗುಣಲಕ್ಷಣಗಳು
1. ವಿಶ್ವಾಸನೀಯತೆ : ನಂಬಿಕೆಗೆ ಅರ್ಹವಾದದ್ದನ್ನು ವಿಶ್ವಾಸನೀಯತೆ ಎನ್ನುತ್ತೇವೆ. ಯಾವುದೇ ಒಂದು ನಿರ್ದಿಷ್ಟ ಮೌಲ್ಯವನ್ನು ಯಾರೇ ಎಷ್ಟು ಬಾರಿ ಪರೀಕ್ಷಿಸಿದರೂ ಕೂಡ ಒಂದೇ ಉತ್ತರ ದೊರೆಯಬೇಕು.
2. ಸಮಂಜಸತೆ : ಯಾವುದೇ ಒಂದು ಸಾಧನವನ್ನು ಯಾವ ಉದ್ದೇಶದಿಂದ ತಯಾರಿಸಿದೆಯೋ ಆ ಉದ್ದೇಶವನ್ನು ಆ ಸಾಧನ ಅಳೆಯಬಹುದಾದರೆ ಅದಕ್ಕೆ ಸಮಂಜಸತೆ ಎಂದು ಕರೆಯಬಹುದು.
3. ವಸ್ತುನಿಷ್ಠತೆ : ಯಾವುದೇ ಪರೀಕ್ಷೆಯನ್ನು ಎಷ್ಟೋ ವಿದ್ಯಾರ್ಥಿಗಳಿಗೆ ಅಳವಡಿಸಿದರೂ ಸಹ ಉತ್ತರಗಳು ಒಂದೇ ರೀತಿಯಲ್ಲಿರಬೇಕೇ ಹೊರತು. ವಿದ್ಯಾರ್ಥಿಗಳ ವೈಯಕ್ತಿಕತೆಯಿಂದ ಬೇರೆಯಾಗಿರಬಾರದು. ಬಹು ಆಯ್ಕೆಯ ಪರಿಕ್ಷಣಗಳು ಇತರ ಪರೀಕ್ಷಣಗಳಿಗಿಂತ ಹೆಚ್ಚು ವಸ್ತುನಿಷ್ಠವಾಗಿರುತ್ತದೆ.
4. ಉಪಯೋಗಾರ್ಹತೆ: ಯಾವುದೇ ಪರೀಕ್ಷೆಯನ್ನು ಎಲ್ಲಿ ಬೇಕಾದರೂ ಬಳಸಿ ಕೊಳ್ಳುವಂತಿರಬೇಕು ಮತ್ತು ಅದು ತರಗತಿಯಲ್ಲಿ ಬಳಸಿ ಕೊಂಡು ವಿದ್ಯಾರ್ಥಿಗಳ ಕಲಿಕಾ ಸಾದನೆಯನ್ನು ಅಳೆಯುವಂತಿರುಬೇಕು.
6. ರಚನಾತ್ಮಕ ಮತ್ತು ಸಂಕಲನಾತ್ಮಕ ಮೌಲ್ಯಮಾಪನ ರಚನಾತ್ಮಕ ಮೌಲ್ಯಮಾಪನ ಒಂದು ಶೈಕ್ಷಣಿಕ ವರ್ಷದಲ್ಲಿ ನಿರಂತರವಾಗಿ ವರ್ಷವಿಡೀ ವಿದ್ಯಾರ್ಥಿಗಳ ಕಲಿಕೆಯ ಸಾಧನೆಯನ್ನು ಗುರುತಿಸುವ ಮೌಲ್ಯಮಾಪನಕ್ಕೆ ರಚನಾತ್ಮಕ ಮೌಲ್ಯಮಾಪನ ಎನ್ನುತ್ತೇವೆ.
ಉದಾಹರಣೆಗೆ ಘಟಕ ಪರೀಕ್ಷೆ ಮಾಸಿಕ ಪರೀಕ್ಷೆ ಇತ್ಯಾದಿಗಳ ಮೂಲಕ ಶಿಕ್ಷಕನು ವಿದ್ಯಾರ್ಥಿಗಳ ಕಲಿಕೆ ಬೋಧನಾ ಕ್ರಿಯೆ ಸಂದರ್ಭಳನ್ನು ಮೌಲ್ಯಮಾಪನ ಮಾಡುವುದರಿಮದ ಕಲಿಕಾ ದೋಷವನ್ನು ಸರಿಪಡಿಸಲು ಸಹಾಯಕವಾಗುತ್ತದೆ. ಮತ್ತು ತಮ್ಮ ಬೋಧನೆಯ ಬಗ್ಗೆ ನಿರಂತರ ಹಿಮ್ಮಾಹಿತಿಯನ್ನು ಒದಗಿಸಲು ಸಾಧ್ಯವಾಗುತ್ತದೆ.

ಸಂಕಲನಾತ್ಮಕ ಮೌಲ್ಯಮಾಪನ :
ಶಾಲೆಯಲ್ಲಿ ಶಿಕ್ಷಕರು ತಮ್ಮ ಬೋಧನಾ ಕಲಿಕೆಯ ಚಟುವಟಿಕೆಗಳನ್ನು ಸಂಪೂರ್ಣವಾಗಿ ಮುಗಿಸಿದ ಒಂದು ಶೈಕ್ಷಣಿಕ ವರ್ಷದ ಅತ್ಯಂದಲ್ಲಿ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ತಿಳಿಯಲು ಕೈಗೊಳ್ಳುವ ಮೌಲ್ಯಮಾಪನಕ್ಕಾಗಿ ಈ ವಿಧಾನವನ್ನು ಬಳಸುತ್ತಾರೆ. ದೀರ್ಘಾವಧಿ ಬೋಧನೆ ಮತ್ತು ಕಲಿಕೆಯ ಚಟುವಟಿಕೆಗಳನ್ನು ಸಮಗ್ರವಾಗಿ ವರ್ಷದ ಅಂತ್ಯದಲ್ಲಿ ಗುರುತ್ತಿಸಲಾಗವುದು. ಉದಾಹರಣೆಗೆ ವಾರ್ಷಿಕ ಪರೀಕ್ಷೆ ಪಬ್ಲಿಕ್ ಪರೀಕ್ಷೆಗಳು ಇತ್ಯಾದಿ.


7. ನೀಲಿ ನಕಾಶೆ
ಶಿಕ್ಷಕರು ಘಟಕ ಪರೀಕ್ಷೆಯನ್ನು ಕೈಗೊಳ್ಳುವ ಮುಂಚಿತವಾಗಿ ಬೋಧನೆಯ ಉದ್ದೇಶಗಳು ಪಠ್ಯ ವಿಷಯ ಹಾಗೂ ವಿವಿಧ ಪ್ರಶ್ನೆಗಳನ್ನು ಒಳಗೊಂಡಂತೆ ರಚಿಸಲ್ಪಡುವ ತ್ರಿಮುಖ ನಕಾಶೆಯನ್ನು ನೀಲಿ ನಕಾಶೆ ಎಂದು ಕರೆಯುತ್ತಾರೆ.

8. ಪರೀಕ್ಷೆ ಮತ್ತು ಮೌಲ್ಯಮಾಪನಗಳಾಗಿರುವ ವ್ಯತ್ಯಾಸಗಳು
ಮೌಲ್ಯಮಾಪನ
1 ಪರಿಮಾಣಾತ್ಮಕವಾದದ್ದು.
ಗುಣಾತ್ಮಕ ಮತ್ತು ಪರಿಮಾಣಾತ್ಕಕ
2ನಿಶ್ಚಿತ ಅವಧಿಯಲ್ಲಿ ನಡೆಯುವುದು
ನೀರಂತರವಾಗಿ ನಡೆಯುವದು.
3 ಸಂಕುಚಿತವಾದದ್ದು
ವಿಶಾಲ ದೃಷ್ಠಿಕೋನ ಹೊಂದಿದೆ.
4 ವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ಸಾಕ್ಷ್ಯಾದಾರಗಳನ್ನು ಸಂಗ್ರಹಿಸುವ ವಿಧಾನ
ªವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಸಂಗ್ರಹಿಸಿದ ಆಧಾರದ ಮೌಲ್ಯಗಳನ್ನು ಕಂಡು ಹಿಡಿಯುವ ವಿಧಾನ.
5 ಪರೀಕ್ಷೆಯ ಸರಳ ಪ್ರಕ್ರಿಯೆಯನ್ನು ಹೊಂದಿರುತ್ತದೆ.
ಮೌಲ್ಯಮಾಪನವು ಸಂಕೀರ್ಣ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ.
6 ಪರೀಕ್ಷೆಯ ವಿದ್ಯಾರ್ಥಿಗಲ ಪ್ರಗತಿಯ ಬಗ್ಗೆ ಸ್ಪಷ್ಟ ಕಲ್ಪನೆ ನೀಡಲಾರದು
ಮೌಲ್ಯಮಾಪನವು ಪ್ರಗತಿಯ ಪರಿಣಾಮಕಾರಿಯಾಗಿರುವುದನ್ನು ತಿಳಿಸುತ್ತದೆ.

ಪರೀಕ್ಷೆ
9. ಮೌಲ್ಯಮಾಪನ ವಿಧಗಳು
1. ರಚನಾತ್ಮಕ ಮೌಲ್ಯಮಾಪನ :- ಈ ಮೌಲ್ಯಮಾಪನ ಒಂದು ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಕಲಿಕೆಯ ಸಾಧನೆಯನ್ನು ಗುರುತಿಸಿ ಅವರ ಪ್ರಗತಿಯನ್ನು ತಿಳಿಯುವ ದೃಷ್ಟಿಯಿಂದ ಹಂತ ಹಂತವಾಗಿ ಮಾಡುವ ಮೌಲ್ಯಮಾಪನ
ಉದಾ: ಪ್ರತಿಯೊಂದು ಪರೀಕ್ಷಯ ನಂತರ ವಿದ್ಯಾರ್ಥಿಗಳ ಪ್ರಗತಿಯನ್ನು ದಾಖಲಿಸುವುದು.
2. ಸಂಕಲನಾತ್ಮಕ ಮೌಲ್ಯಮಾಪನ :- ಈ ರೀತಿಯ ಮೌಲ್ಯಮಾಪನದ ಪ್ರಮುಖ ಉದ್ದೇಶ ಇಡೀ ವರ್ಷದಲ್ಲಿ ವಿದ್ಯಾರ್ಥಿಗಳ ಕಲಿಕೆಯ ಸಾಧನೆ ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು ಸಮಗ್ರವಾಗಿ ತಿಳಿಯುವದು. ಅಧ್ಯಾಪಕರ ಬೋಧನೆಯ ಪ್ರಭಾವವು ವಿದ್ಯಾರ್ಥಿಗಳಲ್ಲಿ ಒಟ್ಟಾರೆ ಎಷ್ಟರ ಮಟ್ಟಿಗಾಗಿದೆ ಎಂಬುದನ್ನು ತಿಳಿಯುವುದು.
3. ನಿರಂತರ ಮೌಲ್ಯಮಾಪನ:- ಒಂದು ಘಟಕ ಪರೀಕ್ಷೆಯ ನಂತರ ಮೊತ್ತೊಂದು ಘಟಕ ಪರೀಕ್ಷೆಯನ್ನು ಪ್ರಾರಂಭಿಸುವುದಕ್ಕೆ ಮುನ್ನ ವಿದ್ಯಾರ್ಥಿಗಳನ್ನು ನೈದಾನಿಕ
ಹಾಗೂ ಪರಿಹಾರ ಬೋಧನೆಯ ಮೂಲಕ ಉತ್ತಮ ಪಡಿಸುವುದು ಈ ರೀತಿ ವಿದ್ಯಾರ್ಥಿಗಳ ಪ್ರಗತಿಯನ್ನು ನಿರಂತರವಾಗಿ ಹೆಚ್ಚಿಸಲು ಸಹಾಯಕವಾಗುವ ವಿಧಾನಕ್ಕೆ ನಿರಂತರ ಮೌಲ್ಯಮಾಪನ ಎನ್ನುವರು.
4. ವ್ಯಾಪಕ ಮೌಲ್ಯಮಾಪನ:- ವ್ಯಾಪಕ ಮೌಲ್ಯಮಾಪನವು ವಿದ್ಯಾರ್ಥಿಗಳ ಪಠ್ಯ ವಿಷಯಕ್ಕೆ ಸಂಬಂಧಿಸಿದ ಹಾಗೂ ಪಠ್ಯೇತರ ವಿಷಯಕ್ಕೆ ಸಂಬಂಧಿಸಿದ್ದುದಾಗಿದೆ ಪಠ್ಯೇತರ ವಿಷಯವು ವಿದ್ಯಾರ್ಥಿಗಳ ವ್ಯಕ್ತಿತ್ವಕ್ಕೆ ಸಂಬಂಧಿಸಿದೆ.


10. ನೈದಾನಿಕ ಪರೀಕ್ಷೆಗಳ ಲಕ್ಷಣಗಳು
ನೈಧಾನಿಕ ಪರೀಕ್ಷೆಯ ಲಕ್ಷಣಗಳು
1. ಇದು ವಿದ್ಯಾರ್ಥಿಯು ಬೋಧನಾ ಕಲಿಕೆಯ ಸಂದರ್ಭದಲ್ಲಿ ವಿದ್ಯಾರ್ಥಿಯು ಬೋಧನಾ ಕಲಿಕೆಯ ಸಂದರ್ಭದಲ್ಲಿ ವಿದ್ಯಾರ್ಥಿಯ ಎದುರಿಸುರುವ ಕಠಿಣತೆಯನ್ನು ಪತ್ತೆಹಚ್ಚುತ್ತದೆ.
2. ಶಿಕ್ಷಕನು ಬೋಧನೆಯ ಸಂದರ್ಭದಲ್ಲಿ ಮಾಡಿದ ತಪ್ಪುಗಳನ್ನು ಪತ್ತೆ ಹಚ್ಚುತ್ತದೆ.
3. ಇದು ವಿದ್ಯಾರ್ಥಿಗಳ ಕಲಿಕಾ ದೌರ್ಬಲ್ಯಗಳನ್ನು ಪತ್ತೇಹಚ್ಚುತ್ತದೆ.
4. ಈ ಪರೀಕ್ಷೆಯು ಒಳಗೊಂಡಿರುವ ಪ್ರಶ್ನೆಗಳಿಗೆ ಯಾವುದೇ ಅಂಕಗಳನ್ನು ನಿರ್ಧರಿಸಲಾಗಿರುವುದುಲ್ಲ.
5. ಈ ಪರೀಕ್ಷೆಯು ವಿದ್ಯಾರ್ಥಿಯ ಕಲಿಕಾ ಸಾಧನೆಗೆ ಹೆಚ್ಚು ಒತ್ತು ನೀಡಿದೆ ಕಲಿಕೆಯ ನ್ಯೂನ್ಯತೆಗಳನ್ನು ಪತ್ತೆ ಹೆಚ್ಚುವುದಾಗಿದೆ.
6. ಇದು ವಿದ್ಯಾರ್ಥಿಯ ನಿರ್ದಿಷ್ಟ ಕಲಿಕೆ ದೌರ್ಬಲ್ಯವನ್ನು ಕಂಡುಹಿಡಿದುಕೊಳ್ಳಲು ಬಳಸಲಾಗುತ್ತದೆ.

11. ಪರಿಹಾರಾತ್ಮಕ ಬೋಧನೆಯ ಎರಡು ಗುಣಗಳು
1. ಇದು ವಿದ್ಯಾರ್ಥಿಯ ಸಾಮಾಥ್ರ್ಯಕ್ಕೆ ತಕ್ಕಂತೆ ವಿಶೇಷ ಬೋದನಾ ವಿದಾವನ್ನು ಅಳವಡಿಸಿಕೊಂಡು ಕಲಿಕಾರ್ಥಿಯಲ್ಲಿ ಜ್ಞಾನವನ್ನು ಹೆಚ್ಚಿಸುವುದಾಗಿದೆ.
2. ವಿದ್ಯಾರ್ಥಿಯಲ್ಲಿ ಇರುವ ಕಲಿಕೆಯಲ್ಲಿನ ಗೊಂದಲವನ್ನು ಹೋಗಲಾಡಿಸುವುದಾಗಿದೆ.
3. ವಿದ್ಯಾರ್ಥಿಯ ತರಗತಿಯ ಬೋಧನೆಯ ಸಂದರ್ಭದಲ್ಲಿ ಕಲಿಯಲಾಗದ್ದನ್ನು ಕಲಿಯಲು ಈ ಬೋಧನೆಯಿಂದ ಕಲಿಯಲು ಸಹಾಯಕವಾಗುತ್ತದೆ.

12. ವಿಜ್ಞಾನ ಬೋಧನೆಯನ್ನು ಪರಿಣಾಮಕಾರಿಯಗಿ ಮಾಡುವಲ್ಲಿ ನಿರಂತರ ಮೌಲ್ಯಮಾಪನದ ಪಾತ್ರ
ವಿಜ್ಞಾನ ಬೋಧನೆಯಲ್ಲಿ ಪರಿಣಾಮಕಾರಿಯಾಗಿ ಮೂಡುವಲ್ಲಿ ನಿರಂತರ ಮೌಲ್ಯಮಾಪನ ಪಾತ್ರ ಎಂದಾಗ ನಿರಂತರ ಮೌಲ್ಯಮಾಪನ ಎಂದರೆ ಪರೀಕ್ಷೆಗಳನ್ನು ಒಂದಾದ ಮೇಲೆ ಮತ್ತೊಂದರಂತೆ ಮಾಡುವುದರಲ್ಲಿ ಒಂದು ಘಟಕ ಪರೀಕ್ಷೆಯ ನಂತರ ಮತ್ತೊಂದು ಘಟಕ ಪರೀಕ್ಷೆ ಪ್ರಾರಂಭಿಸುವದಕ್ಕೆ ಮುನ್ನ ವಿದ್ಯಾರ್ಥಿಗಳನ್ನು ಗುರುತಿಸಿ ನೈದಾನಿಕ ಮತ್ತು ಪರಿಹಾರ ಬೋಧನೆಯ ಮೂಲಕ ಉತ್ತಮಪಡಿಸಬಹುದು. ಈ ರೀತಿಯ ವಿದ್ಯಾರ್ಥಿಗಳ ಪ್ರಗತಿಯನ್ನು ನಿರಂತರವಾಗಿ ಹೆಚ್ಚಿಸಲು ಸಹಾಯಕವಾಗುವ ವಿಧಾನಕ್ಕೆ ನಿರಂತರ ಮೌಲ್ಯಮಾಪನ ವೆನ್ನಬಹುದು.
1. ಈ ರೀತಿಯ ಮೌಲ್ಯಮಾಪನ ವಿದ್ಯಾರ್ಥಿಗಳ ಪ್ರಗತಿ ಚಾರ್ಟು ತಯಾರಿಸಲು ನೆರವಾಗುತ್ತದೆ.
2. ಘಟಕ ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸಿರುವ ವಿದ್ಯಾರ್ಥಿಗೆ ಪರಿಹಾರ ಬೊಧನೆ ಮಾಡಿ ಅವರ ಸಾಧನೆಯಲ್ಲಿ ಪ್ರಗತಿಯನ್ನು ಖಚಿತಪಡಿಸಿಕೊಳ್ಳುವುದು.
3. ಈ ರೀತಿಯಾಗಿ ಶಿಕ್ಷಕರು ತಮ್ಮ ಬೋಧನೆಯನ್ನು ವೈವಿದ್ಯಮಯ ಹಾಗೂ ಪರಿಣಾಮಕಾರಿಯನ್ನಾಗಿಸಲು ಸಹಾಯ ಮಾಡುತ್ತದೆ.
4. ವಿಜ್ಞಾನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಅಭಿರುಚಿ ಓದುವ ಹವ್ಯಾಸ ವೈಜ್ಞಾನಿಕ ಹವ್ಯಾಸಗಳು ವೈಜ್ಞಾನಿಕ ಸಾಮಾನ್ಯ ಜ್ಞಾನ ಮುಂತಾದವುಗಳನ್ನು ತಿಳಿಯಲು ಸಹಕಾರಿಯಾಗಿದೆ.
5. ಒಟ್ಟಾರೆಯಾಗಿ ವಿದ್ಯಾರ್ಥಿಗಳ ಸಾಧನೆ ಮತ್ತು ಶಿಕ್ಷಕರ ಪ್ರಗತಿ ಬೋಧನೆಯಲ್ಲಿ ಮುನ್ನಡೆ ನೀಡುವಲ್ಲಿ ಪಾತ್ರ ವಹಿಸುತ್ತದೆ. ಈ ಮೇಲ್ಕಂಡ ರೀತಿಯಲ್ಲಿ ವಿಜ್ಞಾನ ಬೋಧನೆಯನ್ನು ಪರಿಣಾಮಕಾರಿಯಾಗಿ ಮಾಡುವಲ್ಲಿ ನಿರಂತರ ಮೌಲ್ಯಮಾಪನ ಪತ್ರಾ ಅಮೋಘವಾದದು.


12. ಮೌಲ್ಯ ಮಾಪನದ ಗುಣಲಕ್ಷಣಗಳು
1. ಇದು ನಿರಂತರ ಪ್ರಕ್ರಿಯೆಯಾಗಿದೆ.
2. ಬೋಧನಾ ಉದ್ದೇಶಗಳು, ಕಲಿಕೆಯ ಅನುಭವ ಹಾಗೂ ಕಲಿಕೆಯ ಫಲಿಂತಾಂಶಗಳ ಮೇಲೆ ಅವಲಂಬಿತವಾಗಿರುತ್ತದೆ.
3. ಇದು ಗುಣಾತ್ಮಕ ಹಾಗೂ ಪರಿಣಾಮಾತ್ಮಕ
4. ಇದು ವಿದ್ಯಾರ್ಥಿಯ ಒಂದು ಹಂತವನ್ನು ಪರೀಕ್ಷಿಸದೆ, ಬಳವಣಿಗೆಗೆ ಒತ್ತು ಕೊಡುತ್ತದೆ.
5. ಶಿಕ್ಷಕ ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಬೋಧನೆ ಮತ್ತು ಕಲಿಕೆಯ ಇತಿಮಿತಿಯನ್ನು ತಿಳಿದುಕೊಳ್ಳಲು ಸಹಾಯಕವಾಗುತ್ತದೆ.
6. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ನೀಡಲು ಸಹಾಯಕವಾಗುತ್ತದೆ.
7. ವಿದ್ಯಾರ್ಥಿಗಳ ಪ್ರಗತಿಯನ್ನು ಸೂಚಿಸುತ್ತದೆ.
8. ವಿದ್ಯಾರ್ಥಿಗಳನ್ನು ಅವರ ಸಾಧನೆಯ ಪರೀಕ್ಷೆಯ ಆಧಾರದ ಮೇಲೆ ವರ್ಗೀಕರಿಸಲು ಸಹಾಯಕವಾಗುತ್ತದೆ.