ಪ್ರಶ್ನೆಗಳು
1.ವ್ಯವಸ್ಥಿತವಾದ ಜ್ಞಾನ ಮತ್ತು ಸತ್ಯ ಸಂಗತಿಗಳ
ಸಂಗ್ರಹಿಸಿದ ಪರಿಕಲ್ಪನೆಗೆ ಹೀಗೆನ್ನುವರು
ಎ) ವಿಜ್ಞಾನ ✓
ಬಿ) ಇತಿಹಾಸ
ಸಿ) ಪೌರನೀತಿ
ಡಿ) ಅನಾಟಮಿ
2.ಈ ಕೆಳಗಿನವುಗಳಲ್ಲಿ ಒಂದು ವಿಜ್ಞಾನದ ವ್ಯಾಪ್ತಿಗೆ
ಸೇರಿರುತ್ತದೆ.
ಎ) ಮಾಹಿತಿ ತಂತ್ರಜ್ಞಾನ
ಬಿ) ಸಾರಿಕೆ ಸಂಪರ್ಕ
ಸಿ) ಆಹಾರ ಪೂರೈಕೆ
ಡಿ) ಮೇಲಿನ ಎಲ್ಲವೂ ✓
3. ನಕ್ಷತ್ರಗಳ ರಚನೆ ಹಾಗೂ ಗ್ರಹಗಳ ಲಕ್ಷಣಗಳ
ಬಗ್ಗೆ ತಿಳಿಯುವ ವಿಜ್ಞಾನದ ಶಾಖೆ
ಎ) ಭೂಗೋಳ ಶಾಸ್ತ್ರ
ಬಿ) ರಸಾಯನ ಶಾಸ್ತ್ರ
ಸಿ) ಖಗೋಳ ಶಾಸ್ತ್ರ ✓
ಡಿ) ಭೌತ ಶಾಸ್ತ್ರ
4.ಈ ಕೆಳಗಿನವುಗಳಲ್ಲಿ ವಿಜ್ಞಾನದ ಸ್ವರೂಪ
ಗುರುತಿಸುವ ಹೇಳಿಕೆಯನ್ನು ತಿಳಿಸಿ
1) ಇದು ಸಂಘಟಿತ ಜ್ಞಾನ ಭಂಡಾರ
2)ಪೂರ್ವಾಗ್ರಹ ಪೀಡೆಯನ್ನು ಹೊಂದಿರುವುದಿಲ್ಲ
3)ಹೊಸ ಸಿದ್ಧಾಂತಗಳನ್ನು ಸೂಕ್ತ ಮಾಹಿತಿ
ಇಲ್ಲದೆ ಸ್ವಿಕರಿಸುವುದಿಲ್ಲ
4)ಇದು ವೈಜ್ಞಾನಿಕ ಮನೋಭಾವನೆ ಯನ್ನು ಹುಟ್ಟು ಹಾಕುವುದಾಗಿದೆ.
ಎ) 1 ಮತ್ತು 2
ಬಿ) 2 ಮತ್ತು 3
ಸಿ) 3 ಮತ್ತು 4
ಡಿ) 1, 2, 3 ಮತ್ತು 4 ✓
5.ಸಾಮಾಜಿಕ ಬದಲಾವಣೆಯಲ್ಲಿ ವಿಜ್ಞಾನದ ಪಾತ್ರವನ್ನು
ವಿವರಿಸುತ್ತದೆ.
ಎ)ಯಂತ್ರಗಳಿಂದ ಕೈಗಾರಿಕೋದ್ಯಮ ಪ್ರಗತಿ ಪಥದಲ್ಲಿದೆ
ಬಿ)ಸಾರಿಗೆ ಸಂಪರ್ಕ ಊಹೆಗೂ ಮೀರಿ ವಿಸ್ತಾರ ಗೊಳ್ಳುತ್ತದೆ.
ಸಿ)ಸಾಂಪ್ರದಾಯ ಬದ್ಧ ಸಮಾಜವನ್ನು ಆಧುನಿಕ
ಸಮಾಜವನ್ನಾಗಿ ಪರಿವರ್ತಿಸುತ್ತದೆ.
ಡಿ) ಮೇಲಿನ ಎಲ್ಲವೂ ✓
6.ಮೂಢನಂಬಿಕೆ ಮತ್ತು ಸಮಸ್ಯೆ ಪರಿಹಾರ ವಿಜ್ಞಾನದ
ಈ ವಿಭಾಗಕ್ಕೆ ಸಂಬಂಧಿಸಿದ್ದಾಗಿದೆ.
ಎ) ವಿಜ್ಞಾನ ಬೋಧನೆ
ಬಿ) ಪರಿಸರ ವಿಜ್ಞಾನ
ಸಿ) ವೈಜ್ಞಾನಿಕ ಮನೋಭಾವನೆ ✓
ಡಿ) ಎ ಮತ್ತು ಬಿ
7.ವಿಜ್ಞಾನ ಬೋಧನೆ ಮೂಲಕ ಬೆಳೆಸಬಹುದಾದ ಮೌಲ್ಯಗಳು
1) ಉಪಯುಕ್ತತಾ ಮೌಲ್ಯ
2) ಶಿಸ್ತಿನ ಮೌಲ್ಯ
3) ಸಾಂಸ್ಕೃತಿಕ ಮೌಲ್ಯ
4) ವೃತ್ತಿ ಮೌಲ್ಯ
ಎ) 1 ಮತ್ತು 2
ಬಿ) 2 ಮತ್ತು 3
ಸಿ) 1 ಮತ್ತು 4
ಡಿ) ಮೇಲಿನ ಎಲ್ಲವು ✓
8.ಈ ಕೆಳಗಿನ ಭಾರತೀಯ ವಿಜ್ಞಾನಿ ಗಳನ್ನು ತಿಳಿಸಿ
1) ಜಗದೀಶ ಚಂದ್ರ ಬೋಸ್
2) ಗ್ರೇಗರ್ ಮೆಂಡಲ್
3) ನ್ಯೂಟನ್
4) ಸಿ.ವಿ. ರಾಮನ್
ಎ) 1 ಮತ್ತು 4 ✓
ಬಿ) 1 ಮತ್ತು 3
ಸಿ) 2 ಮತ್ತು 4
ಡಿ) 3 ಮತ್ತು 4
9. ಕೌಶಲ್ಯಕ್ಕೆ ಸಂಬಂಧಿಸಿದಂತೆ ಎರಡು ನಿರ್ದಿಷ್ಟಗಳನ್ನು
ಗುರುತಿಸಿ
1) ಪ್ರಯೋಗ ಮಾಡುವುದು
2) ಸ್ಮರಿಸುವುದು
3) ಅಂದವಾದ ಚಿತ್ರ ಬರೆಯುವುದು
4) ಗುರುತಿಸುವುದು
ಎ) 1 ಮತ್ತು 2
ಬಿ) 1 ಮತ್ತು 3 ✓
ಸಿ) 3 ಮತ್ತು 4
ಡಿ) 1 ಮತ್ತು 4
10.ತಿಳುವಳಿಕೆಗೆ ಸಂಬಂಧಪಟ್ಟ ನಿರ್ದಿಷ್ಟ ಗಳನ್ನು
ಹೆಸರಿಸಿ
ಎ) ಉದಾಹರಣೆ ಕೊಡುವುದು
ಬಿ) ವರ್ಗಿಕರಿಸುವುದು
ಸಿ) ಪತ್ತೆಹಚ್ಚುವುದು
ಡಿ) ಮೇಲಿನ ಎಲ್ಲವೂ ✓
11.ರಾಬರ್ಟ ಮೇಜರ್‍ರವರ ಪ್ರಕಾರ ಬೋಧನಾ ಉದ್ದೇಶಗಳು
ಈ ಮೂರು ಅಂಶಗಳನ್ನು ಒಳಗೊಂಡಿವೆ.
ಎ) ವಿಷಯ, ವರ್ತನೆ, ಸ್ವರೂಪ ✓
ಬಿ) ಜ್ಞಾನ, ಆಸಕ್ತಿ, ಪ್ರಶಂಶೆ
ಸಿ) ವಿಷಯ, ಜ್ಞಾನ, ಆಸಕ್ತಿ
ಡಿ) ಮನೋಭಾವ, ಸ್ವರೂಪ, ಅನ್ವಯ
12.ಜ್ಞಾನ ವಲಯದ ಉದ್ದೇಶಗಳನ್ನು ವರ್ಗಿಕರಿಸಿದವರು
ಯಾರು
ಎ) ಡೇವಿಡ್ ಕೃಥಾಲ್
ಬಿ) ಅನಿತ ಟಿ. ಹರೋರೆ
ಸಿ) ಹರ್ಬಾರ್ಟ
ಡಿ) ಬೆಂಜಮೀನ್ ಎಸ್.ಬ್ಲೂಮ್ ✓
13. ಪ್ರಾಥಮಿಕ ತರಗತಿಯಲ್ಲಿ ವಿಜ್ಞಾನ ಬೋಧನೆಯ
ಗುರಿಗಳನ್ನು ಗುರುತಿಸಿ
1) ಮಗುವಿನಲ್ಲಿ ಸೃಜನ ಶೀಲತೆಯನ್ನು ತೋರಿಸುವುದು
2)ತನ್ನ ಮತ್ತು ಪರಿಸರದ ಆರೋಗ್ಯ ಕಾಪಾಡಿ ಕೊಳ್ಳುವುದು
3) ಮಕ್ಕಳಲ್ಲಿ ಉತ್ತಮ ವೈಜ್ಞಾನಿಕ ಹವ್ಯಾಸಗಳನ್ನು
ಬೆಳೆಸುವುದು
4)ಪ್ರಸ್ತುತ ವಿಜ್ಞಾನದಲ್ಲಾಗಿರುವ ಬದಲಾವಣೆಯನ್ನು
ಗುರುತಿಸುವುದು
ಎ) 1 ಮತ್ತು 2
ಬಿ) 2 ಮತ್ತು 3
ಸಿ) 1 ಮತ್ತು 4
ಡಿ) ಮೇಲಿನ ಎಲ್ಲವೂ ✓
14.ಪರಿಣಾಮಕಾರಿ ವಿಜ್ಞಾನ ಬೋಧನೆಗೆ ಈ ಅಂಶಗಳು
ಕಾರಣವಾಗಿವೆ.
ಎ) ವಿಷಯ ಪ್ರಭುತ್ವ
ಬಿ) ಕೌಶಲ್ಯಗಳು
ಸಿ) ಅನ್ವಯಗಳು
ಡಿ) ಜ್ಞಾನ ಮತ್ತು ಕೌಶಲ್ಯ ✓
15.ನಿರ್ದಿಷ್ಟ ಅವಧಿಯಲ್ಲಿ ಕಲಿಕೆಯ ಚೌಕಟ್ಟಿನಲ್ಲಿ
ಪ್ರತಿಯೊಂದು ಮಗುವು ಸಾಧಿಸಲೇಬೇಕಾದ ಸಾಮಥ್ರ್ಯ ಗಳನ್ನು ಹೀಗೆನ್ನುವರು
ಎ) ಕಲಿಕಾ ಮಟ್ಟ
ಬಿ) ಕನಿಷ್ಠ ಕಲಿಕಾ ಮಟ್ಟ ✓
ಸಿ) ಗರಿಷ್ಟ ಕಲಿಕಾ ಮಟ್ಟ
ಡಿ) ಮೇಲಿನ ಎಲ್ಲವೂ
16.ವೈಜ್ಞಾನಿಕ ತತ್ವಗಳು, ಪರಿಕಲ್ಪನೆಗಳು
ಹೊಸ ತತ್ವಗಳನ್ನು ಬೆಳೆಸುವ ಸಾಮಥ್ರ್ಯ ವನ್ನು ರೂಪಿಸಲು ಈ ಕ್ರಮದಿಂದ ಸಾಧ್ಯ.
ಎ) ಉಪನ್ಯಾಸ ಪದ್ಧತಿ
ಬಿ) ಪ್ರಯೋಗಿಕ ವಿಜ್ಞಾನ
ಸಿ) ಸಮಸ್ಯಾ ಪರಿಹಾರ ಪದ್ಧತಿ ✓
ಡಿ) ಪ್ರಾತ್ಯಕ್ಷಿಕ ಪದ್ಧತಿ
17.ಪ್ರಾತ್ಯಕ್ಷಿಕ ಪದ್ಧತಿಯ ಯಾವುದಾದರೂ
2 ಅನುಕೂಲಗಳನ್ನು ಗುರುತಿಸಿ
ಎ) ವಿದ್ಯಾರ್ಥಿಗಳಿಗೆ ಪ್ರಯೋಗಗಳನ್ನು ಮಾಡುವ
ಕೌಶಲ್ಯಗಳ ಜೊತೆಗೆ ಪ್ರದರ್ಶಿಸುವ ಕುಶಲತೆಯು ಬೆಳೆಯುತ್ತದೆ
ಬಿ) ದತ್ತ ಸಮಯದಲ್ಲಿ ಪ್ರಯೋಗಗಳನ್ನು ಪ್ರದರ್ಶಿಸ
ಬೇಕಾಗಿರುವುದರಿಂದ ಸಮಯ ಪ್ರಜ್ಞೆ ಮೂಡುತ್ತದೆ.
ಸಿ) ಸಮಸ್ಯೆ ಬಿಡಿಸಲು ಸಹಾಯ ಮಾಡುತ್ತದೆ.
ಡಿ) ಎ ಮತ್ತು ಬಿ ✓
18.ಈ ಕೆಳಗಿನ ಹೆಳಿಕೆಗಳಲ್ಲಿ ಉಪನ್ಯಾಸ ಪದ್ಧತಿ
ಕುರಿತು ಸರಿಯಾದ ಹೇಳಿಕೆಯನ್ನು ಗುರುತಿಸಿ
1) ಇದು ಶಿಕ್ಷಕ ಕೇಂದ್ರಿಕೃತ
2) ಇದು ವಿಷಯ ಕೇಂದ್ರಿಕೃತ
3) ಇದು ಏಕಮುಖ ಬೋಧನಾ ವಿಧಾನ
4) ಮಕ್ಕಳ ಪಾಲ್ಗೋಳ್ಳುವಿಕೆಯನ್ನು ಹೆಚ್ಚಿಸುತ್ತದೆ
ಎ) 1, 2 ಮತ್ತು 4
ಬಿ) 3, 4 ಮತ್ತು 2
ಸಿ) 1, 2 ಮತ್ತು 3 ✓
ಡಿ) ಮೇಲಿನ ಎಲ್ಲವು
19.ಉದಾಹರಣೆ ಮೂಲಕ ಪ್ರಾರಂಭಿಸಿ ಪರಿಕಲ್ಪನೆ ಗಳನ್ನು
ಬೆಳೆಸುವ ಬೋಧನೆಗೆ ಹೀಗೆನ್ನುವರು
ಎ) ಪ್ರಾಯೋಗಿಕ ವಿಧಾನ
ಬಿ) ಶಿಶು ಕೇಂದ್ರಿತ ವಿಧಾನ
ಸಿ) ಯೋಜನಾ ವಿಧಾನ
ಡಿ) ಪರಿಕಲ್ಪನಾ ಬೋಧನೆ ✓
20.ಕ್ರಮಾನುಗತ ಬೋಧನೆಯನ್ನು ರೂಪಿಸಿದ ವಿಜ್ಞಾನಿ
ಯಾರು?
ಎ) ಬಿ.ಎಫ್ ಸ್ಕಿನರ್ ✓
ಬಿ) ಪಾವಲೋವ
ಸಿ) ಹರ್ಬಾಟ್
ಡಿ) ಬೆಂಜಿಮಿನ ಬ್ಲೂಮ್
21.ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಅವರ
ಸಮಸ್ಯೆಗಳನ್ನು ಗುರುತಿಸಿ ವಿಶೇಷವಾದ ಬೋಧನಾ ಕಾರ್ಯವನ್ನು ನಡೆಸುವುದಕ್ಕೆ ಹೀಗೆನ್ನುವರು
ಎ) ಪರಿಹಾರ ಬೋಧನೆ ✓
ಬಿ) ವೇಗ ವರ್ಧಕ ಬೋಧನೆ
ಸಿ) ಕ್ರಮಾನುಗತ ಬೋಧನೆ
ಡಿ) ಶಿಶು ಕೇಂದ್ರಿತ ಬೋಧನೆ
22.ಪಾಠ ಯೋಜನೆ ಮತ್ತು ಘಟಕ ಯೋಜನೆಗೆ ಸಂಬಂಧಪಟ್ಟಂತೆ
ಸರಿಯಾದ ಹೇಳಿಕೆಯನ್ನು ಗುರುತಿಸಿ
ಎ) ಪಾಠ ಯೋಜನೆ ದೊಡ್ಡದು ಘಟಕ ಯೋಜನೆ ಚಿಕ್ಕದು
ಬಿ)ಪಾಠ ಯೋಜನೆ ವಿಶಾಲ ವ್ಯಾಪ್ತಿಯನ್ನು ಹೊಂದಿದ್ದು
ಘಟಕ ಯೋಜನೆ ಸಂಕುಚಿತ ವ್ಯಾಪ್ತಿಯನ್ನು ಹೊಂದಿದೆ
ಸಿ)ಪಾಠ ಯೋಜನೆ ನಿರಂತರ ಮೌಲ್ಯಮಾಪನಕ್ಕೆ
ಸಹಕಾರಿಯಾಗಿದೆ ಘಟಕ ಯೋಜನೆ ವ್ಯಾಪಕ ಮೌಲ್ಯಮಾಪನಕ್ಕೆ ಸಹಾಯವಾಗಿದೆ. ✓
ಡಿ) ಮೇಲಿನ ಎಲ್ಲಾ
23. ವರ್ಷವಿಡಿ ಇಡಿ ಪಠ್ಯ ವಿಷಯವನ್ನು ಬೋಧಿಸಲು
ತಯಾರಿಸುವ ವಿಷಯವನ್ನು ಹಿಗೆನ್ನುವರು
ಎ) ಪಾಠ ಯೋಜನೆ
ಬಿ) ವಾರ್ಷಿಕ ಯೋಜನೆ ✓
ಸಿ) ಘಟಕ ಯೋಜನೆ
ಡಿ) ಮಾಸಿಕ ಯೋಜನೆ
24.ಮಕ್ಕಳು ನೀರಿನ ಪ್ರಾಮುಖ್ಯತೆಯನ್ನು ಉದಾಹರಣೆ ಯೊಂದಿಗೆ
ವಿವರಿಸುವುದು, ಇದು ಕೆಳಗಿನ ಯಾವ ಬೋಧನಾ ಉದ್ದೇಶವನ್ನು ಹೊಂದಿದೆ.
ಎ) ಜ್ಞಾನ
ಬಿ) ತಿಳುವಳಿಕೆ ✓
ಸಿ) ಅನ್ವಯ
ಡಿ) ಕೌಶಲ್ಯ
25. ಮಕ್ಕಳು ನೀರನ್ನು ಶುದ್ಧಿಕರಿಸಲು ಬೇಕಾಗುವ
ಸಲಕರಣೆಗಳನ್ನು ವ್ಯವಸ್ಥೆ ಮಾಡುವರು ಇದು ಯಾವ ಬೋಧನಾ ಉದ್ದೇಶವನ್ನು ಹೊಂದಿದೆ
ಎ) ಜ್ಞಾನ
ಬಿ) ತಿಳುವಳಿಕೆ
ಸಿ) ಅನ್ವಯ
ಡಿ) ಕೌಶಲ್ಯ ✓
26. ವಿಜ್ಞಾನ ಕಿಟ್‍ನಲ್ಲಿರುವ ಸಾಮಗ್ರಿಯನ್ನು
ಗುರುತಿಸಿ
ಎ) ಸ್ಪಿರೀಟ ದೀಪ ✓
ಬಿ) ಡಂಬೆಲ್ಸ್
ಸಿ) ಬೆಲ್ಸ್
ಡಿ) ಲೆಜಿಮ್ಸ್
27. ಈ ಕೆಳಗಿನ ಹೇಳಿಕೆಯಲ್ಲಿ ವಿಜ್ಞಾನ ಹವ್ಯಾಸಕ್ಕೆ
ಸಂಬಂಧ ಪಟ್ಟಿದನ್ನು ಗುರುತಿಸಿ
ಎ)ವಿಜ್ಞಾನ ಉಪಕರಣ ಮಾದರಿಯನ್ನು ಸಂಗ್ರಹಿಸುವುದು
ಬಿ) ವಿಜ್ಞಾನಕ್ಕೆ ಸಂಬಂಧಿಸಿದ ಚಿತ್ರಗಳನ್ನು
ಬಿಡಿಸುವುದು
ಸಿ) ಕುತುಹಲ ಕೆರಳಿಸುವ ಪ್ರಶ್ನೆಗಳಿಗೆ ಉತ್ತರಿಸುವುದು
ಡಿ) ಮೇಲಿನ ಎಲ್ಲವೂ ✓
28.ನವೋದಯ ಶಾಲೆಗಳು ಈ ಕಾರಣಕ್ಕೆ ಹುಟ್ಟಿಕೊಂಡಿವೆ
ಎ) ಗ್ರಾಮೀಣ ಭಾಗದಲ್ಲಿ ಶಾಲೆಗಳ ಹೆಚ್ಚಳಕ್ಕೆ
ಬಿ)ಗ್ರಾಮೀಣ ಭಾಗದಲ್ಲಿ ಒಳ್ಳೆಯ ಶಿಕ್ಷಣ
ಕೊಡುವುದಕ್ಕೆ
ಸಿ) ಸರ್ವ ಶಿಕ್ಷಣದ ಭಾಗವಾಗಿ
ಡಿ)ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಅಪವ್ಯಯ
ತಡೆಯುವುದಕ್ಕೆ ✓
29. ಶಿಕ್ಷಣವು ಕಲಿಸುವಿಕೆಯಿಂದ
ಎ) ಇದು ಮಗು ಕೇಂದ್ರಿತ ಶಿಕ್ಷಣಕ್ಕೆ ಒತ್ತು
ಕೊಡುತ್ತದೆ. ✓
ಬಿ) ಇದು ಶಿಕ್ಷಣದ ಅಮಲಾಗ್ರ ಬದಲಾವಣೆಗೆ ಕಾರಣ
ಸಿ) ಇದು ಪರೀಕ್ಷಾ ಫಲಿತಾಂಶದ ಕಡೆಗೆ ಒತ್ತು
ನೀಡುತ್ತದೆ
ಡಿ) ಶಿಕ್ಷಕನ ಕಡೆಗೆ ಗಮನ ಕೊಡುತ್ತದೆ.
30.ಸಂಪೂರ್ಣ ಶಿಕ್ಷಣ ಪ್ರಕ್ರೀಯೆ ಇದಕ್ಕೆ
ಒತ್ತು ಕೊಡುತ್ತದೆ.
ಎ) ತರಗತಿಯಲ್ಲಿ ವೈವಿಧ್ಯತೆಗೆ ಪ್ರದನ್ಯೆತೆ
ನೀಡುತ್ತದೆ. ✓
ಬಿ)ಇದು ತರಗತಿಗೆ ಕರೋರ ನಿರ್ಧಾರವನ್ನು ನೀಡುತ್ತದೆ.
ಸಿ) ಕಲ್ಪನೆಗಳನ್ನು ಒತ್ತಾಯ ಪೂರ್ವಕವಾಗಿ
ನೀಡುತ್ತದೆ.
ಡಿ)ತರಗತಿಯಲ್ಲಿ ಕೆಲವರಿಗೆ ಮಾತ್ರ ಮಹತ್ವ
ನೀಡುವದು
31. ಈ ಕೆಳಗಿನವುಗಳಲ್ಲಿ ವಸ್ತು ನಿಷ್ಟ ಪ್ರಶ್ನೆಗಳಾಗಿವೆ
ಎ) ಕಿರು ಉತ್ತರಗಳು ✓
ಬಿ)ಮೂರು ನಾಲ್ಕುವಾಕ್ಯದಲ್ಲಿ ಬರೆಯುವ ಉತ್ತರಗಳು
ಸಿ) ಸರಿ ಅಥವಾ ತಪ್ಪು
ಡಿ) ಚಿತ್ರ ಬರೆಯುವುದು
32. ವಿಜ್ಞಾನ ಬೋಧನೆಯಲ್ಲಿ ಸಾಮಾಜಿಕರಣವೆಂದರೆ
ಇದರ ಅರ್ಥ
ಎ)ತನದೆ ಆದ ಸಾಮಾಜಿಕ ಸ್ಥಾನ ಮಾನವನ್ನು ಹೊಂದುವದು
ಬಿ) ಸಮಾಜದಲ್ಲಿ ದೊಡ್ಡವರಿಗೆ ಗೌರವ ಕೊಡುವುದು
ಸಿ) ಸಮಾಜಕ್ಕೆ ತಕ್ಕರೀತಿ ಹೊಂದಿಕೊಳ್ಳುವುದು
ಮತ್ತು ಸಮಾಜದ ಒಳಿತಿಗಾಗಿ ಕಾರ್ಯ ಮಾಡುವುದು ✓
ಡಿ) ಯಾವಾಗಲು ಸಮಾಜದ ಕಾರ್ಯ ಮಾಡುವುದು
33.ವಿಜ್ಞಾನ ಶಿಕ್ಷಕನು ತನ್ನ ತರಗತಿಯಲ್ಲಿ
ಮಕ್ಕಳಿಗೆ ನೇರವಾಗಿ ಪ್ರಶ್ನೆಗಳಿಗೆ ಉತ್ತರ ಕೊಡದೆ ಅವರಲ್ಲಿಯ ಗುಂಪಿನಲ್ಲಿ ಚರ್ಚಿಸಿ ತಿರ್ಮಾನಕ್ಕೆ
ಬರಲು ಸೂಚಿಸುವ ವಿಧಾನವು
ಎ) ಮಕ್ಕಳಲ್ಲಿ ಒಳ್ಳೆಯ ಗುಣಗಳನ್ನು ಬೆಳಸುವುದು
ಬಿ) ಶಿಕ್ಷಕನಿಗೆ ಉತ್ತರದ ಮಾಹಿತಿ ಹೊಂದದ
ಕಾರಣ
ಸಿ) ಮಕ್ಕಳ ಮುಕ್ತ ಭಾಗವಹಿಸುವಿಕೆ ಹೆಚ್ಚಿಸುವುದು
✓
ಡಿ) ಕಲಿಕೆಯ ವೇಗ ಹೆಚ್ಚಲು
34.ವಿಜ್ಞಾನ ಬೋಧನೆಯಲ್ಲಿ ಕೆಳಗಿನ ಯಾವ ಅಂಶ
ಶಿಕ್ಷಕನ ಕುರಿತಾಗಿದೆ
ಎ) ವ್ಯವಸ್ಥಿತ ಕುಡುವ ವ್ಯವಸ್ಥೆ
ಬಿ) ಒಳ್ಳೆಯ ಪಠ್ಯ ಪುಸ್ತಕ
ಸಿ) ಪಠ್ಯಪುಸ್ತಕ ಹೊಂದಿರುವ ವಿಷಯಗಳು
ಡಿ) ವಿಷಯದ ಬಗ್ಗೆ ಸಂಪೂರ್ಣ ಹಿಡಿತ ✓
35.ವಿದ್ಯಾರ್ಥಿಯ ವ್ಯಕ್ತಿತ್ವವು ಇದರ ಫಲಿತಾಂಶವಾಗಿದೆ
ಎ) ಅವನು ಪಡೆದ ಶಿಕ್ಷಣದಿಂದ
ಬಿ) ಅವನ ಪರಿಸರದಿಂದ
ಸಿ) ಅವನು ಅನವಂಶಿಯ ಗುಣದಿಂದ
ಡಿ) ಅವನ ಪರಿಸರ ಮತ್ತು ಅನುವಂಶಿಯ ಗುಣದಿಂದ
✓
36.ವಿಜ್ಞಾನದ ವಿಷಯದಲ್ಲಿ ಸಮಸ್ಯೆ ಪರಿಹಾರ
ಪದ್ಧತಿಯಲ್ಲಿ ಈ ಕೆಳಗಿನ ಯಾವು ಹಂತವು ಮೊದಲನೆಯದಾಗಿದೆ.
ಎ) ಕಲ್ಪನೆಗಳ ಬಗ್ಗೆ ಮಾಹಿತಿ
ಬಿ) ಸಮಸ್ಯೆಯ ಅರಿವು ✓
ಸಿ) ಸಂಪೂರ್ಣ ಮಾಹಿತಿ ಸಂಗ್ರಹಣ
ಡಿ) ವಿಧಾನವನ್ನು ತಿಳಿಯುವುದು
37. ಮಗು “ಫೇಲಾಗಿದೆ” ಎಂದರೆ ಇದರ ಅರ್ಥ
ಎ) ಮಗುವಿಗೆ ಉತ್ತರಗಳನ್ನು ಹೆಳಲು ಬರುವುದಿಲ್ಲ
ಬಿ) ಮಗುವಿಗೆ ಓದಲು ಬರುವುದಿಲ್ಲ
ಸಿ) ಮಗುವಿಗೆ ಓದಲು ಆಸಕ್ತಿ ಇಲ್ಲ
ಡಿ) ಶಿಕ್ಷಣ ವ್ಯವಸ್ಥೆ ಫೇಲಾಗಿದೆ ✓
38. ವಿಜ್ಞಾನ ಬೋಧನೆಯ ಗುರಿ ಇದಾಗಿದೆ
ಎ) ವಿಷಯದ ಪರಿಕಲ್ಪನೆಯನ್ನು ತಿಳಿಸುವುದು
ಬಿ)ಮಕ್ಕಳನ್ನು ಕಲಿಕೆಯಲ್ಲಿ ಪಾಲ್ಗೋಳ್ಳುವಂತೆ
ಮಾಡುವುದು
ಸಿ) ಜ್ಞಾನವನ್ನು ನೀಡುವುದು
ಡಿ)ಮಗುವಿನಲ್ಲಿ ಅಪೇಕ್ಷಿತ ಬದಲಾವಣೆಯನ್ನು
ತರುವುದು ✓
39. SOIO ವರ್ಗೀಕರಣವನ್ನು
ನೀಡಿದವರು
ಎ) ಭ್ಲೂಮ
ಬಿ) ವೋಲರ
ಸಿ) ಸಿಂಪಸನ್
ಡಿ) ಬೀಗ್ಸ ಮತ್ತು ಕೂಲಿಸ ✓
40. ಹಿರೊಸ್ಟಿಕ್ ಇದರ ಅರ್ಥ
ಎ) ಸಂಶೋಧಿಸು ✓
ಬಿ) ತೋರಿಸು
ಸಿ) ಮಾಡು
ಡಿ) ನಟಿಸು
41.ವೈಜ್ಞಾನಿಕ ಚಟುವಟಿಕೆಗಳು ಎನನ್ನು ಹೊಂದಿರುತ್ತವೆ
ಎ) ದೈಯಿಕ ಶಿಕ್ಷಣ
ಬಿ) ಮಾನಸಿಕ ಶಿಕ್ಷಣ
ಸಿ) ಮನೋವಿಜ್ಞಾನ
ಡಿ) ಧೈಹಿಕ ಮತ್ತು ಮಾನಸಿಕ ಶಿಕ್ಷಣ ✓
42. ಎನ್‍ಸಿಎಫ್ 2005ರ ಪ್ರಕಾರರ ಪರಿಸರ ಶಿಕ್ಷಣದ
ಆಧಾರ ತತ್ವ
ಎ) ಜ್ಞಾನವನ್ನು ವೃತ್ತ ಜೀವನಕ್ಕೆ ಸಂಬಂಧ
ಕಲ್ಪಿಸುವುದು
ಬಿ)ಜ್ಞಾನವನ್ನು ಶಾಲೆಯ ಹೊರಗಿನ ಜೀವನಕ್ಕೆ
ಸಂಬಂಧ ಕಲ್ಪಿಸುವುದು ✓
ಸಿ)ಜ್ಞಾನವನ್ನು ಔದ್ಯೋಗಿಕ ಜೀವನಕ್ಕೆ ಸಂಬಂಧ
ಕಲ್ಪಿಸುವುದು
ಡಿ) ಜ್ಞಾನವನ್ನು ಪರೀಕ್ಷೆಗೆ ಸಂಬಂಧ ಕಲ್ಪಿಸುವುದು
43. ಸಸ್ಯದ ಬೆಳವಣಿಗೆಯ ಪರಿಕಲ್ಪನೆಯನ್ನು
ಶಿಕ್ಷಕರು ತರಗತಿಯಲ್ಲಿ ಪರಿಣಾಮಕಾರಿಯಾಗಿ ಬೋಧಿಸಲು ಅತ್ಯುತ್ತಮ ವಿಧಾನ
ಎ) ಕಪ್ಪುಹಲಗೆಯ ಮೇಲೆ ಚಿತ್ರ ಬಿಡಿಸಿ ವಿವರಿಸುವುದು
ಬಿ) ವಿವರವಾದ ವಿವರಣೆ ನೀಡುವುದು
ಸಿ) ಸಸ್ಯದ ಬೆಳವಣಿಗೆಯನ್ನು ಚಿತ್ರಪಟದ ಮೂಲಕ
ತೋರಿಸುವುದು
ಡಿ)ಮಕ್ಕಳು ಬೀಜಗಳನ್ನು ಬಿತ್ತಿ ಅವು ಮೊಳಕೆ ಯೊಡೆದು
ಸಸಿಯಾಗುವುದನ್ನು ಅವಲೋಕಿಸುವುದು ✓
44. ಸಂದರ್ಭೋಚಿತ ಕಲಿಕೆಯು ಬೋಧನೆ ಮತ್ತು
ಕಲಿಕೆಯು
ಎ) ಮಾಧ್ಯಮಿಕ ಸಿದ್ದಾಂತವನ್ನು ಆಧರಿಸಿದೆ
ಬಿ) ಅನ್ವೇಷಣಾತ್ಮಕ ಸಿದ್ದಾಂತವನ್ನು ಆಧರಿಸಿದೆ
ಸಿ) ಸಾಂಸ್ಕ್ರತಿಕ ಸಿದ್ಧಾಂತವನ್ನು ಆಧರಿಸಿದೆ
ಡಿ) ರಚನಾತ್ಮಕ ಸಿದ್ದಾಂತವನ್ನು ಆಧರಿಸಿದೆ
✓
45.ಪರಿಸರದ ಸೌಂದರ್ಯವನ್ನು ವರ್ಣಿಸುವ ಮೌಲ್ಯವೇ
ಎ) ನೈತಿಕ ಮೌಲ್ಯ
ಬಿ) ಸೌಂದರ್ಯಾತ್ಮಕ ಮೌಲ್ಯ ✓
ಸಿ) ಧಾರ್ಮಿಕ ಮೌಲ್ಯ
ಡಿ) ಆರ್ಥಿಕ ಮೌಲ್ಯ
46.ಪರಿಸರ ಅಧ್ಯಯನದಲ್ಲಿ ಮಕ್ಕಳ ಮನೋಧೋರಣೆಗಳು
ಮತ್ತು ಮೌಲ್ಯಗಳಲ್ಲಿನ ಬದಲಾವಣೆಗಳನ್ನು ಅಳೆಯುವ ಸೂಕ್ತ ವಿಧಾನ
ಎ) ರೂಪಣಾತ್ಮಕ ವಿಧಾನ
ಬಿ) ಸಂಕಲನಾತ್ಮಕ ವಿಧಾನ
ಸಿ) ರೂಪಣಾತ್ಮಕ ಮತ್ತು ಸಂಕಲನಾತ್ಮಕ ವಿಧಾನ
✓
ಡಿ)ಸಂಕಲನಾತ್ಮಕ ವಿಧಾನ ಮತ್ತು ಸೃಜನಾತ್ಮಕ
ವಿಧಾನ
47. ವಿಜ್ಞಾನ ವಿಷಯವು ದಿನನಿತ್ಯದ ಅನುಭವಗಳನ್ನು
ಪರೀಕ್ಷಿಸಿ ವಿಶ್ಲೇಷಿಸುವ ಅವಕಾಶ ನೀಡಬೇಕು ಎಂದು .......... ತಿಳಿಸುತ್ತದೆ
ಎ) ಎನ್ ಸಿ ಟಿ ಇ
ಬಿ) ಆರ್ ಟಿ ಐ-2005
ಸಿ) ಎನ್ ಸಿ ಎಫ್-2005 ✓
ಡಿ) ಆರ್.ಟಿ.ಐ-2009
48. ಒಬ್ಬ ವಿದ್ಯಾರ್ಥಿಯು ಪ್ರಯೋಗವನ್ನು ನಡೆಸಲು
ಸೂಕ್ತ ಪ್ರಯೋಗದ ಉಪಕರಣಗಳನ್ನು ಆಯ್ಕೆ ಮಾಡುವನು, ಪ್ರಯೋಗವನ್ನು ಹೊಂದಿಸುವನು ಮತ್ತು ನಿರ್ವಹಿಸುವನು
ಎ) ತಿಳುವಳಿಕೆ
ಬಿ) ಅನ್ವಯ
ಸಿ) ಕೌಶಲ್ಯ ✓
ಡಿ) ಆಸಕ್ತಿ
49.ರಚನಾವಾದದ ‘5 ಇ’ಗಳಲ್ಲಿ ಕೆಳಗಿನ ಯಾವ ಇ ಇದಕ್ಕೆ ಸಂಬಂಧಿಸಿರುವುದಿಲ್ಲ
ಎ) ಎಂಗೇಜ್
ಬಿ) ಎಕ್ಸ್ ಫ್ಲೋರ್
ಸಿ) ಎಕ್ಸ್ ಪ್ರೆಸ್
ಡಿ) ಎಮೋಷನಲ್ ✓
50. 10ನೇ ತರಗತಿಯ ವಿದ್ಯಾರ್ಥಿಯು ಮೆದುಳಿನ
ಚಿತ್ರ ಬರೆದು ಭಾಗಗಳನ್ನು ಗುರುತಿಸುವಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದಾನೆ ಈ ಸಮಸ್ಯೆ ಪರಿಹಾರಕ್ಕೆ
ಸೂಕ್ತ ಕ್ರಮ
ಎ) ಮರು ಬೋಧನೆ
ಬಿ) ಪರಿಹಾರ ಬೋಧನೆ ✓
ಸಿ) ಪೂರಕ ಬೋಧನೆ
ಡಿ) ಕ್ರಿಯಾ ಸಂಶೋಧನೆ
51. ವಿವಿಧ ಸಸ್ಯಗಳ ಎಲೆಗಳನ್ನು ಸಂಗ್ರಹಿಸಿ
ಅವುಗಳ ರಚನೆಯನ್ನು ಅಭ್ಯಸಿಸಿ ಪಟ್ಟಿ ಮಾಡಿ ವರದಿ ತಯ್ಯಾರಿಸಲು ಶಿಕ್ಷಕರು ಮಕ್ಕಳಿಗೆ ಚಟುವಟಿಕೆ ನೀಡುತ್ತಾರೆ
ಇದು ಯಾವ ಒಂದು ಬೋಧನಾ ವಿಧಾನದ ಅಡಿಯಲ್ಲಿ ಬರುತ್ತದೆ
ಎ) ಯೋಜನಾ ವಿಧಾನ ✓
ಬಿ) ಸಮಸ್ಯಾ ಪರಿಹಾರ ವಿಧಾನ
ಸಿ) ಚರ್ಚಾ ವಿಧಾನ
ಡಿ) ಪ್ರಾಯೋಗಿಕ ವಿಧಾನ
52. ಒಬ್ಬ ಉತ್ತಮ ವಿಜ್ಞಾನ ಶಿಕ್ಷಕನು ಶೈಕ್ಷಣಿಕ
ವರ್ಷದ ಪ್ರಾರಂಭದಲ್ಲಿಯೆ ಸಿದ್ದಪಡಿಸಿ ಕೊಳ್ಳಬೇಕಾದ ದಾಖಲೆಗಳು
ಎ) ವಾರ್ಷಿಕ ಪಾಠ ಯೋಜನೆ
ಬಿ) ಸಂಪನ್ಮೂಲ ಘಟಕ ಯೋಜನೆ
ಸಿ) ಘಟಕ ಯೋಜನೆ
ಡಿ) ಕ್ರಿಯಾಯೋಜನೆ
ಎ) ಅ) ಬಿ) ಡಿ)
ಬಿ) ಬಿ) ಸಿ) ಡಿ)
ಸಿ) ಅ) ಸಿ) ಡಿ) ✓
ಡಿ) ಅ) ಬಿ) ಸಿ)
53.ಬೆಳಕಿನಲ್ಲಿ ಏಳು ಬಣ್ಣಗಳಿವೆ ಎಂಬುದನ್ನು
ಪ್ರಾಯೋಗಿಕವಾಗಿ ತಿಳಿಸಲು ಬಳಸಬಹುದಾದ ಪರಿಣಾಮಕಾರಿ ಬೋಧನಾ ಕಲಿಕೋಪಕರಣ
ಎ) ಗಾಜಿನ ಪಟ್ಟಕ ✓
ಬಿ) ಕಾಮನ ಬಿಲ್ಲು
ಸಿ) ನೀರಿನ ಮೇಲೆ ಬಿದ್ದ ಬೆಳಕಿನ ಕಿರಣಗಳು
ಡಿ) ಯಾವುದು ಅಲ್ಲ
54.ವಿಜ್ಞಾನದಲ್ಲಿ ಕೌಶಲ ಎಂದರೆ ಈ ಮೂರು
ಕ್ರಿಯೆಗಳ ಸಂಗಮ
ಎ) ಜ್ಞಾನ+ಸಾಮಥ್ರ್ಯ+ಅಭ್ಯಾಸ ✓
ಬಿ) ಜ್ಞಾನ್+ಸಾಮಥ್ರ್ಯ+ತಿಳುವಳಿಕೆ
ಸಿ) ಜ್ಞಾನ್+ತಿಳುವಳಿಕೆ+ಆಸಕ್ತಿ
ಡಿ) ಜ್ಞಾನ್+ಸಾಮಥ್ರ್ಯ+ಪ್ರಶಂಸೆ
55. ಸಮ್ಮೇಳನಲ್ಲಿ ಭಾಗವಹಿಸುವ ವ್ಯಕ್ತಿಗಳೊಡನೆ
ಕುಳಿತಲ್ಲಿಂದಲೇ ಮುಖತ: ಸಂವಾದ ಮಾಡಬಹುದಾದ
ಎ) ವೀಡಿಯೋ ಕಾನ್‍ಫರೆನ್ಸ್ ✓
ಬಿ) ಟೆಲಿಕಾನ್ ಫರೆನ್ಸ್
ಸಿ) ಟೆಲಿವಿಷನ್ ಕಾನ್‍ಫರೆನ್ಸ್
ಡಿ) ವೀಡಿಯೋ ರೆಕಾರ್ಡಿಂಗ್ ಕಾನ್‍ಫರೆನ್ಸ್
56. ಒಬ್ಬ ವಿದ್ಯಾರ್ಥಿಯು ಪ್ರಯೋಗವನ್ನು ನಡೆಸಲು
ಸೂಕ್ತ ಪ್ರಯೋಗದ ಉಪಕರಣಗಳನ್ನು ಆಯ್ಕೆ ಮಾಡುವನು, ಪ್ರಯೋಗವನ್ನು ಹೊಂದಿಸುವನು ಮತ್ತು ನಿರ್ವಹಿಸುವನು
ಇದು. .......................
ಎ) ತಿಳುವಳಿಕೆ
ಬಿ) ಅನ್ವಯ
ಸಿ) ಕೌಶಲ್ಯ ✓
ಡಿ) ಆಸಕ್ತಿ
57.ಭಿನ್ನ ಸಾಮಥ್ರ್ಯವುಳ್ಳ ವಿದ್ಯಾರ್ಥಿಗಳಿಗಾಗಿ
ಪರ್ಯಾಯ ಮೌಲ್ಯಮಾಪನ ಕ್ರಮಗಳು ಅಗತ್ಯ ಏಕೆಂದರೆ
ಎ) ಮೌಲ್ಯಮಾಪನ ಸುಲಭ
ಬಿ) ವ್ಯಕ್ತಿ ಭಿನ್ನತೆಯನ್ನು ಗೌರವಿಸುವುದು
✓
ಸಿ) ಎಲ್ಲರನ್ನೂ ತೇರ್ಗಡೆ ಮಾಡಲು
ಡಿ)ಸಾಧಾರಣ ಮಕ್ಕಳ ವೇಗದಲ್ಲಿ ಅವರು ಉತ್ತರಿಸಲಾರರು
58. ಶಿಕ್ಷಕರು ತಮ್ಮ ಸೇವಾ ಅವಧಿಯಲ್ಲಿ ದಿನನಿತ್ಯ
ತರಗತಿ ಕಲಿಕೆಯನ್ನು ಪರಿಣಾಮಕಾರಿಯಾಗಿಸಲು ನಿರ್ವಹಿಸುವ ದಾಖಲೆ
ಎ) ಪಾಠ ಯೋಜನೆ
ಬಿ) ದಿನಚರಿ
ಸಿ) ಚಿಂತನಾಶೀಲ ಜರ್ನಲ್ ✓
ಡಿ) ವರದಿ
59. 4ನೇ ತರಗತಿಯ ವಿದ್ಯಾರ್ಥಿಯು ಸಸ್ಯದ ಚಿತ್ರ
ಬರೆದು ಭಾಗಗಳನ್ನು ಗುರುತಿಸುವಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದಾನೆ. ಈ ಸಮಸ್ಯೆ ಪರಿಹಾರಕ್ಕೆ
ಸೂಕ್ತ ಕ್ರಮ
ಎ) ಮರು ಬೋಧನೆ
ಬಿ) ಪರಿಹಾರ ಬೋಧನೆ
ಸಿ) ಪೂರಕ ಬೋಧನೆ
ಡಿ) ಕ್ರಿಯಾ ಸಂಶೋಧನೆ ✓
60. ವಿವಿಧ ಸಸ್ಯಗಳ ಎಲೆಗಳನ್ನು ಸಂಗ್ರಹಿಸಿ
ಅವುಗಳ ರಚನೆಯನ್ನು ಅಭ್ಯಸಿಸಿ ಪಟ್ಟಿ ಮಾಡಿ ವರದಿ ತಯ್ಯಾರಿಸಲು ಶಿಕ್ಷಕರು ಮಕ್ಕಳಿಗೆ ಚಟುವಟಿಕೆ ನೀಡುತ್ತಾರೆ
ಇದು ಯಾವ ಒಂದು ಬೋಧನಾ ವಿಧಾನದ ಅಡಿಯಲ್ಲಿ ಬರುತ್ತದೆ.
ಎ) ಯೋಜನಾ ವಿಧಾನ ✓
ಬಿ) ಸಮಸ್ಯಾ ಪರಿಹಾರ ವಿಧಾನ
ಸಿ) ಚರ್ಚಾ ವಿಧಾನ
ಡಿ) ಪ್ರಾಯೋಗಿಕ ವಿಧಾನ
61."5ಇ ಮಾದರಿಯ ಬೋಧನಾ ವಿಧಾನವು .............. ತತ್ವದ
ಮೇಲೆ ರೂಪಿತಗೊಂಡಿವೆ
ಎ) ರಚನಾವಾದ ✓
ಬಿ) ಪ್ರತ್ಯಕ್ಷ ವಿಧಾನ
ಸಿ) ವಿಷಯಧಾರಿತ ವಿಧಾನ
ಡಿ) ಸಂವಹನ ವಿಧಾನ
62."5ಇ" ಮಾದರಿಯ ಬೋಧನಾ ವಿಧಾನದಲ್ಲಿ
ಮಕ್ಕಳು ಪರಿಶೋಧಿಸಿದ ಉತ್ತರವನ್ನು ಮಂಡನೆ ಮಾಡಲು ಅವಕಾಶ ನೀಡುವ ಹಂತ ...................
ಎ) ತೊಡಗಿಸಿಕೊಳ್ಳುವಿಕೆ
ಬಿ) ವಿವರಣಾ
ಸಿ) ವಿಸ್ತರಿಸು ✓
ಡಿ) ಮೌಲ್ಯಮಾಪನ
63.ಸಂದರ್ಭೋಚಿತ ಕಲಿಕೆಯು ಬೋಧನೆ ಮತ್ತು
ಕಲಿಕೆಯ ರಚನಾತ್ಮಕ ಸಿದ್ದಾಂತವನ್ನು ಆಧರಿಸಿದೆ ಶಿಕ್ಷಕರು ವಿದ್ಯಾರ್ಥಿಗಳಿಗೆ ತಮ್ಮ ಅನುಭವ/ಪರಿಸರದ
ಸಮಸ್ಯೆಗಳ ಬಗ್ಗೆ............ಬೆಳೆಸುವುದು
ಎ) ವೀಕ್ಷಣೆ
ಬಿ) ವಿವರಣೆ
ಸಿ) ಜಾಗೃತಿ ✓
ಡಿ) ಅನುಭವ
64."5ಇ" ಗಳನ್ನು ಕ್ರಮಬದ್ಧವಾಗಿ
ಜೋಡಿಸುವುದು ..................
ಎ)ತೊಡಗಿಸಿಕೊಳ್ಳುವುದು, ಅನ್ವೇಷಣೆ, ವಿವರಣೆ,
ವಿಸ್ತರಣೆ, ಮೌಲ್ಯಯಮಾಪನ ✓
ಬಿ)ವಿವರಣೆ, ವಿಸ್ತರಣೆ, ಮೌಲ್ಯಮಾಪನ, ತೊಡಗಿಸಿಕೊಳ್ಳುವುದು,
ಮೌಲ್ಯಮಾಪನ
ಸಿ)ಅನ್ವೇಷಣೆ, ವಿಸ್ತರಣೆ, ವಿವರಣೆ, ತೊಡಗಿಸಿಕೊಳ್ಳುವುದು,
ಮೌಲ್ಯಮಾಪನ
ಡಿ)ತೊಡಗಿಸಿಕೊಳ್ಳುವುದು, ವಿವರಣೆ, ವಿಸ್ತರಣೆ,
ಅನ್ವೇಷಣೆ, ಮೌಲ್ಯಮಾಪನ
65. ಈ ಭೂಮಿಯು ಈ ಪೀಳಿಗೆಯವರಿಗೆ ಮಾತ್ರವಲ್ಲ,
ಮುಂದಿನ ಪೀಳಿಗೆಯವರಿಗೂ ಸೇರಿದೆ. ಈ ತಿಳುವಳಿಕೆಯು ................. ಮೌಲ್ಯವನ್ನು ವಿವರಿಸುತ್ತದೆ
ಎ) ಸನ್ನಡತೆಯ
ಬಿ) ನೈತಿಕ ✓
ಸಿ) ಮತೀಯ
ಡಿ) ಸೌಂದರ್ಯಾತ್ಮಕ
66.ನಿರಂತರ ಮತ್ತು ಸಮಗ್ರ ಮೌಲ್ಯಮಾಪನವು ................ .ನ್ನು
ಒಳಗೊಂಡಿದೆ
ಎ) ರೂಪಣಾತ್ಮಕ ಮೌಲ್ಯಮಾಪನ
ಬಿ) ಸಂಕಲನಾತ್ಮಕ ಮೌಲ್ಯಮಾಪನ
ಸಿ)ರೂಪಣಾತ್ಮಕ ಮೌಲ್ಯಮಾಪನ ಹಾಗೂ ಸಂಕಲನಾತ್ಮಕ
ಮೌಲ್ಯಮಾಪನ ✓
ಡಿ) ಮೌಲ್ಯಮಾಪನ
67 ದಕ್ಷಿಣ ಕನ್ನಡ ಜಿಲ್ಲೆಯ ಗೋಡಂಬಿ ತೋಟಗಳಲ್ಲಿ
ಎಂಡೋಸಲ್ಫಾನ್ ಎಂಬ ರಸಾಯನಿಕ ವಸ್ತು ಸಿಂಪಡಿಕೆಯಿಂದ ಅಲ್ಲಿನ ಜನರ ಮೇಲೆ ಭಾರಿ ದುಷ್ಪರಿಣಾಮ ಬೀರಿತು
ಇದಕ್ಕೆ ಕಾರಣ
ಎ) ಸಮಾಜದ ಮೆಲೆ ಉಂಟಾಗಬಹುದಾದ ✓
ದುಷ್ಪರಿಣಾಮಗಳ ಬಗ್ಗೆ ವಿಜ್ಞಾನಿಗಳಿಂದ ಅಸಮರ್ಪಕ
ವಿಶ್ಲೇಷಣೆ
ಬಿ)ರಾಸಾಯನಿಕ ವಸ್ತುವನ್ನು ಸಿಂಪಡಿಸಿದ ಜನರ
ಅಜಾಗರೂಕತೆ
ಸಿ) ಜನರ ಅಜ್ಞಾನ
ಡಿ) ಅಧಿಕಾರಿಗಳ ಭ್ರಷ್ಟಾಚಾರ
68. ವಿದ್ಯಾರ್ಥಿಗಳ ಒಂದು ಗುಂಪು ‘ಸೌರಶಕ್ತಿ’ ಕ್ರಿಯಾ ಮಾದರಿ ತಯ್ಯಾರಿಸಿದೆ. ಇದು ಪರಿಷ್ಕ್ರತ ಶೈಕ್ಷಣಿಕ
ಉದ್ದೇಶಗಳ ವರ್ಗೀಕರಣದ ಯಾವ ಪ್ರಕ್ರಿಯೆಗೆ ಸಂಬಂಧಿಸಿದೆ.
ಎ) ಗ್ರಹಿಕೆ ✓
ಬಿ) ವಿಶ್ಲೇಷಿಸುವುದು
ಸಿ) ಸೃಷ್ಟಿಸುವಿಕೆ
ಡಿ) ಸ್ಮರಿಸುವಿಕೆ
69.‘ಐತಿಹಾಸಿಕ ಮತ್ತು ಅಭಿವೃದ್ಧಿದಾಯಕ ದೃಷ್ಟಿಕೋನದಲ್ಲಿ
ವಿಜ್ಞಾನವನ್ನು ಅಭಿವೃದ್ಧಿಪಡಿಸುವುದು ಮತ್ತು ವಿಜ್ಞಾನವನ್ನು ಸಾಮಾಜಿಕ ಉದ್ಯಮವಾಗಿ ನೋಡುವಂತೆ ಅವರನ್ನು
ಸಮರ್ಥಗೊಳಿಸುವುದು ಯಾವ ಆಯೋಗದ ಪ್ರಕಾರ ಪ್ರಮುಖ ಉದ್ದೇಶವಾಗಿದೆ.
ಎ) ಕೊಠಾರಿ ಆಯೋಗ -1964-66
ಬಿ) ತಾರಾದೇವಿ ಆಯೋಗ -1956
ಸಿ) ರಾಷ್ಟ್ರೀಯ ಶಿಕ್ಷಣ ನೀತಿ -1986
ಡಿ) ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು
-2005 ✓
70. ವಿಜ್ಞಾನ ಕಲಿಕೆಯನ್ನು ಅನುಕೂಲಿಸುವವರಿಗೆ
ಇದು ಅವಶ್ಯಕ
ಎ) ವಿಜ್ಞಾನ ವಿಷಯ ಜ್ಞಾನ
ಬಿ) ತರಗತಿ ಬೋಧನೆಗೆ ಸಿದ್ಧತೆ
ಸಿ)ವಿಜ್ಞಾನ ಪ್ರಯೋಗಗಳನ್ನು ಮಾಡುವ ಮತ್ತು
ವಿದ್ಯಾರ್ಥಿಗಳಿಂದ ಮಾಡಿಸುವ ಕೌಶಲ ✓
ಡಿ) ವಿಜ್ಞಾನಿಗಳ ಕೊಡುಗೆಗಳನ್ನು ಮೆಚ್ಚುವ
ಸ್ವಭಾವ
71.ವೈಜ್ಞಾನಿಕ ವಿಧಾನವನ್ನು ಅನುಕೂಲಿಸುವ
ಸ್ಥಳಗಳು
ಎ) ವಿಜ್ಞಾನ ಪ್ರಯೋಗಾಲಯ
ಬಿ) ವೈಜ್ಞಾನಿಕ ಸಂಶೋಧನಾ ಕೇಂದ್ರ
ಸಿ) ವಿಶ್ವವಿದ್ಯಾಲಯಗಳು
ಡಿ) ಇವುಗಳೆಲ್ಲವು ✓
72. ವಿಜ್ಞಾನ ಶಿಕ್ಷಕರು ತನ್ನ ತರಗತಿಯಲ್ಲಿ
ಉದ್ಭವಿಸುವ ಸಮಸ್ಯೆಗಳಿಗೆ ಸ್ವತ: ತಾನೇ ಪರಿಹಾರ ಕಂಡುಕೊಳ್ಳಲು ಕೈಗೊಳ್ಳುವ ಸಂಶೋಧನೆ
ಎ) ಮೂಲಭೂತ ಸಂಶೋಧನೆ
ಬಿ) ಕ್ರಿಯಾ ಸಂಶೋಧನೆ ✓
ಸಿ) ತಾಂತ್ರಿಕ ಸಂಶೋಧನೆ
ಡಿ) ವೈಜ್ಞಾನಿಕ ಸಂಶೋಧನೆ
73. ಒಬ್ಬ ವಿದ್ಯಾರ್ಥಿ ಅಥವಾ ವಿದ್ಯಾಥಿಗಳ
ಗುಂಪು ನೈಜ ವಾತಾವರಣದಲ್ಲಿ ಪೂರ್ವಬಾವಿಯಾಗಿ ಯೋಜಿಸಿರುವ ನಿಯಮಿತ ಹಂತಗಳಲ್ಲಿ ಸಮಸ್ಯೆಗೆ ಪರಿಹಾರ
ಹುಡುಕುವುದೇ
ಎ) ಯೋಜನಾ ವಿಧಾನ
ಬಿ) ಸಮಸ್ಯಾ ಪರಿಹಾರ ವಿಧಾನ ✓
ಸಿ) ಪ್ರಯೋಗಶಾಲಾ ವಿಧಾನ
ಡಿ) ಕ್ರೀಡಾ ವಿಧಾನ
74.ನಮ್ಮ ವಿದ್ಯಾರ್ಥಿಗಳಿಗೆ ನಾನು ಕಲಿಸುವುದಿಲ್ಲ
ಅವರ ಕುತೂಹಲವನ್ನು ಕೆರಳಿಸುತ್ತೇನೆ ಎಂದು ಹೇಳಿದ ವಿಜ್ಞಾನಿ
ಎ) ಐನಸ್ಟೀನ್ ✓
ಬಿ) ಎಡಿಸನ್
ಸಿ) ನ್ಯೂಟನ್
ಡಿ) ಸಿ.ವಿ.ರಾಮನ್
75.ವಿದ್ಯಾರ್ಥಿಗಳು ತಾವು ಪಡೆದುಕೊಂಡ ಜ್ಞಾನ
ಮತ್ತು ಕೌಶಲವನ್ನು ನಿಜ ಜೀವನದ ಸಂದರ್ಭಗಳಿಗೆ ಅನ್ವಯಿಸುತ್ತಾರೆ. ಈ ವಿದ್ಯಾರ್ಥಿಗಳು 5ಇ ರಲ್ಲಿ ಕೆಳಗಿನ
ಯಾವ ಹಂತದಲ್ಲಿದ್ದಾರೆ
ಎ) ಪರಿಶೋಧಿಸುವುದು
ಬಿ) ವಿಸ್ತರಿಸುವುದು ✓
ಸಿ) ವ್ಯಕ್ತಪಡಿಸುವುದು
ಡಿ) ತೊಡಗಿಸುವುದು
76.“ಗಾಳಿಯು ತೂಕ ಹೊಂದಿದೆ ಮತ್ತು ಸ್ಥಳವನ್ನು
ಆಕ್ರಮಿಸುತ್ತದೆ” ಇದು
ಎ) ವಾಸ್ತವಾಂಶ ✓
ಬಿ) ಪರಿಕಲ್ಪನೆ
ಸಿ) ನಿಯಮ
ಡಿ) ಸಿದ್ಧಾಂತ
77.ವಿಜ್ಞಾನ ಕಲಿಕೆಯಲ್ಲಿ ‘ವೀಕ್ಷಿಸುವಿಕೆ’ ಪ್ರಕ್ರಿಯಾ ಕೌಶಲ ಬೆಳೆಸುವಲ್ಲಿ ಗಮನಿಸಬೆಕಾದ ಅಂಶವೆಂದರೆ
ಎ) ಮಾಹಿತಿಗಳಿಂದ ಸಂಬಂಧಗಳನ್ನು ಪತ್ತೆಹಚ್ಚುವುದು
ಬಿ) ಮಾಹಿತಿ ಸಂಗ್ರಹಿಸಲು ಜ್ಞಾನೇಂದ್ರೀಯಗಳ
ಬಳಕೆ ✓
ಸಿ) ಮಾಹಿತಿಗಾಗಿ ಪ್ರಶ್ನೆಗಳನ್ನು ಕೇಳುವುದು
ಡಿ) ಮಾಹಿತಿ ಮೂಲಗಳನ್ನು ಬಳಸಿಕೊಳ್ಳುವುದು
78. ಒಂದು ತರಗತಿಯ ಪ್ರದರ್ಶನ ಪಾಠದ ವಿಡೀಯೋ
ಕವರೇಜ್ ಮಾಡಿ ಏಕಕಾಲದಲ್ಲಿ ಅದನ್ನು ಇತರ ತರಗತಿಯಲ್ಲಿ ಕುಳಿತಿರುವ ವಿದ್ಯಾರ್ಥಿಗಳು ಈ ಮೂಲಕ ವೀಕ್ಷಷಿಸಬಹುದು
ಎ) ಟಿ.ವಿ
ಬಿ) ವಿ.ಸಿ.ಆರ್
ಸಿ) ಎಲ್.ಸಿ.ಡಿ
ಡಿ) ಸಿ.ಸಿ.ಟಿ.ವಿ ✓
79.ಪರಿಸರ ಅಧ್ಯಯನವನ್ನು ನಿರ್ವಹಿಸಲು ಇರುವ
ಉತ್ತಮ ವಿಧಾನ
ಎ) ಚಿತ್ರ ಗುರುತಿಸುವಿಕೆ
ಬಿ) ನೃತ್ಯ ಮಾಡುವಿಕೆ
ಸಿ) ಉಪನ್ಯಾಸ ನೀಡುವಿಕೆ
ಡಿ) ಪರಿಸರದಲ್ಲೇ ಬೋಧಿಸುವಿಕೆ ✓