4. ಪ್ರಾಣಿಗಳು (Plants)
ಇಲ್ಲಿಯವರೆಗೆ ಒಟ್ಟು 1.2 ಮಿಲಿಯನ್ ವೈವಿಧ್ಯಮಯ
ಪ್ರಾಣಿಗಳನ್ನು ಪ್ರಾಣಿ ಸಾಮಾಜ್ಯದಡಿಯಲ್ಲಿ ಗುರುತಿಸಲಾಗಿದೆ. ಪ್ರಾಣಿಗಳನ್ನು ಅಕಶೇರುಕ ಮತ್ತು ಕಶೇರುಕಗಳು
ಎಂದು ವರ್ಗಿಕರಿಸಲಾಗಿದೆ.
ಅಕಶೇರುಕಗಳು :- ಬೆನ್ನು
ಮೂಳೆ ಹೊಂದಿಲ್ಲದ ಪ್ರಾಣಿಗಳನ್ನು ಅಕಶೇರುಕಗಳು ಎನ್ನುವರು.
ಉದಾ:- ಅಮೀಬಾ, ಬಸವನಹುಳು ನಕ್ಷತ್ರ ಮೀನು
ಕಶೇರುಕಗಳು :- ಬೆನ್ನು
ಮೂಳೆ ಹೊಂದಿರುವ ಪ್ರಾಣಿಗಳನ್ನು ಕಶೇರುಕಗಳು ಎಂದು ಕರೆಯುತ್ತಾರೆ.
ಉದಾ:- ಮೀನುಗಳು, ಉಭಯವಾಸಿಗಳು
ಅಕಶೇರುಕ ಪ್ರಾಣಿಗಳ ವರ್ಗೀಕರಣ :
1) ಸ್ವಂಜು ಪ್ರಾಣಿಗಳು
2) ಕುಟುಕು ಕಣವಂತಗಳು
3) ಚಪ್ಪಟೆ ಹುಳುಗಳು
4) ದುಂಡು ಹುಳುಗಳು
5) ವಲಯ ವಂತಗಳು
6) ಸಂಧಿ ಪದಿಗಳು
7) ಕಂಟಕ ಚರ್ಮಿಗಳು
1) ಸ್ವಂಜು ಪ್ರಾಣಿಗಳು :-
1) ಸ್ವಂಜು ಪ್ರಾಣಿಗಳ ವಂಶವನ್ನು ಪೋರಿಫೆಾ ಎಂದು ಕರೆಯುತ್ತಾರೆ.
2) ಆಸ್ಟ್ರೀಯಾ ಎಂಬ ಅಸಂಖ್ಯಾತ ರಂಧ್ರಗಳಿಂದಾಗಿ
ಫೋರಿಫೆರಾ ಎಂಬ ಹೆಸರು ಬಂದಿದೆ.
3) ಸ್ವೀಕೂಲ್‍ಗಳು ಸಿಲಿಕಾನ್ ಅಥವಾ ಸ್ವಂಜಿನ
ತಂತುಗಳಿಂದ ಅಥವಾ ಕ್ಯಾಲ್ಸಿಯಂ ಕಾರ್ಬೋನೆಟ್ ನಿಂದ ಕೂಡಿರುತ್ತವೆ.
4) ಸ್ವಂಜು ಪ್ರಾಣಿಗಳು ನಾರಿನಲ್ಲಿರುವ ಅಸ್ಥಿಪಂಜರವನ್ನು
ಸ್ನಾನಕ್ಕೆ ಹಾಗೂ ಶುಚಿಗೊಳಿಸುವ ಕೆಲಸಕ್ಕೆ ಬಳಸಲಾಗುತ್ತದೆ. ಹಾಗೂ ವೀನಸ್ ಹೂಬೂಟ್ಟಿಗೆ ಜಪಾನ್ ನಲ್ಲಿ
ಭಾರಿ ಬೇಡಿಕೆ ಇದೆ. ಮದುವೆ ಸಮಾರಂಭಗಳಲ್ಲಿ ಉಡುಗೊರೆಯಾಗಿ ಕೊಡುತ್ತಾರೆ.
5) ಪ್ರೌಢಸ್ವಂಜು ಪ್ರಾಣಿಯ ಜೀವಿಯೇ ಆಗಿದ್ದರೂ
ಸಹ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಚಲಿಸುವುದಿಲ್ಲ & ಮುಟ್ಟಿದರೂ ಪ್ರತಿಕ್ರಿಯಿಸುವುದಿಲ್ಲ.
2) ಕುಟುಕು ಕಣವಂತಗಳು:-
ಶತ್ರುಗಳಿಂದ ರಕ್ಷಿಸಿಕೊಳ್ಳಲು & ಆಹಾರ
ಜೀವಿಗಳನ್ನು ಕೊಲ್ಲಲು ಕುಟುಕು ಕಣವಂತಗಳನ್ನು ಹೊಂದಿರುವ ಪ್ರಾಣಿಗಳನ್ನು ಕುಟುಕು ಕಣವಂತಗಳು ಎಂದು
ಕರೆಯಾಗಿದೆ.
1) ಕುಟುಕು ಕಣವಂತಗಳಿಗೆ ದೇಹದೊಳಗೆ ಜೀರ್ಣಕ್ರಿಯೆಯಲ್ಲಿ
ಸಹಕರಿಸುವ ಜಠರಾವಾಕಾಶ (ಸೇಲೆಂಟರಾನ್) ವನ್ನು ಕರೆಯುತ್ತಾರೆ.
2) ಜಲವಾಸಿಗಳು ಇದರ ಪ್ರಾಣಿಗಳು.
3) ನೆಮ್ಯಾಟೋಸಿಸ್ಟ್ ಹೆಸರಿನ ವಿಶಿಷ್ಟ ಕೋಶಗಳು
ಶತ್ರುಗಳಿಂದ ತಪ್ಪಿಸಿಕೊಳ್ಳಲು ನೆರವಾಗುತ್ತದೆ.
4) ಹವಳಗಳು ಕುಟುಕು ಕಣವಂತಗಳ ವಶಕ್ಕೆ ಸೇರಿದ
ಪ್ರಾಣಿಗಳು.
3) ಚಪ್ಪಟೆ ಹುಳುಗಳು:-
1) ನೀಳವಾದ ಚಪ್ಪಟೆಯಾದ ಹಾಗೂ ಖಂಡವಿಲ್ಲದ ದೇಹರಚನೆಯನ್ನು ಹೊಂದಿರವ ಪ್ರಾಣಿಗಳನ್ನು ಚಪ್ಪಟೆ ಹುಳುಗಳು ಎಂದು ಕರೆಯುತ್ತಾರೆ.
2) ಚಪ್ಪಟೆ ಹುಳುಗಳು ನೀರಿನಲ್ಲಿ & ತೇವಾಂಶವಿರುವ
ಮಣ್ಣಿನಲ್ಲಿ ವಾಸಿಸುತ್ತವೆ.
3) ಕೆಲವು ಸ್ವತಂತ್ರ ಜೀವಿಗಳು ಮತ್ತು ಕೆಲವು
ಪರಾವಲಂಬಿಗಳಾಗಿವೆ.
4) ಆಹಾರ & ಆಶ್ರಯಕ್ಕಾಗಿ ಇತರೇ ಜೀವಿಗಳನ್ನು
ಆಶ್ರಯಿಸುವ ಪರಾವಲಂಬಿ ಜೀವಿಗಳು.
5) ಸಾಮಾನ್ಯವಾಗಿ ದ್ವಿಲಿಂಗಗಳಾಗಿವೆ.
4) ದುಂಡು ಹುಳುಗಳು:-
1) ಖಂಡ ವಿಭಜನೆಯಿಲ್ಲದ ನೀಳವಾದ ದೇಹವನ್ನೊಳಗೊಂಡ
ಪ್ರಾಣಿಗಳು.
2) ದುಂಡು ಹುಳುಗಳು ಮಣ್ಣು ನೀರು ಮುಂತಾದೆಡೆಯಲ್ಲಿ
ಇರುತ್ತವೆ.
3) ದುಂಡು ಹುಳುಗಳ ದೇಹವು ದಪ್ಪವಾದ ಕೂಟಿಲ್
ಹೊದಿಕೆಯಿಂದ ಆವರಿಸಿರುವುದರಿಂದ ಇವು ಮುಪ್ಪದರ ಜೀವಿಗಳಾಗಿವೆ.
4) ದೇಹಾಂತರ ಅವಕಾಶವನ್ನು ಹೊಂದಿದ್ದು ಜೀರ್ಣನಾಳ
& ದೇಹಭಿತ್ತಿಗಳ ನಡುವಣ ಸ್ಥಳಾವಕಾಶಕ್ಕೆ ಸೊಡೊಸೀಲ್ ಎಂದು ಹೆಸರು.
5) ದುಂಡು ಹುಳುಗಳು ಏಕಲಿಂಗಗಳು.
6) ದೇಹವು ಹಲವಾರು ವರ್ತುಲಾಕಾರದ ಖಂಡಗಳ ಜೋಡಣೆಯಿಂದ
ರೂಪಗೊಂಡಿರುವುದರಿಂದ ಇವುಗಳಿಗೆ ವಲಯವಂತಗಳು ಎಂದು ಹೆಸರು
5) ವಲಯ ವಂತಗಳು:-
1) ಬಹುತೇಕ ಜಲವಾಸಿಗಳಾಗಿದ್ದರೂ ಸಹ ಕೆಲವು
ಮಣ್ಣಿನಲ್ಲಿ ವಾಸಿಸುತ್ತವೆ.
2) ವಲಯ ವಂತಗಳಲ್ಲಿ ಸ್ವತಂತ್ರ ಪ್ರಾಣಿ ಎರೆಹುಳು
ಪರಾವಲಂಬಿ.
3) ದೇಹಭಿತ್ತಿಗೂ & ಜೀರ್ಣನಾಳದ ಭಿತ್ತಿಗೂ
ನಡುವೆ ಇರುವ ದೇಹಾಂತರಾವಕಾಶಕ್ಕೆ ಸೀಲೋಮ್ ಎಂದು ಹೆಸರು
4) ಎರೆಹುಳು ಒಂದು ದ್ವಿಲಿಂಗ ಪ್ರಾಣಿ ಅದನ್ನು
ಪ್ರಕೃತಿಯ ಜೈವಿಕ ಕಾರ್ಖಾನೆ ಎಂದು ಕರೆಯಬಹುದು.
6) ಸಂಧಿಪದಿಗಳು :-
1) ಈ ಪ್ರಾಣಿಗಳಲ್ಲಿ ಕೀಲು ಕಾಲುಗಳನ್ನು ಒಳಗೊಂಡ
ಚಲನಾಂಗವಿರುವುದರಿಂದ ಇವುಗಳನ್ನು ಸಂಧಿಪದಿಗಳು ಎಂದು ಕರೆಯುತ್ತಾರೆ.
2) ಸಂಧಿಪದಿಗಳ ವಂಶವು ಪ್ರಾಣಿಗಳ ಗುಂಪುಗಳಲ್ಲಿಯೆ
ಅತ್ಯಂತ ದೊಡ್ಡದು.
3) ಎಲ್ಲಾ ಪರಿಸರಗಳಲ್ಲಿ ಹೊಂದಿಕೊಂಡು ವಾಸಿಸುವ
ಸಂಧಿಪದಿಗಳ ವಿಶಿಷ್ಟ ಲಕ್ಷಣ.
4) ಸಂಧಿಪದಿಗಳು ಮುಪ್ಪದರ ಪ್ರಾಣಿಗಳು.
5) ಸಂಧಿಪದಿಗಳ ಮೇಲೆ ಕೈಟಿನ್ ಎಂಬ ವಸ್ತುವಿನಿಂದಾದ
ಕವಚವಿರುತ್ತದೆ.
6) ಸಂದಿಪದಿಗಳ ದೇಹಾಂತರವಾದಗಳಲ್ಲಿ ರಕ್ತ ತುಂಬಿರುವದರಿಂದ
ಇವಕ್ಕೆ ಹಿಮೊಸೀಲ್ ಎನ್ನುತ್ತಾರೆ.
7) ಮೃದ್ವಂಗಿಗಳು:-
1) ಈ ವಂಶದ ಪ್ರಾಣಿಗಳ ದೇಹವು ಬಹಳ ಮೃದು.
2) ಮೃದ್ವಂಗಿಗಳು ಮುಪ್ಪದರ ಪ್ರಾಣಿಗಳು
3) ದೇಹವನ್ನು ಆವರಿಸಿರುವ ಮೃದುವಾದ ಕವಚವನ್ನು
ಮ್ಯಾಂಟಲ್ ಎನ್ನುತ್ತಾರೆ.
4) ಮೃದ್ವಂಗಿಗಳು ಬಾಯಿಯಲ್ಲಿರುವ ವಿಶಿಷ್ಟವಾದ
ರ್ಯಾಡುಲ್ ಎಂಬ ಅಂಗವು ಅಂಗಗಳಿಗೆ ಆಹಾರವನ್ನು ಅಗಿಯಲು ಸಹಾಯಕವಾಗಿವೆ.
5) ಉಸಿರಾಟ ಕ್ರಿಯೆಯ ಟೀನಿಡಿಯೂಗಳೆಂಬ ಉಸಿರಾಟ
ಅಂಗಾಗಗಳಿಂದ & ಮಾಂಟಲಿನ್ ಹೊರಚರ್ಮದಿಂದ ನಡೆಯುತ್ತದೆ.
6) ಮೃದ್ವಂಗಿಗಳನ್ನು ಮುತ್ತಿನಪ್ರಾಣಿ ಪರ್ಲಆಯಿಸ್ಟರ್ ಎಂದು
ಕರೆಯುತ್ತಾರೆ.
8) ಕಂಟಕ ಚರ್ಮಿಗಳು:-
1) ಚರ್ಮದಲ್ಲಿ ಮುಳ್ಳುಗಳಿರುವದರಿಂದ ಈ ಪ್ರಾಣಿಗಳನ್ನು
ಕಂಟಕ ಚರ್ಮಿಗಳು ಎನ್ನುತ್ತಾರೆ.
2) ಸೀಲೊಮ್‍ನ ಭಾಗವು ಜಲಪರಿಚಲನಾ ಮಂಡಲವನ್ನು
ಒಳಗೊಂಡಿರುವದು ಕಂಟಕ ಚರ್ಮಿಗಳ ವೈಶಿಷ್ಟ
3) ಕಂಟಕ ಚರ್ಮಿಗಳು ಏಕಲಿಂಗಗಳಾಗಿವೆ ಅಲ್ಲದೇ
ಕೆಲವು ಪ್ರಾಣಿಗಳು ನಿರ್ಲಿಂಗ ರೀತಿಯಲ್ಲಿ ದೇಹವಿಭಜನೆ ಹೊಂದಿ ಸಂತಾನೊತ್ಪತ್ತಿ ಮಾಡುವುದೂ ಉಂಟು.
4) ಕಂಟಕ ಚರ್ಮಿಗಳ ಮೊಟ್ಟೆಯು ಆಹಾರವಾಗಿ ಉಪಯೊಗವಾಗುತ್ತದೆ.
ಕಶೇರುಕಗಳು:-
* ಕಶೇರುಕ ಸ್ತಂಭವನ್ನು ಹೊಂದಿರುವ ಪ್ರಾಣಿಗಳಿಗೆ
ಕಶೇರುಕಗಳೆನ್ನುವರು
* ಗ್ರೀಕ್ ಭಾಷೆಯಲ್ಲಿ ನೋಟಾನ ಎಂದರೆ ಬೆನ್ನು
* ಲ್ಯಾಟಿನ್ ಭಾಷೆಯಲ್ಲಿ ಕಾರ್ಡ ಎಂದರೆ ಹುರಿ
* ಕಾರ್ಡೆಟಾ ವಂಶದಲ್ಲಿ ಅರ್ಧ ಅಂಗುಲಕ್ಕಿಂತ
ಚಿಕ್ಕವಾದ ಮೀನುಗಳಿಂದ ಪ್ರಾರಂಭವಾಗಿ ಸುಮಾರು 30 ಮೀ. ಉದ್ದವಾಗಿರುವ ಹಾಗೂ 150 ಟನ್ ತೂಕವಿರುವ
ತಿಮಿಂಗಲಗಳು ಕಂಡು ಬರುತ್ತದೆ.
ಉಭಯವಾಸಿಗಳು:-
* ನೀರು & ನೆಲ ಎರಡರಲ್ಲು ಜೀವಿಸಬಲ್ಲ
ಪ್ರಾಣಿಗಳು
* ಗೀಕ್ ಭಾಷೆಯಲ್ಲಿ ಯ್ಯಾಂಪಿ ಎಂದರೆ ದ್ವಿ
& ಉಭಯ ಎಂದರ್ಥ ಬಯಾಸ ಎಂದರೆ ಜೀವನ
* ಉಭಯವಾಸಿಗಳ್ಲಲ್ಲಿ ಚರ್ಮವು ತೇವವಾಗಿರಲು
ಲೊಳೆ ಎಂಬ ಸ್ರವಿಕೆಯೇಕಾರಣ
* ಮೃದವಾದ ಕವಚವಿಲ್ಲದ ಮೊಟ್ಟೆಗಳನ್ನು ಕಾಣಬಹುದು.
* ಡಿಂಭಾವಸ್ಥೆಯಲ್ಲಿ ಕಿವಿರುಗಳು ಉಸಿರಾಟದ
ಅಂಗಗಳಾಗಿವೆ ಪ್ರೌಡವಸ್ಥೆಯಲ್ಲಿ ಶ್ವಾಸಕೋಶಗಳು ಉಸಿರಾಟದ ಅಂಗಗಳು ಚರ್ಮವು ಉಸಿರಾಟದಲ್ಲಿ ನೆರವಾಗುತ್ತದೆ.
* ರೂಪಪರಿವರ್ತನೆ ಕಂಡು ಬರುತ್ತದೆ.
ಸರಿಸೃಪಗಳು :-
* ಸರಿಸೃಪಗಳು ಸಂಪೂರ್ಣವಾಗಿ ನೆಲದ ಮೇಲೆ ವಾಸಿಸುತೊಡಗಿದ
ಮೊದಲೆ ಕಶೇರುಕಗಳು
* ಲ್ಯಾಟಿನ್ ಭಾಷೆಯಲ್ಲಿ ರೆಪ್ಟಾಯಲ್ ಎಂದರೆ
ತೆವಳುವ ಎಂದರ್ಥ
* ಪರಿಸರದ ಉಷ್ಣತೆಗೆ ದೇಹದ ಉಷ್ಣತೆಯನ್ನು
ಹೊಂದಿಸಿಕೊಳ್ಳುವ ಪ್ರಾಣಿಗಳನ್ನು ಶೀತರಕ್ತ ಪ್ರಾಣಿಗಳೆನ್ನುತ್ತಾರೆ.
* ಸರಿಸೃಪಗಳು ಏಕಲಿಂಗಗಳಾಗಿವೆ.
* ದೇಹದಲ್ಲಿ ಶಿರ ವಕ್ಷೊದರ & ಬಾಲ ಎಂಬ
3 ಭಾಗಗಳಿವೆ
* ಇವು ಅಂಡಜಗಳು ನಿಶೇಚನೆ ಹಾಗೂ ಬೆಳವಣಿಗೆ
ಎರಡು ದೇಹದ ಹೊರಗೆ ನಡೆಯುತ್ತದೆ
ಸಸ್ತನಿಗಳು:-
* ಸ್ತನಗ್ರಂಥಿಗಳಿಂದ ಮರಿಗಳಿಗೆ ಹಾಲುಣಿಸಿ
ಬೆಳೆಸುವ ಪ್ರಾಣಿಗಳಿಗೆ ಸಸ್ತನಿಗಳು ಎಂದು ಹೆಸರು.
* ಸಸ್ತನಿಗಳಲ್ಲಿ ಅತ್ಯಂತ ಚಿಕ್ಕದಾದರು ಉದ್ದ
ಬಾಲದ ಪಿಗ್ಮಿಶ್ರೂ ಇದು ಕೇವಲ 2.5 ಕೆ.ಜಿ. ತೂಕವಿರುತ್ತದೆ.
* ಸಸ್ತನಿಗಳಷ್ಟೇ ಅಲ್ಲದೇ ಪ್ರಾಣಿ ಪ್ರಪಂಚದಲ್ಲೇ
ಅತ್ಯಂತ ದೊತ್ರ ಪ್ರಾಣಿ ನೀಲಿ ತಿಮಿಂಗಲ
* ಬೀವರ್ ಎಂಬ ಸಸ್ತನಿ ಪ್ರಪಂಚದ ವಾಸ್ತುಶಿಲ್ಫಿ
ಎಂಬ ಹೆಸರನ್ನು ಗಳಿಸಿದೆ
* ಬಾವಲಿಯ ಹಾರುವ ಸಸ್ತನಿ ಪ್ರಾಣಿಯಾಗಿದೆ.
* ಸಸ್ತನಿಗಳ ಉಸಿರಾಟವು ಶ್ವಾಸಕೋಶಗಳ ಮೂಲಕ
ನಡೆಯುತ್ತದೆ.
* ಮೊಟ್ಟೆ ಇಡುವ ಸಸ್ತನಿ ಎಕಿಡ್ನ ಪ್ಲಾಟಿಪಸ್
ಪಕ್ಷಿಗಳು :-
* ನೆಲ & ನೀರು, ಅವಾಸಗಳಲ್ಲಿ ಕಂಡುಬರುತ್ತವೆ.
* ಲ್ಯಾಟಿನ್ ಭಾಷೆಯಲ್ಲಿ ಏವಿಸ ಎಂದರೆ ಹಕ್ಕಿ
ಎಂದರ್ಥ
* ಅತ್ಯಂತ ಚಿಕ್ಕ ಹಕ್ಕಿ ಝೆಂಕಾರದ ಹಕ್ಕಿ
(ಹಮ್ಮಿಂಗ ಬಹನ) 3 ಕೆ.ಜಿ ತೂಕವಿರುತ್ತದೆ.
* ಅತ್ಯಂತ ದೊಡ್ಡ ಹಕ್ಕಿ ಉಷ್ಣಪಕ್ಷಿ
& ಆಸ್ಟ್ರೀಚ್ ಗಂಡು ಹಕ್ಕಿಯು ಸುಮಾರು 2.4 ಮೀಟರ ಎತ್ತರವಿದ್ದು ಸುಮಾರು 140 ಕೆ.ಜಿ. ತೂಕವಿರುತ್ತದೆ.
ಸುಮಾರ 2.4 ಮೀ. ವೇಗದಲ್ಲಿ ಓಡಬಲ್ಲದು
* ಬಿಸಿರಕ್ತ ಪ್ರಾಣಿಗಳು ಪರಿಸರದ ಉಷ್ಣತೆಯ
ವ್ಯತ್ಯಾಸಕ್ಕೆ ಹೊಂದಿಕೊಳ್ಳದೇ ಸ್ಥಿರವಾದ ದೇಹದ ಉಷ್ಣತೆಯನ್ನು ಹೊಂದಿರುತ್ತದೆ.
* ಅತ್ಯಂತ ದೂರ ವಲಸೆ ಹೋಗುವ ಪಕ್ಷಿ ಆಕ್ರ್ಟಿಟಿಕ್
ಟರ್ನ ಸುಮಾರು 18000 ಕಿ.ಮಿ. ದೂರದ ಪ್ರದೇಶಕ್ಕೆ ತಡೆ ರಹಿತವಾಗಿ ಹಾರುತ್ತ ವಲಸೆ ಹೊಗುತ್ತದೆ.
* ಹಕ್ಕಿಗಳು ಏಕಲಿಂಗಗಳಾಗಿವೆ
* ಮೊಟ್ಟೆಗಳು ಕ್ಯಾಲ್ಸಿಯಂ ಕಾರ್ಬೋನೆಟ್ ಚಿಪ್ಪಿನಿಂದ
ಆವೃತವಾಗಿವೆ.
ಗೊತ್ತಿರುವ ಕಶೇರುಕಗಳ ಸಂಖ್ಯೆ :-
ಮೀನುಗಳು 23000
ಉಭಯವಾಸಿಗಳು 3000
ಸರಿಸ್ನಪಗಳು 6000
ಪಕ್ಷಿಗಳು 8600
ಸಸ್ತನಿಗಳು 4200
ಗೊತ್ತಿರುವ ಕಶೇರುಕಗಳ ಸಂಖ್ಯೆ
ಪ್ರಾಣಿ ವಾಸಿಸುವ ಸ್ಥಳ
1 ಜೇನು ನೋಣ ಹೈನ (ಜೇನುಗೂಡ)
2 ಪಕ್ಷಿ ಗೂಡು
3 ಸಿಂಹ ಡೆನ್ (ಗುಹೆ)
4 ಹಂದಿ ಪೆನ್
5 ಜೇಡರ ಹುಳು ಬಲೆ
6 ಹುಲಿ ಲೇರ್
7 ಕುದರೆ ಪಾಗ
8 ನಾಯಿ ಕೆನೆಲ್ (ಶ್ವಾನ ಗೃಹ)
9 ತೋಳ ಡೆನ್
10 ಕೋಳಿ ಗೂಡು.
ವನ್ಯಜೀವಿಗಳು:- ಮನೆಯಲ್ಲಿ
ಸಾಕದ ಹಾಗೂ ಕೃಷಿಗೆ ಒಳಪಡಿಸದ ಪ್ರಾಣಿಗಳನ್ನು ವನ್ಯಜೀವಿಗಳು ಎಂದು ಕರೆಯುತ್ತಾರೆ.
ಉದಾ: ಹುಲಿ, ಸಿಂಹ, ತೋಳ
ಸಾಕು ಪ್ರಾಣಿಗಳು:-
ಮಾನವನ ಮನೋರಂಜನೆಗಾಗಿ ಹಾಗೂ ಆರ್ಥಿಕ ಲಾಭಕ್ಕಾಗಿ ಸಲಹುವ ಪ್ರಾಣಿಗಳನ್ನು ಸಾಕು ಪ್ರಾಣಿಗಳೆನ್ನುವರು
ಉದಾ:- ಕೋಳಿ, ಕುರಿ, ಹಸು