11. ವಸ್ತುಗಳು
* ದೈನಂದಿನ ಬಳಕೆಯ ವಸ್ತುಗಳು:- ಸಿಂಥೆಟಿಕ್
ವಸ್ತುಗಳು (ಸಂಶ್ಲೇಷಿತ ವಸ್ತುಗಳು) ನೈಸರ್ಗಿವಾಗಿ ದೊರಕದ ಅದರ ನೈಸರ್ಗಿಕ ಕಚ್ಚಾವಸ್ತುಗಳಿಂದ ತಯಾರು
ಮಾಡಿದ ವಸ್ತುಗಳಿಗೆ ಸಿಂಥೆಟಿಕ್ (ಸಂಶ್ಲೇಷಿತ) ವಸ್ತುಗಳೆಂದು ಕರೆಯುವರು ಇವು ಮಾನವ ನಿರ್ಮಿತ ಕೃತಕ
ವಸ್ತುಗಳು.
ಪ್ರಾಚೀನ ದಿನಗಳ ಮಾನವನ ಎಲ್ಲಾ ಅಗತ್ಯತೆಗಳು
ಸ್ವಾಭಾವಿಕವಾಗಿ ದೊರೆಯುತ್ತಿದ್ದು ವಸ್ತುಗಳನ್ನು ಈಡೇರಿಸಲಾಗುತ್ತಿತ್ತು. ಆದರೆ ಮಿತಿಮೀರಿ ಬೆಳೆಯುತ್ತಿರುವ
ಜನಸಂಖ್ಯೆ ನೈಸರ್ಗಿಕ ವಸ್ತುಗಳು ಲಭ್ಯತೆಯಲ್ಲಿ ಮಿತಿ & ಅವುಗಳು ಉತ್ಪಾದನೆಗೆ ಬೇಕಾಗಿರುವ ಧೀರ್ಘಾವಧಿಯಿಂದಾಗಿ
ಮಾನವನ ಅಗತ್ಯತೆಗಳನ್ನು ಈ ನೈಸರ್ಗಿಕ ವಸ್ತುಗಳು ಈಡೆರಿಸಲು ಕಷ್ಟವಾಗುತ್ತಿದೆ. ಆದ್ದರಿಂದ ಇವುಗಳ
ಸ್ಥಾನದಲ್ಲಿ ಪರ್ಯಾಯವಾಗಿ ಆಕ್ರಮಿಸಿಕೊಂಡು ವಸ್ತುಗಳೇ ಮಾನವ ನಿರ್ಮಿತ ಸಂಶ್ಲೇಷಿತ ವಸ್ತುಗಳು.
* ಪಾಲಿಮರ್‍ಗಳು:-
ಪಾಲಿಮರ್ ಪದವು ಪಾಲಿ ಎಂದರೆ ಹಲವು (Poly = many) ಮೊರೊಸ್ ಎಂದರೆ ಭಾಗಗಳು ಇವುಗಳು ಕೆಲವು ವೈಸರ್ಗಿಕವಾಗಿ ಲಭ್ಯವಿರುವ
ವಸ್ತುಗಳು ಬೆಳಸಿ ತಯಾರಿಸಲಾಗುತ್ತದೆ. ಸರಳ ಸಂಯುಕ್ತದ ಅತಿ ಹೆಚ್ಚು ಸಂಖ್ಯೆಯ ಅಣುಗಳ ಸಂಯೋಗದಿಂದ
ಅಥವಾ ಸರಳ ಸಂಯೊಕ್ತಗಳು ಪುನಾರಾವರ್ತಿತ ರೀತಿಯಲ್ಲಿ ಸೆರಿಕೊಂಡಿರುವ ಸಂಯುಕ್ತಗಳನ್ನು ಪಾಲಿಮರ್‍ಗಳೆನ್ನುತ್ತೇವೆ.
* ಮಾನೋಮರ್‍ಗಳು :-
ಒಂದು ಪಾಲಿಮರ್ ಅನೇಕ ಸರಳ ಅಣುಗಳಿಂದಾಗಿದೆ.
ಪಾಲಿಮರ್ ಅಣುಗಳನ್ನುಂಟು ಮಾಡುವ ಮಾಡುವ ಸರಳ ಸಂಯುಕ್ತಕ್ಕೆ ಮಾನೋಮರ್ ಎಂದು ಹೆಸರು
ಉದಾ: ಪಾಲಿಥನ ಎನ್ನುವುದೊಂದು ಪಾಲಿಮರ್ ಇದು
ಈಥಿನ ಎಂಬ ಅನೇಕ ಅಣುಗಳಿಂದ ಉಂಟಾಗಿವೆ ಪಾಲಿಥಿನನ್ನು ಪಾಲಿಮರ್ ಎನುವರು ಇದನ್ನು ಉಂಟುಮಾಡಿದ ಈಥಿನನ್ನು
ಮಾನೊಮರ್‍ಗಳೆನುವರು.
* ಪಾಲಿಮರೀಕರಣ:-
ಸರಳ ಸಂಯುಕ್ತದ ಎರಡು ಅಥವಾ ಹೆಚ್ಚು ಅಣುಗಳು
ಒಟ್ಟಿಗೆ ಸೇರಿ ಹೊಸ ಸಂಯುಕ್ತವಾಗುವ ಪ್ರಕ್ರಿಯೆಯನ್ನು ಪಾಲಿಮರೀಕರಣ ಎಂದು ಹೆಸರು.
* ಪಾಲಿಮರ್‍ಗಳ ವಿಧಗಳು:-
ನೈಸರ್ಗಿಕ ಪಾಲಿಮರ್‍ಗಳು ನಿಸರ್ಗದಲ್ಲಿ ಲಭ್ಯವಿರುವ
ಪಾಲಿಮರ್‍ಗಳನ್ನು ನೈಸರ್ಗಿಕ ಪಾಲಿಮರ್‍ಗಳೆನ್ನುವರು.
ಉದಾ:- ಪ್ರೋಟಿನ್‍ಗಳು, ಕೊಬ್ಬುಗಳು, ಕಾರ್ಬೊಹೈಡ್ರೆಟ್‍ಗಳು
ಇತ್ಯಾದಿ
1) ನೈಸರ್ಗಿಕ ಪಾಲಿಮರ್‍ಗಳು & ಅವುಗಳ ಮಾನೋಮರ್‍ಗಳು
ಪಾಲಿಮಾರ್‍ಗಳು ಮಾನೋಮರ್‍ಗಳು
ಕಾರ್ಬೊಹೈಡ್ರೆಟ್‍ಗಳು ಗ್ಲೋಕೊಸ್
ಪ್ರೋಟೀನಗಳು ಅಮೈನೋ ಆಮ್ಲಗಳು
ಕೊಬ್ಬಗಳು (ಲಿಪಿಡಗಳು) ಕೊಬ್ಬಿನ ಆಮ್ಲಗಳು
2) ಸಿಂಥೆಟಿಕ್ ಪಾಲಿಮರ್‍ಗಳು (ಸಂಶ್ಲೇಷಿತ ಪಾಲಿಮರ್‍ಗಳು)
ಪ್ರಕೃತಿಯಲ್ಲಿ ದೊರೆಯದ ಮಾನವ ತಯಾರು ಮಾಡಿಕೊಳ್ಳುವ
ಪಾಲಿಮರ್‍ಗಳನ್ನು ಸಿಂಥೆಟಿಕ್ ಪಾಲಿಗಳೆನ್ನುವರು
ಉದಾ:- ನೈಲಾನ, ಪಾಲಿಥಿನ, ಟೆಲಿಲೀನ, ರೆಯೊನ್
* ಸಿಂಥೆಟಿಕ್ ಪಾಲಿಮರ್‍ಗಳ ವಿಧಗಳು
1) ಸಂಕಲನ ಪಾಲಿಮರ್‍ಗಳು:- ಹಲವಾರು ಸರಳ
ಅಣುಗಳು ಒಟ್ಟಿಗೆ ಸೇರಿ ಒಂದು ಬೃಹತ ಅಣುವಾಗುತ್ತದೆ. ಈ ಪ್ರಕ್ರಿಯೆಯನು ಸಂಕಲನ ಪಾಲಿಮಾರೀಕರಣ ಎನ್ನುವರು
ಈ ಅಣುವನ್ನು ಸಂಕಲನ ಪಾಲಿಮರ್ ಎನ್ನುವರು ಈ ಪ್ರಕ್ರಿಯೆಯಲ್ಲಿ ಯಾವುದೇ ಅಣುವಿನ ವರ್ಜನೆ ಇಲ್ಲ ಇವುಗಳನ್ನು
ಅಪರ್ಯಾಪ್ತ ಮನೋಮರಗಳಿಂದ ತಯಾರಿಸಲಾಗುತ್ತದೆ.
ಉದಾ: ಪಾಲಿಥೀನ್, ಪಾಲಿ ಮೀನೈಲ್ ಕ್ಲೋರೈಡ್
2) ಸಾಂದ್ರಿಕರಣ ಪಾಲಿಮರ್‍ಗಳು:- ಅನೇಕ
ಮಾನೋಮರ್‍ಗಳು ಒಗ್ಗೂಡಿ ಬೃಹತ ಅಣು ರೂಪಗೊಳ್ಳುವಾಗ ಸಣ್ಣ ಅಣುಗಳು ಪ್ರತ್ಯೇಕಗೊಳ್ಳುವ ಸಾಂದ್ರಿಕರಣ
ಕ್ರಿಯೆ ಉಂಟಾದರೆ ಅದನು ಸಾಂದ್ರಿಕರಣ ಪಾಲಿಮರೀಕರಣ ಎನುತ್ತಾರೆ. ಮಾನೊಮರ್‍ಗಳು ನಡುವೆ ಸಾಂದ್ರಿಕರಣ
ಕ್ರಿಯೆಯಿಂದ ಪಡೆದ ಪಾಲಿಮರ್‍ಗಳು ಸಾಂದ್ರಿಕರಣ ಪಾಲಿಮರ್‍ಗಳೆನುತ್ತೆವೆ ಸಾಂದ್ರಿಕರಣ ಪಾಲಿಮರೀಕರಣ
ಕ್ರಿಯೆಯು ನಡೆದಾಗ ನೀರು ಮಿಥೇನ್‍ಂತಹ ಅಣುಗಳು ವರ್ಜನೆಯನು ಒಳಗೊಂಡಿರುತ್ತದೆ.
ಉದಾ:- ನೈಲಾನ, ಟೆರಿಟೀನ್
* ಪ್ಲಾಸ್ಟಿಕಗಳು:- ಪ್ರಕ್ರಿಯಾ ಹಂತಗಳಲ್ಲಿ
ಮದ್ಯತ್ವವನ್ನು ಹೊಂದುವ ಪಾಲಿಮರ್‍ಗಳನ್ನು ಪ್ಲಾಸ್ಟಿಕಗಳೆನ್ನುವರು ತಯಾರು ಮಾಡುವಾಗ ಶಾಖ ಕೊಟ್ಟರೆ
ಮೃದುವಾಗಿ ನಂತರ ತಂಪು ಮಾಡಿದಾಗ ಗಟ್ಟಿಯಾಗಿ ನಿಶ್ಚಿತ ಆಕಾರವನ್ನು ಪಡೆಯವದು ಪ್ಲಾಸ್ಟಿಕಗಳ ವಿಶೇಷ
ಗುಣ
* ವಿಧಗಳು:-
1) ಥರ್ಮೋಪ್ಲಾಸ್ಟಿಕ್‍ಗಳು :- ಕೆಲವು ಪ್ಲಾಸ್ಟಿಕ್‍ಗಳು
ಕಾಯಿಸಿದಾಗ ಮೆದುವಾಗುತ್ತವೆ. ನಂತರ ತಂಪು ಮಾಡಿದಾಗ ಗಟ್ಟಿಯಾಗುತ್ತದೆ. ಇವುಗಳನ್ನು ಕಾಯಿಸಿ ಮದುಮಾಡಿ
ಪುನಃ ಪುನಃ ಎರಕ ಹೊಯ್ಯಬಹುದು ಇವುಗಳು ಎಷ್ಟು ಬಾರಿ ಬೇಕಾದರು ಕಾಯಿಸಿ ಎರಕ ಹೊಯ್ಯಬಹುದು ಇವು ಮರುಬಳಕೆಗೆ
ಸೂಕ್ತವಾಗಿವೆ.
ಉದಾ:- ಪಿ.ಯು.ಸಿ ಪಾಲಿಸ್ಟರೀನ್
2) ಥರ್ಮೋಸಟ್ಟಿಂಗ್ ಪ್ಲಾಸ್ಟಿಕಗಳು:- ಕಾಯಿಸಿದಾಗ
ನಿಶ್ಚಿತ ಆಕಾರವನ್ನು ಪಡೆದು ತಣಿಸಿದಾಗ ಶಾಸ್ವತ ಗಡುಸತನವನ್ನು ಹೊಂದುವ ಪ್ಲಾಸ್ಟಿಕ್‍ಗಳು ಥರ್ಮೋಸೆಟ್ಟಿಂಗ್
ಪ್ಲಾಸ್ಟಿಕ್‍ಗಳೆನುವರು ಇವುಗಳನ್ನು ಪದೇ ಪದೇ ಕಾಯಿಸಿ ಮರು ಬಳಕೆ ಮಾಡಲು ಸಾಧ್ಯವಿಲ್ಲ. ಇವುಗಳನ್ನು
ಒಮ್ಮೆ ಮಾತ್ರ ಬಳಸಬಹುದಾಗಿದೆ.
ಉದಾ:- ಬೇಕ್‍ಲ್ಟನ್, ಸಿಲಿಕೋನ್‍ಗಳು ಎಪಾರ್ಸ್
ಕಾಳೆಗಳು ಬೇಕ್‍ಲೈಟ್‍ಗಳು ಇಂದು ಹೆಚ್ಚು ಬಳಕೆಯಾಗುತ್ತಿರುವ ಪ್ಲಾಸ್ಟಿಕ್‍ಗಳಾಗಿವೆ ಇವುಗಳನ್ನು ವಿದ್ಯತ್ತಿನ
ಸ್ವಿಚಗಳು, ಸ್ವಿಚ್ ಬೋರ್ಡಗಳು ಡಿ.ಪಿ. ಬಾಕ್ಸ್‍ಗಳು ಕಂಪ್ಯೂಟರ್‍ನ ಕೀಬೋರ್ಡ, ಮಾನಿಟರ್‍ನ ಹೊರಗಿನ
ಕವಚ, ಬಲ್ಬು ಹೊಲ್ಡರ್ ಮುಂತಾದವುಗಳು ತಯಾರಿಕೆಯಲ್ಲಿ ಬಳುಸುತ್ತಾರೆ. ಸಿಲಿಕೋನ್‍ಗಳು ವಿದ್ಯುತ್ ನಿರೋದಕಗಳಾಗಿವೆ.
ಇವು ತಮ್ಮ ಮೂಲಕ ವಿದ್ಯುತ ಹರಿಯಲು ಬಿಡುವುದಿಲ್ಲ. ಆದ್ದರಿಂದ ಇವುಗಳನ್ನು ವಿದ್ಯುತ ಮೊಟರ್ ಮತ್ತು
ಇತರೆ ವಿದ್ಯುತ್ ಸಲಕರಣೆಗಳಿಗೆ ಇನ್ಸುಲೇಟರ್‍ಗಳಾಗಿ ಬಳಸುತ್ತಾರೆ.
ಪ್ಲಾಸ್ಟಿಕ್‍ಗಳ ಪುನರ್ ಬಳಕೆ :-
ಪ್ಲಾಸ್ಟಿಕ್‍ಗಳ ಉಪಯೋಗ ಅತಿ ಅವಶ್ಯಕವಾಗಿದ್ದರೂ,
ಮತ್ತೊಂದಡೆ, ಇವು ಸಮಸ್ಯಯಾಗಿ ಪರಿಣಮಿಸಿದೆ. ಏಕೆಂದರೆ ಇವು ಜೀವ ಶಿಥಲೀಯವಲ್ಲ. ಎಂದರೆ ಪ್ಲಾಸ್ಟಿಕಗಳು
ಸೂಕ್ಷ್ಮಣು ಜೀವಿಗಳಿಂದ ವಿಘಟನೆಯಾಗಿ ಸರಳ ರೂಪಕ್ಕೆ ಬರುವುದಿಲ್ಲ. ಇವುಗಳನ್ನು ಸುಟ್ಟರೆ ಬಿಡುಗಡೆಯಾಗುವ
ಹೊಗೆಯ ವಿಷಪೂರಿತವಾಗಿದ್ದು ವಾಯು ಮಾಲಿನ್ಯವನ್ನು ಉಂಟು ಮಾಡುತ್ತದೆ. ಆದ್ದರಿಂದ ಇವುಗಳ ಪ್ರಮಾಣವನ್ನು
ಕಡಿಮೆ ಮಾಡಲು ಪುನರ್‍ಬಳಕೆ ಅತಿ ಅವಶ್ಯಕ.
ಪ್ಲಾಸ್ಟಿಕ ಪುನರ ಬಳಕೆಯಲ್ಲಿ ಒಳಗೊಂಡಿರುವ ಹಂತಗಳು:-
* ಅನುಯಪುಕ್ತ ಪ್ಲಾಸ್ಟಿಕ್ ವಸ್ತುಗಳನ್ನು
ಸಂಗ್ರಹಿಸುವುದು.
* ಥರ್ಮೋಪ್ಲಾಸ್ಟಿಕ್ & ಥರ್ಮೋಸೆಟ್ಟಿಂಗ್
ಪ್ಲಾಸ್ಟಿಕ್‍ಗಳನ್ನು ವಿಂಗಡಿಸುವುದು.
* ಥರ್ಮೋಪ್ಲಾಸ್ಟಿಕ್ ಅನ್ನು ಮದುಗೊಳಿಸುವುದು.
* ಸಂಸ್ಕಣೆಯಿಂದ ಗುಣಮಟ್ಟವನ್ನು ಹೆಚ್ಚಿಸುವುದು.
* ಪುನಃ ಎರಕ ಹೊಯ್ಯಬಹುದು.
ಸಿಮೆಂಟ್:-
ರಾಸಾಯನಿಕ ಹೆಸರು :- ಕ್ಯಾಲ್ಸಿಯಂ ಸಿಲಿಕೇಟ್
ಮತ್ತು ಕ್ಯಾಲ್ಸಿಯಂ ಅಲ್ಯೂಮಿಸೀಟ್
ಸಂಶೋಧಕರು:- ಜೆ. ಆಸ್ಟಡಿನ್ 1824ರಲ್ಲಿ
ಕಚ್ಚಾ ವಸ್ತುಗಳು:-
1) ಜೇಡಿಮಣ್ಣು-ಅಲ್ಯೂಮಿನಿಯಂ ಸಿಲಿಕೇಟ್
2) ಸುಣ್ಣಕಲ್ಲು-ಕ್ಯಾಲ್ಸಿಯಂ ಕಾರ್ಬೊನೇಟ್
3) ಜಿಪ್ಸಂ-ಕ್ಯಾಲ್ಸಿಯಂ ಸಲ್ಫೇಟ್
ತಯಾರಿಸುವ ವಿಧಾನ
:- ಜೇಡಿ ಮಣ್ಣು ಮತ್ತು ಸುಣ್ಣ ಕಲ್ಲನು ನಯವಾಗಿ ಅರೆದು ನೀರಿನೊಂದಿಗೆ ಸೇರಿಸಲಾಗುತ್ತದೆ. ಇವುಗಳ
ಅನುರೂಪ ಮಿಶ್ರಣಕ್ಕೆ ಸ್ಲೆರಿ ಎಂದು ಹೆಸರು. ಇದನ್ನು ಉರುಳು ಕುಲುಮೆಗೆ ಕಳುಹಿಸಲಾಗುತ್ತದೆ. ಕಲುಮೆಯ
ಕೆಳ ತುದಿಯಿಂದ ಸುಮಾರು 1873ಕೆ (1600 ಡಿಗ್ರಿ ಸೆಲ್ಸಿಯಸ್) ತಾಪದಲ್ಲಿ ಗಾಳಿಯ್ನು ಊದಲಾಗುತ್ತದೆ.
ಈ ಹೆಚ್ಚಿನ ತಾಪದಿಂದಾಗಿ ಸ್ಲರಿಯಲ್ಲಿರುವ ನೀರು ಆವಿಯಾಗಿ ಸಿಮೆಂಟನ ಉಂಡೆಗಳಾಗುತ್ತವೆ. ಜಿಪ್ಸಂ ಸಿಮೆಂಟ್
ಬೇಗ ಗಡುಸಾಗುವುದನ್ನು ತಡೆಯುತ್ತದೆ.
ಗಟ್ಟೀಕರಣ:- ಸಿಮೆಂಟ್
ನೀರಿನೊಂದಿಗೆ ಸೆೀರಿ ಗಟ್ಟಿರಾಸಿಯಾಗುವುದನ್ನು ಗಟ್ಟೀಕರಣ ಎನ್ನುವರು ನೀರಿನೊಂದಿಗೆ ಮರುಳು ಮತ್ತು
ಸಿಮೆಂಟ್ ಮಿಶ್ರಣವು ಹಲವಾರು ಸಂಕೀಣ ಬದಲಾವಣೆಗಳಿಗೆ ಒಳಪಡುತ್ತವೆ. ಸಿಮೆಂಟ್‍ಗೆ ನೀರನ್ನು ಸೇರಿಸಿದ
24 ಗಂಟೆಯೊಳಗೆ ಮೊದಲ ಹಂತದ ಗಟ್ಟೀಕರಣ ನಡೆಯುತ್ತದೆ. ಎರಡನೇ ಹಂತದ ಗಟ್ಟೀಕರಣ ಸುಮಾರು 2 ವಾರಗಳನ್ನುತೆಗೆದುಕೊಳ್ಳುತ್ತದೆ.
ಜಲಸತ್ಕಾರ:- ನೀರಿನೊಂದಿಗೆ
ಸತ್ಕರಿಸಿ ಸಿಮೆಂಟನ್ನು ಗಟ್ಟಿ ಮಾಡುವ ಪ್ರಕ್ರಿಯೆಗೆ ಜಲಸತ್ಕಾರ ಎಂದು ಹೆಸರು, ಸಿಮೆಂಟನ್ನು ಮರುಳು
ಮತ್ತು ನೀರಿನೊಂದಿಗೆ ಸೇರಿಸಿದಾಗ ಸಿಮೆಂಟನಲ್ಲಿರುವ ಕ್ಯಾಲ್ಸಿಯಂ ಸಿಲಿಕೇಟ್ ಮತ್ತು ಕ್ಯಾಲ್ಸಿಯಂ
ಅಲ್ಯೂಮಿನೇಟಗಳ ನಡುವೆ ರಾಸಾಯನಿಕ ಕ್ರಿಯೆ ನಡೆದು ಶಾಖೆ ಬಿಡುಗಡೆಯಾಗುತ್ತೆ. ಈ ಶಾಖ ಹಒರಬರಲು ಪ್ರಯತ್ನಿಸಿದಾಗ
ಸಿಮೆಂಟ್ ಬಿರಕು ಬಿಡುತ್ತದೆ. ಸಿಮೆಂಟ್‍ಗೆ ನೀರು ಹಾಕಿದಾಗ ಆ ಶಾಖವನ್ನು ನೀರು ಹೀರಿಕೊಳ್ಳುತ್ತದೆ.
ಆದ್ದರಿಂದಲೇ ಸಿಮೆಂಟ ಸುಮಾರು 02 ವಾರಗಳ ಕಾಲ ಜಲಸತ್ಕಾರ ಮಾಡಬೇಕು. ಇದರಿಂದ ಸಿಮೆಂಟ್ ಬಿರಕು ಬಿಡುವುದಿಲ್ಲ.
ಸಿಮೆಂಟ್ ಕಾಂಕ್ರೀಟ್:-
ಸಿಮೆಂಟ್, ಮರುಳು ಮತ್ತು ಜಲ್ಲಿಯ 1:2:4 ಅಥವಾ 1:3:6 ಅನುಪಾತದಲ್ಲಿನ ಮಿಶ್ರಣಕ್ಕೆ ಕಾಂಕ್ರೀಟ್ ಎಂದು
ಹೆಸರು ಕಾಂಕ್ರೀಟ್‍ನ ಒಳಭಾಗದಲ್ಲಿ ಹಾಕುವ ಕಬ್ಬಿಣದ ಹಣದರವು ರಚನೆಗೆ ಇನ್ನು ಹೆಚ್ಚಿನ ಯಾಂತ್ರಿಕ
ಶಕ್ತಿಯನ್ನು ನೀಡುತ್ತದೆ.
ಗಾಜು:- ನಾವು ಉಪಯೋಗಿಸುವ
ಅತ್ಯಂತ ಹಳೆಯ ಸಿಂಥೆಟಿಕ್ ವಸ್ತುಗಳಲ್ಲಿ ಗಾಜು ಒಂದು
ರಾಸಾಯನಿಕ ಹೆಸರು:-
ಸೋಡಿಯಮ್ ಸಿಲಿಕೇಟ್ ಮತ್ತು ಕ್ಯಾಲ್ಸಿಯಂ ಸಿಲಿಕೇಟ್
ಕಚ್ಚಾವಸ್ತುಗಳು
:-
1) ಮರಳು -ಸಿಲಿಕಾನ್ ಡೈ ಆಕ್ಸೈಡ್ (ಸಿಲಿಕಾ)
2) ಸುಣ್ಣಕಲ್ಲು-ಕ್ಯಾಲ್ಸಿಯಂ ಕಾರ್ಬೋನೇಟ್
3) ವಾಷಿಂಗ್ ಸೋಡಾ-ಸೋಡಿಯಂ ಕಾರ್ಬೋನೆಟ್
ಗಾಜಿನ ಉತ್ಪಾದನೆ:-
ನಯವಾಗಿ ಪುಡಿ ಮಾಡಿದ ಕಚ್ಚಾ ವಸ್ತುಗಳನ್ನು
ಕುಲುಮೆಗೆ ಸೇರಿಸಿ ಸುಮಾರು 1973ಕೆ (1700) ತಾಪವನ್ನು ಕೊಡಬೇಕು, ಆಗ ಕಚ್ಚಾವಸ್ತುಗಳು ಕರಗಿ ರಾಸಾಯನಿಕವಾಗಿ
ಸೇರಿ ಗಾಜು ಉಂಟಾಗುತ್ತದೆ. ಈ ರೀತಿ ಉಂಟಾದ ಅತಿ ತಂಪಿತ ದ್ರವದ ಗಾಜನ್ನು ವಿವಿಧ ಆಕಾರಗಳಿಗೆ ಅಚ್ಚುಗಳಲ್ಲಿ
ಎರಕ ಹುಯ್ಯಲಾಗುತ್ತದೆ. ಅಥವಾ ಊದಲಾಗುತ್ತದೆ. ಗಾಜಿನಲ್ಲಿನ ಗಾಳಿಯ ಗುಳ್ಳೆಯನ್ನು ತೆಗೆಯಲು ಅದಕ್ಕೆ
ಬೊರಾಕ್ಟ್ ಅಥವಾ ಅಲ್ಯುಮಿನಿಯಂ ಪುಡಿಯನ್ನು ಸೇರಿಸಿ
ಕಾಯಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಗಾಳಿಯ
ಗುಳ್ಳೆಗಳು ಗಾಜಿನಿಂದ ತಪ್ಪಿಸಿಕೊಳ್ಳುತ್ತವೆ.
ಊದುವ ವಿಧಾನ :-
ಗಾಜನ್ನು ಎರಕ ಹೊಯ್ಯವ ಅಥವಾ ಊದುವ ಮೂಲಕ ವಿವಿಧ
ಆಕಾರಗಳನ್ನು ಕೊಡಬಹುದು. ಊದುವ ವಿಧಾನದಲ್ಲಿ ಸ್ವಲ್ಪ ಪ್ರಮಾಣದ ಗಾಜನ್ನು ಊದ್ದದ ಊದು ಕೊಳವೆಯ ತುದಿಯಲ್ಲಿ
ಸೇರಿಸಿ ಕಾಯಿಸಬೇಕು, ನಂತರ ಮತ್ತೊಂದು ತುದಿಯಿಂದ ಗಾಳಿಯನ್ನು ಊದಿದಾಗ ಚಿಕ್ಕ ಬುರುಡೆ ಉಂಟಾಗುತ್ತದೆ.
ಕೊಳವೆಯನ್ನು ತಿರುಗಿಸುವುದರಿಂದ ಗಾಜಿಗೆ ಬೇಕಾದ ಆಕಾರ ನೀಡಬಹುದು. ಇದನ್ನು ಅಚ್ಚಿನಲ್ಲಿಟು ಪುನಃ
ಊದಿ ನಿಶ್ಚಿತ ಆಕಾರ ಪಡೆಯಬಹುದು.
ಅನಿಲನ:-
ಗಾಜನ್ನು ನಿಧಾನವಾಗಿ ತಂಪು ಮಾಡುವ ಪ್ರಕ್ರಿಯೆಗೆ
ಅನಿಲನ ಎಂದು ಹೆಸರು ಇದರಿಂದ ಗಾಜು ಒತ್ತಡವನ್ನು ತಡೆಯವ ಸಾಮಥ್ರ್ಯವನ್ನು ಹೊಂದುತ್ತದೆ. ಮತ್ತು ಬಿದುತರೆಯನ್ನು
ಹೋಗಲಾಡಿಸುತ್ತದೆ.
ಕ್ವಿಂಚಿಂಗ್:-
ಗಾಜನ್ನು ತಕ್ಷಣ ತಂಪು ಮಾಡುವ ಪ್ರಕ್ರಿಯೆಗೆ
ಕ್ಷಂಚಿಂಗ್ ಎಂದು ಹೆಸರು ಇದರಿಂದ ಗಾಜು ತಂಬಾ ಗಟ್ಟಿ ಮತ್ತು ಬಿದುರತೆಯನ್ನು ಪಡೆಯುತ್ತದೆ ಇಂತಹ ಗಾಜಿನ
ಮೇಲೆ ಸ್ವಲ್ಪ ಒತ್ತಡ ಬಿದ್ದರೂ ಅದು ಬಿರುಕು ಬಿಡುತ್ತದೆ.
ಗಾಜಿನ ಗುಣಗಳು:-
* ಬಲವಂತ ಮತ್ತು ಪಾರದರ್ಶಕ ವಸ್ತು
* ಅದು ಕರಗುವಿಕೆಗೆ ಪ್ರತಿರೋದ ಹೊಂದಿದೆ.
* ಸಾಮಾನ್ಯ ತಾಪದಲ್ಲಿ ಇದು ಇತರ ರಾಸಾಯನಿಕ
ಗಳೊಂದಿಗೆ ವರ್ತಿಸುವುದು
* ಕಾಯಿಸಿದಾಗ ಕ್ರಮೇಣ ಮೆದುವಾಗಿ ನಂತರ ನಿಧಾನವಾಗಿ
ಹರಿಯಲು ಪ್ರಾರಂಭಿತ್ತದೆ.
ಸಿರಾಮಿಕ್ಸ್ (ಕುಂಬಾರಿಕೆ ವಸ್ತುಗಳು)
ಸಿರಾಮಿಕ್ಸ್ ಎಂಬ ಪದವು ಸಿರಿಮೋಸ್ ಎಂಬ ಗ್ರೀಕ್
ಪದದಿಂದ ಬಂದಿದೆ. ಇದರ ಅರ್ಥ ಮಣ್ಣಿನ ಮಡಕೆ, ಚೀನಾ ಪಾತ್ರೆ, ಪಿಂಗಾಣಿ, ಇಟ್ಟಿಗೆಯಂತಹ ಜೇಡಿ ಮಣ್ಣಿನ
ವಸ್ತುಗಳನ್ನು ಒಟ್ಟಾರೆ ಸಿರಾಮಿಕ್ಸ್‍ಗಳೆಂದು ಕರೆಯಲಾಗುತ್ತದೆ.
ಪಿಂಗಾಣಿ :-
ಜೇಡಿ ಮಣ್ಣು ಅಲ್ಯೂಮಿನಿಯಂ ಸಿಲಿಕೇಟನೊಂದಿಗೆ
ಇತರ ಸಂಯುಕ್ತಗಳ ಮಿಶ್ರಣ ಇದು ಗಾಳಿ, ನೀರು ಮತ್ತು CO₂
ಗಳ ವರ್ತನೆಯಿಂದಾಗಿ ಸಿಲಿಕೇಟ್ ಬಂಡೆಗಳ ಸವೆತದಿಂದ
ಉಂಟಾಗುತ್ತದೆ.
ಕಚ್ಚಾ ವಸ್ತುಗಳು :-
* ಬಿಳಿ ಜೇಡಿಮಣ್ಣು
* ಮರಳು
* ಫೆಲ್ಡ್ ಸ್ಟಾರ್ ( K₂OAl₂O₃.6SiO₂ )
ಪಿಂಗಾಣಿ ತಯಾರಿಕೆ :-
ಕಚ್ಚಾ ವಸ್ತುಗಳನ್ನು ನಯವಾಗಿ ಪುಡಿಮಾಡಿ ನೀರು
ಸೇರಿಸಿ ಈ ವಿಕರೂಪ ಮಿಶ್ರಣಕ್ಕೆ ಸ್ಲಿಪ್ ಎಂದು ಹೆಸರು ಇನನೇ ಸೊಸುವ ಕಾಗದಿಂದ ಬತ್ತಿ ಹೆಚ್ಚುವರಿ
ನೀರನ್ನು ತೆಗೆದ ನಂತರ ಬೇಕಾದ ಆಕಾರವನ್ನು ಕೊಟ್ಟು ಒಣಗಿಸಿ ಕಲುಮೆಯಲ್ಲಿ 1837ಕೆ (1600)ಗೆ ಕಾಯಿಸಬೇಕು
* ಹೊಳಪು ನೀಡುವಿಕೆ:-
ಪಿಂಗಾಣಿಯು ನೋಡಲು ಆಕರ್ಷಕವಾಗಿರುವ ರಂಧ್ರ
ಮುಕ್ತವಾಗಿರುತ್ತದೆ. ಇದನ್ನು ಪಡೆಯಲು ಹೊಳಪು ನೀಡಬೇಕು.
ಹೊಳಪು ನೀಡುವಿಕೆಯ ಅನುಕೂಲಗಳು
* ರಂಧ್ರಗಳನ್ನು ಮುಚ್ಚಬಹುದು
* ಆಕರ್ಷಕ ನೋಟವನ್ನು ನೀಡುತ್ತದೆ.
ಹೊಳಪು ನೀಡಲು ಬಳಸುವ ವಸ್ತುಗಳು
* ಬೋರಾನ್
* ಅಲ್ಯೂಮಿನ್
* ಮೃದುವಾದ ಸಿಲಿಕಾ
* ಕರಗದ ಸಲ್ಫೇಟ್‍ಗಳು
* ಲೋಹದ ಆಕ್ಸೈಡ್‍ಗಳು (ಬಣ್ಣ ಕೊಡಲು)
ಪಿಂಗಾಣಿಯ ಉಪಯೋಗಳು
* ಗೃಹಬಳಕೆ ವಸ್ತುಗಳು ತಯಾರಿಕೆ (ಕಪ್, ಪ್ಲೇಟ್)
* ಸಾಸರ್, ಉಪ್ಪಿನಕಾಯಿ ಜಾಡಿ
* ಅಲಂಕಾರಿಕ ವಸ್ತುಗಳು ತಯಾರಿಕೆಯಲ್ಲಿ
* ವಿದ್ಯುತ ಉಪಕರಣಗಳಲ್ಲ
* ಸ್ಯಾನಿಟರಿ ವಸ್ತುಗಳು
* ಪ್ರಯೋಗಾಲಯಗಳ ಉಪಕರಣಗಳು
ಸಾಬೂನುಗಳು:- ಸೈಸರ್ಗಿಕ
ಕೊಬ್ಬಿನಿಂದ ಸಂಶ್ಲೇಪಿಸಿದ ಲೋಹಿಯ ಲವಣಗಳಿಗೆ ಸಾಬೂನು ಎನ್ನುತ್ತಾರೆ. ಸಾಬೂನು ಎಂಬುದು ಉದ್ದ ಸರಪಳಿ
ಮೆದಾಮ್ಲಗಳ (ಕೊಬ್ಬಿನಾಮ್ಲಗಳು) ಸೋಡಿಯಂ ಲವಣಗಳು ಇಲ್ಲವೆ ಅವುಗಳು ಪೋಟ್ಯಾಸಿಯಂನ್ ಲವಣಗಳು
ಉದಾ:-
* ಸೋಡಿಯಂ ಸ್ವಿಯರೇಟ್ C₁₇H₃₅COONA
* ಸೋಡಿಯಂ ಓಲಿಯೊಟ್ C₁₇H₃₃COONA
* ಸೋಡಿಯಂ ಪಾಮಿಲೊಟ್ C₁₇H₃₁COONA
ಸ್ವಿಯರಿಕ್ ಆಮ್ಲ ಎಂಬುದು ಉದ್ದ ಸರಪಳಿ ಕೊಬ್ಬಿನ
ಆಮ್ಲ ಇದರ ಅಣುಸೂತ್ರ ಇದು ಸೋಡಿಯಂ ಹೈಡ್ರಾಕ್ಸೈಡ್ ನೊಂದಿಗೆ ವರ್ತಿಸಿ ಸೋಡಿಯ ಸ್ವಿಯರಿಕ್ ಆಗುತ್ತದೆ.
ಇದೆ ಸಾಬೂನು ಅದೇ ರೀತಿ ಸೋಡಿಯಂ ಓಲಿಯೆಟ್ & ಸೋಡಿಯಂ ಪಾಲಿಮಿಲೇಟ್ ಸಹ ತಯಾರಿಸುತ್ತದೆ.
ಸಾಬೂನುಗಳು ವಿಧಗಳು:-
* ಸ್ನಾನದ ಸಾಬೂನುಗಳು:- ಸ್ನಾನಕ್ಕೆ ಬಳಸುವ
ಸಾಬೂನುಗಳು ಸ್ನಾನದ ಸಾಬೂನು ಎನ್ನುವರು. ಇವುಗಳು ತಯಾರಿಸಲು ಕೊಬ್ಬು ಎಣೆಯ ಜೊತೆಗೆ ಪೋಟಾಷಿಯಂ ಹೈಡ್ರಾಕ್ಸೈಡ್
(ಏಔಊ) ಸೇರಿಸುತ್ತಾರೆ. ತಯಾರಾದ ಸಾಬೂನಿಗೆ ಬೇಕಾದ ಬಣ್ಣ & ವಾಸನೆಯನ್ನು ಕೊಡಲು ರಾಸಾಯನಿಕಗಳನ್ನು
ಸೇರಿಸುತ್ತಾರೆ.
ಉದಾ: ಮೈಸೂರು ಸ್ಯಾಂಡಲ್ ಸೊಪಿಗೆ ವಾಸನೆಗಾಗಿ
ಶ್ರೀಗಂಧ ಎಣ್ಣೆಯನ್ನು ಸೇರಿಸುತ್ತಾರೆ. ಲಿರಿಲ್ ಸೊಪಿಗೆ ವಾಸನೆಗಾಗಿ ನಿಂಬೆ ರಸವನ್ನು ಸೇರಿಸುತ್ತಾರೆ.
ಬಟ್ಟೆ ತೊಳೆಯುವ ಸಾಬೂನುಗಳು:- ಸ್ನಾನದ ಸಾಬುನುಗಳು & ಬಟ್ಟೆ ಒಗೆಯುವ ಸಾಬೂನುಗಳಿಗೂ ಇರುವ ಒಂದು ವ್ಯತ್ಯಾಸವೆಂದರೆ
ಇವುಗಳನ್ನು ತಯಾರಿಸುವಾಗ (ಏಔಊ) ಬಳಸಿದರೆ ಸ್ನಾನದ ಸಾಬೂನು (ಓಚಿoಊ) ಬಳಸಿದರೆ ಬಟ್ಟೆ ಒಗೆಯುವ ಸಾಬೂನು
ತಯಾರಿಸಲಾಗುತ್ತದೆ.
ಸಾಬೂನೀಕರಣ:-
ಸಾಬೂನು ತಯಾರಿಸುವ ವಿಧವನ್ನು ಸಾಬುನೀಕರಣ
ಎನ್ನುವರು ಎಣ್ಣೆ ಅಥವಾ ಪ್ರಾಣಿಗಲು ಕೊಬ್ಬು ಒಂದು ದೊಡ್ಡು ಕಬ್ಬಿಣದ ಹುಂಡೆಯಲ್ಲಿ ತೆಗೆದುಕೊಳ್ಳಿ
ಅದಕ್ಕೆ ಎಣ್ಣೆಯ ಎರಡರಷ್ಟು ಪ್ರಬಲ ಸೋಡಿಯಂ ಹೈಡ್ರಾಕ್ಸೈಡ್‍ನ್ನು ಸೇರಿಸಿ ನಿಧಾನವಾಗಿ ಕಾಯಿಸಿ ಈ
ಮಿಶ್ರಣ ಕುದಿಯುವವರೆಗೂ ಚೆನ್ನಾಗಿ ಕಾಯಿಸಿ ದ್ರಾವಣದ ಮೇಲ್ಬಾಗದಲ್ಲಿ ಸಾಬೂನು ತಯಾರಾಗಿ ಕೇನೆಯ ರೂಪದಲಿ
ತೆಲುತ್ತಿರುತ್ತದೆ. ಇದನ್ನು ಬೆರ್ಪಡಿಸಲು ದ್ರಾವಣಕ್ಕೆ ಅಡುಗೆ ಉಪ್ಪು ಸೇರಿಸಿ ಇದು ಸಾಬೂನು ಗ್ಲಿಸರಾಲ್‍ನಲ್ಲಿ
ಮಿಲನವಾಗುವುದನ್ನು ತಡೆಯುತ್ತದೆ. ಸಾಬೂನನ್ನು ಬೇರ್ಪಡಿಸಿ ಒತ್ತು ಕಾಗದದಿಂದ ಒತ್ತಿ ನಿರ್ದಿಷ್ಠ ಆಕಾರದ
ಬಿಲ್ಲೆಗಳಾಗಿ ಮಾಡುವರು ಇದಕ್ಕೆ ಬಣ್ಣ & ವಾಸನೆ ಕೊಡಲು ನಿರ್ಧಿಷ್ಠ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ.
ಹಿಗೆ ತಯಾರಾದ ಸಾಬೂನು ಬಟ್ಟೆ ತೊಳೆಯುವ ಸಾಬೂನು ಮೇಲೆ ವಿವರಿಸಿದ ವಿಧಾನದ ರೀತಿಯ ಸ್ನಾನದ ಸಾಬೂನುಗಳನ್ನು
ತಯಾರಿಸುತ್ತಾರೆ. ಅನೇಕ ಸೋಡಿಯಂ ಹೈಡ್ರಾಕ್ಸೈಡ್‍ಗೆ ಬದಲಾಗಿ ಪೊಟಾಸಿಯಂ ಹೈಡ್ರಾಕ್ಸೈಡ್ ಸೇರಿಸುತ್ತಾರೆ.
ಕಾಲ್ ವಿಲ್ ಹೆಲ್ಮ್ ಷೀಲ್:-
ಇವನು ಸ್ವೀಡನ್ ದೇಶದ ವಿಜ್ಞಾನಿ ಇವನು
1783 ರಲ್ಲಿ ಆಕಾಸ್ಮಿಕವಾಗಿ ಸಾಬೂನು ತಯಾರಿಸುವ ಪ್ರಕ್ರಿಯೆಯನ್ನು ಪತ್ತೆ ಮಾಡಿದನು ಅವನು ಅಲೀವರ್
ಎಣ್ಣೆಯನ್ನು ಸೀಸದ ಆಕ್ಸೈಡ್‍ನೊಂದಿಗೆ ಕಾಸಿದ ಹೀಗೆ ಮಾಡಿದಾಗ ಸಿಹಿ ರುಚಿಯಳ್ಳ ಪದಾರ್ಥವೊಂದು ಉತ್ಪತಿಯಾಯಿತು
ಇದು ಗ್ಲಿಸರಾಲ್ (ಗ್ಲಿಸರಿನ್) sಸಾಬೂನು ಹೇಗೆ ಸ್ವಚ್ಚಗೋಳಿಸುತ್ತವೆ. ಸಾಬೂನಿನ ಅಣುಗಳ ತುದಿಗಳಿಗೆ
ವಿಭಿನ್ನ ಗುಣಗಳಿರುವದರಿಂದ ಇದು ನೀರಿನಲ್ಲಿ ಮಿಲಿನವಾಗುತ್ತದೆ. ಸಾಬೂನಿನ ಅಣುವಿನಲ್ಲಿ ಉದ್ದನೆಯ
ಹೈಡ್ರೋಕಾರ್ಬನ ಭಾಗ ಒಂದು ಚಿಕ್ಕ ಆಯೊನಿಕ ಭಾಗ ಇರುತ್ತದೆ. ಅಯೊನಿಕವಲ್ಲದ ಹೈಡ್ರೋಕಾರ್ಬನ ತುದಿಗೆ
ನೀರನ್ನು ವಿಕರ್ಷಿಸುವ ಗುಣವಿದೆ. ಅಯೊನಿಕವಾಗಿರುವ ಇನೊಂದು ತುದಿಗೆ ನೀರನ್ನು ಆಕರ್ಷಿಸುವ ಗುಣ ಈ
ತುದಿ ನೀರಿಗೆ ಅಂಟಿಕೊಳ್ಳುತ್ತವೆ ಹೈಡ್ರೋಕಾರ್ಬನ ತುದಿ ಕೊಳೆ ಅಥವಾ ಜಿಡ್ಡಿಗೆ ಅಂಟಿಕೊಂಡು ಮಿಸೆಲ್‍ಗಳು
ಎಂಬ ರಚನೆಗಳನುಂಟು ಮಾಡುತ್ತದೆ. ಮಿಸೆಲ್‍ಗಳಲ್ಲಿ ಸಾಬೂನಿನ ಅಣುಗಳ ಕೇಂದ್ರಾಭಿಮುಖಯಾಗಿ ಏರ್ಪಡಿಸಿಕೊಳ್ಳುತ್ತವೆ.
ನೀರಿಗೆ ಅಂಟಿಕೊಂಡಿರುವ ತುದಿ ಕೊಳೆಯನ್ನು ಬಟ್ಟೆಯಿಂದ ಕಿತ್ತು ತೆಗೆಯುತ್ತವೆ ಇದನು ನೀರಿನಿಂದ ತೊಳೆದು
ಬಿಡಬಹುದು.
* ಗ್ಲಿಸರಲ್ (ಗ್ಲಿಸರೀನ್):- ಗ್ಲಿಸರೀನ್
ಎಂಬುದು ಒಂದು ಹೈಡ್ರೋಕಾರ್ಬನ ದುವ ಇದು ಸಾಬೂನಿಕರಣ ಪ್ರಕ್ರಿಯೆಯಲ್ಲಿ ಸಾಬೂನಿನ ಜೊತೆಗೆ ಉಪ ಉತ್ಪನ್ನವಾಗಿ
ದೊರೆಯುತ್ತವೆ ಇದನ್ನು ಸಾಮಾನ್ಯವಾಗಿ ಗ್ಲಿಸರಿನ್ ಎನ್ನುತ್ತಾರೆ.
ಇದರ ಅಣು ಸೂತ್ರ :- CH₂OH-CHOH-CH₂OH
ಗುಣಗಳು:- ಸಿಹಿರುಚಿಯನ್ನು
ಹೊಂದಿವೆ.
ಉಪಯೋಗ:-
* ಸ್ಫೋಟಕಗಳು ತಯಾರಿಕೆ (ಟ್ರೈನೈಟ್ರೋ ಗ್ಲಿಸಿರಿನ್)
* ಪ್ಲಾಸ್ಟಿಕಗಳು ತಯಾರಿಕೆ
* ಔಷಧ ಉದ್ಯಮಗಳು
* ಶೀತಲೀಕರಣ ತಡೆಯಲು
ಮಾರ್ಜಕಗಳು:-
* ಮಾರ್ಜಕ ಎಂಬುದು ಲ್ಯಾಟಿನ್ ಪದದಿಂದ ಸೃಷ್ಟಿಯಾಗಿದೆ
ಇದರ ಅರ್ಥ ಮೇಲ್ಮೈ ಪಟುತ್ವ ಉಳ್ಳದು ಸ್ವಚ್ಛ ಮಾಡಬಲ್ಲ ಪದಾರ್ಥ ಮಾರ್ಜಕಗಳ ಸಾಬೂನಲ್ಲದ ಸಾಬುನು ಎನ್ನುತ್ತಾರೆ.
* ತಯಾರಿಸುವ ವಿಧಾನ :- ಪೆಟ್ರೋಲಿಯಂನಿಂದ
ಪಡೆದ ಉದ್ದ ಸರಪಳಿ ಹೈಡ್ರೋಕಾರ್ಬನ್‍ಗಳನ್ನು ಸಾರೀಕೃತ ಗಂಧ ಕಾಮದೊಂದಿಗೆ ಸಂಸ್ಕರಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ
ಉತ್ಪತ್ತಿಯಾಗುವ ಕಾರ್ಬಾನಿಕ್ ಆಮ್ಲಗಳನ್ನು ಸೋಡಿಯಂ ಹೈಡ್ರಾಕ್ಸೈಡನಿಂದ ತಟಸ್ಥಗೊಳಿಸುತ್ತದೆ. ಈಗ
ಬರುವ ಸೋಡಿಯಂ ಲವಣವೇ ಮಾರ್ಜಕ
ಮಾರ್ಜಕಗಳು ಅನುಕೂಲಗಳು:-
* ಗಡಸು ನೀರಿನಲ್ಲಿಯೂ ಚೆನ್ನಾಗಿ ತೊಳೆಯುತ್ತವೆ.
* ಆಮ್ಲವು ಮಾಧ್ಯಮದಲ್ಲೂ ಸ್ವಚ್ಛಗೊಳಿಸುತ್ತವೆ.
ಮಾರ್ಜಕಗಳು ಅನಾನುಕೂಲಗಳು:-
* ಇವು ಜೀವ ಶಿಥಲೀಯವಲ್ಲ
* ಇವು ಜಲ & ನೆಲ ಮಾಲಿನ್ಯವನ್ನು ಉಂಟು
ಮಾಡುತ್ತವೆ.
ಬಣ್ಣಗಳು :-
ದ್ರವ ಮಾದ್ಯಮದಲ್ಲಿ ವಿವಿಧ ವರ್ಣಕಗಳನ್ನು
ಒಳಗೊಂಡಿರುವ ಮಿಶ್ರಣವೇ ಬಣ್ಣ ಬಣ್ಣದಲ್ಲಿ ಸಾವಯವ ದ್ರಾವಕದಲ್ಲಿ ಮಾರ್ಜಕಗಳು ಮಿಲಿನವಾಗಿರುತ್ತವೆ.
ಉತ್ತಮ ಬಣ್ಣದ ಲಕ್ಷಣಗಳು:-
* ಇವು ತೆಳುವಾದ ಅಪಾರದರ್ಶಕ ಪೊರೆಯ ರೂಪದಲ್ಲಿರುತ್ತವೆ.
* ಶಾಖ ಬೆಳಕು ತೇವಾಂಶ ಮತ್ತು ವಾತಾವರಣದ ಅನಿಲಗಳು
ಇದರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
* ಇದು ಉತ್ತಮವಾಗಿ ಹರಡುವ ಶಕ್ತಿ ಹೊಂದಿದೆ.
* ಇದು ಪೊರೆಗಳ ರೂಪದಲ್ಲಿ ಎದು ಬರುವುದಿಲ್ಲ.
* ಇದು ಉತ್ತಮ ಬಣ್ಣವನ್ನು ಹೊಂದಿದೆ.
ಬಣ್ಣದ ಘಟಕಗಳು ಅವುಗಳು ಕಾರ್ಯಗಳು:-
ಎ) (Pigments)
ವರ್ಣಕಗಳು ಬಣ್ಣ ಕೊಡುವ ವಸ್ತುಗಳನ್ನು ವರ್ಣಕಗಳೆನ್ನುವರು.
12. ವಸ್ತುಗಳು ಹೇಗೆ ಕೆಲಸ ಮಾಡುತ್ತವೆ
* ವಿದ್ಯುತ್ ಪ್ರವಾಹ ಮತ್ತು ಮಂಡಲಗಳು
* ಆಯಸ್ಕಾಂತಗಳು
ವಿದ್ಯುತ್ಚಕ್ತಿ (Electricity)
ವಸ್ತುಗಳ ತಮ್ಮ ಚಲನೆಯ ಸ್ಥಿತಿಯೊಂದಾಗಿ ಪಡೆದುಕೊಳ್ಳುವ
ಶಕ್ತಿಯೇ ಚಲನಶಕ್ತಿ ವಿದ್ಯುದಾಮಿಷ್ಟ ಕಣಗಳ ತಮ್ಮ ಚಲನೆಯ ಸ್ಥಿತಿಯಿಂದ ಪಡೆದುಕೊಳ್ಳುವ ಶಕ್ತಿಯನ್ನೆ
ವಿದ್ಯುಚ್ಛಕ್ತಿ ಎನ್ನುವರು.
ವಿದ್ಯುಚ್ಛಕ್ತಿಯ ಎಕಮಾನಗಳು : ವಿದ್ಯುಚ್ಛಕ್ತಿಯ
ಅಂತರಾಷ್ಟ್ರೀಯ SI ಏಕಮಾನ ಜೂಲ್(J) ಎಂದು ಕರೆಯುವರು
(ಒಂದು ಕಿಲೋ ಜೊಲ್ = 1000 ಜೋಲಗಳು)
ವಿದ್ಯುತ್ ಸಾಮರ್ಥ್ಯ (Electrical Power)
ಒಂದು ಏಕಮಾನ ಕಾಲದಲ್ಲಿ ವಿದ್ಯುಚ್ಛಕ್ತಿಯಿಂದಾದ
ಕೆಲಸವನ್ನು ವಿದ್ಯುತ್ ಸಾಮರ್ಥ್ಯ ಎನ್ನುವರು
ವಿದ್ಯುತ್ ಸಾಮರ್ಥ್ಯ = ವಿದ್ಯುಚ್ಛಕ್ತಿಯಿಂದಾದ
ಕೆಲಸ/ಕಾಲ
= ಉಪಯೋಗವಾದ ವಿದ್ಯುಚ್ಚಕ್ತಿ/ಕಾಲ
P=E/T
P = ಸಾಮರ್ಥ್ಯ
E = ವಿದ್ಯುಚ್ಛಕ್ತಿ
T = ಕಾಲ
ವಿದ್ಯುತ್ ಸಾಮಥ್ರ್ಯದ ಎಕಮಾನಗಳು
ವಿದ್ಯುತ್ ಸಾಮಥ್ರ್ಯದ ಅಂತರಾಷ್ಟ್ರೀಯ SI ಎಕಮಾನ W (ವ್ಯಾಟ) 1. ಕಿಲೋ ವ್ಯಾಟ್ಸ = 1000 ವ್ಯಾಟ್ಸಗಳು ವಿದ್ಯುತ್
ಸಾಮರ್ಥ್ಯದ ವ್ಯವಹಾರಿಕ ಏಕಮಾನ (kwh) ಕಿಲೋ ವ್ಯಾಟ-ಗಂಟೆ.
ಯುನಿಟ :- ನಾವು ಪ್ರತಿ ಸೆಕೆಂಡಿಗೆ 1000ಎ
ಗಳಷ್ಟು ವಿದ್ಯುಚ್ಛಕ್ತಿ ಉಪಯೋಗ ನಿರಂತರವಾಗಿ ಒಂದು ಗಂಟೆ ಬಳಸಿದರೆ. ನಾವು ಬಳಸಿದ ವಿದ್ಯುಚ್ಛಕ್ತಿ
ಒಂದು ಕಿಲೋ ವ್ಯಾಟ-ಅವರ ಆಗುತ್ತದೆ. ಇದನ್ನು ಒಂದು ಯುನಿಟ್ ಎನ್ನುತ್ತೇವೆ.
1kwh = 1kw X 1h
1000w X 3600
second
36000000 J/s
ವಿದ್ಯುತ್ ವಿಭವ
:- ಒಂದು ಏಕಮಾನ ಧನವಿದ್ಯುದಾವೇಶವನ್ನು ಅನಂತದಲ್ಲಿರುವ ಬಿಂದುವಿನಿಂದ ಯಾವುದೇ ನಿಗದಿತ ಬಿಂದುವಿಗೆ
ತರುವಲ್ಲಿ ನಡೆದ ಕೆಲಸವನ್ನು ನಿಗದಿತ ಬಿಂದುವಿನ ವಿದ್ಯುತ್ ವಿಭಯ ಎನ್ನುವರು. ವಿದ್ಯುತ್ ವಿಭವದ ಅಂತರಾಷ್ಟ್ರೀಯ
ಏಕಮಾನ ವೋಲ್ಟ
ವಿದ್ಯುದಾವೇಶಗಳಲ್ಲಿ ಎರಡು ವಿಧಗಳಿವೆ :
ಧನ ವಿದ್ಯುತ್ ಆವೇಗಗಳು ಮತ್ತು ಋಣ ವಿದ್ಯುತ್
ಆವೇಶಗಳು
ವಿದ್ಯುದಾವೇಶಗಳ ಅಂತರಾಷ್ಟ್ರೀಯ ಎಕಮಾನ ಕೂಲಮ್
ಚಾಲ್ಸ್ ಅಗಸ್ಟಿನ್ ಕೂಲಾಮ್
:- ಪ್ರಾನ್ಸಿನ್ ಭೌತ ವಿಜ್ಞಾನಿಯಾದ ಇವರು ಪ್ರಾನ್ಸಿನ ಸೈನ್ಸದಲ್ಲಿ ಇಂಜನಿಯರ ಆಗಿದ್ದರು ಪ್ರೆಂಚ
ಕ್ರಾಂತಿಯ ಸಮಯದಲ್ಲಿ ಸೇವೆಯನ್ನು ಬಿಟ್ಟು ವಿದ್ಯುಚ್ಛಕ್ತಿ ಹಾಗೂ ಕಾಂತತ್ವಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು
ಪ್ರಾರಂಭಿಸಿದ ವಿದ್ಯುದಾವೇಶಗಳ ನಡುವಿನ ಬಲದ ಬಗ್ಗೆ ತಿಳಿಸಲಾದ ಕೂಲಮ್
ವಿದ್ಯುದಾವೇಶದ ನಿಯಮವನ್ನು ರೂಪಿಸಿದ, ಅಲ್ಲದೆ
ಸರಳ ಯಂತ್ರ ಹಾಗೂ ಮೆಟ್ರಿಕ್ ಪದ್ಧತಿಯ ತೂಕ ಹಾಗೂ ಅಳತೆಗಳನ್ನು
ಅನುಷ್ಠಾನಕ್ಕೆ ತರುವಲ್ಲಿ ಇವರ ಕೊಡುಗೆಗಳು
ಅಪಾರ ವಿದ್ಯುದಾವೇಶಗಳನ್ನು ಅಳೆಯುವ ಎಕಮಾನಕ್ಕೆ ‘ಕೂಲಾಮ” ಎಂದ ಇವರ ಹೆಸರನ್ನೆ ಇಡಲಾಗಿದೆ.
ವಿಭಾವಂತರ (Potential Difference)Volt : ವಾಹಕದ ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ಎಕಮಾನ
ಧನ ಆವೇಶವನ್ನು ಸ್ಥಾನಪಲ್ಲಟಿಸಿದಾಗ ನಡೆದ ಕೆಲಸವನ್ನು ಆ ಬಿಂದುಗಳ ನಡುವಿನ ವಿಭವಾಂತರ ಎನ್ನುವರು.
ಈ ಆವೇಶಗಳು ಯಾವಾಗಲು ಇಲೆಕ್ಟ್ರಾನ್ ಸಮೃದ್ಧಿ ಸ್ಥಾನದಿಂದ ಇಲೆಕ್ಟ್ರಾನಗಳ ಕೊರತೆ ಇರುವ ಸ್ಥಾನದ ಕಡೆಗೆ
ಚಲಿಸುತ್ತವೆ.
ವಿಭಾವಂತರ = ವಿದ್ಯಾದಿಷ್ಟ ಕಣಗಳು ಸ್ಥಾನಪಲ್ಲಟವಾದಾಗ
ನಡೆದ ಕೆಲಸ / ಸ್ಥಾನ ಪಲ್ಲಟವಾದ ಒಟ್ಟು ವಿದ್ಯುದಾವೇಶಗಳು
V=W/Q
V = Voltage
W= Work
Q = Quantity of
electric charges
ವಿಭವಾಂತರದ ಅಂತರಾಷ್ಟ್ರೀಯ ಎಕಮಾನ ವೋಲ್ಟ
(v)
ವಿದ್ಯುತ್ಪ್ರವಾಹ:(Electric current)
ಒಂದು ಸೆಕೆಂಡಿನಲ್ಲಿ ಒಂದು ವಾಹಕದ ಯಾವುದೇ
ಬಿಂದುವಿನ ಮೂಲಕ ಪ್ರವಹಿಸುತ್ತಿರುವ ವಿದ್ಯುದಾವೇಶದ ಪರಿಮಾಣವನ್ನು ಆ ವಾಹಕದಲ್ಲಿರುವ ವಿದ್ಯುತ್ಪ್ರವಾಹ
ಎನ್ನುವರು
ವಿದ್ಯುತ್ಪ್ರವಾಹ= ಯಾವುದೇ ಬಿಂದುವಿನ ಮೂಲಕ
ಪ್ರವಹಿಸಿದ ಒಟ್ಟು ವಿದ್ಯುದಾವೇಶಗಳು / ತೆಗೆದುಕೊಂಡ ಕಾಲ
I = Q/t
I = ವಿದ್ಯುತ್ಪ್ರವಾಹ
Q = ವಿದ್ಯುದಾವೇಶಗಳ ಪರಿಮಾಣ
t = ಕಾಲ
ವಿದ್ಯುತ್ಪ್ರವಾಹದ ಅಂತರಾಷ್ಟ್ರೀಯ ಎಕಮಾನವನ್ನು
ಅಂಪೇರ (Amphere) ಎನ್ನುವರು.
ವಿದ್ಯುನ್ಮಂಡಲ : (Electric Circuit)
ಒಂದು ಮಂಡಲದಲ್ಲಿ ಹರಿಯುತ್ತಿರುವ ವಿದ್ಯುತ್ಪ್ರವಾಹದ
ಸಂಕೇತಿಕ ನಿರೂಪಣೆ ಮಾಡುವ ಸಂವೃತ್ತ ವ್ಯವಸ್ಥೆಯನ್ನು ವಿದ್ಯುನ್ಮಂಡಲ ಎನ್ನುವರು
1. ವಿದ್ಯುತ್ ಕೋಶ
2. ಬಲ್ಬ
3. ರೋಧಕ
4. ವಾಹಕ
5. ಸ್ಟಿಚ್
ವಿದ್ಯುತ್ ಚಾಲಕ ಬಲ
(Electro Magnetic
Force) ವಾಹಕದಲ್ಲಿ ಎಕರೂಪದ ವಿದ್ಯುದಾಷ್ಟಿ
ಕಣಗಳ ಪ್ರವಹಿಸಲು ತಂತಿಯ ತುದಿಗಳ ವಿಭವಂತರ ಒಂದೇ ಸಮನಾಗಿರಬೇಕು, ಈ ವಿಭವಂತರವನ್ನು ಕಾಪಾಡಿಕೊಳ್ಳಲು
ಬಳಸುವ ಶಕ್ತಿಯೇ ವಿದ್ಯುತ್ ಚಾಲಕ ಬಿಲ
ವಿದ್ಯುತ್ ಚಾಲಕ ಬಲದ ಆಕರಗಳು :
ಶುಷ್ಕಕೋಶ, ವಿದ್ಯುತ್ ಕೋಶ, ಡೈನಮೋ, ಸೌರಕೋಶ
ಇತ್ಯಾದಿ
ಒಂದು ವಾಹಕದ ತಂತಿಯ ತುದಿಗಳನ್ನು ಯಾವುದೇ
ವಿದ್ಯುತಕೋಶಗ್ರಗಳಿಗೆ ಜೋಡಿಸದಿದ್ದಾಗ ಅದರಲ್ಲಿಯ ವಿಸ್ಥಾನಿತ ಎತಿಕ್ಟ್ರನಗಳಿಗೆ ಯಾವದೇ ನಿರ್ದಿಷ್ಟ
ದಿಕ್ಕಿನಲ್ಲಿ ಚಲನೆ ಇರುವುದಿಲ್ಲ. ಆದರೆ, ಅದೇ ವಾಹಕದ ತಂತಿಯನ್ನು ವಿದ್ಯುತ ಕೋಶಗ್ರಗಳಿಗೆ ಜೋಡಿಸಿದಾಗ
ಇಲೆಕ್ಟ್ರಾನಗಳು ನಿರ್ದಿಷ್ಟ ದಿಕ್ಕಿನಲ್ಲಿ ಪ್ರವಹಿಸುತ್ತದೆ.
ವಿದ್ಯುತ ಚಾಲಕ ಬಲದ ಎಕಮಾನ ವೋಲ್ಟ ಇದನ್ನು
ಅಳೆಯಲು ಬಳಸುವ ಉಪಕರಣ ವೋಲ್ಟ ಮೀಟರ
ವಿದ್ಯುತ್ ರೋಧ (Electric Resistance)
ವಿದ್ಯುದಾಮಿಷ್ಟ ಕಣಗಳ ಚಾಲನೆಗೆ ಅಡಚಣೆ ಒಡ್ಡುವ
ವಸ್ತುವಿನ ಗುಣವನ್ನು ವಿದ್ಯುತರೋಧ ಎನ್ನುವರು. ವಿದ್ಯುತರೋಧದ ಅಂತರಾಷ್ಟ್ರೀಯ ಎಕಮಾನ “ಓಮ”ಎನ್ನುವರು ಇದನ್ನು ಅಳತೆ ಮಾಡುವ ಸಾಧನ ರಿಯೋಸ್ಟ್ಯಾಟ ‘ಓಮ್ ನ ಸಂಕೇತ
ವಾಹಕದ ವಿದ್ಯುತರೋದ ಅವಲಂಬಿಸುವ ಅಂಶಗಳು
1. ವಾಹಕವಾಗಿ ಬಳಸುವ ವಸ್ತು :- ಟಂಗಸ್ಟಿನ್
ಅತ್ಯಂತ ಹೆಚ್ಚು ರೋದಕ ಹೊಂದಿರುವ ವಸ್ತು, ಬೆಳ್ಳಿ, ಕಡಿಮೆ, ರೋಧ ಹೊಂದಿರುವ ವಸ್ತು
2. ವಾಹಕ ತಂತಿಯ ಉದ್ದ :- ವಾಹಕದ ಉದ್ದ
ಹೆಚ್ಚಾದಂತೆ ರೋದ ಹೆಚ್ಚಾಗುತ್ತದೆ ವಾಹಕದ ಉದ್ದ ಕಡಿಮೆಯಾದಂತೆ ಶೋಧ ಕಡಿಮೆಯಾಗುತ್ತದೆ.
3. ವಾಹಕದ ತಂತಿಯ ದಪ್ಪ :- ವಾಹಕದ ತಂತಿಯ
ದಪ್ಪವಾದಂತೆ ರೋದ ಕಡಿಮೆಯಾಗುತ್ತದೆ. ವಾಹಕ ತಂತಿಯ ತೆಳುವಾದಂತೆ ರೋಧ ಹೆಚ್ಚಾಗುತ್ತದೆ.
4. ವಾಹಕದ ತಾಪ :- ವಾಹಕದ ತಾಪ ಹೆಚ್ಚಾದಂತೆ
ರೋಧ ಹೆಚ್ಚಾಗುತ್ತದೆ ತಾಪ ಕಡಿಮೆಯಾದಂತೆ ರೋದ ಕಡಿಮೆಯಾಗುತ್ತದೆ.
ಅಧಿವಾಹಕಗಳು (Super Conductor)
* ಸೊನ್ನೆ ರೋಧವಿರುವ ವಸ್ತುಗಳನ್ನು ಅಧಿವಾಹಕವೆನ್ನುವರು
ಉದಾಹರಣೆ : ಪಾದರಸವು 4.2ಕೆ ಗಿಂತ ಕಡಿಮೆ
ತಾಪದಲ್ಲಿ ಅದಿವಾಹಕವಾಗಿ ಕೆಲಸ ಮಾಡುತ್ತದೆ.
ರೋಧಗಳ ಜೋಡಣೆ :
ವಿದ್ಯುನ್ಮಂಡಲದಲ್ಲಿ ರೋದಗಳ ಅವಶ್ಯಕತೆಗೆ
ತಕ್ಕ ಹಾಗೆ ರೋದಗಳನ್ನು ಬಳಸಲಾಗುತ್ತದೆ ಅವುಗಳನ್ನು ಎರಡು ರೀತಿಯಲ್ಲಿ ಜೋಡಿಸಲಾಗುತ್ತದೆ.
1. ರೋಧಗಳ ಸರಣಿ ಜೋಡಣೆ
2. ರೋಧಗಳ ಸಮಾಂತರೆ ಜೋಡಣೆ
1. ರೋಧಗಳ ಸರಣಿ ಜೋಡಣೆ (Series Connection) ರೋಧಗಳ ಸರಣಿ ಜೋಡಣೆಯಲ್ಲಿ ಒಂದು ರೋಧದ ತುದಿಗೆ ಮತ್ತೊಂದು
ರೋಧವನ್ನು ಜೋಡಿಸುತ್ತಾರೆ.
1 R₁, R₂ & R₃ ಮೂರು ರೋಧಗಳು ಒಂದಕ್ಕೊಂದು ತುದಿಗಳಿಗೆ ಜೋಡಿಸಲಾಗಿದೆ ಇದು
ಸರಣಿ ಜೋಡಣೆಯಾಗಿದೆ. ಇಲ್ಲಿ ವಾಹಕದಲ್ಲಿರುವ ಒಟ್ಟು ರೋಧವನ್ನು ಈ ಕೆಳಗಿನಂತೆ ಸೂಚಿಸುತ್ತೇವೆ.
R₅ R₁+R₂+R₃
2. ರೋಧಗಳ ಸಮನಾಂತರ ಜೋಡಣೆ ( Parallel Connection) ಇಲ್ಲಿ ಅನೇಕ ರೋಧಕಗಳ ತುದಿಗಳನ್ನು ಎರಡು ಸಾಮನ್ನೆ ಬಿಂದುಗಳಿಗೆ
ಜೋಡಿಸುತ್ತಾರೆ.
ವಾಹಕದಲ್ಲಿರುವ ಒಟ್ಟು ರೋಧನ್ನು ಈ ಕೆಳಗಿನಂತೆ
ಸೂಚಿಸುತ್ತೇವೆ
ಓಮನ ನಿಯಮ (Ohm’s Law) :-
ಇದು ವಿಭಾವಂತರ ಹಾಗೂ ವಿದ್ಯುತ್ಪ್ರಾಹಗಳಿಗಿರುವ
ಸಂಬಂದವನ್ನು ತಿಳಿಸುತ್ತದೆ. ಅನೇಕ ವಸ್ತುಗಳಲ್ಲಿ ಒಂದು ವಾಹಕದ ತಾಪ ಒಂದೇ ಮಟ್ಟದಲ್ಲಿದ್ದಾಗ ಅದರಲ್ಲಿನ
ವಿದ್ಯುತ್ಪ್ರಾಹ ಅದಕ್ಕೆ ಕಾರಣವಾದ ವಿಭದಾಂತರಕ್ಕೆ ನೇರ ಅನುಪಾತದಲ್ಲಿರುತ್ತದೆ.
ವಿಭಾವಂತರ(v)
ವಿದ್ಯುತ್ಪ್ರವಾಹ I
V/I = R .... (1)
V= IR ..... (2)
I = V/R ...... (3)
ವಿದ್ಯುತ್ಪ್ರವಾಹದ ಪರಿಣಾಮಗಳು :
ಒಂದು ವಾಹಕದಲ್ಲಿ ವಿದ್ಯುತ ಹರಿಯುವಾಗ ಅದು
ವಿವಿಧ ಪರಿಣಾಮಗಳನ್ನು ಉಂಟುಮಾಡುತ್ತದೆ ಅವುಗಳೆಂದರೆ
1. ಕಾಂತೀಯ ಪರಿಣಾಮ
2. ರಸಾಯನಿಕ ಪರಿಣಾಮ
3. ಉಷ್ಣೋತ್ಪನ್ನ ಪರಿಣಾಮ
1. ವಿದ್ಯುತ್ಪ್ರವಾಹದ ಕಾಂತಿಯ ಪರಿಣಾಮ: ವಾಹಕದಲ್ಲಿ
ವಿದ್ಯುತ ಹರಿದಾಗ ವಾಹಕದ ಸುತ್ತಲು ಕಾಂತಕ್ಷೇತ್ರವುಂಟಾಗುತ್ತದೆ. ಇದನ್ನು ವಿದ್ಯುತ್ಪ್ರವಾಹದ ಕಾಂತೀಯ
ಪರಿಣಾಮ ಎನ್ನುವರು ಇದನ್ನು ಮೊದಲು ಪತ್ತೆ
ಹಚ್ಚಿದವರು ಹೆನ್ನಿ ಕ್ರಿಸ್ಟಿಯನ್ ಓಯಾರಸ್ಟೆಡ್
ಈ ಪರಿಣಾಮದ ಮೇಲೆ ರೂಪಗೊಂಡಿರುವ ಸಾಧನೆಗಳೆಂದರೆ
1. ವಿದ್ಯುತ ಮೋಟಾರ
2. ಡೈನಮೋ
3. ಗ್ಯಾಲ್ಪನೋಮೀಟರ
ಬಲಗೈ ಹಿಡಿತದ ನಿಯಮ :
ವಿದ್ಯುತ್ಪ್ರವಾಹವಿರುವ ತಂತಿಯನ್ನು ಬಲಗೈನಿಂದ
ಹಿಡಿದುಕೊಂಡಿದ್ದೇವೆಂದು ಭಾವಿಸಿಕೊಂಡಾಗ ಬಲಗೈನ ಹೆಬ್ಬರಳು ವಿದ್ಯುತ್ಪ್ರವಾಹದ ದಿಕ್ಕನ್ನು ತೋರಿಸಿದರೆ
ತಂತಿಯನ್ನು ಸುತ್ತಿರುವ ಇತರ ಬೆರಳುಗಳು ಕಾಂತಕ್ಷೇತ್ರದ ದಿಕ್ಕನ್ನು ಸೂಚಿಸುತ್ತವೆ.
ವಿದ್ಯುತ್ಪ್ರವಾಹದ ಉಷ್ಣೋತ್ಪಾದನ ಪರಿಣಾಮ :
ಒಂದು ವಾಹಕದಲ್ಲಿ ವಿದ್ಯುತಹರಿದಾಗ ಸ್ವಲ್ಪ
ವಿದ್ಯುಚ್ಛಕ್ತಿ ಉಷ್ಣು ಶಕ್ತಿಯಾಗಿ ಪರಿವರ್ತಿತವಾಗುತ್ತದೆ ಇದನ್ನು ವಿದ್ಯುತ್ಪ್ರವಾಹದ ಉಷ್ಣೋತ್ಪಾದನ
ಪರಿಣಾಮ ಎನ್ನುವರು.
ವಾಹಕದಲ್ಲಿ ವಿದ್ಯುತ ಹರಿಯುವಾಗ ವಸ್ತುವಿನ
ಕಣಗಳು ಇಲೆಕ್ಟ್ರನಗಳ ಚಲನೆಗೆ ಅಡ್ಡಿಯನ್ನುಂಟು ಮಾಡುತ್ತವೆ ಆಗ ವಿದ್ಯುತ್ ಉಷ್ಣಶಕ್ತಿಯಾಗಿ ಪರಿವರ್ತನೆಯಾಗುತ್ತದೆ.
ವಿದ್ಯುತ್ತಿನ ಉಷ್ಣೋತ್ಪಾದನ ಪರಿಣಾಮದಿಂದ ರೂಪಗೊಂಡಿರುವ ಸಾಧನಗಳೆಂದರೆ, ವಿದ್ಯುತ್ ಫ್ಯೂಸ್, ವಿದ್ಯುತ್
ಬಲ್ಬು, ವಿದ್ಯುತ ಇಸ್ತ್ರೀ ಪೆಟ್ಟಿಗೆ ವಿದ್ಯುತ್ ಹಿಟರ,
* ವಿದ್ಯುತ್ಪ್ರವಾಹದ ರಸಾಯನಿಕ ಪರಿಣಾಮ :
ದ್ರಾವಣ ಅಥವಾ ದ್ರಾವಿಸಿದ ಸ್ಥಿತಿಯಲ್ಲಿ ತಮ್ಮ
ಮೂಲಕ ವಿದ್ಯುತನ್ನು ಹರಿಯಲು ಬಿಡುವ ವಸ್ತುಗಳನ್ನು ವಿದ್ಯುದ್ವಭಾಜ್ಯಗಳು ಎನ್ನುವರು. ವಿದ್ಯುದ್ವಿಭಾಜ್ಯವೊಂದರ
ಮೂಲಕ ವಿದ್ಯುತ ಹಾಯಿಸಿದಾಗ ಅದರಲ್ಲಿರುವ ಧನ್ ಮತ್ತು ಋಣ ಆಯನಗಳು ಬೇರೆಯಾಗುತ್ತವೆ ಇದನ್ನು ವಿದ್ಯುತ್
ರಸಾಯನಿಕ ಪರಿಣಾಮ ಎನ್ನುವರು.
ಉದಾ : ಶುಷ್ಕಕೋಶಗಳು ವಿದ್ಯುದ್ವಿಭಾಜಗಳು
ವಿದ್ಯುತ್ಕಾಂತೀಯ ಪ್ರೇರಣೆ ಒಂದು ಮಂಡಲಕ್ಕೆ ಲಗತ್ತಾದ ಕಾಂತಕ್ಷೇತ್ರವು ಬದಲಾದರೆ ವಿದ್ಯುಚ್ಛಾಲಿಕ
ಬಲವು ಮಂಡಲದಲ್ಲಿ ಪ್ರೇರಿತವಾಗುತ್ತದೆ. ಈ ವಿದ್ಯಮಾನವನ್ನು ವಿದ್ಯುತ್ಕಾಂತೀಯ ಪ್ರೇರಣೆ ಎಂದು ಕರೆಯಲಾಗಿದೆ.
ಇದನ್ನು ಪೈಕಲ್ ಪ್ಯಾರಡೆಯವರು ಆವಿಷ್ಕರಿಸಿದರು.
ಪ್ರೇರಿತ ವಿದ್ಯುಚ್ಛಕ್ತಿ ಬಲದ ಮೇಲೆ ಪ್ರಭಾವ ಬೀರುವ ಅಂಶಗಳು :
1. ಸುರಳಿಗಳ ಸುತ್ತಗಳ ಸಂಖ್ಯೆ : ಸುರಳಿಗಳ
ಸೂತ್ರಗಳ ಸಂಖ್ಯೆ ಹೆಚ್ಚಾದಂತೆ ಪ್ರೇರಿತ ವಿದ್ಯುತ್ಪ್ರವಾಹ ಹೆಚ್ಚಾಗುತ್ತದೆ.
2. ಸುರಳಿಗೆ ಹೊಂದಿಕೊಂಡಿರುವ ಕಾಂತಕ್ಷೇತ್ರದ
ಬದಲಾವಣೆ ದರ ಹೆಚ್ಚಿದಂತೆ ವಿದ್ಯುಚಾಲಕ ಬಲ ಹೆಚ್ಚಾಗುತ್ತದೆ.
ಫ್ಯಾರಡೆಯ ವಿದ್ಯುತ್ಕಾಂತೀಯ ಪ್ರೇರಣೆ ನಿಯಮಗಳು:
1. ಒಂದನೇಯ ನಿಯಮ : ಒಂದು ವಾಹಕಕ್ಕೆ ಹೊಂದಿಕೊಂಡಿರುವ
ಹಾಗೂ ಬದಲಾಗುತ್ತಿರು ಕಾಂತಕ್ಷೇತ್ರವು ವಾಹಕದಲ್ಲಿ ವಿದ್ಯುಚ್ಛಾಲಕ ಬಲವನ್ನು ಪ್ರೇರಣೆ ಮಾಡುತ್ತದೆ.
2. ಎರಡನೇಯ ನಿಮಯ : ಪ್ರೇರಿತ ವಿದ್ಯುಚ್ಛಾಲಕ
ಬಲವು ವಾಹಕಕ್ಕೆ ಹೊಂದಿಕೊಂಡಿರುವ ಕಾಂತಕ್ಷೇತ್ರದ ಬದಲಾವಣೆಯ ದರಕ್ಕೆ ನೇರ ಅನುಪಾತದಲ್ಲಿರುತ್ತದೆ.
ಪ್ಲೆಮಿಂಗನ ಬಲಗೈ ನಿಯಮ : (ಡೈನೊಮೊ ನಿಯಮ)
ಬಲಗೈನ ಹೆಬ್ಬೆರಳು, ತೋರಬೆರಳು ಮತ್ತು ಮದ್ಯದ
ಬೆರಳು ಇವುಗಳನ್ನು ಪರಸ್ಪರ ಲಂಭವಾಗಿರುವಂತೆ ಹೊಂದಿಸಿದಾಗ ತೋರು ಬೆರಳು ಕಾಂತಕ್ಷೇತ್ರದ ದಿಕ್ಕನ್ನು
ಮದ್ಯದ ಬೆರಳು ವಿದ್ಯುಪ್ರವಾಹದ ದಿಕ್ಕನ್ನು ಸೂಚಿಸಿದರೆ, ಹೆಬ್ಬೆರಳು ವಾಹಕದ ಚಲನೆಯ ನೇರವನ್ನು ಸೂಚಿಸುತ್ತದೆ.
ಬಲಗೈ ನಿಯಮವು ವಿದ್ಯುತ್ತಪ್ರವಾಹದ ದಿಕ್ಕು, ಕಾಂತಕ್ಷೇತ್ರ ದಿಕ್ಕು ಮತ್ತು ಚಲನೆಯ ನೇರದ ದಿಕ್ಕು
ಇವಗಳ ಸಂಬಂಧವನ್ನು ತಿಳಿಸುತ್ತದೆ.
ಪ್ಲೆಮಿಂಗನ ಎಡಗೈ ನಿಯಮ
: ತೋರಬೆರಳು, ಮಧ್ಯದಬೆರಳು ಮತ್ತು ಹೆಬ್ಬೆರಳು ಪರಸ್ಪರ ಒಂದನೊಂದು ಲಂಬವಾಗಿ ಜೊಡಿಸಿದಾಗ ತೊರಬೆರಳು
ಕಾಂತಕ್ಷೇತ್ರದ ದಿಕ್ಕನ್ನು ಮಧ್ಯದ ಬೆರಳು ವಿದ್ಯುತ್ಪ್ರವಾಹದ ದಿಕ್ಕನ್ನು ಮತ್ತು ಹೆಬ್ಬೆರಳು ವಾಹಕದ
ಮೇಲೆ ಪ್ರಯೋಗವಾಗುತ್ತಿರುವ ಯಾಂತ್ರಿಕ ಬಲದ ನೇರವನ್ನು ಸೂಚಿಸುತ್ತದೆ.
* ಡೈನಮೋ: ಯಾಂತ್ರಿಕ ಶಕ್ತಿಯನ್ನು ವಿದ್ಯುತಶಕ್ತಿಯನ್ನಾಗಿ
ಪರಿವರ್ತಿಸುವ ಸಾಧನವೇ ಡೈನಮೋ ಇದು ಪ್ಲೋಮಿಂಗನ ಬಲಗೈ ನಿಯಮದ ಮೇಲೆ ರೂಪಿತವಾಗಿದೆ.
* ವಿದ್ಯುತ ಮೋಟಾರ : ವಿದ್ಯುತ ಶಕ್ತಿಯನ್ನು
ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಸಾದನವೇ ಮೋಟಾರ ಇದು ಪ್ಲೆಮಿಂಗನ ಎಡಗೈ ನಿಯಮದ ಮೇಲೆ ರೂಪಿತವಾಗಿದೆ.
ಎಸಿ ಮತ್ತು ಡಿ.ಸಿ. ವಿದ್ಯುತ್ತಪ್ರವಾಹಕ್ಕೆ ಇರುವ ವ್ಯತ್ಯಾಸಗಳು
ಎ.ಸಿ. ವಿದ್ಯುತ್ತಪ್ರವಾಹಕ/ ಡಿ.ಸಿ. ವಿದ್ಯುತ್ತಪ್ರವಾಹಕ
ಪ್ರತಿ ಅರ್ಧಸುತ್ತಿಗೆ ವಿದ್ಯುತ ತನ್ನ ದಿಕ್ಕನ್ನು
ಬದಲಿಸುತ್ತದೆ/ವಿದ್ಯುತ ನಿರಂತರವಾಗಿ ಒಂದೆ ದಿಕ್ಕಿನಲ್ಲಿ ಹರಿಯುತ್ತಿರುತ್ತದೆ.
ಎ.ಸಿ. ಡೈನಮೋದಿಂದ ಉತ್ಪತ್ತಿಯಾಗುತ್ತದೆ ಇದನ್ನು
ಬೃಹತ ಪ್ರಮಾಣದಲ್ಲಿ ಉತ್ಪಾದಿಸಬಹುದಾಗಿದೆ/ಡಿ.ಸಿ. ಡೈನಮೋದಿಂದ ಉತ್ಪಾದಿಸಲಾಗುತ್ತದೆ ಇದನ್ನು ಅಲ್ಪ
ಪ್ರಮಾಣದಲ್ಲಿ ಪಡೆಯಬಹುದಾಗಿದೆ
ಎ.ಸಿ. ಮತ್ತು ಡಿ.ಸಿ. ಡೈನಮೋಗಳಿಗಿರುವ ವ್ಯತ್ಯಾಸಗಳು
ಎ.ಸಿ. ಡೈನಮೋ/ಡಿ.ಸಿ. ಡೈನಮೋ
ಪರ್ಯಾಯ ವಿದ್ಯುತನ್ನು ಉತ್ಪಾದಿಸುತ್ತದೆ/ನೇರ
ವಿದ್ಯುತನ್ನು ಉತ್ಪಾದಿಸುತ್ತದೆ
ತಾಮೃದ ಪೂರ್ಣ ಉಂಗರುಗಳನ್ನು ಒಳಗೊಂಡಿದೆ/ತಾಮ್ರದ
ಒಡಕು ಉಂಗರುಗಳನ್ನು ಒಳಗೊಂಡಿದೆ
ತಾಮೃದ ಪೂರ್ಣ ಉಂಗರ ಮತ್ತು ಕಾರ್ಬನಗಳ ಸ್ಥಾನ
ಬದಲಾಗುವುದಿಲ್ಲ/ತಾಮ್ರದ ಉಂಗರು ಮತ್ತು ಕಾರ್ಬನ ಬ್ರಶಗಳ ಸ್ಥಾನ ಪ್ರತಿ ಅರ್ಧಸುತ್ತಿಗೊಮ್ಮ ಬದಲಾಗುತ್ತದೆ
ಡೈನಮೋ ಮತ್ತು ಮೋಟಾರಗಳಿಗಿರುವ ವ್ಯತ್ಯಾಸ
ಡೈನಮೋ/ಮೋಟಾರು
1.ಯಾಂತ್ರಿಕ ಶಕ್ತಿಯನ್ನು ವಿದ್ಯುಚಕ್ತಿಯನ್ನಾಗಿ
ಪರಿವರ್ತಿಸುವ ಸಾಧನ/ವಿದ್ಯುತಚ್ಛಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ
2.ವಿದ್ಯುತ ಉತ್ಪಾದಿಸುವ ಸಾಧನ/ವಿದ್ಯುತ ಬಳಸುವ
ಸಾಧಾನ
3.ಪ್ಲೆಮಿಂಗನ ಬಲಗೈ ನಿಯಮದ ಮೇಲೆ ಕಾರ್ಯಮಾಡುವ
ಸಾಧನವಾಗಿದೆ/ಪ್ಲೇಮಿಂಗನ ಎಡಗೈ ನಿಯಮದ ಮೇಲೆ ಕಾರ್ಯ ಮಾಡುವ ಸಾಧನವಾಗಿದೆ
4.ಹೊರ ಮಂಡಲದಲ್ಲಿ ವಿದ್ಯುತ ಬಲ್ಬು ಹೊಂದಿದೆ/ಹೊರಮಂಡಲದಲ್ಲಿ
ವಿದ್ಯುತ ಕೋಶವನ್ನು ಹೊಂದಿದೆ
ವಿದ್ಯುತ ಮೋಟಾರ ಬಳಸುವ ಸಾಧನಗಳು :
ವಿದ್ಯುತ ಬೀಸಣಿಕೆ, ವಿದ್ಯುತಚಾಲಿತ ರೈಲು,
ಟೇಪರೀಕಾರ್ಡರ, ಮಿಕ್ಸರಗ್ರೈಂಡರ್, ವಿದ್ಯುತ್ ಕ್ರೇನಗಳು, ಬಟ್ಟೆ ಗಿರಣಿಗಳು ಇತ್ಯಾದಿ
ಶುಷ್ಕಕೋಶ :- ರಸಾಯನಿಕ
ಶಕ್ತಿಯನ್ನು ವಿದ್ಯುತಶಕ್ತಿಯನ್ನಾಗಿ ಪರಿವರ್ತಿಸುವ ಸಾಧನವೇ ಶುಷ್ಕಕೋಶ. ಇಲ್ಲಿ ಗ್ರಾಪೈಟ ದಂಡವು
ಧನ ತುದಿಯಾಗಿ ಮತ್ತು ಸುತ್ತುವಿನ ಡಬ್ಬಿಯು ಋಣತುದಿಯಾಗಿ ಕಾರ್ಯ ಮಾಡುತ್ತದೆ.
ವಿಕಿರಣ
ಚಲನೆಯಲ್ಲಿರುವ ಶಕ್ತಿಯನ್ನು ವಿಕಿರಣ ಎನ್ನುವರು,
ವಿಕಿರಣಗಳು ಅಲೆಗಳ ರೂಪದಲ್ಲಿ ಚಲಿಸುತ್ತವೆ ಇವು ಬೆಳಕಿನ ವೇಗದಲ್ಲಿ ಚಲಿಸುತ್ತವೆ. ಇವು ನಿರ್ವಾತ
ಪ್ರದೇಶದಲ್ಲಿ ಕೂಡಾ ಚಲಿಸಬಲ್ಲವು.
ಉದಾ: ಬೆಳಕು, ನೆರಳಾತೀತ ಕಿರಣಗಳು ಇತ್ಯಾದಿ
ವಿದ್ಯುತ್ಕಾಂತೀಯ ವಿಕಿರಣಗಳು :
ಕಾಂತ ಕ್ಷೇತ್ರ ಮತ್ತು ವಿದ್ಯುತ ಕ್ಷೇತ್ರ
ಎರಡನ್ನು ಹೊಂದಿರುವ ವಿಕಿರಣಗಳನ್ನು ವಿದ್ಯುತ್ಕಾಂತಿಯ ವಿಕಿರಣ ಎನ್ನುವರು. ವಿದ್ಯುತ್ಕಾಂತೀಯ ತರಂಗದಲ್ಲಿ
ಬದಲಾಗುತ್ತಿರುವ ವಿದ್ಯುತಕ್ಷೇತ್ರ ಕಾಂತ ಕ್ಷೇತ್ರಗಳು ಅವು ಪ್ರಸರಣವಾಗುತ್ತಿರುವ ತರಂಗದ ಪ್ರಸರಣದ
ದಿಕ್ಕಿಗೆ ಪರಸ್ಪರ ಒಂದಕ್ಕೊಂದು ಲಂಬವಾಗಿವೆ.
ಜೇಮ್ಸ ಕ್ಲಾರ್ಕ ಮ್ಯಾಕ್ಸೆವೆಲ್ ರವರು ವಿದ್ಯುತ್ಕಾಂತೀಯ
ತರಂಗಗಳು ಅಡ್ಡ ತರಂಗಗಳಾಗಿವೆ ಅಲ್ಲದೆ ಅವು ಬೆಳಕಿನ ವೇಗದಲ್ಲಿ ಚಲಿಸುತ್ತವೆ ಎಂದು ತೋರಿಸಿಕೊಟ್ಟರು
ಹೆನ್ನಿಕ ಹಟ್ರ್ಸ
: ಇವರ 1887 ರಲ್ಲಿ ಸುಮಾರು 10 ಮಿ. ತರಂಗ ದೂರವನ್ನು ಹೊಂದಿರುವ ವಿದ್ಯತ್ಕಾಂತೀಯ ಅಲೆಗಳನ್ನು ಉತ್ಪಾದಿಸಿದರು.
ವಿದ್ಯುತ್ಕಾಂತೀಯ ತರಂಗದ ಗುಣ ಲಕ್ಷಣಗಳು
* ಅಡ್ಡತರಂಗಗಳು
* ಕಾಂತಕ್ಷೇತ್ರ ಮತ್ತು ವಿದ್ಯುತಕ್ಷೇತ್ರಗಳನ್ನು
ಹೊಂದಿದೆ ಇವು ಪರಸ್ಪರ ಒಂದಕ್ಕೊಂದು ಲಂಬವಾಗಿವೆ
* ಇವು ಪ್ರತಿಫಲನ ವಕ್ರಿಭವನ, ವ್ಯತಿಕರಣ,
ವಿವರ್ತನೆ ಮುಂತಾದ ಲಕ್ಷಣಗಳನ್ನು ತೋರಿಸುತ್ತವೆ.
* ಇವುಗಳ ಆವೃತಿ ಮತ್ತು ತರಂಗ ದೂರವನ್ನು ಅ
ಜಿ ಎಂಬ ಸೂತ್ರದಿಂದ ಪಡೆಯಬಹುದು
* ಇವು ನಿರ್ವಾತ ಪ್ರದೇಶದಲ್ಲಿ ಚಲಿಸುವಂತಹ
ಶಕ್ತಿಯನ್ನು ಹೊಂದಿವೆ.
* ವಿದ್ಯುತ್ಕಾಂತೀಯ ವಿಕಿರಣಗಳ ಆವೃತ್ತಿಗಳ
ಬಿನ್ನತೆಯ ಪರಿಣಾಮವಾಗಿ ಅವುಗಳ ಗುಣಗಳಲ್ಲೂ ಬಿನ್ನತೆ ಕಂಡು ಬರುತ್ತವೆ.
ವಿದ್ಯುತ್ಕಾಂತೀಯ ರೋಹೀತ
“ವಿದ್ಯುತ್ಕಾಂತೀಯ ತರಂಗಗಳ ಗುಂಪಿಗೆ ವಿದ್ಯುತ್ಕಾಂತೀಯ ರೋಹಿತ
ಎನ್ನುವರು”ರೇಡಿಯೋ ತರಂಗ, ಸೂಕ್ಷ್ಮ ತರಂಗ, ಅವಕೆಂಪು, ವಿಕಿರಣಗಳ ಗೋಚರ
ಬೇಕು ನೆರಳಾತಿತ ವಿಕಿರಣಗಳು ಕ್ಷ-ಕಿರಣ, ಗ್ಯಾಮಕಿರಣ, ಇವೆಲ್ಲಾ ವಿದ್ಯುತ್ಕಾಂತೀಯ ರೋಹಿತದ ಘಟಕಗಳಾಗಿವೆ.
ವಿದ್ಯುತ್ಕಾಂತೀಯ ತರಂಗಗಳ ಆವೃತ್ತಿ ಮತ್ತು ತರಂಗ ದೂರ :
ತರಂಗದೂರ :- ಒಂದು ಅಲೆಯ ಎರಡು ಒಬ್ಬ ಅಥವಾ
ಎರಡು ತಗ್ಗುಗಳ ನಡುವಿನ ಅಂತರವನ್ನು ತರಂಗ ದೂರ ಎನ್ನುತ್ತಾರೆ. ವಿದ್ಯುತ್ಕಾಂತೀಯ ತರಂಗ ದೂರದ ವ್ಯಾಪ್ತಿಯು
10-15ಮಿ ನಿಂದ 100 ಕಿ.ಮೀ.ರವರೆಗೆ ಹೊಂದಿದೆ.
ತರಂಗದ ಆವೃತ್ತಿ :
ಒಂದು ನಿರ್ದಿಷ್ಟ ಬಿಂದುವಿನ ಮೂಲಕ ಒಂದು ಎಕಮಾನ ಕಾಲದಲ್ಲಿ ಹಾದು ಹೋಗುವ ಅಲೆಗಳ ಸಂಖ್ಯೆಗೆ ಆವೃತ್ತಿ
ಎನ್ನುವರು ಇದನ್ನು ಹಡ್ರ್ಸ ಮತ್ತು ಗಳಲ್ಲಿ ಅಳೆಯಲಾಗುತ್ತದೆ.
ರೇಡಿಯೋ ತರಂಗಳು :
ರೇಡಿಯೋ ಮತ್ತು ದೂರದರ್ಶನಗಳಲ್ಲಿ ಇವುಗಳನ್ನು
ಬಳಸುವುದರಿಂದ ಈ ತರಂಗಗಳಿಗೆ ರೇಡಿಯೋ ತರಂಗಗಳು ಎನ್ನುವರು
ಉಪಯೋಗ :
* ಸಂಪರ್ಕ ವ್ಯವಸ್ಥೆಯಲ್ಲಿ
* ಉಪಗ್ರಹ ವ್ಯವಸ್ಥೆಯಲ್ಲಿ
* ರೇಡಾರಗಳಲ್ಲಿ
* ಟಿ.ವಿ. ಪ್ರಸಾರಗಳಲ್ಲಿ
* ರೇಡಿಯೋ ಪ್ರಸಾರ ಕಾರ್ಯದಲ್ಲಿ
ಸೂಕ್ಷ್ಮ ತರಂಗಗಳ ಉಪಯೋಗ
* ರಡಾರಗಳಲ್ಲಿ ಬಳಸುತ್ತಾರೆ
* ಸೂಕ್ಷ್ಮ ತರಂಗ ಬಲೆಗಳಲ್ಲಿ
* ಉಪಗ್ರಹ ವ್ಯವಸ್ಥೆಯಲ್ಲಿ ಅವಕೆಂಪು ವಿಕಿರಣಗಳ
ಉಪಯೋಗ ಈ ವಿಕಿರಣಗಳನ್ನು ಉಷ್ಣ ಪರಿಣಾಮದಿಂದಾಗಿ 1800 ರಲ್ಲಿ ಹರ್ಷಲ್ ಪತ್ತೆ ಮಾಡಿದನು
* ಸಂಯುಕ್ತ ವಸ್ತುವಿನ ಅಣುರಚನೆಯನ್ನು ತಿಳಿಯಲು
* ದೂರವೈಪಿ ಬಿಂಬಗ್ರಹಣದಲ್ಲಿ
* ಶತ್ರ ಶಿಬಿರಗಳನ್ನು ಪತ್ತೆ ಹಚ್ಚಲು
* ಪುರಾತನ ವರ್ಣಚಿತ್ರಗಳನ್ನು ಪರೀಕ್ಷಿಸಲು
ಮತ್ತು ಅವುಗಳ ನಕಲು ಮಾಡಿದ್ದಲ್ಲಿ ಪತ್ತೆ ಮಾಡಲು
* ಮೇಲ್ಮೈ ಊತ ಮೂಳೆಗಳ ಸ್ಥಾನಪಲ್ಲಟ ಮತ್ತು
ಉಳಿಕಿನ ಚಿಕಿತ್ಸೆ ಉಪಯೋಗಿಸುತ್ತಾರೆ.
* ರಕ್ತ ಪರಿಚಲನೆಯನ್ನು ಚೋದಿಸುಲು
* ಟಿ.ವಿ. ರಿಮೋಟಗಳಲ್ಲಿ ಬಳಕೆ
ಧೃಗ್ಗೋಚರ ಬೆಳಕು :
ಗೋಚರ ಬೆಳಕಿನ ಸ್ವಾಭಾವಿಕ ಮೂಲ ಸೂರ್ಯ
ಉಪಯೋಗಗಳು :
* ಸಸ್ಯಗಳ ದ್ಯುತಿ ಸಂಶ್ಲೇಷಣೆಯ ಮೂಲಕ ಆಹಾರ
ಉತ್ಪಾದಿಸಲು ಪೋಟೋಗ್ರಾಪಿಯಲ್ಲಿ
* ದೂರದರ್ಶಕದ ಮೂಲಕ ದೂರದ ವಸ್ತುಗಳನ್ನು ನೋಡಲು
ಕ್ಷ-ಕಿರಣಗಳು
ಇದನ್ನು 1895ರಲ್ಲಿ ಜರ್ಮನ ವಿಜ್ಞಾನಿ ವಿಲಿಯಮ
ರಾಂಟಜನ್ ಆವಿಷ್ಕಾರ ಮಾಡಿದ್ದಾನೆ.
ಉಪಯೋಗಗಳು :
1. ಮೂಳೆ ಮಂತ್ರವನ್ನು ಗುರುತಿಸಲು
2. ಮಾನವನ ಶರೀರದಲ್ಲಿರುವ ಲೋಹದ ವಸ್ತುಗಳನ್ನು
ಗುರುತಿಸಲು
3. ಕ್ಯಾನ್ಸರ ಮತ್ತು ಚರ್ಮರೋಗಗಳ ಚಿಕಿತ್ಸೆಯಲ್ಲಿ
4. ಹರಳುಗಳ ರಚನೆಯನ್ನು ಅಧ್ಯಯನ ಮಾಡಲು
ನೇರಳಾತೀತ ವಿಕಿರಣಗಳು :
ನೇರಳಾತೀತ ವಿಕಿರಣಗಳನ್ನು ಫೋಟೋಗ್ರಾಫಿಕ ಕ್ರಿಯೆಯಿಂದಾಗಿ
ಜೆ.ಡಬ್ಲೂ. ರಿಟ್ಟರ್ ಎಂಬ ವಿಜ್ಞಾನಿ 1801ರಲ್ಲಿ ಆವಿಷ್ಕರಿಸಿದನು.
ಉಪಯೋಗಗಳು :
* ರಸಾಯನಿಕ ಕ್ರಿಯೆಗಳನ್ನು ಪಟುಗೊಳಿಸುತ್ತದೆ
* ಪ್ರತಿ ದೀಪ್ತಿಯನ್ನು ಪ್ರಚೋದಿಸುತ್ತದೆ
* ಕೃತಕ ರತ್ನಗಳು ಮತ್ತು ನೈಸರ್ಗಿಕ ರತ್ನಗಳನ್ನು
ಗುರುತಿಸಲು ಉಪಯೋಗಿಸುತ್ತಾರೆ.
* ಸುಕ್ಷ್ಮಾಣು ಜೀವಿಗಳ ಕೊಲ್ಲಲು ಮಂಧ್ಯಕಾರಕವಾಗಿ
ಬೆಳೆಸುತ್ತಾರೆ.
* ರಿರೆಟ್ಸ ಮೂಳೆ ಚರ್ಮರೋಗಗಳ ಚಿಕಿತ್ಸೆಯಲ್ಲಿ
ಬಳಕೆ
* ದ್ಯುತಿ ವಿದ್ಯುತ್ ಎಚ್ಚರಿಕೆ ಘಂಟೆಗಳಲ್ಲಿ
ಬಳಸುತ್ತಾರೆ.
ಗಾಮಾ ವಿಕಿರಣಗಳು:-
ವಿಕಿರಣ ಪಟುತ್ವ ದಾತುಗಳಿಂದ ಉತ್ಸರ್ಜಿತವಾದ ವಿಕಿರಣಗಳಲ್ಲಿ ಗಾಮಾವಿಕಿರಣಗಳು ಪ್ರಥಮ ಬಾರಿಗೆ ಅವಿಷ್ಕರಿಸಲ್ಪಟ್ಟವು.
ಉಪಯೋಗಗಳು :
* ಕಾನ್ಸರರೋಗದ ಚಿಕಿತ್ಸೆಯಲ್ಲಿ
* ರಾಸಾಯನಿಕಗಳ ತಯಾರಿಕೆಗೆ ಕ್ರಿಯಾವರ್ದಕಗಳಾಗಿ
* ದ್ಯುತಿ-ವಿದ್ಯುತ ಪರಿಣಾಮದಲ್ಲಿ
* ರೇಡಿಯೋ ಗ್ರಾಫೀಯಲ್ಲಿ ಬಳಸುತ್ತಾರೆ
ಕ್ವಾಟ್ಟಂ ಸಿದ್ಧಾಂತ :
ಕಪ್ಪು ವಸ್ತುಗಳ ವಿಕಿರಣದ ಬಗ್ಗೆ ವಿವರಿಸಿದ
ಸಿದ್ಧಾಂತವನ್ನು ಕ್ವಾಟ್ಟಂ ಸಿದ್ದಾಂತ ಎನ್ನುತ್ತೇವೆ ಇದನ್ನು 1900 ರಲ್ಲಿ ಮ್ಯಾಕ್ಸ ಪ್ಲಾಂಕ ವಿವರಿಸಿದರು.
ಕ್ವಾಟಂದ ಶಕ್ತಿಯನ್ನು E=hv ಎಂಬ ಸೂತ್ರದಿಂದ ಕಂಡುಹಿಡಿಯಬಹುದು.
E = ಶಕ್ತಿ
ಒಂದು ಕ್ವಾಂಟದಲ್ಲಿರುವ ಶಕ್ತಿ ಪ್ಲಾಂಕನ ಸ್ಥಿರ
ಸಂS್ಯÉ = h 6.6261034 js
ವಿಕಿರಣದ ಅವರ್ತ
ದ್ಯುತಿ ವಿದ್ಯುತ ಪರಿಣಾಮ
: ಕೆಲವು ವಸ್ತುಗಳ ಮೇಲೆ ಬೆಳಕುಬಿದ್ದಾಗ ಅವು ಎಲೆಕ್ಟ್ರಾನಗಳನ್ನು ಉತ್ಸರ್ಜಿಸುತ್ತವೆ, ಬೆಳಕಿನ ಈ
ವರ್ತನೆಯಿಂದ ಎಲೆಕ್ಟ್ರಾನಗಳ ಉತ್ಸರ್ಜಿಸುವದನ್ನು ದ್ಯುತಿ ವಿದ್ಯುತ ಪರಿಣಾಮ ಎನ್ನುವರು. ಉತ್ಸರ್ಜಿತವಾದ
ಎಲೆಕ್ಟ್ರಾನಗಳನ್ನು ದ್ಯುತಿ ಎಲೆಕ್ಟ್ರಾನಗಳೆಂದು ಕರೆಯುವರು. ಎಲೆಕ್ಟ್ರಾನಗಳು ಹೊರತೆಗೆಯಲು ವಿಕಿರಣಕ್ಕೆ
ಬೇಕಾದ ಕನಿಷ್ಟ ಶಕ್ತಿಯನ್ನು ನಿರ್ಣಾಯಕ ಆವೃತ್ತಿ ಎನ್ನುತ್ತಾರೆ.
ದ್ಯುತಿಕೋಶ :
ದ್ಯುತಿ ವಿದ್ಯತ ಪರಿಣಾಮದ ಅನ್ವಯ ಈ ಸಾಧನವು
ಕಾರ್ಯ ಮಾಡಲ್ಪಡುತ್ತದೆ ಇದು ಬೆಳಕಿನ ಶಕ್ತಿಯನ್ನು ವಿದ್ಯುತಶಕ್ತಿಯನ್ನಾಗಿ ಪರಿವರ್ತಿಸುತ್ತದೆ.
ದ್ಯುತಿಕೋಶದ ಅನ್ವಯಗಳು :
* ಚಲನಚಿತ್ರಗಳಲ್ಲಿ ಶಬ್ದದ ಪುನರತ್ಪತ್ತಿಗಾಗಿ
* ಬೀದಿ ದೀಪದಾಳಲ್ಲಿ
* ನೋಟ ಎಣಿಸುವ ಕಾರ್ಯದಲ್ಲಿ
* ಕಳ್ಳತನ ಎಚ್ಚರಿಕೆ ಗಂಟೆಗಳಲ್ಲಿ
* ದೂರದರ್ಶನ ಪ್ರಸಾರದಲ್ಲಿ
ಲೇಸರ :
ವಿಕಿರಣದ ಚೋದಿತ ಉತ್ಸರ್ಜನೆಯಿಂದ ಬೆಳಕಿನ
ವರ್ದನೆಗೆ ಲೆಸರ ಎನ್ನುವರು ಇದು ಎಕವರ್ಣಿಯ ಬೆಳಕಿನ ಅತಿ ತಿವೃ ಕಿರಣ ಪುಂಜವನ್ನು ಉತ್ಪಾದಿಸುವ ಸಾಧನ
ಲೇಸರ ಬೆಳಕಿನ ಲಕ್ಷಣಗಳು
* ಎಕವರ್ಣಿಯ ಇದು ಒಂದೆ ಬಣ್ಣದಿಂದ ಕೂಡಿದೆ
* ಲೇಸರ ಬೆಳಕು ಒಂದೇ ನಿರ್ದಿಷ್ಟ ದಿಕ್ಕಿನಲ್ಲಿ
ಚಲಿಸುತ್ತದೆ
* ಲೇಸರ ಬೆಳಕು ಅಧಿಕ ತೀವ್ರವಾಗಿರುತ್ತದೆ
* ಲೇಸರ ಬೆಳಕು ಸಂಸಕ್ತವಾಗಿರುತ್ತದೆ
ಲೇಸರನ ಉಪಯೋಗಗಳು :
1. ಲೇಸರ ರೇಂಜಿಂಗನಲ್ಲಿ ಇದರಿಂದ ವಸ್ತುಗಳ
ನಿರ್ದಿಷ್ಟ ದೂರವನ್ನು ಕಂಡುಹಿಡಿಯಬಹುದು
2. ವಸ್ತುವಿನ ಅಗುರಚನೆಯನ್ನು ತಿಳಿಯಲು, ಲೇಸರ
ರಾಮನ್ ರೋಹಿತದ ಬಳಕೆ
3. ಲೇಸರ ದ್ಯುತಿಶಸ್ತ್ರ ಚಿಕಿತ್ಸೆಯಲ್ಲಿ
4. ದಂತ ಕ್ಷಿಯ ಮತ್ತು ಚರ್ಮರೋಗಗಳ ಚಿಕಿತ್ಸೆಗಾಗಿ
5. ಆಪ್ಟಿಕಲ್ ಪೈಬರ ಕೇಬಲಗಳಲ್ಲಿ
6. ವಾತಾವರಣದಲ್ಲಿ ಮಾಲಿನ್ಯಕಾರಕಗಳನ್ನು ಅಳೆಯಲು
7. ಹಾಲೋಗ್ರಫಿ ಮತ್ತು ಅದರ ಅನ್ವಯದಲ್ಲಿ
ಲೇಸರ ಬೆಳಕು ಮತ್ತು ಸಾಮಾನ್ಯ ಬೆಳಕಿನ ವ್ಯತ್ಯಾಸಗಳು
ಲೇಸರ ಬೆಳಕು ಸಾಮಾನ್ಯ ಬೆಳಕು ಚದರುವದಿಲ್ಲ
ಒಂದೇ ನಿರ್ದಿಷ್ಟ ದಿಕ್ಕಿನಲ್ಲಿ ಚಲಿಸುವುದು
ಚದುರುವಿಕೆ ಉಂಟಾಗುತ್ತದೆ
ಇದು ಎಕವರ್ಣಿಯ ಬಹುವರ್ಣಿಯ
ಲೇಸರ ಬೆಳಕು ಅಧಿಕ ತೀವೃತೆಯನ್ನು ಹೊಂದಿರುತ್ತದೆ
ಲೇಸರನಷ್ಟು ತಿವೃತೆಯನ್ನು ಹೊಂದಿರುವುದಿಲ್ಲ
ಲೇಸರ ಬೆಳಕು ಸಂಸಕ್ತವಾಗಿದೆ
ಸಾಮಾನ್ಯ ಬೆಳಕು ಅಸಂಸಕ್ತವಾಗಿದೆ