2. ಆಹಾರ ಮತ್ತು ನೀರು
* ಜೀವಿಗಳು ಚಟುವಟಿಕೆಯಿಂದಿರಲು ಮತ್ತು ಕೆಲಸ ಮಾಡಲು ಶಕ್ತಿ ಅವಶ್ಯಕತೆ ಇದೆ.
* ಜೀವಿಗಳು ಕೆಲಸ ಮಾಡಲು ಶಕ್ತಿಯನ್ನು ಆಹಾರ ದಿಂದ ಪಡೆಯುತ್ತವೆ.
* ಕೆಲಸ ಮಾಡಲು ಬೇಕಾಗುವ ಸಾಮಥ್ರ್ಯವೆ ಶಕ್ತಿ.
* ಜೀವಿಗಳ ಶರೀರವನ್ನು ಪೋಷಿಸಲು ಅಗತ್ಯವಾದ ರಾಸಾಯನಿಕ ಅಂಶಗಳನ್ನು ಹೊಂದಿರುವ ವಸ್ತುಗಳಿಗೆ ಆಹಾರ ಎನ್ನುತ್ತಾರೆ.
ಪೋಷಕಾಂಶಗಳು:-
* ಎಲ್ಲಾ ಜೀವಿಗಳು ಜೀವಕೋಶ ಎಂಬ ಮೂಲ ಘಟಕದಿಂದಾಗಿದೆ. ಜೀವಕೋಶವು ಅನೇಕ ಸಾವಯವ ಸಂಯುಕ್ತಗಳನ್ನು ಹೊಂದಿದ್ದು, ಈ ಎಲ್ಲಾ ಸಂಯುಕ್ತಗಳು ಅನೇಕ ಮೂಲ ವಸ್ತುಗಳಿಂದ ಮಾಡಲ್ಪಟ್ಟಿವೆ. ಈ ಮೂಲ ವಸ್ತುಗಳನ್ನು ಪೋಷಕಾಂಶ ಗಳನ್ನುವರು.
* ಪೋಷಕಾಂಶಗಳಲ್ಲಿ ಎರಡು ವಿಧಗಳು:-
1) ಬೃಹತ್ ಪೋಷಕಾಂಶಗಳು :- ನಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅವಶ್ಯಕವಿರುವ ಪೋಷಕಾಂಶಗಳು
ಉದಾ:- ಕಾರ್ಬನ್, ಹೈಡ್ರೋಜನ್, ನೈಟ್ರೋಜನ್, ಆಕ್ಸಿಜನ್, ಕ್ಯಾಲ್ಸಿಯಮ್, ಪೋಟ್ಯಾಸಿಯಮ್, ರಂಜಕ, ಗಂಧಕ
2) ಸೂಕ್ಷ್ಮ (ಕಿರು) ಪೋಷಕಾಂಶಗಳು:- ನಮ್ಮ ದೇಹಕ್ಕೆ ಕಡಿಮೆ ಪ್ರಮಾಣದಲ್ಲಿ ಅವಶ್ಯ ಇರುವ ಪ್ರೋಷಕಾಂಶಗಳು
ಉದಾ:- ಕಬ್ಬಿಣ, ಸತು, ಕ್ಲೋರಿನ್, ಮ್ಯಾಂಗನೀಸ್, ತಾಮ್ರ,ಬೋರಾನ್
* ಆರೋಗ್ಯ ಎಂದರೆ ಯಾವ ರೀತಿಯ ನೋವು ಭಾದೆಗಳಿಲ್ಲದ ದೇಹ ಸ್ಥಿತಿ (ಡಬ್ಲೂ.ಎಚ್.ಓ)
ಆಹಾರ ಘಟಕಗಳು:-
ಆಹಾರ ಘಟಕಗಳನ್ನು ಅವುಗಳ ಕಾರ್ಯಗಳಿಗೆ ಅನುಗುಣವಾಗಿ ಮೂರು ಗುಂಪುಗಳಾಗಿ ವಿಂಗಡಿಸಿದ್ದಾರೆ.
ಅ) ಶಕ್ತಿ ಉತ್ಪಾದಕಗಳು :- ಕಾರ್ಬೋಹೈಡ್ರೋಟ್‍ಗಳು & ಲಿಪಿಡ್‍ಗಳು ಮುಖ್ಯ ಶಕ್ತಿ ಉತ್ಪಾದಕಗಳು
ಬ) ದೇಹ ನಿರ್ಮಾಣಕಾರಕಗಳು:- ಪ್ರೋಟಿನ್‍ಗಳು, ಖನಿಜಗಳು & ನೀರು ಪ್ರಮುಖ ಪೋಷಕಾಂಶಗಳು
ಕ) ನಿಯಂತ್ರಕಗಳು :- ಜೀವಸತ್ವ (Vitamins) & ಖನಿಜಗಳು ಇವು ಜೀವಿಯ ಜೈವಿಕ ಚಟುವಟಿಕೆಗಳನ್ನು ಸುಸಂಘಟಿತವಾಗಿ ನಿಯಂತ್ರಿಸುವುವು.
* ಬಾಹ್ಯಾಕಾಶ ಯಾತ್ರಿಗಳು ಭೂಮಿಯ ಮೇಲೆ ಇರುವಾಗ ಬೇಕಾಗುವ ಶಕ್ತಿಗಿಂತ ಬಾಹ್ಯಾಕಾಶದಲ್ಲಿ ಹೆಚ್ಚು ಶಕ್ತಿ ಬೇಕಾಗುತ್ತದೆ. ಅವರಿಗೆ ಪ್ರತಿದಿನ 12,500 ಕ್ಯಾಲರಿ ಶಕ್ತಿ ಆಹಾರದೊಂದಿಗೆ ದೊರೆಯುವದು ಅಗತ್ಯ.
ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು (ಆಹಾರ ಘಟಕಗಳು)
1) ಕಾರ್ಬೋಹೈಡ್ರೇಟ್‍ಗಳು
2) ಲಿಪಿಡ್‍ಗಳು
3) ಪ್ರೋಟಿನ್‍ಗಳು
4) ಜೀವಸತ್ವಗಳು
5) ಖನಿಜಗಳು
6) ನೀರು
7) ನಾರು ಪದಾರ್ಥಗಳು
* ಆಹಾರ ಘಟಕಗಳಾದ ಕಾರ್ಬೋಹೈಡ್ರೇಟ್ಸ್, ಪ್ರೋಟಿನ್, ಕೊಬ್ಬು ಹಾಗೂ ವಿಟಮಿನ್‍ಗಳು, ಲವಣಗಳು, ನಾರುಗಳು ಸೂಕ್ತ ಪ್ರಮಾಣದಲ್ಲಿರುವ ಆಹಾರವೇ ಸಮತೋಲನ ಆಹಾರ
ಕಾರ್ಬೋಹೈಡ್ರೇಟ್ (Carbohydrates))
* ಕಾರ್ಬೋಹೈಡ್ರೇಟ್‍ಗಳನ್ನು ಶರ್ಕರ ಪಿಷ್ಟಗಳೆನ್ನುವರು ಇವು ಆಹಾರದ ಪ್ರಮುಖ ಘಟಕಗಳಾಗಿವೆ.
*ಕಾರ್ಬೋಹೈಡ್ರೇಟ್‍ಗಳು ಇಂಗಾಲ, ಜಲಜನಕ ಹಾಗೂ ಆಮ್ಲಜನಕಗಳೆಂಬ ಮೂರು ವಸ್ತುಗಳಿಂದ ಮಾಡಲ್ಪಟ್ಟಿದ್ದು, ಹೈಡ್ರೋಜನ್ ಮತ್ತು ಆಕ್ಸಿಜನ್‍ಗಳನ್ನು 2:1 ರ ಪ್ರಮಾಣದಲ್ಲಿ ಹೊಂದಿರುವ ಆರ್ಗಾನಿಕ್ ಸಂಯುಕ್ತಗಳು. ಆದುದ್ದರಿಂದ ಇವು CHO ಗುಂಪನ್ನು ಹೊಂದಿವೆ.
* ಇವು ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ದೊರೆಯುವ ಬೃಹತ್ ಪೋಷಕಾಂಶಗಳು ಇವು ಒಬ್ಬ ಸಾಮಾನ್ಯ ಮಧ್ಯಮಯಸ್ಸಿನ ವ್ಯಕ್ತಿಯ ಶೇ 70% ರಿಂದ 80% ರಷ್ಟು ಶಕ್ತಿಯ ಅವಶ್ಯಕತೆಯನ್ನು ಪೂರೈಸುತ್ತದೆ.
* ಸಾಮಾನ್ಯ ಅಣುಸೂತ್ರ : Cn(H₂O)n, n = ಕಾರ್ಬನ್ ಪರಮಾಣುಗಳ ಸಂಖ್ಯೆ
* ನಮ್ಮ ಶರೀರದಲ್ಲಿ ಉತ್ಪತ್ತಿಯಾಗುವ ಶಕ್ತಿಯ ಹೆಚ್ಚಿನ ಪ್ರಮಾಣ ಕಾರ್ಬೋಹೈಡ್ರೇಟ್‍ಗಳ ಉತ್ಕರ್ಷಣೆ ಕ್ರಿಯೆ ಗಳಿಂದಾಗಿರುತ್ತದೆ.
ಉದಾ: 1 gm ನಷ್ಟು ಕಾಬೋಹೈಡ್ರೇಟ್ 1.7 KJ ಗಳಷ್ಟು ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ.
* ನಾವು ಸೇವಿಸುವ ಆಹಾರದಲ್ಲಿ ಎರಡು ಬಗೆಯ ಕಾರ್ಬೋಹೈಡ್ರೇಟ್‍ಗಳಿರುತ್ತವೆ.
1) ಸರಳ ಕಾರ್ಬೋಹೈಡ್ರೇಟ್
2) ಸಂಕೀರ್ಣ ಕಾರ್ಬೋಹೈಡ್ರೇಟ್
1) ಸರಳ ಕಾರ್ಬೋಹೈಡ್ರೇಟ್:- ಇವುಗಳು ಈ ಕೆಳಗಿನ ಎರಡು ವಿಧಗಳನ್ನು ಒಳಗೊಂಡಿವೆ
1) ಏಕಶರ್ಕರಗಳು (Monosaccharides) ಇವುಗಳು ಸಿಹಿರುಚಿಯನ್ನು ಹೊಂದಿದ್ದು ನೀರಿನಲ್ಲಿ ಕರಗುತ್ತವೆ.
ಉದಾ:
1) ಗ್ಲುಕೋಸ್
2) ಫ್ರಕ್ಟೋಸ್
3) ಗ್ಯಾಲಕ್ಟೋಸ್
4) ರೈಬೋಸ್
1)ಮೊನೋಸಾಖರೈಡ್‍ಗಳನ್ನು ಅವುಗಳು ಹೊಂದಿರುವ ಕಾರ್ಬನ್‍ಗಳ ಸಂಖ್ಯೆಗಳಿಗೆ ಅನುಗುಣವಾಗಿ ಈ ಕೆಳಗಿನಂತೆ ವಿಂಗಡಿಸಲಾಗಿದೆ.
Triose – C₃(H₂O)₃
Tetrose – C₄(H₂O)₄
Pentose – C₅(H₂O)₅
Hexose – C₆(H₂O)₆
Ex:- Glyceraldehyde, dihydroxy acetone, Threose, Erythrose, Ribose, arabinose, lyxose, xylose, Glucose, Mannose, Galactose, fructose, Gulcoheptose, sedoheptulose
ಗ್ಲುಕೋಸ್ :- ಇದನ್ನು Grape sugal, Blood Sugar or corn sugar ಎನ್ನವರು. ಇದನ್ನು ಜೀವಂತ ಕೋಶಗಳು ಶಕ್ತಿಯ ಮೂಲವಾಗಿ ಬಳಸುತ್ತೆವೆ. ಇದು ದ್ಯುತಿಸಂಶ್ಲೇಷಣೆ ಕ್ರಿಯೆಯಿಂದ ಉತ್ಪತ್ತಿಯಾಗುತ್ತದೆ. ಇದರ ರಾಸಾಯನಿಕ ಸೂತ್ರ ಇದು ಗ್ಲೈಕೊಲಿಸಿಸ್ ಕ್ರಿಯೆಯಿಂದ ಗ್ಲುಕೋಸ್ ಪೈರೆಮೇಟ್ ಆಗಿ ಪರಿವರ್ತನೆ ಆಗುತ್ತದೆ.
* ಫ್ರಕ್ಟೋಸ್ (Fructose) ಇದನ್ನು Fruit Sugar ಎನ್ನುವರು ಇದು ಹಣ್ಣುಗಳು, ತರಕಾರಿಗಳು, ಹಾಗೂ ಜೇನುತಪ್ಪದಲ್ಲಿ ದೊರೆಯುತ್ತಿದೆ. ಇದನ್ನು ಲೆವಿಲೊಸ್ ಎಂದು ಕೂಡ ಕರೆಯುತ್ತಾರೆ. ಇವು ಸಿಹಿರುಚಿಯನ್ನು ಹೊಂದಿದೆ. ಇದು ದ್ರಾಕ್ಷಿ ಹಣ್ಣಿನಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಇದನ್ನು ಬ್ಯಾಕ್ಟೀರಿಯ ಅಥವಾ ಈಸ್ಟ್‍ಗಳಿಂದ ಫರ್ಮಟೇಕಸ್ ಮಾಡಿ ಎಥನಾಲ್ (ಎಥೈಲ್ ಅಲ್ಕೋಹಾಲ್) ಮಧ್ಯ ತಯಾರಿಸಲು ಬಳಸುತ್ತಾರೆ.
* ರೈಬೋಸ್ (Ribose) :-
* ಇದು ಮೊನೋಸಾಕರೈಡ್ ಆಗಿದೆ.
*ಇದು ಸ್ನಾಯುಗಳಿಗೆ ಆಯಾಸವಾಗದಂತೆ ಮಾಡುವುದು
* ಹೃದಯಕೋಗಿಗಳಿಗೆ ಹೆಚ್ಚಿನ ಶಕ್ತಿ ಒದಗಿಸಿ ಹೃದಯ ಕಾರ್ಯ ಮಾಡುವಂತೆ ಮಾಡುವುದು.
* ರೈಬೋಸ್‍ಗಳು RNA & DNA ಬೆನ್ನೆಲುಬುಗಳಾಗಿವೆ.
* ಇದು ಹೃದಯಘಾತ ತಪ್ಪಿಸುತ್ತಿದೆ.
2)ಓಲಿಗೋಸಾಕರೈಡಗಳು (Oligo saccarides):-
* ಇವುಗಳು ಸಿಹಿರುಚಿ ಹೊಂದಿದ್ದು ನೀರಿನಲ್ಲಿ ಕರಗುತ್ತಿವೆ.
*ಕಾರ್ಬೊಹೈಡ್ರೇಟ್‍ನ್ನು ಜಲವಿಭಜನೆ ಮಾಡಿದಾಗ ಎರಡು ಏಕಾಂಶಗಳೊಂದಿಗೆ ಕೂಡಿದ ಸಂಯುಕ್ತವೇ ಡೈಸಾಕರೈಡ್ ಎನ್ನುವರು.
*ಇದರಲ್ಲಿ ಎರಡು ಸಕ್ಕೆರೆ ಕಣಗಳು ಮೊನೋಸಾಕರೈಡ್ ನಿಂದ ಸೇರಿರುತ್ತದೆ.
*ಎರಡು ಮೊನೊಮರ (ಏಕಾಂಶ ಅಥವಾ ಸಕ್ಕರೆ) ಕಣಗಳ ಸೇರಿಸುವ ಬಂಧ ಗ್ಲೈಕೋಸಾಯ್‍ಡಿಕ್ ಬಂಧವಾಗಿದೆ.
*ಗ್ಲುಕೋಸ್ ನಡುವಿನ ಬಂಧವನ್ನು ಕಿಣ್ವಗಳ ಸಹಾಯದಿಂದ ಜಲವಿಭಜನೆ ಮಾಡಲಾಗುತ್ತದೆ.
ಉದಾ:- ಸುಕ್ರೋಸ್ (ಸಕ್ಕರೆ), ಲ್ಯಾಕ್ಟೋಸ್, ಮೊಲ್ಟೋಸ್,
ಸುಕ್ರೋಸ್ – Glucose + Fructose
ಲ್ಯಾಕ್ಟೋಸ್ – Glucose + Galactose
ಮೊಲ್ಟೋಸ್ – Glucose + Glucose
3)ಸುಕ್ರೋಸ್ (Sucrose = Glucose + Fructose)
* ಇದನ್ನು ಸಾಮಾನ್ಯವಾಗಿ Table Sugar ಎನ್ನುವರು.
* ಇದೊಂದು ಡೈಸಾಕರೈಡ್ ಆಗಿದ್ದು ಗ್ಲುಕೋಸ್ ಹಾಗೂ ಫ್ರಕ್ಟೋಸ್ ನಿಂದ ಮಾಡಲ್ಪಟ್ಟಿದೆ.
* ಇದು ಸಸ್ಯದಿಂದ ತಯಾರಾಗುತ್ತವೆ. ಇದು ಕಬ್ಬಿನಲ್ಲಿ ಹಾಗೂ ಗೆಣಸಿನಲ್ಲಿ ಕಂಡುವರುತ್ತಿದೆ.
* ಕಬ್ಬು ಹಾಗೂ ಗೆಣಸನ್ನು ಸುಕ್ರೋಸ್ ತಯಾರಿಸಲು ಬೆಳೆಯುತ್ತಾರೆ.
*ಪ್ರಾಣಿಗಳಲ್ಲಿ ಸುಕ್ರೋಸ್ ಜಠರದಲ್ಲಿ ಜೀರ್ಣವಾಗುತ್ತದೆ, ಇದು ಆಮ್ಲೀಯ ಜಲವಿಭಜನೆ ಯಾಗಿ ಗ್ಲುಕೋಸ್ ಹಾಗೂ ಫ್ರಕ್ಟೋಸ್ ಆಗಿ ಪರಿವರ್ತನೆಯಾಗುತ್ತಿದೆ.
* ಇದರ ಸೇವನೆ ಹೆಚ್ಚಾದರೆ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಹೆಚ್ಚಾಗುತ್ತದೆ.
* ಸುಕ್ರೋಸನ್ನು ಗ್ಲುಕೋಸ್ ಆಗಿ ಸಣ್ಣ ಕರುಳಿನ ಗ್ರಂಥಿಗಳು ಪರಿವರ್ತನೆ ಮಾಡುತ್ತಿವೆ.
4)ಮಾಲ್ಟೋಸ್ (Maltose = Glucose + Glucose)
ಇದು ಎರಡು ಗ್ಲುಕೋಸ್‍ನಿಂದ ಮಾಡಲ್ಪಟ್ಟ ಡೈಸಾಕರೈಡ್ ಆಗಿದೆ. ಇದರ ಗ್ಲುಕೋಸ್‍ಗಳು ಜಲವಿಭಜನೆಯಿಂದ ಒಡೆಯುತ್ತಿವೆ. ಮಾಲ್ಟೋಸ್ ಹೆಚ್ಚಾಗಿ ಮೊಳಕೆ ಕಟ್ಟಿದ ಕಾಳುಗಳಲ್ಲಿ ಕಂಡುವರುತ್ತದೆ ಹಾಗೂ ಬಾರ್ಲಿಯಲ್ಲಿ ಹೆಚ್ಚಾಗಿ ಕಂಡುವರುತ್ತದೆ. ಬಾರ್ಲಿಯನ್ನು ಮೂಲ್ಟೆಸ್ ಮಾಡಿ ಮಧ್ಯ ತಯಾರಿಸುತ್ತಿರೆ. ಇದರಿಂದ ಈಥೈಲ್ ಅಲ್ಕೋಹಾಲ್ ತಯಾರಿಸುತ್ತಾರೆ. ಬೀರು ಬ್ರಾಂಡಿಯಂತಹ ಮಧ್ಯದಲ್ಲಿ ಮಾಲ್ಟೋಸ್ ಇರುತ್ತದೆ. ಇದು ಗ್ಲುಕೋಸ್‍ನ ಅರ್ಧದಷ್ಟು ಸಿಹಿಹಾಗಿರುತ್ತದೆ. ಫ್ರಕ್ಟೋಸ್‍ನ ಆರನೇ ಒಂದು ಭಾಗದಷ್ಟು ಸಿಹಿಯಾಗಿರುತ್ತದೆ. ಎರಡು ಬಿಸ್ಕಿಟ್‍ಗಳ ಮಧ್ಯ ಮೊಲ್ಟೋಸ್ ಸೇರಿಸಿ ಕ್ರಾಶರ್ ಬಿಸ್ಕಿಟ್ ತಯಾರಿಸುತ್ತಾರೆ. ಪಿಷ್ಟವು ಜಲವಿಭಜನೆ ಹೊಂದಿದಾಗ ಮಾಲ್ಟೋಸ್ ಉತ್ಪತ್ತಿಯಾಗುತ್ತದೆ.
* ಮಾಲ್ಟೋಸ್‍ನ್ನು ಸಣ್ಣ ಕರುಳಿನ ಗ್ರಂಥಿಗಳು ಗ್ಲುಕೋಸ್ ಆಗಿ ಪರಿವರ್ತಿಸುತ್ತವೆ.
1)ಲ್ಯಾಕ್ಟೋಸ್(Lactose = Glucose + Glucose)
* ಇದನ್ನು Milk sugar ಎನ್ನುವರು.
* ಇದು ಹಾಲಿನಲ್ಲಿರುತ್ತದೆ.
* ಇದು ಹಾಲಿನಲ್ಲಿ ಶೇ 2% ರಿಂದ 8% ರವರೆಗೆ ಇರುತ್ತದೆ.
* ಇದೊಂದು ಓಲಿಗೋಸಾಕರೈಡ ಆಗಿದ್ದು, ಇದು ಗ್ಯಾಲೊಕ್ಟೋಸ್ ಹಾಗೂ ಗ್ಲುಕೋಸ್‍ನಿಂದ ಮಾಡಲ್ಪಟಿದೆ.
*ಲ್ಯಾಕ್ಟೋಸ್‍ನ್ನು ಸಣ್ಣ ಕರುಳಿನ ಗ್ರಂಥಿಗಳು ಗ್ಲುಕೋಸ್ ಆಗಿ ಪರಿವರ್ತಿಸುತ್ತವೆ.
2) ಸಂಕೀರ್ಣ ಕಾರ್ಬೊಹೈಡ್ರೇಟ್ :-
ಪಾಲಿ ಸಾಕರೈಡ್ಸ್ (Polysaccarides):- ಇದೊಂದು ಸಂಕೀರ್ಣ ಪಾಲಿಸ್ಯಾಕರೈಡ್ ಇವುಗಳನ್ನು ಪಾಲಿಮರ್‍ಗಳೆನ್ನುವರು.ಕಾರಣ ಮೂರಕ್ಕಿಂತ ಹೆಚ್ಚು ಮೊನೋಸಾಕಾರೈಡ್‍ಗಳಿಂದ ಕೂಡಿದ ದೊಡ್ಡ ಸರಪಳಿ ಆಗಿದೆ. ಕಾರ್ಬೊಹೈಡ್ರೇಟ್ ಜಲವಿಭಜನೆ ಹೊಂದಿದಾಗ ಎರಡಕ್ಕಿಂತ ಹೆಚ್ಚು ಏಕಾಂಶಗಳಿಂದ ಕೂಡಿದ ಘಟಕಗಳನ್ನು ಹೊಂದಿರುವುದು Polysaccaride
ಉದಾ:- ಸೆಲ್ಯೂಲೋಸ್ ಅಮೈಲೋಸ್, ಗಂಜಿ
*ಇವುಗಳನ್ನು ಸಂಕೀರ್ಣ ಕಾರ್ಬೊಹೈಡ್ರ್‍ಟ್ ಗಳನ್ನುವರು
* ನೈಸರ್ಗಿಕವಾಗಿ ದೊರೆಯುತ್ತವೆ.
*ಗಂಜಿಯ (Starch) ಸಸ್ಯಗಳಲ್ಲಿ ಮುಖ್ಯವಾಗಿ ಶೇಖರಣೆಯಾಗುತ್ತದೆ.
* ಗಂಜಿಯು ಎರಡು ಭಾಗಗಳಿಂದ ಕೂಡಿರುತ್ತದೆ.
ಅ) ಅಮೈಲೋಸ್ (ನೀರಿನಲ್ಲಿ ಕರಗುವ ಭಾಗ)
ಆ) ಆಮೈಲೋಪೆಕ್ಟಿನ್ (ನೀರಿನಲ್ಲಿ ಕರಗುವ ಭಾಗ)
* ಪ್ರಾಣಿಗಳಲ್ಲಿ ಗ್ಲೈಕೋಜನ್ ಕಡಿಮೆ ಅವಧಿ ಆಹಾರ ಶೇಖರಣೆ ಮಾಡುತ್ತದೆ.
1) ಪಿಷ್ಟ ಗಂಜಿಯ (Starch)
* ನೀರಿನಲ್ಲಿ ಕರಗುವದಿಲ್ಲ, ಇವುಗಳಿಗೆ ರುಚಿ ಇಲ್ಲ
* ಇದೊಂದು ಗ್ಲುಕೋಸ್‍ಗಳಿಂದ ಮಾಡಿದ ದೊಡ್ಡ ಸರಪಳಿಯ ಪಾಲಿಸೆಕರೈಡ ಇದೊಂದು ನೈಸರ್ಗಿಕ ಪಾಲಿಮಾರ್
* ಇದು ಸಸ್ಯಜೀವಕೋಶದಲ್ಲಿ ಶೇಖರವಾಗಿರುತ್ತದೆ.
* ಆಲೂಗಡ್ಡೆಯಲ್ಲಿ ಹೆಚ್ಚು ಪಿಷ್ಟ ಆಡಗಿರುತ್ತದೆ.
* ಕಾಳುಗಳು, ಗೋಧಿ, ಬಾರ್ಲಿ, ಮುಸಕಿನ ಜೋಳದಲ್ಲಿ ಕಂಡು ಬರುತ್ತದೆ.
* ಸಸ್ಯಗಳಲ್ಲಿ ಅಡಗಿರುವ ಶಕ್ತಿರೂಪವೇ ಪಿಷ್ಟ
* ಪಿಷ್ಟವನ್ನು ಪರೀಕ್ಷಿಸಲು “ಆಯೋಡಿನ್ ಪರಿಕ್ಷೆ” ನಡೆಸುತ್ತಾರೆ.
* ಸ್ವಾಭಾವಿಕವಾಗಿ ಸಿಗುವ ಪಿಷ್ಟದಲ್ಲಿ ಶೇ 10 ರಿಂದ 20 ರಷ್ಟು ಅಮೈಲೋಸ್ ಇರುತ್ತದೆ. ಶೇ 80 ರಿಂದ 90 ರಷ್ಟು ಅಮೈಲೋಪೆಕ್ವಿನ್ ಇರುತ್ತದೆ.
2) ಸೆಲ್ಯೂಲೋಸ್ (Cellulose)
*ಇದು ಪಾಲಿಸ್ಯಾಕರೈಡ್ ಆಗಿದೆ. ಇದೊಂದು ಪಾಲಿಮಾರ ಆಗಿದೆ.
* ಇದು ಹಸಿರು ಸಸ್ಯಕೋಶ ಭಿತ್ತಿಯಲ್ಲಿರುತ್ತದೆ.
*ಮೆಲುಕು ಹಾಕುವ ಹಾಗೂ ಗದ್ದಲುಗಳು ಸೆಲ್ಯೂಲೋಸನ್ನು ಜೀರ್ಣಮಾಡುತ್ತವೆ. ಇವುಗಳಿಲ್ಲಿರುವ ಸೂಕ್ಷ ಜೀವಗಳಿಂದ ಜೀರ್ಣಸುತ್ತದೆ.
*ಸಸ್ಯದ ಶೇ 33 ರಷ್ಟು ಭಾಗ ಸೆಲ್ಯುಲೋಸ್ ಮಾಡಲ್ಪಟ್ಟಿದೆ.
*ಉಚ್ಚಸಸ್ಯಗಳಲ್ಲಿ ಸೆಲ್ಯುಲೋಸ್ ಮುಖ್ಯರಚನಾ ಪಾಲಿಸ್ಯಾಕರೈಡ್ ಇದುಸಸ್ಯ ಜೀವಕೋಶದ ಗೋಡೆಗಳಲ್ಲಿ ಹೆಚ್ಚಾಗಿರುತ್ತದೆ.
* ಶೇಕಡಾ 50 ರಷ್ಟು ಜೈವಿಕ ಕಾರ್ಬನಿಕ ವಸ್ತುಗಳು ಸೆಲ್ಯುಲೋಸಗಳನ್ನೊಗೊಂಡಿರುತ್ತವೆ.
ಉದಾ:- ಮರ, ಹತ್ತಿ ಇತ್ಯಾದಿ
* ಮನುಷ್ಯರಲ್ಲಿ ಸೆಲ್ಯುಲೇಸ್ ಜೀರ್ಣವಾಗುವುದಿಲ್ಲ. ಇವುಗಳನ್ನು ನಾರುಗಳೆಂದು ಕರೆಯುತ್ತಾರೆ.
*ಸೆಲ್ಯುಲೋಸನೊಂದಿಗೆ ರಾಸಾಯನಿಕವಾಗಿ ವರ್ತಿಸಿದಾಗ ಅನೇಕ ಉಪಯುಕ್ತ ಉತ್ಪನ್ನಗಳು ದೊರೆಯುತ್ತವೆ.
(ಸೆಲ್ಯುಲಾಯ್ಡೂ, ರೆಯಾನ್, ಸೆಲ್ಯುಲೋಸ್ ಅಸಿಟೇಟ್ (ಪ್ಲಾಸ್ಟಿಕ್ ಸುತ್ತುವ ಹಾಳೆಗಳು (ಪಿಲ್ಮ್), ಉಗುರಿಗೆ ಹಚ್ಚುವ ಬಣ್ಣ, ಮಿಥ್ಯಾಲ್ ಸೆಲ್ಯುಲೋಸ್ (ಬಟ್ಟೆಗಳಲ್ಲಿ ಸೌಂದರ್ಯ ವರ್ಧಕಗಳಲ್ಲಿ ಪೆಸ್ಟ್‍ಗಳು, ಈಥೆಲ್ ಸೆಲ್ಯುಲೋಸ್ (ಪ್ಲಾಸ್ಟಿಕ ಗೌನಗಳು ಮತ್ತು (ಪಿಲ್ಮಂ) ಗಂಜಿ ಜೊತೆ ಅನೇಕ ಪಾಲಿಸೆಕರೆಡ್)
ಉದಾ:- ಗೊಂದು (ಅಂಟು)
3) ಗ್ಲೈಕೋಜನ್ (Glycogen)
* ಇದೊಂದು ಪಾಲಿ ಸಾಕರೈಡ್ ಇದೊಂದು ಪ್ರಾಣಿಗಳಲ್ಲಿ ಕಂಡು ಬರುವ ಪಾಲಿಮಾರ
*ಇದು ಅನೇಕ ಗ್ಲುಕೋಸ್‍ಗಳಿಂದ ಕೂಡ ಬಂಧವಾಗಿದೆ.
* ಇದು ಯಕೃತು ಹಾಗೂ ಸ್ನಾಯುಗಳಲ್ಲಿ ಗ್ಲುಕೋಸ್ ಗ್ಲೈಕೋಜಿನ್ ಆಗಿ ಸಂಗ್ರಹವಾಗಿರುತ್ತದೆ.
* ಇದು ಪ್ರಾಣಿಗಳ ಕೋಶಗಳಲ್ಲಿ ದ್ವಿತೀಯ ಶಕ್ತಿಯಾಗಿ ಶೇಖರಣೆಯಾಗಿರುತ್ತದೆ.
* ಗ್ಲುಕೋಸ್‍ನಿಂದ ಗ್ಲೈಕೋಜಿನ ಉತ್ಪತ್ತಿಮಾಡುವ ಕ್ರಿಯೆ ಗ್ಲೈಕೋಜನಿಸಿಸ್ (Glycogenesis)
*ಸ್ಯಾಕ್ರೀನ್- ಸ್ಯಾಕ್ರೀನ್ ಎಂಬುದು ಕೃತಕ ಸಿಹಿಯಾಗಿದ್ದು, ಇದನ್ನು ಸಕ್ಕರೆ ಬದಲಾಗಿ ಬಳುಸುತ್ತಾರೆ. ಇದು ಸಕ್ಕರೆಯಲ್ಲಿರುವ ಸುಕ್ರೋಸಗಿಂತ 500 ಪಟ್ಟು ಹೆಚ್ಚು ಸಹಿಯಾಗಿರುತ್ತದೆ. ಇದೊಂದು ಕೃತಕವಾಗಿ ತಯಾರಿಸುವ ರಾಸಾಯನಿಕವಾಗಿದೆ. ಇದನ್ನು ರಾಸಾಯನಿಕವಾಗಿ ಬೆಂಜೊಯಿಕ್ ಸಲ್ಫೈಡ್ ಎಂದು ಕರೆಯುವರು.
ನೀವು ಹೋಟಲಿನಲ್ಲಿ ಕುಡಿಯುವ ಕಾಫಿ, ಟೀ ನಲ್ಲಿ ಇತ್ತೀಚೆಗೆ ಸ್ಯಾಕ್ರೀನ್ ಬಳಸಿರುತ್ತಾರೆ.
*ಸಸ್ಯಗಳಲ್ಲಿ ಕಾರ್ಬೊಹೈಡ್ರೇಟಗಳು:- ಕಾರ್ಬೊಹೈಡ್ರೇಟಗಳು ಉತ್ಪತ್ತಿಯಾಗುವುದು ಸಸ್ಯಗಳ ದ್ಯುತಿ ಸಂಶ್ಲೇಷಣಾ ಕ್ರಿಯೆಯಿಂದ ಗ್ಲುಕೋಸ್, ಗಂಜಿ ಗ್ಲೈಕೋಜಿನ್,
ಗೊಂದು, ಸಸ್ಯದಿಂದ ಉತ್ಪತ್ತಿಯಾಗುವ ಕಾರ್ಬೊಹೈಡ್ರೇಟಗಳು ಸಸ್ಯದ ಶೇ 70ರಷ್ಟು ಭಾಗ ಕಾರ್ಬೊಹೈಡ್ರೇಟನಿಂದ ಕೂಡಿದೆ.
* ಸಸ್ಯಗಳಲ್ಲಿ ಕಾರ್ಬೊಹೈಡ್ರೇಟ್ ಕಾರ್ಯವೆಂದರೆ.
1)ಸಸ್ಯದ ಆಕೃತಿ ಆಧಾರಸ್ತಂಭವಾಗಿದೆ. (ಸೆಲ್ಯುಲೋಸ್)
2) ಸಸ್ಯದ ರಾಸಾಯನಿಕ ಶಕ್ತಿ ಶೇಖರಣೆ (ಸಕ್ಕರೆ ಹಾಗೂ ಪಿಷ್ಟ)
ಕಾರ್ಬೊಹೈಡ್ರೇಟ್ಸ್‍ಗಳ ಉಪಯೋಗ :-
* ಇದು ಮನುಷ್ಯನಿಗೆ ಅತಿ ಹೆಚ್ಚು ಶಕ್ತಿ ಕೊಡುವ ಮೂಲವಾಗಿದೆ.
* ಇದರಿಂದ ಮನುಷ್ಯನು ಶಕ್ತಿಯನ್ನು ಪಡೆಯುತ್ತಾನೆ. ಇದು ಬೆಳವಣಿಗೆಗೆ ಹಾಗೂ ದೇಹಕ್ಕೆ ಶಕ್ತಿ ಒದಗಿಸುವ ಪ್ರಮುಖ ಆಹಾರದ ಘಟಕವಾಗಿದೆ.
* ಇದು ಸರಳ ಸಕ್ಕರೆ ಹಾಗೂ ಪಾಲಿ ಸಾಕರೈಡಗಳನ್ನು ಹೊಂದಿದ್ದು, ಅವು ಪಚನ ಕ್ರಿಯೆಯಿಂದ ಶಕ್ತಿಯಾಗಿ ಪರಿವರ್ತನೆಯಾಗಿ ದೇಹಕ್ಕೆ ಶಾಖಾ ಮತ್ತು ಶಕ್ತಿಯನ್ನು ನೀಡುತ್ತವೆ.
* ಕಾರ್ಬೊಹೈಡ್ರೇಟ್ ಕೊರತೆಯಿಂದ ಬರುವ ರೋಗಗಳು:-
ಮಕ್ಕಳಲ್ಲಿ ಕಾರ್ಬೊಹೈಡ್ರೇಟ್ ಕೊರತೆಯಾದರೆ ಬೆಳವಣಿಗೆ ಕುಂಠಿತ ಮತ್ತು ನಿಶ್ಯಕ್ತಿ ಉಂಟಾಗುತ್ತದೆ. ಆಹಾರದಲ್ಲಿ ಇವು ಹೆಚ್ಚಾದಾಗ ದೇಹದ ತೂಕ ಮಿತಿಮೀರಿ ಸ್ಥೂಲತೆ ಉಂಟಾಗುತ್ತದೆ. ಮಧ್ಯ ವಯಸ್ಸಿನ ವ್ಯಕ್ತಿಗಳಲ್ಲಿ ತೂಕ ಹೆಚ್ಚಾದರೆ 1) ಮಧುಮೇಹ 2) ರಕ್ತದ ಅತಿ ಒತ್ತಡ 3) ಹೃದಯ ರೋಗಕ್ಕೆ ಕಾರಣವಾಗುತ್ತದೆ.
* ಪ್ರೋಟೀನ್ (Proteins)
* ಇದು ಪ್ರಮುಖವಾದ ಆಹಾರ ಘಟಕವಾಗಿದೆ.
* ಇದು ಅಮೈನೋ ಆಮ್ಲಗಳಿಂದ ಕೂಡಿ ಪಾಲಿ ಅಮೈಡ್ ಆಗಿದೆ.
* ಪ್ರತಿಯೊಂದು ಪ್ರೋಟೀನ್ ಅಣುವು ನೂರಾರು ಅಮೈನೊ ಆಮ್ಲಗಳಿಂದ ಕೂಡಿದ ದೊಡ್ಡ ಸರಪಳಿ, ಪ್ರೋಟೀನ ಅಣುವಿನಲ್ಲಿರುವ ಅಮೈನೊ ಆಮ್ಲಗಳನ್ನು ಹಿಡಿದಿರುವ ರಾಸಾಯನಿಕ ಬಂಧಗಳಿಗೆ ಪೆಪ್ಟೈಡ್ ಬಂಧ ಎನ್ನುವರು.
* ನೈಸರ್ಗಿಕವಾಗಿ 20 ಬಗೆಯ ಅಮೈನೊ ಆಮ್ಲಗಳಿವೆ.
ಇವುಗಳಲ್ಲಿ ಎರಡು ಬಗೆಯ ಅಮೈನೊ ಆಮ್ಲಗಳಿವೆ.
1) ಅವಶ್ಯಕ ಅಮೈನೊ ಆಮ್ಲ (Essential Amino acids)
ಅವಶ್ಯಕ ಅಮೈನೊ ಆಮ್ಲಗಳೆಂದರೆ ದೇಹಕ್ಕೆ ಬೇಕಾದ ಅಮೈನೊ ಆಮ್ಲಗಳನ್ನು ಆಹಾರದ ಮೂಲಕ ಪಡೆಯುತ್ತೇವೆ. ಇಂತಹ ಅಮೈನೊ ಆಮ್ಲಗಳನ್ನು ಅವಶ್ಯಕ ಅಮೈನೊ ಆಮ್ಲಗಳೆನ್ನುವರು.
ಉದಾ: ಐಸೊಲೂಸಿನ್, ಅರ್ಜಿನಿ, ಲೈಸಿನ್, ಮಿಥಿಯೊನಿನ್, ತ್ರಿಯೋನಿನ್, ಟ್ರಿμÉ್ಟೂಫಾನ್, ವಾಲಿನ್, ಹಿಸ್ಟಿಡಿನ್ (ಮಕ್ಕಳಿಗೆ ಅಗತ್ಯ ಅಮೈನೊ ಆಮ್ಲ) ಟ್ರೈಯೊಸಿನ್
2)ಅನಾವಶ್ಯಕ ಅಮೈನೊ ಆಮ್ಲ (Non-essential Amino acids)
ಅನಾವಶ್ಯಕ ಅಮೈನೊ ಆಮ್ಲಗಳೆಂದರೆ ಮಾನವನಿಗೆ ಬೇಕಾದ ಅಮೈನೊ ಆಮ್ಲಗಳನ್ನು ದೇಹವೇ ತಯಾರಿಸುತ್ತದೆ.ಇಂತಹ ಅಮೈನೊ ಆಮ್ಲಗಳನ್ನು ಅನಾವಶ್ಯಕ ಅಮೈನೋ ಆಮ್ಲಗಳೆನ್ನುವರು ಮಾನವನ ದೇಹವು ಹತ್ತು ಅಮೈನೋ ಆಮ್ಲ ತಯಾರಿಸಿಕೊಳ್ಳುವ ಸಾಮಥ್ಯ ಹೊಂದಿದೆ.
ಉದಾ:- ಅಲಾನಿನ್, ಅಸ್ಪಾಟರೆಟ್, ಸೈಟಾಸ್ಟಿನ್, ಗ್ಲೈಸಿನ್, ಪ್ರೋಲಿನ್, ಸೆರಿನ್, ಅಸ್ಪರಜೀನ್, ಪೈರೊಲೈಸಿನ್.
* ಮಾನವನಿಗೆ ಪ್ರೋಟೀನ್ ಏಕೆ ಬೇಕು?
ಪ್ರೋಟೀನ್‍ಗಳಲ್ಲಿ ರಚನಾತ್ಮಕ ಪ್ರೋಟಿನ್ (Structural Proteins) ಗಳನ್ನು ದೇಹದ Building blocks ಎಂದು ಕರೆಯುತ್ತಾರೆ. ಕಾರಣ ಇದು ದೇಹದ ಕೋಶಗಳು ಕಟ್ಟುವ ಹಾಗೂ ದುರಸ್ತಿ ಮಾಡುವ ಕಾರ್ಯ ಮಾಡುತ್ತದೆ.
ಉದಾ:- ಕೊಲ್ಯಾಜಿನ್ (Collagen) ಇದು ದೇಹದ ಪ್ರೋಟೀನಿನ್ ಶೇ 25 ರಿಂದ 35 ಇರುತ್ತದೆ. ಇದು ಸಂಯೋಜಿತ ಅಂಗಾಂಶದಲ್ಲಿರುತ್ತದೆ.
* ಪ್ರೋಟೀನ್‍ಗಳು ದೇಹದಲ್ಲಿ ರಕ್ಷಣೆ ನೀಡುವ ರೋಗ ನಿಕೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ. ಇಂತಹ ಪ್ರೋಟೀನ್‍ಗಳನ್ನು ಪ್ರತಿಕಾಯ ಪ್ರೋಟೀನ್ ಗಳೆನ್ನುವರು.
* ಪ್ರೋಟೀನ್ ಕಿಣ್ವಗಳನ್ನು ಉತ್ಪತ್ತಿಸುತ್ತದೆ. ಉದಾ:- ಪೆಪ್ಸಿನ್, ಟ್ರೀಷ್ಸಿನ್
* ಪ್ರೋಟೋನಗಳು ಹಾರ್ಮೂನಗಳನ್ನು ಉತ್ಪತ್ತಿ ಮಾಡುತ್ತವೆ.
ಉದಾ:- ಇನ್ಸುಲಿನ್ & ಅಡ್ರಲಿನ್
*ಇದು ಕೂದಲು ಚರ್ಮ ಹಾಗೂ ಉಗುರುಗಳನ್ನು ಆರೋಗ್ಯವಾಗಿಡಲು ಸಹಕಾರಿಯಾಗಿವೆ.
* ಸ್ನಾಯು ಪ್ರೋಟೀನ (Contract Proteins) ಗಳು ಸ್ನಾಯುಗಳ ಯಾಂತ್ರಿಕ ಚಲನೆಗೆ ಸಹಕಾರಿಯಾಗಿವೆ.
ಉದಾ:- ಮಯೋಸಿನ್ & ಆಕ್ಟೀನ್
*ಪ್ರೋಟೀನ್‍ಗಳು ಸಾಗಾಣಿಕೆಯಲ್ಲಿ ಸಹಾಯ ಮಾಡುತ್ತವೆ.
ಉದಾ:- ಮೊಟ್ಟೆಯ ಬಿಳಿ ಭಾಗದಲ್ಲಿರುವ ಅಲ್ಬುಮಿನ್ ಬೆಳೆಯುವ ಕೋಳಿಮರಿಗೆ ಸಹಕಾರಿಗಯಾಗಿದೆ. ಅದೇ ರೀತಿ ಹಾಲಿನಲ್ಲಿರುವ ಕೇಸಿನ್ ಎಳೆಯು ಸಸ್ತನಿಗೆ ಫೋಷಣೆ ನೀಡುತ್ತದೆ.
* ಕೆಲವು ಪ್ರೋಟೀನಗಳು ಚರ್ಮದ ವರ್ಣಕವಾದ ಮೆಲನಿನ್ ಉತ್ಪಾದನೆಯಲ್ಲಿ ಸಹಕಾರಿಯಾಗಿವೆ.
* ಕೆಲವು ಪ್ರೋಟೀನಗಳು ನ್ಯೂಕ್ಲಿರ್ ಆಮ್ಲಗಳನ್ನು ಹಾಗೂ ನ್ಯೂಕ್ಲಿರ್ ಆಮ್ಲಗಳಾದ ಡಿ.ಎನ್.ಎ & ಆರ್.ಎನ್.ಎ. ಗಳಲ್ಲಿರುವ ಪ್ಯೂರಿನ ಮತ್ತು ಪಿರಮಿಡಿನಗಳನ್ನು ತಯಾರಿಸುವಲ್ಲಿ ಸಹಕರಿಸುತ್ತವೆ. ಇಂತಹ ಪ್ರೋಟೀನಗಳನ್ನು ಸಾಗಾಣಿಕ ಪ್ರೋಟೀನ್ (Carrier proteins) ಗಳೆನ್ನವರು ಪೋಷಕಾಂಶ ಸಾಗಾಣಿಕೆ ಮಾಡುತ್ತವೆ.
ಉದಾ:- ಹಿಮೋಗ್ಲೋಬಿನ್
* ಕೆಲವು ಪ್ರೋಟೀನ್‍ಗಳು ಆಹಾರವನ್ನು ಕಾಯ್ದಿಟ್ಟು ಕೊಂಡಿರುತ್ತವೆ.
* ಆಹಾರದಲ್ಲಿ ಪ್ರೋಟೀನ್ ಪರೀಕ್ಷೆ (Protein Test) ಬೈಯುರೇಟ್ ಪರೀಕ್ಷೆಯ ಆಹಾರದಲ್ಲಿ ಪ್ರೋಟೀನ್ ಅಂಶ ಇರುವುದನ್ನು ಪತ್ತೆ ಮಾಡುವ ಪರೀಕ್ಷೆ ಈ ಪರೀಕ್ಷೆಯಲ್ಲಿ ಪರೀಕ್ಷಿಸುವ ಪದಾರ್ಥಕ್ಕೆ ತಾಮ್ರದ ಸಲ್ಫೇಟನ್ನು ಸೋಡಿಯಂ ಹೈಡ್ರಾಕ್ಸೈಡ್ ಸೇರಿದಾಗ
ಉದಾ:- ಬಣ್ಣ (Lilac) ಬರುತ್ತದೆ.
ಪ್ರೋಟೀನನ್ನು ಹೊಂದಿರುವ ಆಹಾರ ಪದರ್ಥಗಳು ಮಾಂಸ, ಮೊಟ್ಟೆ, ಬೀಜಗಳು, ಬೀನ್ಸ್, ಕಾಳುಗಳು, ಹಾಲು, ಹಾಲಿನ ಉತ್ಪನ್ನಗಳಲ್ಲಿ ದ್ವಿ.ದ.ಳ ಧಾನ್ಯಗಳು
*ಪ್ರೋಟಿನ್‍ಗಳು ವಿಧಗಳು (Types of Proteins)
1) ಸರಳ ಪ್ರೋಟೀನ್‍ಗಳು (Simple Proteins) ಅಮೈನೋ ಆಮ್ಲಗಳಿಂದ ಮಾತ್ರ ಮಾಡಲ್ಪಟ್ಟ ಪ್ರೋಟಿನಗಳು.
ಉದಾ:- ಮೊಟ್ಟೆಯಲ್ಲಿನ ಅಲ್ಜುಮಿನ್, ಬೀಜದಲ್ಲಿನ ಗ್ಲಾಬುಲಿನ್
2) ಸಂಕೀರ್ಣ ಪ್ರೋಟೀನ್‍ಗಳು (Conjugate Proteins)
ಅಮೈನೋ ಆಮ್ಲಗಳ ಜೊತೆಗೆ ಅಮೈನೇತರ ಆಮ್ಲಗಳನ್ನು ಹೊಂದಿರುವ ಪ್ರೋಟಿನ್‍ಗಳು. ಅಮೈನೇತರ ಆಮ್ಲಗಳನ್ನು ಪ್ರೋಸ್ಥೆಟಕ್ (Prosthetic) ಗುಂಪು ಎನ್ನುವರು.
ಉದಾ:-1) ಗ್ಲೈಕೋಪ್ರೋಟಿನ್ ಇದರಲ್ಲಿ ಕಾರ್ಬೊಹೈಡ್ರಟ್ ಎಂಬುದು (Prosthetic) ಗುಂಪಾಗುತ್ತದೆ.
2) ಪಾಸ್ಫೋಪ್ರೋಟಿನ್ ಇದರಲ್ಲಿ ಪಾಸ್ಫೇಟ್ ಎಂಬುದು ಒಂದು (Prosthetic) ಗುಂಪಾಗುತ್ತದೆ.
3) ಲೈಪೋ ಪ್ರೋಟಿನ್ ಇದರಲ್ಲಿ ಲಿಪಿಡ್ ಎಂಬುದು ಒಂದು (Prosthetic) ಗುಂಪಾಗುತ್ತದೆ.
* (Shapes of proteins) ಪ್ರೋಟಿನ್‍ನ ಆಕಾರಗಳು :
ಇವುಗಳು ಮುಖ್ಯವಾಗಿ ಜಿವಿದ್ರವ ಆಕಾರಗಳ ನ್ನೊಲಗೊಂಡಿವೆ
1) ನಾರೂ ಪ್ರೋಟಿನುಗಳು,
2) ಗೋಳಾಕಾರದ ಪ್ರೋಟಿನಗಳು
1) ನಾರೂ ಪ್ರೋಟಿನುಗಳು :- ನಾರಿನ ರೀತಿ ತೆಳ್ಳಗೆ ಉದ್ಧವಾದ ಆಕಾರವನ್ನು ಹೊಂದಿರುವ ಪ್ರೋಟಿನುಗಳು ಉಣ್ಣೆ, ರೇμÉ್ಮ, ಚರ್ಮ ಉಗುರು
2) ಗೋಳಾಕಾರದ ಪ್ರೋಟಿನಗಳು :- ಗೋಳಾಕಾರವಾಗಿದ್ದು ರಕ್ತ, ಹಾಲು, ಮೊಟ್ಟೆ ಹಾಗೂ ದೇಹದಲ್ಲಿರುವ ದ್ರವಗಳಲ್ಲ ಕಂಡು ಬರುತ್ತದೆ.
* ಪ್ರೋಟಿನ್ ಪಚನಕ್ರಿಯೆ (Digestion of proteins)
ಪ್ರೋಟಿನ್‍ನ ಪಚನ ಕ್ರಿಯೆ ಜಠರದಲ್ಲಿ ಪ್ರಾರಂಭವಾಗುತ್ತದೆ. ಜಠರದಲ್ಲಿರುವ ಹೈಡ್ರೋಕ್ಲೋರಿಕ್ ಆಮ್ಲವು ಪಚನ ಕ್ರಿಯೆಯ ಮುಂಚೆ ಪ್ರೋಟಿನ್ ಸ್ವಭಾವ ಕೆಡಿಸುತ್ತದೆ. ನಂತರ ಜಠರದಲ್ಲಿ ಉತ್ಪತ್ತಿಯಾದ ಪ್ರೋಟಿಯೆಸಸ್ ಮತ್ತು ಪೆಪ್ಟಿಡೈಸಿಸ್ ಎಂಬ ಎರಡು ಕಿಣ್ವಗಳು ಪ್ರೋಟಿನ್ ಪಚನ ಕ್ರಿಯೆ ನಡೆಸುತ್ತವೆ.
* ಪ್ರೋಟಿಯೆಸ್‍ಗಳು ದೊಡ್ಡ ಪ್ರೋಟಿನ್ ಅಣುಗಳನ್ನು ಚಿಕ್ಕದಾಗಿ ಒಡೆದರೆ, ಪೆಪ್ಟೆಡೇಸ್‍ಗಳು ಅವುಗಳನ್ನು ಅಮೈನೋ ಆಮ್ಲವನ್ನಾಗಿ ಪರಿವರ್ತಿಸುತ್ತವೆ.
*ಜಠರದಲ್ಲಿ ಪ್ರಾರಂಭವಾದ ಪ್ರೋಟಿನ್‍ಗಳು ಪಚನಕ್ರಿಯೆ ಕರುಳಿನಲ್ಲಿ ಮುಂದುವರಿಯುತ್ತದೆ. ಮೇದೋಜಿರಕ ಸ್ರವಿಸುವ ಟ್ರಿಪ್ಸಿನ್ ಹಾಗೂ ಕಿವೊಟ್ರಿಪ್ಸಿನ್
ಮೊದಲಾದವುಗಳು ಈ ಕ್ರಿಯೆಯಲ್ಲಿ ತೊಡಗುತ್ತವೆ.
* ಆಹಾರದಲ್ಲಿರುವ ಪ್ರೋಟಿನಗಳು ಪಚನ ಹೊಂದಿ ಅಮೈನೋ ಆಮ್ಲವಾಗಿ ಪರಿವರ್ತನೆ ಹೊಂದಿ ಸಣ್ಣಕರುಳಿನ ಗೋಡೆಯಲ್ಲಿರುವ ಎಲೈಗಳಲ್ಲಿ ಹೇರಲ್ಪಡುತ್ತವೆ.
ಆಹಾರದಲ್ಲಿ ಪ್ರೋಟಿನ್ ಕೊರತೆಯಿಂದ ಬರುವ ರೋಗಗಳು
1) ಮಾರಸ್ಮಸ್
2) ಕ್ವಾಸಿಯೊರಕೊರ್
1) ಮಾರಸ್ಮಸ್
* ಒಂದು ವರ್ಷದೊಳಗಿನ ಶಿಸುಗಳಲ್ಲಿ ಕಂಡುಬರುವ ರೋಗ
*ಶಿಶುಗಳ ಆಹಾರದಲ್ಲಿ ಪ್ರೋಟಿನ್ ಮತ್ತು ಕಾರ್ಬೊಹೈಡ್ರಟ್ ಕಡಿಮೆ ಇದ್ದಲ್ಲಿ ಈ ಕಾಯಿಲೆ ಉಂಟಾಗುತ್ತದೆ.
*ಎದೆ ಹಾಲಿನ ಪೋಷಣೆ ಇಲ್ಲದ ಶಿಶುಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಕಾಯಿಲೆ ಲಕ್ಷಣಗಳು:-
* ಮಾಂಸ ಖಂಡಗಳ ಇಳಿ ಬೀಳುವಿಕೆ
* ಕುಂಠಿತ ಬೆಳವಣಿಗೆ
* ಮಾನಸಿಕ ಬೆಳವಣಿಗೆ ಕುಂಠಿತ
* ಒಣಗಿದ ಚರ್ಮ
* ಬಡಕಾದ ಕೈ-ಕಾಲುಗಳು
* ನಿಶಕ್ತಿ
ಪರಿಹಾರ :-
* ಪ್ರೋಟಿನ್ ಸಮೃದ್ಧವಾಗಿರುವ ಹಾಲು, ಬೇಯಿಸಿದ ಧಾನ್ಯಗಳು ಬಾಳೆಹಣ್ಣು ಕಡಲೆಕಾಯಿ ಇತ್ಯಾದಿ.
2) ಕ್ವಾಸಿಯೊರಕೊರ್
* ಇದು ಪ್ರೋಟಿನ್ ಕೊರತೆಯಿಂದ ಉಂಟಾಗುತ್ತದೆ.
* ಈ ರೋಗದ ಹೆಸರನ್ನು ಜರ್ಮನಿಯ ಮೈದ್ಯರಾದ ಸಿಸಿಲೆ ಡಿ- ವಿಲಿಯಮ್ ಪರಿಚಯಿಸಿದರು.
ಲಕ್ಷಣಗಳು :-
* ಹೊಟ್ಟೆ, ಕಾಲು, ಕೈಯಿ ಊದಿಕೊಳ್ಳುತ್ತವೆ.
* ಚರ್ಮ ಹಾಗೂ ಕೂದಲುಗಳು ಬದಲಾಗುವಿಕೆ.
* ಮೌಂಸ ಖಂಡಗಳು ಜೇತು ಬೀಲುವಿಕೆ
* ಬುದ್ಧಿಮಾಂದ್ಯತೆ
ಪರಿಹಾರ:-
* ಪ್ರೋಟಿನ್ ಇರುವ ಆಹಾರ ಕೊಡುವದು.
ಲಿಪಿಡ್ಸ್‍ಗಳು (ಕೊಬ್ಬು ಮತ್ತು ಎಣ್ಣೆಗಳು)
*ಕಾರ್ಬನ, ಆಕ್ಸಿಜೆನ್, ಹೈಡ್ರೋಜನ್‍ಗಳಿಂದ ಮಾಡಲ್ಪಟ್ಟ ಮೊತ್ತಂದು ಸಂಯುಕ್ತವೆ ಕೊಬ್ಬು.
*ಲಿಪಿಡ್ಸ್‍ಗಳು ಶಕ್ತಿಯನ್ನು ಒದಗಿಸುತ್ತವೆ, ಆದುದರಿಂದ ಲಿಪಿಡ್‍ಗಳನ್ನು ಶಕ್ತಿ ಉತ್ಪಾದಕ ಎನ್ನುತ್ತಾರೆ.
* ಲಿಪಿಡ್‍ಗಳು ಕಾರ್ಬೊಹೈಡ್ರೇಟ್‍ಗಳಿಗಿಂತ ಹೆಚ್ಚಿನ ಪ್ರಮಾಣ ಶಕ್ತಿ ಒದಗಿಸುತ್ತವೆ.
* 1 ಗ್ರಾಂ ಕೊಬ್ಬು 3.7 ಕಿಲೋ ಜೌಲ್ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ.
* ಪ್ರತಿದಿನ ನಮ್ಮ ಸಾಮಾನ್ಯ ಆಹಾರದಲ್ಲಿ 75 ಗ್ರಾಂ ನಷ್ಟು ಕೊಬು ಇರಬೇಕು
* ಕೊಬ್ಬು ನೀರಿನಲ್ಲಿ ಕರಗುವದಿಲ್ಲ ಆದರೆ ಸಾವಯವ ಸಂಯುಕ್ತಗಳಾದ ಆಲ್ಕೋಹಾಲ್, ಬೆಂಜೀನ್, ಈಥರ್‍ಗಳಲ್ಲಿ ಮಾತ್ರ ಕರಗುತ್ತದೆ.
* ಲಿಪಿಡ್‍ಗಳು ಸಸ್ಯಗಳಲ್ಲಿ ಎಣ್ಣೆಯ ರೂಪದಲ್ಲೂ, ಪ್ರಾಣಿಗಳಲ್ಲಿ ಕೊಬ್ಬಿನ ರೂಪದಲ್ಲಿ ಕಂಡು ಬರುತ್ತದೆ.
* ಲಿಪಿಡ್‍ಗಳು ದೇಹವನ್ನು ಬೆಚ್ಚಗಿಟ್ಟು ಚಳಿಯಿಂದ ರಕ್ಷಿಸುತ್ತವೆ.
ಕೊಬ್ಬಿನ ವಿಧಗಳು
ಎರಡು ವಿಧಗಳು:-
1) ಪರ್ಯಾಪ್ತ ಕೊಬ್ಬ
2) ಅಪರ್ಯಾಪ್ತ ಕೊಬ್ಬ
* ಕೊಬ್ಬಿನ ಮೂಲಗಳು :-
* ಸಸ್ಯಜಿನ್ಯ ಲಿಪಿಡ್‍ಗಳಿಗೆ ಉದಾಹರಣೆಗಳು:- ವಿವಿಧ ಬೀಜಗಳು, ಕಡ್ಲೆಕಾಯಿ ಎಣ್ಣೆ, ಕೊಬ್ಬರಿ ಎಣ್ಣೆ, ಸೂರ್ಯಕಾಂತಿ ಎಣ್ಣೆ
* ಪ್ರಾಣಿಜನ್ಯ ಲಿಪಿಡ್‍ಗಳಿಗೆ ಉದಾಹಾರಣೆ:- ಹಾಲು, ಮೊಟ್ಟೆಯಯೋಕ್, ಮೌಂಸ, ಗಿಣ್ಣು, ಬೆಣ್ಣೆ, ತುಪ್ಪ.
* ಲಿಪಿಡ್‍ಗಳ ವಿಧಗಳು:-
*ಅವಶ್ಯಕ ಕೊಬ್ಬಿನ ಆಮ್ಲಗಳು ಉದಾ:- ಲಿನೋಲೆಯಿಕ್ ಮತ್ತು ಲಿನೋಲೆನಿಕ್ ಆಮ್ಲಗಳು
* ಅನಾವಶ್ಯಕ ಕೊಬ್ಬಿನ ಆಮ್ಲಗಳು ಉದಾ:- ಗ್ಲೈಸೀನ್
*ಲಿಪಿಡ್‍ಗಳ ವಿಧಗಳು :- ಅವುಗಳು ರಚನೆಗೆ ಅಣುಗುಣವಾಗಿ ಎರಡು ವಿಧಗಳಿವೆ
1) ಸರಳ ಲಿಪಿಡ್‍ಗಳು (Simple Lipids) ಕೇವಲ ಕೊಬ್ಬಿನಾಮ್ಲಗಳನ್ನು ಮಾತ್ರ ಹೊಂದಿರುವಲಿಪಿಡ್‍ಗಳು
2) ಸಂಕೀರ್ಣ ಲಿಪಿಡ್‍ಗಳು (Conjugated Lipds) ಲಿಪಿಡ್ ಜೊತೆಗೆ ಲಿಪಿಡ್ ಅಲ್ಲದ ಬೇರೊಂದು ಘಟಕವು ಸೇರಿ ಆಗಿರುವ ಲಿಪಿಡ್‍ಗಳು.
*ಪಾಸ್ಫೋಲಿಪಿಡ್ :- ಲಿಸಿಥಿನ್, ಸೆಪಾಲಿನ್ ಪ್ಲಾಸ್ಮೋಜೆನ್, ಐಸೋಸಿಟೈಡ್ಸ್
*ಗ್ಲೈಕೋಲಿಪಿಡ್‍ಗಳು :- ಸೆರೆಬೋಸೈಡ್ಸ್, ಗ್ಯಾಂಗ್ಲಿಯೋಸೈಡ್ಸ್
* ಸ್ಪಿಂಗೋಲಿಪಿಡ್‍ಗಳು :- ಸ್ಪಿಂಗೋಮಯಲಿನ್
ಲಿಪಿಡ್‍ಗಳ ಪೋಷಣಾ ಪ್ರಾಮುಖ್ಯತೆ:-
* ದೇಹಕ್ಕೆ ಸಮೃದ್ಧ ಶಕ್ತಿಯ ಆಕರಗಳಾಗಿವೆ.
* ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು ಉಪವಾಸದ ಸಮಯದಲ್ಲಿ ಶಕ್ತಿಯನ್ನು ಕೊಡುತ್ತದೆ.
*ಜೀವಸತ್ವ ಎ.ಡಿ.ಇ.ಕೆ ಮತ್ತು ಕ್ಯಾರೋಟಿನಾಯ್ಡ್‍ಗಳನ್ನು ಹೀರಿಕೊಳ್ಳಲು
* ಸ್ಟೀರಾಯ್ಡಗಳು ಮತ್ತು ಅದಕ್ಕೆ ಸಂಬಂಧಿಸಿದ ಸಂಯುಕ್ತಗಳು ದೇಹದ ಬೆಳವಣಿಗೆ ಮತ್ತು ಸವರ್ಧನಗಳನ್ನು ನಿಯಂತ್ರಿಸುತ್ತವೆ.
ಲಿಪಿಡ್ ನ್ಯೂನತಾ ಕಾಯಿಲೆ :-
1) ಫೈನೋಡರ್ಮ
2) ಅಥರೋಸ್ಕ್ಲಿರೋಸಿಸ್
ಕಾರ್ಬೊಹೈಡ್ರೇಟ್ ಪರೀಕ್ಷೆ :
1) ಆಯೊಡಿನ್ ಪರೀಕ್ಷೆ :-ಪಿಷ್ಟ ಅಂಶ ಇರುವ ಪದಾರ್ಥವನ್ನು ತೆಗೆದುಕೊಂಡು ಅದನ್ನು ನೀರಿರುವ ಪ್ರಾನಾಳಕ್ಕೆ ಹಾಕಿ ಆಯೋಡಿನ್ ದ್ರಾವಣವನ್ನು ಹನಿ ಹನಿಯಾಗಿ ಹಾಕಿದಾಗ ದ್ರವಣದ ಬಣ್ಣ ಕಪ್ಪು ಮಿಶ್ರೀತ ನೀಲಿ ಬಣ್ಣಕೆ ಬದಲಾಯಿಸುತ್ತದೆ.
2) ಶರ್ಕರ ಬೆನಿಡಿಕ್ಟ್ ದ್ರಾವಣ ಪರೀಕ್ಷೆ:- ತಾಮ್ರದ ಸಲ್ಫೇಟ, ಸೋಡಿಯಂಸಿಟ್ರೇಟ್ ಮತ್ತು ಸೋಡಿಯಮ್ ಕಾರ್ಬೊನೇಟ್‍ಗಳ ಮಿಶ್ರಣದ ದ್ರಾವಣವೇ
(ಬೆನಿಡಿಕ್ಟ್‍ದ್ರಾವಣ)
* ಸಕ್ಕರೆ+ಬೆನಿಡಿಕ್ಟೆ ದ್ರಾವಣ - ಬಣ್ಣ, ಬಣ್ಣ ಒತ್ತರೆಗಳು
* ಬಾಳೆಹಣ್ಣು+ಬೆನಿಡಿಕ್ಟೆ ದ್ರಾವಣ- ಹಸಿರು ಒತ್ತರೆ
* ಆಲೂಗಡ್ಡೆ+ಬೆನಿಡಿಕ್ಟೆ ದ್ರಾವಣ- ನಸುಹಳದಿ /ಕಿತ್ತಲೆ ಒತ್ತರ
ಪ್ರೋಟೀನ್ ಪರೀಕ್ಷೆ:-
ಪ್ರೋಟೀನ್ ಇರಬಹುದಾದ ಒಂದು ಆಹಾರ ವಸ್ತವನ್ನು ತೆಗೆದುಕೊಂಡು ಅದಕ್ಕೆ ಕೆಲವು ಹನಿಗಳಷ್ಟು ನೈಟ್ರಿಕ್ ಆಮ್ಲ ಹಾಕಿದಾಗ ಬಣ್ಣರಹಿತ ದಿಂದ ನಸುಹಳದಿ ಬಣಕ್ಕೆ ತಿರುಗುತ್ತದೆ. ಇದಕ್ಕೆ ಕೆಲವು ಹನಿ ಅಮೋನಿಯಮ್ ಹೈಡ್ರಾಕ್ಸೈಡ್ ಹಾಕಿದಾಗ ಬಣ್ಣಕಿತ್ತಲೆ ಕೆಂಪು ಬದಲಾಯಿಸುತ್ತದೆ.
ನಾರು ಪದಾರ್ಥಗಳು:-
* ನಾರಿನ ಪದಾರ್ಥಗಳು ಜೀರ್ಣಾಂಗವ್ಯೂಹವು ಕ್ರಮ ಬದ್ದವಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ.
* ನಮ್ಮ ಶರೀರದಲ್ಲಿ ಇವು ಜೀರ್ಣವಾಗುವದಿಲ್ಲ. ಇಂತಹ ಪದಾರ್ಥಗಳಿಗೆ ನಾರು ಪದಾರ್ಥಗಳೆನ್ನುವರು.
ನಾರಿನ ಪದಾರ್ಥಗಳಿಗೆ ಉದಾ:- ಹುರುಳಿಕಾಯಿ, ಕ್ಯಾರೇಟ್, ಬಾಳೆಯದಿಂಡು, ಬಟಾಣಿ, ಟರ್ನಿಪ್ ಗಡ್ಡೆ, ಎಲೆಕೇಸು, ಸಿಪ್ಪೆ ಸಮೇತ ತಿನ್ನವಂತಹ ಹಣ್ಣುಗಳಾದ ಸೇಬು, ಮರಸೇಬು, ಸೀಬೆ, ದಾನ್ಯ ಮತ್ತು ಕಾಳುಗಳು
ಜೀವಸತ್ವಗಳು (ವಿಟಮಿನ್)
* ದೇಹಕ್ಕೆ ಕಡಿಮೆ ಪ್ರಮಾಣದಲ್ಲಿ ಬೇಕಾಗುವಂತಹ ಕಾರ್ಬಾನಿಕ್ ಸಂಯುಕ್ತ ವಸ್ತುಗಳನ್ನು ಜೀವಸತ್ವ ಗಳೆನ್ನುವರು.
* ಇವು ದೇಹದ ಉತ್ತಮ ಬೆಳವಣಿಗೆ ಮತ್ತು ಜೈವಿಕ ಕ್ರಿಯೆಗಳಿಗೆ ಅವಶ್ಯಕವಾದವು ಇವುಗಳ ಕೊರತೆಯಿಂದ ಅನೇಕರೋಗ ಉಂಟಾಗುತ್ತವೆ.
* ಪ್ರಮುಖ ಜೀವಸತ್ವಗಳೆಂದರೆ A D E K B C
ಆಹಾರ ಸಂಸ್ಕರಣೆ
* ಸೂಕ್ಷಾಣುಗಳು ಮತ್ತು ಇತರೆ ಕಾರಣಗಳಿಂದ ಆಹಾರವು ಕೆಡದಂತೆ ತೆಡಯುವ ವಿಧಾನವನ್ನು ಆಹಾರ ಸಂರಕ್ಷಣೆ ಎನ್ನುತ್ತಾರೆ.
* ಆಹಾರ ಕೆಡುವಿಕೆಯಲ್ಲಿ ಪ್ರಮುಖ್ಯವಾಗಿ 2 ವಿದಗಳಿವೆ.
1) ಆಂತರಿಕ ಅಂಶ 2) ಬಾಹ್ಯ ಅಂಶ
1) ಆಂತರಿಕ ಅಂಶ :- ಆಹಾರದಲ್ಲಿರುವ ತೇವಾಂಶ ಹಾಗೂ ಕಿಣ್ವದ ಚಟುವಟಿಕೆಗಳು.
2)ಬ್ಯಾಹ್ಯ ಅಂಶ :- ಉಷ್ಣಾಂಶ, ತೇವಾಂಶ, ಸೂಕ್ಷ್ಮಜೀವಿಗಳು, ಸಂಗ್ರಹಣಾದೋಷ, ಕೀಟಗಳು, ಧ್ವಂಶಕ ಮತ್ತು ಹಕ್ಕಿಗಳಿಂದ ಆಹಾರವು ಕೆಡುತ್ತದೆ.
ಆಹಾರವನ್ನು ಸಂರಕ್ಷಿಸುವ ವಿಧಾನಗಳು:-
* ಒಣಗಿಸುವಿಕೆ
* ಶಿಥಲಿಕರಣ
* ರಾಸಾಯನಿಕ ವಿಧಾನ
* ಲೋಹದ ಡಬ್ಬಗಳಲ್ಲಿ ಸಂಗ್ರಹಿಸುವುದು.
* ವಿಕಿರಣಕ್ಕೆ ಒಡ್ಡುವುದು.
* ಪಾಶ್ಚರೀಕರಣ:- ಆಹಾರ ಪದಾರ್ಥಗಳನ್ನು ಒಂದು ನಿಗಧಿತ ಉಷ್ಣಾಂಶದಲ್ಲಿ ಕಾಯಿಸುವುದು.
* ಫ್ರಾನ್ಸ್ ದೇಶದ ರಸಾಯನ ವಿಜ್ಞಾನಿ ಹಾಗೂ ಸೂಕ್ಷ್ಮಶಾಸ್ತ್ರಜ್ಞ ಲೂಯಿಪಾಶ್ಚರ ರವರು 1869 ಏಫ್ರೀಲ್ 10 ರಂದು ಜಗತ್ತಿಗೆ ಈ ವಿಧಾನವನ್ನು ಪರಿಚಯಿಸಿದರು.
* ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಅನುಕೂಲಕರವಾದ ಉಷ್ಣಾಂಶವೆಂದರೆ 20-35 ಡಿಗ್ರಿ.
ಆಹಾರ ಕಲಬೆರಕೆ
* ಆಹಾರ ಪದಾರ್ಥಕ್ಕೆ ಕಡಿಮೆ ಗುಣಮಟ್ಟದ ಪದಾರ್ಥಗಳನ್ನು ಬೆರಸುವುದು ಮತ್ತು ಆಹಾರದಲ್ಲಿನ ಪೋಷಕಾಂಶಗಳನ್ನು ಕಡಿಮೆ ಮಾಡುವ ಪದ್ದತಿಗೆ ಆಹಾರ ಕಲಬೆರಕೆ ಎನ್ನುವರು
* ಆಹಾರ ಕಲಬೆರಕೆ ವಿಧಗಳು
1) ಆಕಸ್ಮಿಕ ಕಲಬೆರಕೆ
2) ಉದ್ದೇಶ ಪೂರ್ವಕ ಕಲಬೆರಕೆ
ನೀರು
* ನೀರು ಒಂದು ಅತ್ಯಮೂಲ್ಯ ನೈಸರ್ಗಿಕ ಸಂಪತ್ತು.
* ಭೂಮಿಯ ಮೇಲಿರುವ ಎಲ್ಲಾ ಜೀವಿಗಳು ನೀರುನ್ನು ಅವಲಂಬಿಸಿವೆ.
* ನೀರಿನಲ್ಲಿ ಹೈಡ್ರೊಜನ್ ಮತ್ತು ಆಕ್ಸಿಜನ್‍ಗಳ ಪ್ರಮಾಣ 2:1 ಆಗಿದೆ.
* ಶುದ್ಧನೀರು ಉಷ್ಣ ಮತ್ತು ವಿದ್ಯುತ್ ಅವಾಹಕ
* ಅನೇಕ ವಸ್ತುಗಳನ್ನು ನೀರು ತನ್ನಲ್ಲಿ ಕರಗಿಸಿಕೊಳ್ಳುತ್ತದೆ. ಅದ್ದರಿಂದ ಸಾರ್ವತ್ರಿಕ ದ್ರಾವಕ ಎನ್ನುವರು
* ಭೂಮಿಯ ಮೇಲಿನ ನೀರು ಸೂರ್ಯನ ಶಾಖದಿಂದ ಆವಿಕರಣಗೊಂಡು ಮೇಲೆ ಹೋಗಿ, ಸಾಂದ್ರೀಕರಣದಿಂದ ಮೋಡವಾಗಿ ಪುನಃ ಮಳೆ ಅಥವಾ ಹಿಮದ ರೂಪದಲ್ಲಿ ಭೂಮಿಯನ್ನು ಸೇರುವುದೇ ಜಲಚಕ್ರ
* 0.005 ಪ್ರತಿಶತ ಮಾತ್ರ ನೀರು ಜಲಚಕ್ರದಲ್ಲಿ ಪ್ರವಹಿಸುತ್ತದೆ.
* ಭೂಮಿಯಲ್ಲಿ ಲಭ್ಯವಿರುವ ನೀರಿನಲ್ಲಿ 97% ರಷ್ಟು ಉಪ್ಪು ನೀರಾದರೆ ಕೇವಲ 3% ರಷ್ಟು ಮಾತ್ರ ಸಿಹಿ ನೀರು.
ನೀರಿನ ಭೌತಿಕ ಲಕ್ಷಣಗಳು:-
* ಶುದ್ಧ ನೀರಿಗೆ ಬಣ್ಣ ಇಲ್ಲ ರುಚಿ ಇಲ್ಲ ವಾಸನೆ ಇಲ್ಲ.
* ನೀರಿನ ಕುದಿಯುವ ಬಿಂದು 100 ಡಿಗ್ರಿ ಸೆಲಿಸಿಯ್ಸ್
* ನೀರು 4 ಡಿಗ್ರಿ ಸೆಲಿಸಿಯ್ಸ್ ನಲ್ಲಿ ಅಧಿಕ ಸಾಂದ್ರತೆ ಹೊಂದಿರುತ್ತದೆ.
ನೀರಿನ ವಿಧಗಳು :-
1) ಗಡುಸು ನೀರು
2) ಮೆದು ನೀರು
1) ಗಡಸು ನೀರು :- ಗಡಸು ನೀರಿಗೆ ಕಾರಣ ನೀರಿನಲ್ಲಿ ಮೆಗ್ನೀಸಿಯಮ್ ಕ್ಲೋರೈಡ್‍ಗಳು, ಕ್ಯಾಲ್ಸಿಯಮ್ ಕ್ಲೋರೈಡ್‍ಗಳು, ಸಲ್ಫೇಟಗಳು ಹಾಗೂ ಬೈಕಾರ್ಬೊನೇಟ್ ಲವಣಗಳು ನೀರಿನಲ್ಲಿ ಕರಗಿರುತ್ತವೆ.
* ಗಡಸು ನೀರುನ ವಿಧಗಳು
1) ತಾತ್ಕಾಲಿಕ ಗಡಸು ನೀರು
2) ಶಾಶ್ವತ ಗಡಸು ನೀರು
1) ತಾತ್ಕಾಲಿಕ ಗಡಸು ನೀರು:- ಕ್ಯಾಲ್ಸಿಯಮ್ ಬೈಕಾರ್ಬೋನೇಟ್ ಮತ್ತು ಮೆಗ್ನೀಸಿಯಮ್ ಬೈಕಾರ್ಬೋನೆಟ್‍ಗಳಿಂದ ನೀರಿನ ತಾತ್ಕಾಲಿಕ ಗಡಸುತನ ಉಂಟಾಗುತ್ತದೆ.
2) ಶಾಶ್ವತ ಗಡಸುತನ:- ಕ್ಯಾಲ್ಸಿಯಮ್ ಕ್ಲೋರೈಡ ಮತ್ತು ಮ್ಯಾಗ್ನೀಸಿಯಮ್ ಕ್ಲೊರೈಡ್ ಮತ್ತು ಮೆಗ್ನೀಸಿಯಮ್‍ಗಳು ನೀರಿನಲ್ಲಿ ಕರಗಿರುವದರಿಂದ ಶಾಶ್ವತ ಗಡಸುತನ ಉಂಟಾಗಿರುತ್ತದೆ.
*ಸೋಡಿಯಮ್ ಅಲ್ಯೂಮಿನಿಯಂ ಸಿಲಿಕೇಟ್‍ನ್ನು ಜಿಯೋಲೈಟ್ ಅನ್ನುವರು
*ಸಂಶ್ಲೇಷಿತ ಜಿಯೋಲೈಟನ್ನು ಪರ್ಮುಟಿಟ್ ಎನ್ನುವರು.