6. ನೈಸರ್ಗಿಕ ಸಂಪನ್ಮೂಲಗಳು
* ಪ್ರಕೃತಿಯಲ್ಲಿ ದೊರಕುವ ನಮಗೆ ಉಪಯುಕ್ತವಾಗುವ
ವಸ್ತುಗಳನ್ನು ನೈಸರ್ಗಿಕ ಸಂಪನ್ಮೂಲಗಳು ಎಂದು ಕರೆಯಬಹುದು.
* ನೈಸರ್ಗಿಕ ಸಂಪನ್ಮೂಲಗಳನ್ನು ನವೀಕರಣಗೊಳ್ಳಬಲ್ಲ
ಸಂಪನ್ಮೂಲಗಳು ಮತ್ತು ನವೀಕರಣಗೊಳ್ಳದ ಸಂಪನ್ಮೂಲಗಳು ಎಂದು 2 ಗುಂಪುಗಳಾಗಿ ವರ್ಗೀಕರಿಸಲಾಗಿದೆ.
* ತ್ವರಿತ ನೈಸರ್ಗಿಕ ಚಕ್ರಗಳ ಮೂಲಕ ಪುನರುಜ್ಜೀವನಗೊಳ್ಳುವ
ಸಂಪನ್ಮೂಲಗಳನ್ನು ನವೀಕರಣಗೊಳ್ಳಬಲ್ಲ ಸಂಪನ್ಮೂಲಗಳೆಂದು ಕರೆಯಲಾಗಿದೆ.
* ತ್ವರಿತ ನೈಸರ್ಗಿಕ ಚಕ್ರಗಳ ಮೂಲಕ ಪುನರುಜ್ಜೀವನಗೊಳ್ಳದ
ಸಂಪನ್ಮೂಲಗಳನ್ನು ನವೀಕರಣಗೊಳ್ಳದ ಸಂಪನ್ಮೂಲಗಳೆಂದು ಕರೆಯಲಾಗಿದೆ.
ಉದಾ: ಫಾಸಿಲ್ ಇಂಧನಗಳು & ಖನಿಜಗಳು
* ನೈಸರ್ಗಿಕ ಸಂಪನ್ಮೂಲಗಳನ್ನು ವಿವೇಚನೆಯಿಂದ
ಬಳಸುವುದಕ್ಕೆ ಸಂರಕ್ಷಣೆ ಎನ್ನುತ್ತಾರೆ.
* ಕಾಡುಗಳ ನಾಶವನ್ನು ಅರಣ್ಯ ನಾಶವೆನ್ನುತ್ತಾರೆ.
ಪ್ರಪಂಚದಲಿದ್ದು ಮೂಲ ಅರಣ್ಯ ಪ್ರಮಾಣದ ಕೇವಲ ಶೇ 20% ರಷ್ಟು ಮಾತ್ರ ಇಂದು ಯಥಾಸ್ಥಿತಿಯಲ್ಲಿ
ಹಾನಿಗೊಳಗಾಗದೆ ಉಳಿದಿದೆ ಎಂದು ಅಂದಾಜಿಸಲಾಗಿದೆ.
* ನಶಿಸಿದ ಕಾಡುಗಳನ್ನು ಪುನಃ ಬೆಳೆಸುವ ವಿಧಾನಕ್ಕೆ
ಪುನರನವೀಕರಣ ಎಂದು ಹೆಸರು
* ಅರಣ್ಯ ನಾಶದಿಂದ ಮರುಭೂಮಿಕರಣ ಉಂಟಾಗುತ್ತದೆ.
* ಕೃಷಿಗೊಳಪಡಿಸಿದ ಎಲ್ಲಾ ಸಸ್ಯಗಳು
& ಮನೆಯಲ್ಲಿ ಸಾಕಿದಎಲ್ಲಾ ಪ್ರಾಣಿಗಳನ್ನು ವನ್ಯಜೀವಿಗಳೆಂದು ಪರಿಗಣಿಸಲಾಗಿದೆ.
* ಭೂಪ್ರದೇಶದ ಅವ್ಯಸ್ಥಿತ ಬಳಕೆಯಿಂದ ಅಥವಾ
ವಾಯುಗುಣದ ಬದಲಾವಣೆಗಳಿಂದ ಫಲವತ್ತಾದ ನೆಲವು ಮರೂಭೂಮಿಯಾಗಿ ಮಾರ್ಪಡುವ ವಿಧಾನವೇ
ಮರುಭೂಮೀಕರಣ ವಾಗಿದೆ.
* ಕೃಷಿ ವನಿಕರಣವು ಆಹಾರ ಬೆಳೆಗಳ ಜೊತೆಗೆ
ಮರಗಳನ್ನು ಬೆಳೆಸುವ ಒಂದು ಕಾರ್ಯಕ್ರಮವಾಗಿದೆ.
* ಪ್ರತಿವರ್ಷ ಮಾರ್ಚ 22 ರಂದು ವಿಶ್ವದಾದ್ಯಂತ
ಜಲದಿನ ಎಂದು ಆಚರಿಸಲಾಗುತ್ತಿದೆ.
* ಪ್ರತಿ ವರ್ಷ ಮಾರ್ಚ 21 ರಂದು ವಿಶ್ವದಾದ್ಯಂತ
ವಿಶ್ವ ಅರಣ್ಯದಿನ ಆಚರಿಸಲಾಗುತ್ತಿದೆ.
* ಪ್ರಾಣಿಗಳು & ಸಸ್ಯಗಳು ಸಂಖ್ಯೆ ಅತಿ
ಕಡಿಮೆಯಾಗಿದ್ದು ಅವು ಶೀಘ್ರದಲ್ಲೇ ನಶಿಸಿಹೋಗುವ ಸಾಧ್ಯತೆ ಇರುವ ಪ್ರಭೇದಗಳಿಗೆ ಅಳಿವಿನಂಚಿನಲ್ಲಿರುವ
ಪ್ರಭೇದಗಳು
ಎನ್ನುತ್ತಾರೆ.
ಅಳಿದು ಹೊದ ಪ್ರಭೇದಗಳು:-
ಕೆಲವು ಜೀವಿ ಪ್ರಭೇದಗಳು ಭೂಮಿಯಿಂದ ಸಂಪೂರ್ಣವಾಗಿ
ಅಳಿದು ಹೋಗಿವೆ ಅಂತಹ ಜೀವಿ ಪ್ರಭೇದಗಳನ್ನು ಅಳಿದು ಹೊದ ಪ್ರಭೇದಗಳು ಎನ್ನುತ್ತಾರೆ.
ಉದಾ:- ಎಣ್ಣೆಯ ಮಹಾಗಜ, ಡೈನೋಸಾರ್, ಗುಲಾಬಿ
ತಲೆಯ ಬಾತುಕೊಳಿ
ಎ) ಸ್ವನೆಲೆ ಜೀವಿ ಸಂರಕ್ಷಣೆ:- ಸಸ್ಯಗಳು
ಮತ್ತು ಪ್ರಾಣಿಗಳು ಅವುಗಳ ಸ್ವಾಭಾವಿಕ ಆವಾಸಗಳಲ್ಲಿ ಅಥವಾ ರಕ್ಷಿತ ಪ್ರದೇಶಗಳಲ್ಲಿ ಸಂರಕ್ಷಿಸುವುದನ್ನು
ಇದು ಒಳಗೊಂಡಿದೆ. ಮಿಸಲಿಟ್ಟ ಭೂಮಿ ಅಥವಾ ಸಮುದ್ರದ ಪ್ರದೇಶಗಳನ್ನು ರಕ್ಷಿತ ಪ್ರದೇಶಗಳು ಎನ್ನುತ್ತಾರೆ.
ಬಿ) ಅನ್ಯ ನೆಲೆ ಜೀವಿ ಸಂರಕ್ಷಣೆ :- ಸಸ್ಯಗಳು
ಮತ್ತು ಪ್ರಾಣಿಗಳನ್ನು ಅವುಗಳ ಸ್ವಾಭಾವಿಕ ಆವಾಸಗಳ ಹೊರಗೆ ಸಂರಕ್ಷಿಸುವುದನ್ನು ಇದು ಒಳಗೊಂಡಿದೆ.
ಸಸ್ಯೋದಾನ, ಮೃಗಾಲಯ, ಜೀನ್ ಬ್ಯಾಂಕ್, ಬೀಜ ಬ್ಯಾಂಕ್ ಪರಾಗರೇಣು ಬ್ಯಾಂಕ್ ಮೊದಲಾದುವುಗಳನ್ನು ಒಳಗೊಂಡಿದೆ.
ವನ್ಯಜೀವಿಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗಳು
1) ಐ.ಬಿ.ಡಬ್ಲೂ.ಎಲ್:- ಇಂಡಿಯನ್ ಬೋರ್ಡ
ಆಫ್ ವೈಲ್ಡ್ ಲೈಫ್
2) ಬಿ.ಎನ್.ಹೆಚ್.ಎಸ್:- ಬಾಂಬೆ ನ್ಯಾಚುರಲ್
ಹಿಸ್ಟರಿ ಸೂಸೈಟಿ
3) ಡಬ್ಲೂ.ಪಿ.ಎಸ್.ಐ:- ವೈಲ್ಡ್ ಲೈಫ್ ಪ್ರಿಸರವೇಶನ
ಸೂಸೈಟಿ ಆಫ್ ಇಂಡಿಯಾ
4) ಎಸ್.ಬಿ.ಡಬ್ಲೂ.ಎಲ್:- ವಲ್ಡ್ ವೈಲ್ಡ್
ಲೈಫ್ ಫಂಡ್
5) ಎನ್.ಡಬ್ಲೂ.ಎ.ಪಿ:- ನ್ಯಾಷನಲ್ ವೈಲ್ಡ್
ಲೈಫ್ ಆಕ್ಷನ ಪ್ಲಾನ್
6) ಐ.ಯು.ಸಿ.ಎನ್:- ಇಂಟರ್ ನ್ಯಾಷನಲ್ ಯೂನಿಯನ್
ಫಾರ್ ಕಾನ್ಜರ್‍ವೇಷನ್ ಆಫನೇಚರ್
7) ಡಬ್ಲೂ.ಡಬ್ಲೂ.ಎಫ್:- ವಲ್ರ್ಡವೈಲ್ಡ್.
ಲೈಫ್ ಫಂಡ್
8) ಡಬ್ಲೂ.ಸಿಯು:- ವಲ್ರ್ಡ ಕನ್ಜರ್‍ವೇಷನ್
ಯೂನಿಯನ್
9) ಸಿ.ಐ.ಟಿ.ಇ.ಎಸ್:- ಕನ್ಜರ್‍ವೇಷನ್
ಆಫ್ ಇಂಟರ್ ನ್ಯಾಷನಲ್ ಟ್ರೇಡ್ ಇನ್ ಎಂಡೇಜರ್ಡ ಸ್ಪೇಷಿಸ್
ಪಳೆಯುಳಿಕೆ ಇಂಧನಗಳ ಸಂರಕ್ಷಣೆ:-
ಸಸ್ಯಗಳು ಮತ್ತು ಪ್ರಾಣಿಗಳ ಅವಶೇಷಗಳು ಲಕ್ಷಾಂತರ
ವರ್ಷಗಳ ನಂತರ ಕಲ್ಲಿದ್ದಲು, ಪೆಟ್ರೋಲಿಯಂ, ಉತ್ಪನ್ನಗಳು ಮತ್ತು ನೈಸರ್ಗಿಕ ಅನಿಲಗಳಾಗಿ ರೂಪಾಂತರಗೊಳ್ಳುತ್ತವೆ.
ಇವುಗಳನ್ನು ನಾವು ಪಳೆಯುಳಿಕೆ ಇಂಧನಗಳು ಎಂದು ಕರೆಯುತ್ತೇವೆ. ಕಲ್ಲಿದ್ದಲು ಹೇರಳವಾಗಿ ದೊರೆಯುವ ಪಳೆಯುಳಿಕೆ
ಇಂಧನ ಇದನ್ನು ಕೈಗಾರಿಕಾ ಚಟುವಟಿಕೆಗಳಲ್ಲಿ ದಹನ ಕ್ರಿಯೆಗಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಕಲ್ಲಿದ್ದಿಲಿನ
ವಿವಿಧ ಉತ್ಪನ್ನಗಳಾದ ಕಲ್ಲಿದ್ದಲು ಅನಿಲ, ಕಲ್ಲಿದಲ್ಲು ಟಾರ್, ಬೆಂಜೀನ್, ಟಾಲೀನ್ ಮುಂತಾದವುಗಳನ್ನು
ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಈ ಇಂಧನಗಳು ರೂಪಗೊಳ್ಳಲು ಸುಧೀರ್ಘ ಅವಧಿಯನ್ನು ತೆಗೆದುಕೊಳ್ಳುತ್ತವೆ.
& ನವೀಕರಿಸಲಾಗದ ಸಂಪನ್ಮೂಲಗಳಾದ ಕಾರಣ ಇವುಗಳನ್ನು ವಿವೇಚನೆಯಿಂದ ಬಳಸುವುದು ಬಹಳಮುಖ್ಯ
* ಶಕ್ತಿಯ ಪರ್ಯಾಯ ಮೂಲಗಳಾದ ಸೌರಶಕ್ತಿ, ಪವನಶಕ್ತಿ,
ಶಾಖೋತ್ಪನ್ನ ಶಕ್ತಿ, ಭರತಶಕ್ತಿ, ಪರಮಾಣು ಶಕ್ತಿ ಮುಂತಾದವುಗಳನ್ನು ಬಳಸಲು ಶಿಫಾರಸು ಮಾಡಲಾಗುತ್ತದೆ.
ಪಳಿಯುಳಿಕೆ ಇಂಧನಗಳನ್ನು ಸಂರಕ್ಷಿಸುವ ಕ್ರಮಗಳು:-
* ಸಾರ್ವಜನಿಕ ಸಾರಿಗೆಯನ್ನು ಬಳಸಿ ನಿಮ್ಮ
ಗಮ್ಯಸ್ಥಾನವನ್ನು ಸೈಕಲ್ ಸವಾರಿ ಅಥವಾ ಕಾಲ್ನಡಿಗೆಯ ಮೂಲಕ ತಲುಪಲು ಪ್ರಯತ್ನಿಸಿ
* ಸೌರ ಫಲಕಗಳನ್ನು ಬಳಸಿ
* ಪ್ಲಾಸ್ಟಿಕ್ ಅನ್ನು ಹೆಚ್ಚಾಗಿ ಬಳಸದಿರಲು
ಪ್ರಯತ್ನಿಸಿ
* 3ಆರ್ ಮಿತಗೊಳಿಸುವಿಕೆ, ಪುನರ್ಬಳಕೆ, ಮರುಚಕ್ರಿಕಗಳನ್ನು
ಅನುಸರಿಸಿ
* ಅವಶ್ಯವಿಲ್ಲದಿದ್ದಾಗ ವಿದ್ಯತ್ ದೀಪಗಳನ್ನು
ಆರಿಸಿ
* ಪರಿಸರ ಸ್ನೇಹಿ ಜೀವನ ಶೈಲಿಯನ್ನು ಅನುಸರಿಸಲು
ಇತರರನ್ನು ಪ್ರೇರೆಪಿಸಿ ನೀರು. ಭೂಮಿಯ ಮೇಲೆ ದೊರಕುವ ಒಟ್ಟು ನೀರಿನ ಸುಮಾರು ಶೇ 99% ರಷ್ಟ ನೀರು
ಲವಣಯುಕ್ತವಾಗಿದ್ದು ಅಥವಾ ಮಂಜುಗಡ್ಡೆ ರೂಪದಲ್ಲಿದ್ದು ಮಾನವನ ಉಪಯೋಗಕ್ಕೆ ಲಭ್ಯವಿರುವುದಿಲ್ಲ.
* 1 ಟನ್ ಕಾಗದವನ್ನು ಉತ್ಪಾದಿಸಲು
55,000 ಲೀಟರ್ ನೀರನ್ನು ಬಳಸಲಾಗುತ್ತಿದೆ.
* 97% ಸಾಗರ, ಸಮುದ್ರ, 0.001 ನೀರಾವಿ,
2.4% ಮಂಜುಗಡ್ಡೆ ರೂಪದಲ್ಲಿ ಉಳಿದಿದೆ. ನದಿಗಳು, ಸರೋವರಗಳ ಕೆಳಗೆ 1 ಟನ್ ಉಕ್ಕನ್ನು ಉತ್ಪಾದಿಸಲು
400000 ಲೀಟರ್ ನೀರನ್ನು ಬಳಸಲಾಗುತ್ತಿದೆ.
* ಒಬ್ಬ ವ್ಯಕ್ತಿಗೆ ಒಂದು ದಿವಸಕ್ಕೆ ಸ್ನಾನ
ಮಾಡಲು, ಅಡಿಗೆ ಮಾಡಲು, ವ್ಯರ್ಥ ಬಳಕೆಯು ಸೇರಿದಂತೆ ಸುಮಾರು 200 ಲೀಟರ್ ನೀರು ಬೇಕು.
* ಬಿದ್ದ ಮಳೆ ನೀರು ಹರಿದು ವ್ಯರ್ಥವಾಗದಂತೆ
ಸಂಗ್ರಹಿಸುವ ಪದ್ಧತಿಗೆ ಮಳೆನೀರು ಕೊಯ್ಲು ಎನ್ನುತ್ತಾರೆ.
ಕಲ್ಲಿದ್ದಲಿನ ಉಪ ಉತ್ಪನ್ನಗಳು:-
ಕಲ್ಲಿದ್ದಲಿನ ಅನಿಲದ ಉತ್ಪಾದನೆಯ ಸಂದರ್ಭದಲ್ಲಿ
ಕೋಕ್ ಕಲ್ಲಿದ್ದಿಲಿನ ಡಾಂಬರು, ಗಂಧಕ ಮತ್ತು ಅಮೋನಿಯ ಮುಂತಾದ ಉಪ ಉತ್ಪನ್ನಗಳು ದೊರೆಯುತ್ತವೆ. ಮತ್ತು
ಈ ಎಲ್ಲವು ಉಪಯುಕ್ತ ಉತ್ಪನ್ನಗಳಾಗಿವೆ. ವರ್ಣಗಳು ಸಲ್ಫಾ ಔಷಧಿಗಳು, ಸ್ಯಾಕರಿನ್ ಸಕ್ಕೆರೆ, ಮೂಲಕ
ಸೋಡಾ ಪಾನೀಯ ಮತ್ತು ಡಜನ್‍ಗಟ್ಟಲೆ ಸಾವಯವ ಸಂಯುಕ್ತಗಳನ್ನು ಕಲ್ಲಿದ್ದಿಲಿನ ಅನಿಲದಿಂದ ತಯಾರಿಸಲಾಗುತ್ತದೆ.
* ಕಲ್ಲಿದ್ದಿಲು ಅತಿ ಹೆಚ್ಚು ಪ್ರಮಾಣದ ಕಾರ್ಬನ
ಇರುವ ನೈಸರ್ಗಿಕ ಸಂಪನ್ಮೂಲ ಸಾಮಾನ್ಯವಾಗಿ 3 ಬಗೆಯ ಕಲ್ಲಿದ್ದಿಲಿನ ನಿಕ್ಷೇಪಗಳನ್ನು ಗುರುತಿಸಲಾಗುತ್ತದೆ.
ಆಂಥ್ರಸೈಟ್ ಸುಮಾರು 80% ಕಾರ್ಬನ ಇದ್ದಲ್ಲಿ, ಇನ್ನೊಂದು ಬಗೆಯಾದ ಲಿಗ್ನೈಟ್‍ನಲ್ಲಿ 50% ರಿಂದ
65% ಕಾರ್ಬನ ಇದೆ. ಬಿಟುವಿನಸ್ ಕಲ್ಲಿದಿಲ್ಲಿನಲ್ಲಿ 40% ಗಿಂತ ಕಡಿಮೆ ಕಾರ್ಬನ ಇದೆ.
* ಪೆಟ್ರೋಲ್, ಡೀಸೆಲ್, ಸೀಮೆ ಎಣ್ಣೆ, ಕೀಲೆಣ್ಣೆ,
ನಾಫ್ತಾ, ಇವು ಕೆಲವು ಪೆಟ್ರೋಲಿಯಂ ಉತ್ಪನ್ನಗಳು ಇವು ಪ್ರಪಂಚದಲ್ಲಿ ಬಳಕೆಯಾಗುತ್ತಿರುವ ಇಂಧನಗಳು
ಶೇ 40% ರಷ್ಟು ಪ್ರತಿನಿಧಿಸುತ್ತವೆ.
ಅಸಂಪ್ರದಾಯಿಕ ಶಕ್ತಿ ಆಕಾರಗಳು:-
ಸೂರ್ಯನಿಂದ, ಗಾಳಿಯಿಂದ ಅಲೆಗಳಿಂದ, ಭೂಗರ್ಭ
ಉಷ್ಣದಿಂದ, ಜೀವರಾಶಿಯಿಂದ ಹಾಗೂ ತ್ಯಾಜ್ಯಗಳಿಂದ ಶಕ್ತಿಯನ್ನು ಪಡೆಯುವುದು ಇದರಲ್ಲಿ ಪ್ರಮುಖವಾದುದು
ಇಂಥ ಶಕ್ತಿಯ ಆಕಾರಗಳು ಹೇರಳವಾಗಿದ್ದು ನವೀಕರಿಸಲಾಗುವಂಥವು ಪರಿಸರ ಮಾಲಿನ್ಯದಿಂದ ದೂರ ಹಾಗೂ ಪರಿಸರ
ಸ್ನೇಹಿಯಾಗಿವೆ.
ಅವುಗಳನ್ನು ನಗರ ಹಳ್ಳಿ ಪ್ರದೇಶಗಳಷ್ಟು ಅಲ್ಲ
ಅತ್ಯಂತ ದೂರದ ಪ್ರದೇಶಗಳಿಗೂ ಪೂರೈಸುವುದು ಸುಲಭ
ಸೌರಶಕ್ತಿ:-ಸೌರ ಕಿರಣಗಳ
ರೂಪದಲ್ಲಿ ನಮಗೆ ಸೂರ್ಯನಿಂದ ಅಗಾಧ ಪ್ರಮಾಣದ ಶಕ್ತಿ ಒದಗುತ್ತದೆ. ಈ ಶಕ್ತಿಯ ಫೋಟಾನ್‍ಗಳೆಂಬ ಸಣ್ಣ
ಪ್ಯಾಕೆಟಗಳ ಮೂಲಕ ಸುಮಾರು 150 ಮಿಲಿಯನ್ ದೂರದಿಂದ ಭೂಮಿಯನ್ನು ತಲುಪುತ್ತಿದೆ. ಇದು ಸೂರ್ಯನಿಂದ ನಿರಂತರವಾಗಿ
ನಡೆಯುತ್ತಿರುವ ಉಷ್ಣ ನ್ಯೂಕ್ಲಿಯರ್ ಸಮ್ಮಿಳನ ಕ್ರಿಯೆಯ ಪರಿಣಾಮ
ಸೌರ ಸಂಗ್ರಹಕ:- ಭೂಮಿಯ
ಮೇಲೆ ತಲುಪುವ ಸೌರಶಕ್ತಿಯನ್ನು ಉಷ್ಣ ಶಕ್ತಿಯನ್ನಾಗಿ ರೂಪಾಂತರಗೊಳಿಸಬಹುದು ಹೀಗೆ ಉತ್ಪತ್ತಿಯಾದ ಶಾಖವನ್ನು
ಸೌರ ಸಂಗ್ರಾಹಕಗಳಲ್ಲಿ ಸಂಗ್ರಹಿಸಿ ಇಡಬಹುದು.ಆಹಾರ ಧಾನ್ಯಗಳನ್ನು & ತರಕಾರಿಗಳನ್ನು ಒಣಗಿಸಲು
ಮರವನ್ನು ಹದಗೊಳಿಸಲು ಹಾಗೂ ಸಮುದ್ರದ ನೀರನ್ನು ನಿರ್ಲವಣೀಕರಣ ಗೊಳಿಸಲು ಸೌರ ಹೀಟರ್‍ಗಳನ್ನು ಬಳಸಲಾಗುತ್ತದೆ.
* ಗುಜರಾತನ ಭುಜನಲ್ಲಿ ಭಾರತ ಸರ್ಕಾರ ಸ್ಥಾಪಿಸಿರುವ
ಸೌರಕೋಳ ಏಷ್ಯಾದಲ್ಲೇ ಮೊದಲನೆಯದು ಇದು ಪ್ರತಿ ವರ್ಷ 220 ಲಕ್ಷಗಳಷ್ಟು ಉಷ್ಣ ಶಕ್ತಿಯನ್ನು ಒದಗಿಸುತ್ತದೆ.
1) ಫೋಟೋ ವೋಲ್ಟೈಕ್ ಪರಿಣಾಮ :- ಸೌರ ಶಕ್ತಿಯನ್ನು
ವಿದ್ಯತ್ ಶಕ್ತಿಯನ್ನಾಗಿ ಪರಿವರ್ತಿಸಲು ಕೆಲವು ಖಚಿತ ವಸ್ತಗಳ ಅಗತ್ಯವಿದೆ ಈ ಪರಿವರ್ತನೆ ಪೋಟೋ ವೋಲ್ಟೈಕ್
ಪರಿಣಾಮದ ತತ್ವವನ್ನು ಅವಲಂಬಿಸಿದೆ. ರಸ್ತೆ ಬದಿಯ ದೀಪಗಳನ್ನು ಉರಿಸಲು ಹಾಗೂ ಪಂಪಿನಿಂದ ನೀರನ್ನು
ಮೇಲೆತ್ತುಲು ಸಹ ಸೌರ ಶಕ್ತಿಯನ್ನು ಬಳಸಿಕೊಳ್ಳಬಹುದು.
2) ಜೈವಿಕ ಶಕ್ತಿ :- ಸಸ್ಯ ಹಾಗೂ ಸಸೋತ್ಪನ್ನಗಳ
ಜೈವಿಕ ವಸ್ತುಗಳು ಶಕ್ತಿಯ ಆಕರವಾಗಿ ಹಾಗೂ ಅದರ ರೂಪಾಂತರಕ್ಕೆ ಅವಶ್ಯಕವಾದ ಪ್ರಕ್ರಿಯೆಗಳನ್ನು ಜೈವಿಕ
ಶಕ್ತಿಯು ಒಳಗೊಂಡಿದೆ. ಸಸ್ಯ ಮೂಲದ ಸವಾಯವ ವಸ್ತು ಇಂಧನದ ಆಕರವಾಗಿ ಒದಗುತ್ತದೆ. ಪರಿಸರವನ್ನು ಶುದ್ಧವಾಗಿಡುವುದರ
ಜೊತೆಗೆ, ವಾತಾವರಣದ ಪ್ರಮಾಣವನ್ನು ನಿಯಂತ್ರಿಸುತ್ತದೆ.
* ಜಟ್ರೋಪ, ಪೊಂಗೆಮಿಯಾ ಪಿನ್ನಾಟ (ಹೊಂಗೆ
ಮರ) ಡೀಸ್‍ಲ್‍ಗೆ ಜೈವಿಕ ಪರ್ಯಾಯ ಇಂಧನವಾಗಿವೆ. ಇಂಧನವನ್ನು ಟ್ರಾನ್ಸ್ ಎಸ್ಟರಿಫಿಕೆಷನ್ ಎಂಬ ವಿಧಾನದಿಂದ
ಪರಿವರ್ತಿಸಿ ಬಳಸುತ್ತಾರೆ.
ಗಾಳಿ ಶಕ್ತಿ :-
ಗಾಳಿ ಶಕ್ತಿಭಾರಿ ಪ್ರಮಾಣದ ಗಾಳಿ ಚಲನೆಗೆ
ಸಂಬಂಧಿಸಿದ ಚಲನಾಶಕ್ತಿಗೆ ಗಾಳಿ ಶಕ್ತಿ ಎಂದು ಹೆಸರು * ಗಾಳಿಯ ವೇಗವು ಸೆಕೆಂಡಿಗೆ 8 ರಿಂದ 22 ನಷ್ಟಿರಬೇಕು
ಗಾಳಿ ಶಕ್ತಿಯನ್ನು ಪಡೆಯಲು ಗಾಳಿಯಂತ್ರಗಳನ್ನು
ಬಳಸಲಾಗುತ್ತದೆ.
* ನಮ್ಮ ದೇಶದ ಅತಿ ದೊಡ್ಡ ಗಾಳಿಯಂತ್ರಗಳ ಘಟಕ
ತಮಿಳನಾಡಿನ ಕನ್ಯಾಕುಮಾರಿಯಲ್ಲಿವೆ
ಅಲೆಗಳ ಶಕ್ತಿ:-
* ಸಮುದ್ರ ಹಾಗೂ ಸಾಗರಗಳಲ್ಲಿ ಉಂಟಾಗುವ ಉಬ್ಬರದ
ಪರಿಣಾಮವಾಗಿ ಉಂಟಾಗುವ ಅಲೆಗಳ ಶಕ್ತಿಯ ಆಕರಗಳು
* ಅಲೆಗಳ ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ
ಹಾಗೂ ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಬಹುದು
ಭೂಗರ್ಭ ಉಷ್ಣಶಕ್ತಿ :-
* ಭೂಮಿಯ ಮೇಲ್ಮೈಯಿಂದ 10 ಕಿ.ಮೀ. ಆಳದವರೆಗಿರುವ
ಉಷ್ಣಕ್ಕೆ ಈ ಹೆಸರಿದೆ. ಇದನ್ನು ಸಹ ಶಕ್ತಿಯ ಆಕಾರವಾಗಿ ಬಳಸಬಹುದು ಭೂಗರ್ಭ ಉಷ್ಣ ಶಕ್ತಿಯ ತಾಪ ಸುಮಾರು
13000ಸಿ ನಷ್ಟಿರುವಲ್ಲಿಂದ ಉಷ್ಣ ಪಡೆಯಲಾಗುತ್ತದೆ.
* ಪ್ಯೂಗ, ಮಣಿಕರಣ್, ಟಾಟಾಪಾನ, ಭಕ್ನೇಸ್ಟರ್
ಮುಂತಾದ ಪ್ರದೇಶಗಳಲ್ಲಿ ಭೂಗರ್ಭ ಉಷ್ಣಶಕ್ತಿಯನ್ನು ಬಳಸಿಕೊಳ್ಳುವ ಪ್ರಯತ್ನಗಳನ್ನು ಮಾಡಲಾಗಿದೆ.