3. ಸಸ್ಯಗಳು (Plants)
ವಿಜ್ಞಾನಿಗಳು ಒಟ್ಟು 360000 ಪ್ರಭೇಧಗಳನ್ನು ಸಸ್ಯ ಸಾಮಾಜ್ಯದಡಿಯಲ್ಲಿ ಗುರುತಿಸಿದ್ದಾರೆ. ಅನೇಕ ಸಸ್ಯಗಳು ಒಂದನೊಂದು ಗಾತ್ರ, ಆಕಾರ, ರಚನೆಯಲ್ಲಿ ವೈವಿಧ್ಯತೆಯಿಂದ ಕೂಡಿವೆ.
ವಾಹಕನಾಳ ರಹಿತ ಸಸ್ಯಗಳು:- ಕ್ಸೈಲಂ & ಪ್ಲೋಯಂ ಅಂಗಾಂಶರಹಿತ ಸಸ್ಯಗಳು
1) ಬಹುಕೋಶಿಯ ಶೈವಲಗಳು
1 ಕೆಂಪು ಶೈವಲ
2 ಕಂದು ಶೈವಲ
3 ಹಸಿರು ಶೈವಲ
2) ವಾಹಕನಾಳ ಸಹಿತ ಸಸ್ಯಗಳು :- ಕೈಲಂ ಫ್ಲೋಯಂ ಅಂಗಾಂಳ ಸಹಿತ ಸಸ್ಯಗಳು
1 ಜರಿ ಸಸ್ಯಗಳು
2 ಅನಾವೃತ ಬೀಜ ಸಸ್ಯಗಳು
3 ಆವೃತ ಬೀಜ ಸಸ್ಯಗಳು
1) ಶೈವಲಗಳು:- ಶೈವಲಗಳು ಅತ್ಯಾಂತ ಸರಳವಾದ ಏಕಕೋಶಿಯ ಜೀವಿಗಳಿಂದ ಪ್ರಾರಂಭಿಸಿ ಅತ್ಯಂತ ಸಂಕೀರ್ಣವಾದ ಬಹುಕೋಶಿಯ ಜೀವಿಗಳವರೆಗೆ
ವ್ಯಾಪಿಸಿರುವ ಸ್ವಪೊಷಕ ಜೀವಿಗಳ ಒಂದು ವೈವಿಧ್ಯಮಯಾವಾದ ಗುಂಪು
* ಈ ಗುಂಪಿನ ಬಹುತೇಕ ಬಹುಕೋಶಿಯವಾಗಿವೆ.
(ಕ್ಲೋರೆಲ್ಲಾ, ಕ್ಲಾಮಿಡೋಮೊನಸ್ ಎಂಬ ಹಸಿರು ಶೈವಲಗಳು ಇದಕ್ಕೆ ಅಪವಾದ)
* ಉನ್ನತ ಶೈವಲಗಳು ಸರಳವಾದ ರಚನೆಯನ್ನು ತೊರುತ್ತವೆ ಸಸ್ಯ ದೇಹವು ಚಪ್ಪಟೆಯಾಗಿದ್ದು ಅದಕ್ಕೆ ಥ್ಯಾಲಸ ಎನ್ನುತ್ತಾರೆ.
ಕೆಲ್ಫ್‍ಗಳು:- ಅತ್ಯಂತ ಬೃಹತ ಗಾತ್ರದ ಶೈವಲಗಳು ಸುಮಾರು 60 ಮೀಟರ ಉದ್ದಕ್ಕೆ ಬೆಳೆಯುತ್ತದೆ.
ಉದಾ:- ಮೈಕ್ರೋಸಿಸ್ಟ್‍ಸ್
ಹಸಿರುಶೈವಲ:- ಹಸಿರು ಬಣ್ಣದ ಕ್ಲೋರೋಫಿಲ್ (ಪತ್ರಹರಿತ್) ಎಂಬ ವರ್ಣಿಕೆ ಇದೆ.
ಉದಾ:- ಸ್ಟೈರೋಗೈರಾ ಹಾಗೂ ಯಲೋಥ್ರಿಕ್ಸ್
ಕೆಂಪು ಶೈವಲ:- ಪತ್ರಹರಿತ್ತಿನ ಜೊತೆಗೆ ಫೈಕೋಎರಿಥ್ರಿನ ಎಂಬ ಕೆಂಪು ವರ್ಣಿಕೆ ಇರುತ್ತದೆ.
ಉದಾ:- ಬೆಟ್ರಕೋಸ್ಟರ್ಮಮ್ ಪಾಲಿಸೈಫೋನಿಯಾ
ಕಂದು ಶೈವಲ:- ಪತ್ರ ಹರಿತ್ತಿನ ಜೊತೆಗೆ ಕ್ಯಾಥೋಫಿಲ್ ವರ್ಣಿಕೆಗಳಿವೆ
ಉದಾ:- ಸಗ್ರ್ಯಾಸಂ & ಎಕ್ಟೋಕಾರ್ಪಸ್

ಶೈವಲಗಳ ಉಪಯೋಗ :-
* ಶೈವಲಗಳು ಪರಿಸರ ವ್ಯವಸ್ಥೆಗಳಲ್ಲಿ ಪ್ರಮುಖವಾದ ಪತ್ರ ವಹಿಸುತ್ತವೆ. (ಉತ್ಪಾದಕ ಜೀವಿ ಸಮೂಹವಾಗಿ)
* ಆಲ್ಜಿನ್ ಕಂದು ಶೈವಲದಿಂದ ಪಡೆಯುವ ವಸ್ತು ಇದನ್ನು ಐಸ್‍ಕ್ರೀಮ್ ಚಾಕಲೇಟಗಳ ತಯಾರಿಕೆಯಲ್ಲಿ ಬಳಸುವರು.
* ಜಿಲಿಡಿಯಂ ಎಂಬ ಕೆಂಪು ಶೈವಲದಿಂದ ಅಗರ ಎಂಬ ವಸ್ತುವನ್ನು ಪಡೆಯುತ್ತಾರೆ. ಪ್ರಯೋಗಾಲಯದಲ್ಲಿ ಬ್ಯಾಕ್ಟೀರಿಯಾಗಳನ್ನು ಬೆಳೆಸಲು ಮಾದ್ಯಮವಾಗಿ
ಬಳಸುತ್ತಾರೆ.
* ಪೋರ್ಪೈರಾ ಎಂಬ ಕೆಂಪು ಶೈವಲವನ್ನು ಕೆಲವು ಖಾದ್ಯ ಪದಾರ್ಥಗಳ ತಯಾರಿಕೆಯಲ್ಲಿ ಬಳಸುವರು.
* ಲ್ಯಾಮಿನೇರಿಯಾ ಎಂಬ ಬೃಹತ ಶೈವಲವನ್ನು ಪೊಟಾಸಿಯಂ, ಅಯೋಡಿಸ್ ಉತ್ತಾದನೆಯಲ್ಲಿ ಬಳಸಿಕೊಳ್ಳಲಾಗುತ್ತದೆ.
* ಹಾವಸೆ ಸಸ್ಯಗಳು (Bryophyta) ಮಳೆಗಾಲದಲ್ಲಿ ಮರದ ಕಾಂಡಗಳ ಮೇಲೆ ಒದ್ದೆಯಾದ ಗೋಡೆಗಳ ಮೇಲೆ, ಕಲ್ಲುಗಳ ಮೇಲೆ ಹಸಿರು ಬಣ್ಣದ ಟೈಲ್ಸ ನಂತಹ ಸಸ್ಯಗಳನ್ನು ಬೆಳೆದಿರುವುದು ಗಮನಿಸಿರಬಹುದು ಇವುಗಳು ಸೂಕ್ಷ್ಮಗಾತ್ರದ ಸಸ್ಯಗಳಾಗಿ ಕಂಡು ಬರುತ್ತದೆ. ಇವುಗಳನ್ನು ಸಾಮಾನ್ಯವಾಗಿ ಮಾಸ್ ಎಂಬ ಹೆಸರಿನಿಂದ ಕರೆಯುತ್ತಾರೆ.
* ರೈಜಾಯ್ಡಗಳು :- ಏಕಕೋಶಿಯ ಬೇರಿನಂತಹ ರಚನೆಗೆ ರೈಜಾಯ್ಡಗಳನ್ನುತ್ತಾರೆ.
* ಲಿವರ ವಟ್ರ್ಸ :- ರಿಸ್ಸಿಯಾ, ಮಾಕ್ರ್ಯಾನ್ಸಿಯಾ ಫುನೇರಿಯಾ (ನೆಲದಿಂದ ಮೇಲಕ್ಕೆ ನೇರವಾಗಿ ಬೆಳೆಯುತ್ತೆ).
* ಜೀವನ ಚಕ್ರ :- ಏಕ ಗುಣಿತ ಲಿಂಗಾಣುಜನಕ & ದ್ವಿಗುಣಿತ ಬೀಜಾಣು ಜನಕ ಎಂಬ 2 ಸಂತತಿಗಳಿವೆ
* ಗಂಡು ಮತ್ತು ಹೆಣ್ಣು ಲಿಂಗಾಣುಗಳು ಕ್ರಮವಾಗಿ ಆಂಥಿರಿಡಿಯಂ & ಆರ್ಕಿಗೊನಿಯಂ ಎಂಬ ರಚನೆಗಳಲ್ಲಿ ಉತ್ಪತ್ತಿಯಾಗುತ್ತವೆ.
* ಸಂತತಿ ಪ್ರರ್ಯಯನ :- ಲಿಂಗಾಣುಜನಕ ಹಾಗೂ ಬೀಜಾಣುಜನಕ ಸಂತತಿಗಳು ಜೀವನ ಚಕ್ರದಲ್ಲಿ ಪಾರ್ಯಯವಾಗಿ ಉಂಟಾಗುವ ಪ್ರಕ್ರಿಯೆಗೆ ‌ʼಸಂತತಿ
ಪರ್ಯಾಯನʼ ಎಂದು ಹೆಸರು

ಉಪಯೋಗ:-
1) ಮಣ್ಣಿನ ಸವಕಳಿಯನ್ನು ತಪ್ಪಿಸಲು ಉಪಯೋಗಿಸುತ್ತಾರೆ.
2) ಹೂಕುಂಡಗಳಲ್ಲಿ ತೇವಾಂಶ ಹಿಡಿದಿರಲು ಮಾಸ್ ಸಸ್ಯಗಳನ್ನು ಬಳುಸುತ್ತಾರೆ.
3) ಹೂಗಳ ಹಾಗೂ ಕಲ್ಲುಗಳನ್ನು ವಿಭಜಿಸಿ ಮಣ್ಣು ಗಟ್ಟಿಗೊಳ್ಳಲು ಸಹಾಯಕ

ಜಲ ಸಸ್ಯಗಳು (Pteridophytes)
* ಜರಿ ಸಸ್ಯಗಳು ತೇವಬರಿತ ಮಣ್ಣಿನಲ್ಲಿ ಗೋಡೆಗಳ ಮೇಲೆ ಹಾಗೂ ತಂಪಾದ ನೆರಳಿರುವ ಪ್ರದೇಶಗಳಲ್ಲಿ ಬೆಳೆಯುತ್ತವೆ.
ಸಸ್ಯಕಾಯದಲ್ಲಿ ನಿರ್ದಿಷ್ಟವಾದ ಬೇರು ಕಾಂಡ ಹಾಗೂ ಎಲೆಗಳಿವೆ.
ಉದಾ:- ನೆಪ್ರೋಲಿಫಿಸ್ ಸಿಲಾಜಿನೇಲ್ಲಾ ಅಡಿಯಾಂಟಮ್ ಲೈಕೋಪೊಡಿಯಂ
* ಜರಿ ಸಸ್ಯಗಳಲ್ಲಿ ಪ್ರೌಢ ಸಸ್ಯವು ಬೀಜಾಣು ಜನಕವಾಗಿದೆ ಇದು ಏಕಗುಣಿತ ( n ) ಬೀಜಗುಣಗಳನ್ನು ಉತ್ಪತ್ತಿಮಾಡುವ ಮೂಲಕ ಅಲೈಂಗಿಕವಾಗಿ
ಸಂತಾನೋತ್ಪತ್ತಿ ಮಾಡುತ್ತದೆ.
* ಬೀಜಾಣುಗಳು ಪ್ರೋಥ್ಯಾಲಸ ಎಂಬ ಎಕಗುಣಿತ ಲಿಂಗಾಣುಜನಕ ಸಸ್ಯವಾಗಿ ಬೆಳೆಯುತ್ತದೆ.
* ಸಂತತಿ ಪರ್ಯಯು ಕಂಡು ಬರುತ್ತದೆ.

ಆರ್ಥಿಕ ಪ್ರಾಮುಖ್ಯತೆ:-
* ಸೌಂದರ್ಯದ ಮೂಲಕ್ಕಾಗಿ ಜರಿ ಸಸ್ಯಗಳನ್ನು ಬೆಳೆಸುತ್ತಾರೆ.
* ಜರಿ ಸಸ್ಯಗಳ ಎಲೆಗಳನ್ನು ಹೂಗುಚ್ಚ & ಹೂಗಳ ಜೋಡಣೆಯಲ್ಲಿ ಬೆಳೆಸುತ್ತಾರೆ.
* ಕೆಲವು ಜರಿ ಸಸ್ಯಗಳಿಗೆ ಔಷಧೀಯ ಮಹತ್ವವಿದೆ.
* ಹಾರ್ಸಟೇಲ & ಕ್ಲಬ್ ಮಾಸ್ ಜಾತಿಯ ಜರಿ ಸಸ್ಯಗಳು ಕಲ್ಲಿದ್ದಲು & ಪೆಟ್ರೋಲಿಯಂ ಇಂದನಗಳು ಉಂಟಾಗಲು ಕಾರಣವಾಗುತ್ತದೆ.

ಅನಾವೃತ ಬೀಜ ಸಸ್ಯಗಳು
ಹಣ್ಣಿನ ಕವಚವಿಲ್ಲದ ಬೀಜಗಳನ್ನು ಉತ್ಪಾದನೆ ಮಾಡುವ ಸಸ್ಯಗಳು
* ಅನಾವೃತ ಬೀಜ ಸಸ್ಯಗಳು ಗುಡ್ಡ ಬೆಟ್ಟಗಳ ಮೇಲೆ ಹಾಗೂ ಕಡಿಮೆ ತಾಪದ ಸ್ಥಳಗಳಲ್ಲಿ ಬೆಳೆಯುತ್ತವೆ. ಬಹು ವರ್ಷ ಬದುಕುವ ಈ ಸಸ್ಯಗಳಲ್ಲಿ ಅನೇಕ
ನಿತ್ಯಾಹರಿದ್ವರ್ಣದ ಮರಗಳಿವೆ ಕೆಲವು ಪೊದೆಗಳ ರೂಪದಲ್ಲಿ ಬೆಳೆಯುತ್ತವೆ.
ಉದಾ:- ಸೈಕಾಸ್ & ಪೈನಸ್
* ಪ್ರೌಢ ಸಸ್ಯವು ಬೀಜಾಣು ಜನಕವಾಗಿದೆ. ಇವು ಶಂಕುವಿನಾಕಾರದ ಅನೇಕ ಎದ್ದು ಕಾಣುವ ರಚನೆಗಳು ಇವುಗಳಲ್ಲಿ ಪ್ರತ್ಯೇಕವಾಗಿ ಗಂಡು ಶಂಕುಗಳು ಹಾಗೂ
ಹೆಣ್ಣು ಶಂಕುಗಳನ್ನು ಗುರುತಿಸಬಹುದು.
* ಗಂಡು ಶಂಕುಗಳು ಸೂಕ್ಷ್ಮ ಬೀಜಾಣು ಪತ್ರಕ ಹೆಣ್ಣು ಕೋಶಗಳು ಸ್ಥೂಲ ಬೀಜಾಣು ಪತ್ರಕಗಳನ್ನು ಹೊಂದಿವೆ.
* ಲಿಂಗಾಣುಗಳು ಸಂಯೋಗದಿಂದ ಉಂಟಾಗುವ ಯಗ್ಮಜ ಬೀಜವಾಗಿ ಪರಿವರ್ತನೆಯಾಗುತ್ತದೆ. ಆದರೆ ಅದಕ್ಕೆ ಹಣ್ಣಿನ ಹೊದಿಕೆ ಇರುವುದಿಲ್ಲ.
* ಶಂಕುಧಾರಿ ಮರಗಳು ಪ್ರಪಂಚದ ಮರಗಳಲ್ಲೆಲ್ಲಾ ಅತಿದೊಡ್ಡ ಅತಿ ಎತ್ತರದ & ಪ್ರಾಚಿನ ಸಸ್ಯಗಳು
* ಪೈನ್ ಮರದ ಜೀವಿತಾವಧಿ ಸುಮಾರು 5000 ವರ್ಷಕ್ಕೂ ಮೀರಿದೆ ಎಂದು ನಂಬಲಾಗಿದೆ.
* ಸಿಕೋಯಾ ವೃಕ್ಷವು 125 ಮೀ ಎತ್ತರಕ್ಕೆ ಬೆಳೆಯುವ ಮರ ಇದರ ಮುಖ್ಯಕಾಂಡದ ಸುತ್ತಳತೆ ಸುಮಾರು 10 ಮೀ. ಆಗಿದೆ.

ಆವೃತ ಬೀಜ ಸಸ್ಯಗಳು:-
ಈ ಸಸ್ಯಗಳಲ್ಲಿ ಬೀಜಗಳು ಹಣ್ಣು ಎಂಬ ರಚನೆಯಲ್ಲಿ ಅಡಕವಾಗಿರುತ್ತದೆ. ಆವೃತ ಬೀಜ ಸಸ್ಯಗಳು ಅತ್ಯಂತ ಹೆಚ್ಚು ವಿಕಾಸಗೊಂಡ ಗುಂಪು
* ಪ್ರೌಢ ಸಸ್ಯವು ಬೀಜಾಣುಜನಕ ವಾಗಿದೆ. ಇದರಲ್ಲಿ ನಿರ್ದಿಷ್ಟವಾದ ಬೇರು, ಕಾಂಡ & ಎಲೆಗಳಿವೆ. ಆವೃತ ಬೀಜ ಸಸ್ಯಗಳ ಪ್ರಮುಖ ಲಕ್ಷಣವೆಂದರೆ ಲಿಂಗಾಣು
ಜನಕವನ್ನೊಳಗೊಂಡ ಹೂವು ಎಂಬ ರಚನೆ ಎದು ಸಸ್ಯಸಂತಾನೋತ್ಪತ್ತಿಯ ಭಾಗ ಹೂವು ಏಕಾಂಗಿಯಾಗಿರಬಹುದು ಇಲ್ಲವೇ ಷುಷ್ಪಮಂಜರಿ ಎಂಬ
ಗುಚ್ಚದಲ್ಲಿರಬಹುದು.
* ಆವೃತ ಬೀಜಗಳನ್ನು ಏಕದಳ ಸಸ್ಯಗಳು ಹಾಗೂ ದ್ವಿದಳ ಸಸ್ಯಗಳು ಎಂಬ ಎರಡು ಗುಂಪುಗಳನ್ನು ಹೊಂದಿವೆ.

ಎಕದಳ ಸಸ್ಯಗಳು :- ಒಂದೇ ಒಂದು ಬೀಜದಳ ಇದೆ. ಮೊಳಕೆಯೊಡೆಯುವಾಗ ಬಹುತೇಕ ಎಕದಳ ಸಸ್ಯಗಳಲ್ಲಿ ಬೀಜದಳವು ಮಣ್ಣಿನ ಒಳಗಡೆಯೇ ಇರುತ್ತದೆ. ಎಲೆಗಳಲ್ಲಿ ಸಮಾನಾಂತರ ನಾಳ ವಿನ್ಯಾಸ ಇದೆ.

ದ್ವಿದಳ ಸಸ್ಯಗಳು :- ಬಹುತೇಕ ದ್ವಿದಳ ಸಸ್ಯಗಳು ಬೀಜದಳಗಳು ಮಣ್ಣಿನ ಹೊರಗೆ ಕಾಣಿಸಿಕೊಳ್ಳುತ್ತವೆ. ಜಾಲ ಬಂದ ವಿನ್ಯಾಸ ಕಂಡು ಬರುತ್ತದೆ. ಹಾಗೂ ತಾಯಿ ಬೇರಿನ ವ್ಯವಸ್ಥೆ ಕಂಡುಬರುತ್ತದೆ.

ಹೂವಿನ ಭಾಗಗಳು :-
ಸಸ್ಯಗಳ ಸಂತಾನೋತ್ಪತ್ತಿಯ ಭಾಗವೇ ಹೂವು ಸಾಮಾನ್ಯವಾಗಿ ಎಲೆಯ ಕಂಕುಳದಲ್ಲಿ ಬ್ರ್ಯಾಕ್ಟ್ ಎಂಬ ಭಾಗದಿಂದ ಹೂವು ಹುಟ್ಟುತ್ತದೆ. ಹೂವು ತನ್ನದೇ ಆದ
ತೊಟ್ಟಿನ ಮೇಲೆ (ಪುಷ್ಪ) ಸಾಮಾನ್ಯವಾಗಿ ನಿಂತಿರುತ್ತದೆ.

ಪುಷ್ಪ ಪತ್ರಗಳು :- ಎಲೆಯಾಕಾರದ ಹಸಿರು ಬಣ್ಣದ ರಚನೆ ಮೊಗ್ಗಿನ ಸ್ಥಿತಿಯಲ್ಲಿ ಒಳಭಾಗ ರಕ್ಷಣೆ ನೀಡುತ್ತದೆ.
ಪುಷ್ಪದಳ :- ಪುಷ್ಪದಳವು ಹೊರಗಿನಿಂದ ಎರಡನೇ ಆವೃತವಾಗಿದೆ. ಇದು ಸಾಮಾನ್ಯವಾಗಿ ಆಕರ್ಷಕ ಬಣ್ಣಗಳನ್ನು ಹೊಂದಿರುತ್ತದೆ.
ಪುಂಕೇಸರ :- ಕೇಸರ ಮಂಡಲವು ಹೊರಗಿನಿಂದ ಮೂರನೇ ಆವೃರ್ತ ಇದರಲ್ಲಿ ಪುಷ್ಪ ಪ್ರಜನನ ರಚನೆಗಳಾದ ಪುಂಕೇಸರಗಳಿವೆ ಅವು ಪರಾಗವನ್ನು ಉತ್ಪತ್ತಿಮಾಡುತ್ತವೆ ಪರಾಗಗಳಲ್ಲಿ ಪುರುಷಾಣುಗಳು ಉತ್ಪತ್ತಿಯಾಗುತ್ತವೆ.
ಶಾಲಕೆ:- ಇವು ಹೆಣ್ಣು ಪ್ರಜನನ ರಚನೆಗಳಾದ ಕಾರ್ಪೆಲ್‍ಗಳನ್ನೊಳಗೊಂಡಿದೆ
ಅಂಡಾಶಯ:- ಅಂಡಾಶಯದ ಒಳಗೆ ಅಂಡಕಗಳು ಇರುತ್ತವೆ ಅಂಡಕಗಳ ಒಳಗೆ ಹೆಣ್ಣು ಲಿಂಗಾಣುಗಳಾದ ಅಂಡಾಣು ಉತ್ಪತ್ತಿಗಳಾಗುತ್ತವೆ. ನೀಳವಾದ ಮಧ್ಯಭಾಗನ್ನು ಶಲಾಕಾ ನಳಿಕೆ ಎಂದು ತುದಿಯ ಭಾಗವನ್ನು ಶಲಾಕಾಗ್ರ ಎಂದು ಕರೆಯಲಾಗುತ್ತದೆ.
ಪರಾಗಸ್ಷರ್ಶ :- ಒಂದು ಹೂವಿನ ಬಲಿತ ಪರಾಗ ಕೋಶದಿಂದ ಅದೇ ಹೂವಿನ ಅಥವಾ ಬೇರೋಂದು ಹೂವಿನ ಶಲಾಕಾಗ್ರಕ್ಕೆ ಪರಾಗರೇಣುಗಳು ವರ್ಗಾವಣೆ ಆಗುವ ಪ್ರಕ್ರಿಯೆಗೆ ಪರಾಗಸ್ಪರ್ಶ ಎಂದು ಹೆಸರು.

ಎರಡು ವಿಧ
ಸ್ವಕೀಯ ಪರಾಗಸ್ಪರ್ಶ ಮತ್ತು ಪರಕೀಯ ಪರಾಗಸ್ಪರ್ಶ
ನಿಶೇಚನ:- ಪರಾಗಸ್ಪರ್ಶದ ನಂತರ ನಡೆಯುವ ಕ್ರಿಯೆಯೇ ನಿಶೇಚನ ನಿಶೇಚನ ಕ್ರಿಯೆನಡೆದು ದ್ವಿಗುಣಿತ ಯುಗ್ಮಜ ಉಂಟಾಗುತ್ತದೆ.
* ಇದುವರೆಗೂ 2 ಲಕ್ಷ ಪ್ರಭೇದಗಳಷ್ಟು ದ್ವಿದಳ ಸಸ್ಯವನ್ನು ಹಾಗೂ ಸುಮಾರು 55000 ಪಭೇದಗಳಷ್ಟು ಏಕದಳ ಸಸ್ಯಗಳನ್ನು ಗುರುತಿಸಲಾಗಿದೆ.
* ಆರ್ಕಿಡ ಸಸ್ಯಗಳ ಬೀಜಗಳ ಗಾತ್ರ ಅತ್ಯಾಂತ ಸೂಕ್ಷ್ಮ ಸುಮಾರು 1 ಮಿಲಿಯನ್ ಬೀಜಗಳು ಸೇರಿ ಕೇವಲ 0.3 ಗ್ರಾಂ ನಷ್ಟು ತೂಕ ಹೊಂದಿವೆ.
ಬೋನ್ಸಾಯಿ :- ಕುಂಡಗಳಲ್ಲಿ ಕುಬ್ಜ ಸಸ್ಯಗಳನ್ನು ಬೆಳೆಯುವಜಪಾನೀ ಪದ್ಧತಿಗೆ ಬೋನ್ಸಾಯಿ ಎನ್ನುವರು.
ನಾರು ಸಸ್ಯಗಳು :- ಹತ್ತಿ, ಸೆಣಬು, ತೆಂಗು
ಪಾನೀಯ ಸಸ್ಯಗಳು :- ಕಾಫೀ. ಟೀ. ಕೋಕೋ
ಔಷಧಿಯ ಸಸ್ಯಗಳು :- ಸರ್ಪಗಂಧ, ತುಂಬೆ, ತುಳಸಿ, ಬೇವು ನೀಲಗೇರಿ

ಜೀವಿಗಳ ವರ್ಗೀಕರಣ :-
ಜೀವಿಗಳನ್ನು ಅವುಗಳ ನಡುವಿನ ಹೊಲಿಕೆ & ವ್ಯತ್ಯಾಸಗಳಿಗನುಗುಣವಾಗಿ ವಿಂಗಡಿಸುವ ಪದ್ದತಿಯೇ ವರ್ಗೀಕರಣ ಜೀವಿಗಳ ವರ್ಗೀಕರಣದ ಬಗ್ಗೆ ತಿಳಿಸುವ
ಜೀವಶಾಸ್ತ್ರದ ಶಾಖೆಯೇ ವರ್ಗೀಕರಣ ಶಾಸ್ತ್ರ
ಚರಕ:- ಆಯುರ್ವೇದ ಪಿತಾಮಹ
ಅರಿಸ್ಟಾಟಲ್ :- ಜೀವಶಾಸ್ತ್ರ ಪಿತಾಮಹ ಎಂದುಜನಪ್ರಿಯನಾಗಿದ್ದಾನೆ.
ಪರಾಶರ :- ಭಾರತದ ಪ್ರಾಚೀನಕಾಲದ ವರ್ಗೀಕರಣ ಶಾಸ್ತ್ರದ ಪಿತಾಮಹ ಎಂದು ಕರೆಯುತ್ತಾರೆ.
ಕರೋಲಸ್ ಲಿನೇಯಸ್ :- ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ ಎಂದು ಕರೆಯುತ್ತಾರೆ.
ದ್ವಿನಾಮಕರಣ :- ಪ್ರತಿಯೊಂದು ಜೀವಿಯನ್ನು ವೈಜ್ಞಾನಿಕ ಹೆಸರಿನಿಂದ ಸೂಚಿಸುವ ಪದ್ಧತಿಯನ್ನು ದ್ವಿನಾಮಕರಣ ಎನ್ನುವರು. ಪ್ರತಿ ವೈಜ್ಞಾನಿಕ ಹೆಸರು ಎರಡು ಪದಗಳನ್ನು ಹೊಂದಿವೆ ಮೊದಲನೆಯ ಪದ ಜಾತಿಯನ್ನು ಸೂಚಿಸಿದರೆ. ಎರಡನೆಯದು ಪ್ರಭೇಧವನ್ನು ತಿಳಿಸುತ್ತದೆ. ವೈಜ್ಞಾನಿಕ ಹೆಸರುಗಳು ಗ್ರೀಕ & ಲ್ಯಾಟಿನ್ ಭಾಷೆಗಳಲ್ಲಿವೆ
ಪುಸ್ತಕಗಳಲ್ಲಿ ಈ ಹೆಸರುಗಳು ಇಟಾಲಿಕ್ಸನಲ್ಲಿ ಮುದ್ರಿಸಲಾಗುತ್ತದೆ.
1 ಸಾಮಾಜ್ಯ ಪ್ರಾಣಿ
2 ವಂಶ ಕಾರ್ಡೇಟಾ
3 ವರ್ಗ ಸಸ್ತನಿ
4 ಗಣ ಪ್ರೈಮೇಟ್
5 ಕುಟುಂಬ ಹೋಮಿನಿಡೆ
6 ಜಾತಿ ಹೋಮೋ
7 ಪ್ರಭೇದ ಸೆಪಿಯನ್ಸ್

ವರ್ಗೀಕರಣ 7 ಮಜಲುಗಳು

ಪ್ರಾಣಿ ದ್ವಿನಾಮ ನಾಮಕರಣ
1 ಕುದರೆ ಈಕ್ವಸ್ ಕ್ಯಾಬಾಲಸ್
2 ಕತ್ತೆ ಈಕ್ವಸ್ ಎಸಿನಸ್
3 ಆಲ ಫೀಕಸ್ ಬೆಂಗಾಲನ್ಸಿಸ್
4 ಅರಳಿ ಫೀಕಸ್ ರಿಲಿಜಿಯೋಸಾ
5 ಮಾನವ ಹೋಮೊ ಸೆಪಿಯನ್ಸ
6 ಎಂಟಮೀಬಾ ಎಂಟಮೀಬಾ ಹಿಸ್ಟೋಲಿಟಿಕ
7 ಕಪ್ಪೆ ರಾನ ಹೆಕ್ಸಾಡೆಕ್ಟಲ್
8 ಬೆಕ್ಕು ಫೆಲಿಸ್ ಡೊಮೆಸ್ಟಿಕ
9 ಹುಲಿ ಫೆಲಿಸ್ ಟೈಗ್ರಿಸ್
10 ಸಿಂಹ ಫೆಲಿಸ್ ಲಿಯೋ
11 ಕಿತ್ತಾಳೆ ಸಿಟ್ರಾಸ್ ರಿಟಿಕ್ಯೂಲೇಟ್
12 ಕುಂಬಳ ಕುಕರ್ ಬಿಟ್ ಪೆಪೋ
13 ಕಾಫೀ ಕಫೀಯ ಅರೇಬಿಕ್
14 ಈರುಳ್ಳಿ ಏಲಿಯಂ ಸಿಪ್
ಜೀವಿತಾವಧಿ:-ಜೀವಿಗಳು ಒಂದು ನಿರ್ದಿಷ್ಟ ಕಾಲದವರೆಗೆ ಜೀವಿಸುತ್ತವೆ ಇದನ್ನು ಜೀವಿತಾವಧಿ ಎನ್ನುವರು. ಪ್ರಾಣಿಗಳಿಗೆ ಹೋಲಿಸಿದರೆ ಸಸ್ಯಗಳು ಹೆಚ್ಚುಕಾಲ
ಬದುಕುತ್ತವೆ.
ಸಸ್ಯಗಳು ಜೀವಿತಾವಧಿ
ಆಲದ ಮರ 400 ವರ್ಷಗಳು
ಓಕ್ ಮರ 500 ವರ್ಷಗಳು
ದೈತ್ಯ ಸಿಕ್ಟೋಯಾ 3500 ವರ್ಷಗಳು
ಬ್ರಿಜಿಲ್ ಕೋನ್ಫೆಫೇರಾ 4000-45000 ವರ್ಷಗಳು

ಜೀವಕೋಶಗಳ ಅಧ್ಯಯನ :-
ಜೀವಿಗಳೆಲ್ಲವೂ ಜೀವ ಕೋಶಗಳೆಂಬ ಚಿಕ್ಕ ಘಟಕಗಳಿಂದಾಗಿವೆ. ಬಹುಕೋಶೀಯ ಜೀವಿಗಳಲ್ಲಿ ಜೀವಕೋಶಗಳು ಕೆಲವು ನೂರುಗಳಿಂದ ಹಲವು ಬಿಲಿಯನ್‍ಗಳವರೆಗೂ ಇರಬಹುದು. ಜೀವಕೋಶಗಳು, ಜೀವಿಯ ಒಟ್ಟಾರೆ ಅಭಿವೃದ್ಧಿಗೆ ಸಹಕರಿಸುವಂತಹ ಪೋಷಣೆ , ಉಸಿರಾಟ & ಕೋಶವಿಭಜನೆಗಳಂತಹ ಕಾರ್ಯಗಳನ್ನು ನಿರ್ವಹಿಸುತ್ತವೆ. ಜೀವಕೋಶವು ಜೀವಿಯ ರಚನಾತ್ಮಕ ಮತ್ತು ಕಾರ್ಯತ್ಮಕ ಮೂಲ ಘಟಕ
* ಸೆಲ್ಸ್ ಎಂದು ಕರೆದ ವಿಜ್ಞನಿ :- ರಾಬರ್ಟ ಹುಕ್
* ಜೀವಕೋಶ ಸಿದ್ಧಾಂತ ಮಂಡಿಸಿದವರು ಶ್ಲೀಡನ್ & ಷ್ಪಾನ್ - 1839
* ಜೀವಕೋಶವನ್ನು ಸಂಯುಕ್ತ ಸೂಕ್ಷ್ಮದರ್ಶಕದಲ್ಲಿ ವೀಕ್ಷಿಸಿದಾಗ 3 ಪ್ರಮುಖ ಭಾಗಗಳು ಕಾಣಿಸುತ್ತದೆ. ಅವು
ಕೋಶಪೊರೆ
ಕೋಶದ್ರವ್ಯ,
ಕೋಶಕೇಂದ್ರ

ಜೀವಕೋಶದ ಕಣದಂಗಗಳು & ಅವುಗಳ ಕ್ರಿಯೆಗಳು
1 ಪ್ಲಾಸ್ಮಾ ಪೊರೆ ಉಪಯುಕ್ತ ವಸ್ತುಗಳನ್ನು ಆರಿಸಿ, ಕೋಶದೊಳಗೆ ಹಾಗೂ ಹೊರಗೆ ಹೊಗಲು ಬಿಡುತ್ತದೆ.
2 ಒಳಜೀವರಸ ಜಾಲ ರಸಾಯನಿಕ ಪ್ರತಿಕ್ರಿಯೆಗಳಿಗೆ ಸೂಕ್ಷ್ಮವಾದ ಮೇಲ್ಮೈ & ಅಂತರ್ಕೋಶ ಸಾಗಣಿಕಾವ್ಯಹ
3 ಗಾಲ್ಗಿ ಸಂಕೀರ್ಣ ಕೋಶಿಯ ಚಟುವಟಿಕೆಗಳಿಗೆ ನೆರವಾಗುವ ರಾಸಾಯನಿಕಗಳನ್ನು ಸ್ರವಿಸುತ್ತದೆ.
4 ಮೈಟೋಕಾಂಡ್ರಿಯಾ ಕೋಶದ ಉಸಿರಾಟದ ಕೇಂದ್ರ ಶಕ್ತಿಯನ್ನು ಬಿಡುಗಡೆ ಮೂಡುವ ನೀವೇಶನ
5 ಕ್ಲೋರೋಪ್ಲಾಸ್ಟ್ ಹಸಿರು ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆಯ ಕೇಂದ್ರ
6 ಲೈಸೋಜೋಮ್ ಅನುಪಯುಕ್ತ ವಸ್ತುಗಳು & ಮುದಿಕೋಶಗಳ ನಾಶ
7 ರೈಬೋಸೊಮ್ ಸಸಾರಜನಕ ತಯಾರಾಗುವ ನಿವೇಶನ
8 ಕೇಂದ್ರ ಬಿಂದು ಕೋಶ ವಿಭಜನೆಯಲ್ಲಿ ಪಾಲ್ಗೋಳ್ಳುತ್ತದೆ.
9 ರಸದಾನಿಗಳು ವಸ್ತುಗಳ ಸಂಗ್ರಾಹಣೆ
10 ಕಿರು ಕೋಶಬೀಜ ಸಸಾರಜನಕ ತಯಾರಿಕೆಗೆ ಬೇಕಾದ ವಸ್ತುಗಳನ್ನು ಸಜ್ಜುಗೊಳಿಸುತ್ತವೆ
11 ವರ್ಣಗ್ರಾಹಕ ಜಾಲ ಅನುವಂಶಿಕ ಸಂದೇಶ ವಾಹಕ

ಕೋಶಬೀಜ:-
ಕೋಶದ ಕೇಂದ್ರ ಭಾಗದಲ್ಲಿರುವ ಇದರ ಒಳಗೆ ಲೊಳೆಯಂತಿರುವ ತಿಳಿ ಮೂಲವಸ್ತು ಇರುತ್ತದೆ. ಇದು ಬೀಜರಸ ಈ ಬೀಜರಸದಲ್ಲಿ ಡಿ ಆಕ್ಸಿರೈಬೊಸ್ ನೂಕ್ಲಿಕ್ ಆಮ್ಲ (ಡಿ.ಎನ್.ಎ) ಹಾಗೂ ಸಸಾರಜನಕದಿಂದ ಮೂಡಲ್ಪಟ ವರ್ಣಗ್ರಾಹಕಗಳು ಇರುತ್ತವೆ. ಹಾಗೆಯೇ ಕಿರುಕೋಶ ಬೀಜಗಳೂಇಲ್ಲಿ ಇರುತ್ತವೆ. ಕಿರುಕೋಶ ಬೀಜ ರೈಬೊಸ್ ನ್ಯೂಕ್ಲಿಯಿಕ್ ಆಮ್ಲ (ಆರ್.ಎನ್.ಎ) ಹಾಗೂ ಸಸಾರಜನಕದಿಂದ ಮಾಡಲ್ಪಟ್ಟಿವೆ ವರ್ಣಗ್ರಾಹಕವು ಜಾಲದ ರೂಪದಲ್ಲಿದ್ದು ಕೋಶವಿಭಜನೆಯ ಸಮಯದಲ್ಲಿ ಸಣ್ಣ ಸಣ್ಣ ತಂತುಗಳಾಗಿ ಮಾರ್ಪಡುತ್ತವೆ. ಇವುಗಳಿಗೆ ವರ್ಣತಂತುಗಳು ವರ್ಣರೇಖೆಗಳು ಎನ್ನುತ್ತಾರೆ.

ಸ್ವಪೋಷಣೆ :- ಸರಳ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ತಮ್ಮ ಆಹಾರವನ್ನು ತಾವೇ ತಯಾರಿಸಿಕೋಳ್ಳುವ ವಿಧಾನವನ್ನು ಸ್ವಪೋಷಣೆ ಎಂದು ಕರೆಯುತ್ತಾರೆ.
ಹಸಿರು ಸಸ್ಯಗಳು ನಿರುಪಯುಕ್ತ ವಸ್ತುಗಳಾದ ಕಾರ್ಬನ ಡೈಆಕ್ಸೈಡ್ & ನೀರನ್ನು ಸೂರ್ಯನ ಬೆಳಕು ಮತ್ತು ಹಸಿರಿನ ಸಹಾಯದಿಂದ ಸಾವಯವ ವಸ್ತುಗಳನ್ನಾಗಿ ಸಂಶ್ಲೇಷಿಸುವ ಕ್ರಿಯೆಯನ್ನು ‘ದ್ಯೂತಿ ಸಂಶ್ಲೇಷಣೆ ಎಂದು ಕರೆಯುತ್ತಾರೆ.
ದ್ಯೂತಿ ಸಂಶ್ಲೇಷಣೆ ಕ್ರಿಯೆಯ ಬೆಳಕಿನ ಪ್ರತಿಕ್ರಿಯೆ & ಇರುಳು ಪ್ರತಿ ಕ್ರಿಯೆ ಎಂದು 2 ಹಂತದಲ್ಲಿ ನಡೆಯುತ್ತದೆ.
ಬೆಳಕಿನ ಪ್ರತಿಕ್ರಿಯೆ:- ಇದು ಬೆಳಕಿನ ಸಹಾಯದಿಂದ ಕ್ಲೋರೊಪ್ಲಾಸ್ಟ್‍ನಲ್ಲಿರುವ ಗ್ರಾನದಲ್ಲಿ ನಡೆಯುತ್ತದೆ. ಇದನ್ನು ದ್ಯೂತಿ ರಾಸಾಯನಿಕ ಪ್ರತಿ ಕ್ರಿಯೆ ಎನ್ನುತ್ತಾರೆ. ಈ ಹಂತದಲ್ಲಿ ನೀರು ಹೈಡ್ರಾಕ್ಸಿಲ್& ಹೈಡ್ರೋಜನ್ ಆಯಾನುಗಳಾಗಿ ವಿಭಜಿಸಲ್ಪಡುತ್ತದೆ.
ಇರುಳು ಪ್ರತಿಕ್ರಿಯೆ:- ಇದು ಬೆಳಕಿನ ಸಹಾಯವಿಲ್ಲದ ಕ್ಲೋರೊಪ್ಲಾಸ್ಟನ್ ಸ್ಟೋಮಾದಲ್ಲಿ ನಡೆಯುತ್ತದೆ. ಇದನ್ನು ಕೆಲ್ವಿನ್ ಚಕ್ರವೆಂದು ಕರೆಯುತ್ತಾರೆ. ಈ ಹಂತದಲ್ಲಿ ಬೆಳಕಿನ ಪ್ರತಿಕ್ರಿಯಯಲ್ಲಿ ಉತ್ಪತ್ತಿಯಾದ ಶಕ್ತಿಯ ಸಹಾಯದಿಂದ ಕಾರ್ಬನ್ ಡೈ ಆಕ್ಸೈಡ್ ಕಾರ್ಬೋ ಹೈಡ್ರೇಟಗಳಾಗಿ ಅಪಕರ್ಷಿಸಲ್ಪಡುತ್ತದೆ.
* ಸೂರ್ಯನ ಬೆಳಕಿನ ಕೊರತೆಯಾದಾಗ ಸಸ್ಯಗಳು ಈ ಟಿಯೋಲೇಷನ್ ಎಂಬ ಪ್ರತಿ ಕ್ರಿಯೆಯನ್ನು ತೋರಿಸುತ್ತವೆ. ಅಂದರೆ ಸಸ್ಯಗಳು ಕೋಶಗಳಲ್ಲಿರುವ ಪತ್ರ ಹರಿತ್ತನ್ನು ಕಳೆದುಕೊಂಡು ಹಳದಿ ಬಣ್ಣಕ್ಕೆ ತಿರುಗುತ್ತವೆ. ಹಾಗೇಹೆಚ್ಚಿನ ಸೂರ್ಯನ ಬೆಳಕು ಸಸ್ಯಕೋಶಗಳಲ್ಲಿರುವ ಪತ್ರಹರಿತ್ತನ್ನು ನಾಶ ಮಾಡಬಲ್ಲದು
ಕೀಟಾಹಾರಿಗಳು:- ಜೌಗು ಪ್ರದೇಶದಲ್ಲಿ ಬೆಳೆಯುವ ಕೆಲವು ಸಸ್ಯಗಳು ಇವುಗಳು ಸಾರಜನಕದ ಕೊರತೆ ತುಂಬಲು ಕೀಟಗಳನ್ನು ಹಿಡಿಯುತ್ತದೆ. ಇವುಗಳನ್ನು ಕೀಟಹಾರಿ ಸಸ್ಯಗಳು ಎಂದು ಕರೆಯುತ್ತಾರೆ.
ಅಪ್ಪು ಸಸ್ಯಗಳು :- ಆಧಾರಕ್ಕಾಗಿ ಇತರ ಸಸ್ಯಗಳ ರೆಂಬೆಗಳ ಮೇಲೆ ಬೆಳೆಯುವ ಸಸ್ಯಗಳನ್ನು ಅಪುಸಸ್ಯಗಳು ಎನ್ನುತ್ತಾರೆ. ಇವು ಹಸಿರು ಎಲೆಗಳನ್ನು ಹೊಂದಿವೆ ವೆಲಾಮಿನ ಎಂಬ ಮೃದುವಾದ ಅಂಗಾಂಶದ ಆವರಿಸಲ್ಪಟ್ಟಿರುವ ತೂಗಾಡುವ ಬೇರುಗಳು ವಾತಾವರಣದಿಂದ ತೇವಾಂವನ್ನು ಹೀರಿಕೊಳ್ಳುತ್ತವೆ.
ಉದಾ : ಆರ್ಕಿಡ ಸಸ್ಯಗಳು